ನೋಯ್ಡಾ(ಜು.16): ಅವಳಿಗಳು ನೋಟದಲ್ಲಿ ಒಂದೇ ರೀತಿಯಲ್ಲಿರುವುದು ಸಹಜ. ಆದರೆ, ನೋಯ್ಡಾದ ಅವಳಿ ಮಕ್ಕಳಾದ ಮಾನ್ಸಿ ಮತ್ತು ಮಾನ್ಯಾ ಎನ್ನುವವರು ಸಿಬಿಎಸ್‌ಇ 12ನೇ ತರಗತಿ ಪರೀಕ್ಷೆಯಲ್ಲಿ ತಲಾ ಶೇ.95.8ರಷ್ಟು ಅಂಕವನ್ನು ಗಳಿಸಿದ್ದಾರೆ. ಅಲ್ಲದೇ ಎಲ್ಲಾ ವಿಷಯದಲ್ಲೂ ಒಂದೇ ರೀತಿಯ ಅಂಕ ಪಡೆಯುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ನಾವು ಒಂದೇ ರೀತಿಯ ಹವ್ಯಾಸವನ್ನು ಬೆಳೆಸಿಕೊಂಡಿದ್ದೆವು. ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆಯುವ ವಿಶ್ವಾಸ ಇತ್ತು. ಆದರೆ, ಇಬ್ಬರಿಗೂ ಒಂದೇ ರೀತಿಯ ಅಂಕ ಬರುತ್ತದೆ ಎಂದು ಊಹೆ ಮಾಡಿರಲಿಲ್ಲ ಎಂದು ಮಾನ್ಸಿ ಮತ್ತು ಮಾನ್ಯಾ ತಮ್ಮ ಫಲಿತಾಂಶದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ದಿವ್ಯಾಂಶಿ ಜೈನ್‌ಗೆ 600ಕ್ಕೆ 600 ಅಂಕ!

ಗ್ರೇಟರ್‌ ನೋಯ್ಡಾದ ಅಸ್ತರ್‌ ಪಬ್ಲಿಕ್‌ ಸ್ಕೂಲ್‌ನಲ್ಲಿ ವ್ಯಾಸಂಗ ಮಾಡಿದ ಈ ಅವಳಿಗಳು ಇಂಗ್ಲಿಷ್‌ ಮತ್ತು ಕಂಪ್ಯೂಟರ್‌ ಸೈನ್ಸ್‌ಲ್ಲಿ 98 ಅಂಕ ಫಿಸಿಕ್ಸ್‌, ಕೆಮೆಸ್ಟ್ರಿ ಮತ್ತು ದೈಹಿಕ ಶಿಕ್ಷಣದಲ್ಲಿ ತಲಾ 95 ಅಂಕವನ್ನು ಪಡೆದಿದ್ದಾರೆ. ಇಬ್ಬರೂ ಜೆಇಇ ಪ್ರವೇಶ ಪರೀಕ್ಷೆ ಬರೆಯುವ ಉದ್ದೇಶ ಹೊಂದಿರುವುದಾಗಿ ಹೇಳಿದ್ದಾರೆ.