ನವದೆಹಲಿ(ಆ.18): ಹಂತ ಹಂತವಾಗಿ ಶಾಲಾ-ಕಾಲೇಜು ಪುನರ್ ಆರಂಭಕ್ಕೆ ಕೇಂದ್ರ ಸರ್ಕಾರ ದಿನಾಂಕ ನಿಗದಿ ಮಾಡಿದೆ. ಅಂತಿಮ ಅನ್‌ಲಾಕ್ 4.0 ವೇಳೆ ಶಾಲಾ-ಕಾಲೇಜುಗಳಿಗೆ ತೆರೆಯಲು ಅನುಮತಿ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.  ಶಿಕ್ಷಣ ಸಚಿವರು, ಕೊವಿಡ್-19 ಮ್ಯಾನೇಜ್ಮೆಂಟ್ ತಂಡದ ಸಚಿವರು ಹಾಗೂ ಆರೋಗ್ಯ ಸಚಿವ ಹರ್ಷವರ್ಧನ್ ನೇತೃತ್ವದಲ್ಲಿ ಮಹತ್ವದ ಸಭೆ ನಡಸಲಾಗಿದ್ದು, ಸೆಪ್ಟೆಂಬರ್ 1 ರಿಂದ 14 ವರೆಗೆ ಹಂತ ಹಂತವಾಗಿ ಶಾಲಾ ಕಾಲೇಜು ತೆರೆಯಲು ಕೇಂದ್ರ ನಿರ್ಧರಿಸಿದೆ.

ಕೊರೋನಾ ಇದ್ರೂ ಶಾಲೆ ಶುರು..! ಪ್ಲಾಸ್ಟಿಕ್ ಬಾಕ್ಸ್‌ಗಳಲ್ಲಿ ಚಿಣ್ಣರು..!

ಕೇಂದ್ರ ಸರ್ಕಾರ ತನ್ನ ಅಂತಿಮ ಅನ್‌ಲಾಕ್ 4.0 ಮಾರ್ಗಸೂಚಿಯಲ್ಲಿ ಶಾಲಾ ಕಾಲೇಜು ಆರಂಭದ ಕುರಿತು ವಿಸ್ತೃತ ಮಾರ್ಗಸೂಚಿ ಪ್ರಕಟಿಸಲಿದೆ. ಶಾಲಾ ಕಾಲೇಜು ಆರಂಭದ ಕುರಿತು ಅಂತಿಮ ನಿರ್ಧಾರವನ್ನು ಆಯಾ ರಾಜ್ಯ ಸರ್ಕಾರಗಳಿಗೆ ನೀಡಲಾಗಿದೆ. 

ಸದ್ಯಕ್ಕೆ ಶಾಲೆ ಇಲ್ಲ: ಪ್ರೌಢ ಶಾಲಾ ವಿದ್ಯಾರ್ಥಿಗಳ ಕಲಿಕೆಗೆ ಹೊಸ ಕಾರ್ಯಕ್ರಮ...!.

ಶಾಲಾ ಕಾಲೇಜು ತರಗತಿ, ಸಮಯದಲ್ಲಿ ಬದಲಾವಣೆ ಮಾಡಲಾಗಿದೆ. ಶಾಲೆಗಳು ಬೆಳಗ್ಗೆ 8 ರಿಂದ 11 ಗಂಟೆ  ಹಾಗೂ ಮಧ್ಯಾಹ್ನ 12 ರಿಂದ 3 ಗಂಟೆ ವರಗೆ 2 ವಿಭಾಗ ಮಾಡಲಾಗಿದೆ. ಎರಡು ವಿಭಾಗದ ನಡುವೆ 1 ಗಂಟೆ ಸಮಯ ನೀಡಲಾಗಿದ್ದು, ಈ ಸಮಯದಲ್ಲಿ 2ನೇ ಬ್ಯಾಚ್ ವಿದ್ಯಾರ್ಥಿಗಳಿಗೆ ಸ್ಯಾನಿಟೈಸೇಶನ್, ಥರ್ಮಲ್ ಸ್ಕಾನಿಂಗ್ ಸೇರಿದಂತೆ ಹಲವು ಕೊವಿಡ್ 19 ನಿಯಂತ್ರಣ ಕ್ರಮಗಳಿಗೆ ಮೀಸಲಿಡಲಾಗಿದೆ.

ಬೋರ್ಡ್ ಆಫ್ ಸ್ಟಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್(SOP)ಕಳೆದ ಜುಲೈ ತಿಂಗಳಲ್ಲಿ ಸಮೀಕ್ಷೆ ನಡೆಸಿದೆ. ಈ ಸಮೀಕ್ಷೆ ಪ್ರಕಾರ ಹೆಚ್ಚಿನ ಪೋಷಕರು ತಮ್ಮ ಮಕ್ಕಳನ್ನು ಕೊರೋನಾ ನಡುವೆ ಶಾಲೆಗೆ ಕಳುಹಿಸಲು ಹಿಂದೇಟು ಹಾಕಿದ್ದಾರೆ. ಕೊರೋನಾ ಸಂಪೂರ್ಣ ನಿಯಂತ್ರಣಕ್ಕೆ ಬಂದ ಬಳಿಕ ಮಾತ್ರವೇ ಮಕ್ಕಳನ್ನು ಶಾಲೆಗೆ ಕಳುಹಿಸುವುದಾಗಿ ಹೇಳಿದ್ದಾರೆ. ಪ್ರಸಕ್ತ ವರ್ಷದಲ್ಲಿ 3 ರಿಂದ 4 ತಿಂಗಳ ಕಡಿಮೆ ಅವಧಿಯಾದರೂ ಸಮಸ್ಯೆ ಇಲ್ಲ. ಆದರೆ ಕೊರೋನಾ ಕಾರಣ ಮಕ್ಕಳ ಆರೋಗ್ಯವೇ ಮುಖ್ಯ ಎಂದು ಪೋಷಕರು ಹೇಳಿದ್ದಾರೆ.