ಇಂದು ಮಧ್ಯಾಹ್ನ 12.30ರ ವೇಳೆಗೆ  ಸಿಇಟಿ ಫಲಿತಾಂಶ ಪ್ರಕಟವಾಗಲಿದೆ. ಸಾವಿರಾರು ವಿದ್ಯಾರ್ಥಿಗಳು ಕಾಯುತ್ತಿರುವ ಫಲಿತಾಂಶವನ್ನು ವೆಬ್ಸೈಟ್ ಲಿಂಕ್ ಬಳಸಿ ನೋಡಬಹುದಾಗಿದೆ.

 ಬೆಂಗಳೂರು (ಆ.21): ಎಂಜಿನಿಯರಿಂಗ್‌ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ ಸಾಮಾನ್ಯ ಪ್ರವೇಶ ಪರೀಕ್ಷೆಯ ಫಲಿತಾಂಶ ಶುಕ್ರವಾರ ಆ.21ರ ಮಧ್ಯಾಹ್ನ 12.30ಕ್ಕೆ ಪ್ರಕಟವಾಗಲಿದೆ.

"

ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಬೆಳಗ್ಗೆ 11 ಗಂಟೆಗೆ ಪ್ರಾಧಿಕಾರದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಫಲಿತಾಂಶ ಪ್ರಕಟಿಸಲಿದ್ದಾರೆ. ಬಳಿಕ 12.30ಕ್ಕೆ ವಿದ್ಯಾರ್ಥಿಗಳು ಆನ್‌ಲೈನ್‌ ಮೂಲಕ ಫಲಿತಾಂಶವನ್ನು ನೋಡಬಹುದಾಗಿದೆ. ಇದಕ್ಕಾಗಿ www.karresults.nic.in ಲಿಂಕ್‌ ಬಳಸಬಹುದು ಎಂದು ತಿಳಿಸಿದ್ದಾರೆ.

ಕೊರೋನಾ ಭೀತಿ ಮಧ್ಯೆ ಪಿಯುಸಿಗೆ ಪ್ರವೇಶ ಪ್ರಕ್ರಿಯೆ ಆರಂಭ: ಮಾರ್ಗಸೂಚಿ ಪ್ರಕಟ..

ಜು.30ರಿಂದ ಆಗಸ್ಟ್‌ 1ರವರೆಗೆ ನಡೆದ ಪರೀಕ್ಷೆಯಲ್ಲಿ 1.94 ಲಕ್ಷ ವಿದ್ಯಾರ್ಥಿಗಳು ಸಿಇಟಿ ಬರೆದಿದ್ದರು. ಸಿಇಟಿ ಫಲಿತಾಂಶದ ಆಧಾರದಲ್ಲಿ ಎಂಜಿನಿಯರಿಂಗ್‌, ಕೃಷಿ, ಪಶು ವೈದ್ಯಕೀಯ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‌ಗಳ ಸರ್ಕಾರಿ ಕೋಟಾ ಸೀಟು ಹಂಚಿಕೆಯಾಗಲಿದೆ.