Asianet Suvarna News Asianet Suvarna News

ಶಾಲೆಗಳ ಆರಂಭ ಯಾವಾಗ? ಲೈವ್ ಬಂದು ವಿವರ ನೀಡಿದ ಸುರೇಶ್ ಕುಮಾರ್

ಶಾಲೆ ಯಾವಾಗಿನಿಂದ ಆರಂಭ/ ಸೋಶಿಯಲ್ ಮೀಡಿಯಾದಲ್ಲಿ ಲೈವ್ ಬಂದ ಶಿಕ್ಷಣ ಸಚಿವರಿಂದ ವಿವರಣೆ/ ಸದ್ಯಕ್ಕೆ ಶಾಲೆ ಓಪನ್ ಆಗಲ್ಲ/ ಪೋಷಕರಿಂದ ಅಭಿಪ್ರಾಯ ಸಂಗ್ರಹ ಮಾಡಿ ಮುಂದಿನ ತೀರ್ಮಾನ

karnataka education minister s suresh kumar reaction on school opening
Author
Bengaluru, First Published Jun 4, 2020, 7:42 PM IST

ಬೆಂಗಳೂರು(ಜೂ. 04) ಕೊರೋನಾ ವೈರಸ್ ಹಾವಳಿ ನಿರಂತರವಾಗಿ ಮುಂದುವರಿದಿರುವಾಗಲೇ ಶಾಲೆಗಳ ಆರಂಭ ಯಾವಾಗ ಎನ್ನುವ ಪ್ರಶ್ನೆ ಪದೇ ಪದೇ ಕೇಳುತ್ತಲೇ ಬಂದಿದೆ. ಸೋಶಿಯಲ್ ಮೀಡಿಯಾದಲ್ಲಿ ಲೈವ್ ಬಂದ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅನೇಕ ವಿಚಾರ ಹೇಳಿದ್ದಾರೆ

ಶಿಕ್ಷಣ ಇಲಾಖೆ ತರಗತಿಗಳನ್ನ ತರಾತುರಿಯಲ್ಲಿ ಆರಂಭಿಸೋ ನಿರ್ಧಾರ ಮಾಡೊಲ್ಲ. ಈದೀಗ SSLC ಮತ್ತು PUC  ಪರೀಕ್ಷೆ ನಡೆಯುತ್ತಿದೆ. ಪೊಷಕರು ಅನೇಕ ರೀತಿಯ ಅಭಿಪ್ರಾಯಗಳನ್ನ ವ್ಯಕ್ತಪಡಿಸಿದ್ದಾರೆ. LKG, UKG ಮತ್ತು ಪ್ರಾಥಮಿಕ ಶಾಲಾ ತರಗತಿ ಆರಂಭಿಸದಂತೆ ಮನವಿ ಮಾಡಿದ್ದಾರೆ. ಮುಂಜಾನೆ ಒಬ್ಬ ಬಾಲಕಿ ಕೊರೊನಾ ಹೋಗುವವರೆಗೂ ಶಾಲೆ ತೆರೆಯದಂತೆ ಹೇಳಿದಳು. ಅನೇಕರು ಆತಂಕ ಇರೋ ಹಿನ್ನೆಲೆ ಶಾಲೆ ತೆರೆಯದಂತೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದ್ದಾರೆ.

ಕೇಂದ್ರ ಸರ್ಕಾರ ಕೂಡ ಪೋಷಕರ ಅಭಿಪ್ರಾಯ ಕೇಳುವಂತೆ ನಿರ್ದೇಶನ ಬಂದಿದೆ. ರಾಜ್ಯದಲ್ಲಿ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳಿಗೆ ಸುತ್ತೋಲೆ ಕಳಿಸಲಾಗಿದೆ. ಎಲ್ಲಾ ಶಾಲೆಗಳಲ್ಲೂ ಪೋಷಕರ ಸಭೆ ನಡೆಯಬೇಕು. ಸರ್ಕಾರಿ ಶಾಲೆಗಳಲ್ಲಿ ಶಾಲಾ ಅಭಿವೃದ್ಧಿ ಸಮಿತಿ ಸಭೆ ನಡೆಸಲಿದೆ. ಜೂನ್ 10, 11, 12 ರಂದು ಸಭೆ ನಡೆಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.

ಎಸ್ಸೆಸ್ಸೆಲ್ಸಿ ಪರೀಕ್ಷೆ; ಗೃಹ  ಇಲಾಖೆಯ ಮಹತ್ವದ ಸಭೆಯಿಂದ ಹೊರಬಿದ್ದ ಮಾಹಿತಿ

ಜುಲೈ ಒಂದರಿಂದ ಶಾಲೆಯನ್ನ ತೆರೆಯೋದಿಲ್ಲ, ಅಭಿಪ್ರಾಯ ಸಂಗ್ರಹವಷ್ಟೇ ಎಂದು ಸ್ಪಷ್ಟನೆ ನೀಡಿದ ಸುರೇಶ್ ಕುಮಾರ್  ಸುತ್ತೋಲೆಯಲ್ಲಿ ಶಾಲೆಗಳನ್ನ ಯಾವಾಗಿನಿಂದ ಆರಂಭಿಸಬೇಕು ಅಂತಿದೆ. ಸಾಮಾಜಿಕ ಅಂತರ ಕಾಯ್ದುಕೊಂಡು ಶಾಲೆ ನಡೆಸುವುದು. ಶಾಲೆಗಳಲ್ಲಿ ಸುರಕ್ಷತಾ ಕ್ರಮ ತೆಗೆದುಕೊಳ್ಳುವ ಬಗ್ಗೆ ಅಂತ ಇದೆ. 15 ಜೂನ್ ವೇಳೆಗೆ ಪೋಷಕರಿಂದ ಎಲ್ಲಾ ಮಾಹಿತಿ ಸಂಗ್ರಹಿಸಲಾಗುವುದು. ಮಾಹಿತಿ ಬಂದ ಬಳಿಕ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.

ಸದ್ಯಕ್ಕೆ ಪೂರ್ವ ಪ್ರಾಥಮಿಕ, ಪ್ರಾಥಮಿಕ ಶಾಲೆ ಪ್ರಾರಂಭ ಬೇಡ ಅಂತ ಅಭಿಪ್ರಾಯ ಬರ್ತಿದೆ. ಇದನ್ನ ಗಮನದಲ್ಲಿ ಇಟ್ಟುಕೊಳ್ತೀವಿ. ಪೋಷಕರ ಅಭಿಪ್ರಾಯ ಸಂಗ್ರಹ ಮಾಡಲು ಮುಂದಾಗಿದ್ದೇವೆ. ಪೋಷಕರ ಅಭಿಪ್ರಾಯ ಸಂಗ್ರಹಿಸಿ ಮುಂದಿನ ನಿರ್ಧಾರ. ತರಾತುರಿಯಲ್ಲಿ ಶಾಲೆಗಳನ್ನ ಪ್ರಾರಂಭ ಮಾಡುವುದಿಲ್ಲ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದರು.
 

Follow Us:
Download App:
  • android
  • ios