Asianet Suvarna News Asianet Suvarna News

SSLC ಪರೀಕ್ಷಾ ದಿನಾಂಕ ಸದ್ಯಕ್ಕೆ ಪ್ರಕಟವಿಲ್ಲ; ಗೊಂದಲಕ್ಕೆ ತೆರೆ ಎಳೆದ ಸಚಿವ

ಕೊರೋನಾ ವಿರುದ್ಧದ ಹೋರಾಟ/ SSLC ಪರೀಕ್ಷಾ ದಿನಾಂಕ ಪ್ರಕಟ ಸದ್ಯಕ್ಕೆ ಇಲ್ಲ/ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸ್ಪಷ್ಟನೆ/ ವಿದ್ಯಾರ್ಥಿಗಳು ಆತಂಕಕ್ಕೆ ಒಳಗಾಗಬೇಕಿಲ್ಲ
Coronavirus Lockdown Karnataka SSLC Examination Postponed once again
Author
Bengaluru, First Published Apr 14, 2020, 10:54 PM IST
ಬೆಂಗಳೂರು(ಏ. 14) ಲಾಕ್ ಡೌನ್‌ ಅವಧಿ ಮುಗಿದ ಬಳಿಕ ಎಸ್ಎಸ್ಎಲ್ ಸಿ ಮತ್ತು  ಪಿ.ಯು.ಸಿ ಪರೀಕ್ಷೆಗಳ ಬಗ್ಗೆ ವಿದ್ಯಾರ್ಥಿಗಳ ಹಿತ ಕಾಯುವ ತೀರ್ಮಾನವನ್ನು ನಾನೇ ಖುದ್ದಾಗಿ ಪ್ರಕಟಿಸುತ್ತೇನೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ. ಪೋಷಕರು,ವಿದ್ಯಾರ್ಥಿಗಳು‌ಅನಗತ್ಯ ಆತಂಕಕ್ಕೆ ಒಳಗಾಗುವುದು ಬೇಡ- ಸಚಿವ ಎಸ್.ಸುರೇಶ್ ಕುಮಾರ್ ಸ್ಪಷ್ಟನೆ...

ಪ್ರಧಾನಿ‌ ನರೇಂದ್ರ ಮೋದಿಯವರು ಕೊರೊನಾ ಲಾಕ್ ಡೌನ್ ಅವಧಿಯನ್ನು ಮೇ 3 ವರೆಗೆ ವಿಸ್ತರಿಸಿದ್ದಾರೆ. ಹಾಗಾಗಿ ಎಸ್.ಎಸ್.ಎಲ್.ಸಿ ಪರೀಕ್ಷಾ ಅವಧಿಯನ್ನು ಸದ್ಯಕ್ಕೆ‌ ಪ್ರಕಟಿಸಲಾಗುವುದಿಲ್ಲವೆಂದು ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ

ಲಾಕ್‌ಡೌನ್ ವಿಸ್ತರಣೆ: SSLC, PUC ವಿದ್ಯಾರ್ಥಿಗಳಿಗೆ ಸುರೇಶ್ ಕುಮಾರ್ ಕಿವಿ ಮಾತು..!

ಜನ ಜೀವನ ಸಹಜ ಸ್ಥಿತಿಗೆ ಮರಳಿದ ಬಳಿಕ ಪರೀಕ್ಷೆಗಳ ದಿನಾಂಕವನ್ನು ಈಗಾಗಲೇ ತಿಳಿಸಿರುವಂತೆ ತಾವೇ ಖುದ್ದಾಗಿ ಪ್ರಕಟಿಸುವುದಾಗಿ ಸಚಿವರು ಸ್ಪಷ್ಟ ಪಡಿಸಿದ್ದು, ಪೋಷಕರು, ವಿದ್ಯಾರ್ಥಿಗಳು ಅನವಶ್ಯಕ ಗೊಂದಲಕ್ಕೆ ಒಳಗಾಗಬಾರದೆಂದು ಮನವಿ‌ ಮಾಡಿದ್ದಾರೆ. 

ಅಲ್ಲದೇ ಕೆಲವು ಮಾಧ್ಯಮಗಳು, ಇಂದು ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗಾಗಿ ಆನ್ ಲೈನ್ ತರಗತಿಗಳನ್ನು ಪ್ರಾರಂಭಿಸಲಾಗಿದೆಯೆಂದು ವರದಿ ಮಾಡಿದ್ದು,ಸಾರ್ವಜನಿಕ‌ ಶಿಕ್ಷಣ‌ ಇಲಾಖೆ‌ ಇಂತಹ ಯಾವುದೇ ಕ್ರಮವನ್ನು ಆರಂಭಿಸಿಲ್ಲವೆಂದು ಸಚಿವರು ಸ್ಪಷ್ಟಪಡಿಸಿದ್ದಾರೆ. ಪೋಷಕರು, ವಿದ್ಯಾರ್ಥಿಗಳು ಇಂತಹ ಮಾಹಿತಿಗಳ ಬಗ್ಗೆ ಜಾಗರೂಕರಾಗಿರಬೇಕೆಂದು ಮನವಿ ಮಾಡಿದ್ದಾರೆ.

 
Follow Us:
Download App:
  • android
  • ios