ನವದೆಗಹಲಿ(ಜೂ.25): ಜುಲೈ1 ರಿಂದ 15 ರವರೆಗೆ ತನಕ ನಡೆಯಬೇಕಿದ್ದ ಸಿಬಿಎಸ್‌ಇಯ ಹತ್ತನೇ ಹಾಗೂ ಹನ್ನೆರಡನೇ ತರಗತಿಯ ಬಾಕಿ ಉಳಿದಿರುವ ಪರೀಕ್ಷಗಳನ್ನು ರದ್ದುಗೊಳಿಸುತ್ತಿರುವುದಾಗಿ ಸಿಬಿಎಸ್‌ಇ ಮಂಡಳಿ ಸಪ್ರೀಂಕೋರ್ಟ್‌ಗೆ ತಿಳಿಸಿದೆ. 

ದೇಶಾದ್ಯಂತ ಕೊರೋನಾ ವೈರಸ್ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿವೆ ಈ ನಿಟ್ಟಿನಲ್ಲಿ ಜುಲೈ1 ರಿಂದ 15 ರವರೆಗೆ ತನಕ ನಡೆಯಬೇಕಿದ್ದ ಪರೀಕ್ಷೆಗಳನ್ನು ಸದ್ಯಕ್ಕೆ ರದ್ದುಗೊಳಿಸುತ್ತಿರುವುದಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಸುಪ್ರೀಂಗೆ ತಿಳಿಸಿದ್ದಾರೆ.

ವಿದ್ಯಾರ್ಥಿಗಳೇ ಗಮನಿಸಿ: ಪದವಿ ಪರೀಕ್ಷೆ ನಡೆಯೋದು ಫಿಕ್ಸ್, ಯಾವಾಗ...?

ವಿದ್ಯಾರ್ಥಿಗಳಿಗೆ ಒಂದು ಅವಕಾಶ ನೀಡಲಾಗುತ್ತದೆ. ಮುಂದಿನ ದಿನಾಂಕದಂದು ನಡೆಯುವ ಪರೀಕ್ಷೆಗೆ ಹಾಜರಾಗುವುದು ಅಥವಾ ಅಂತರೀಕ ಮೌಲ್ಯಮಾಪನ ಮೂಲಕ ಬಡ್ತಿ ಪಡೆಯುವ ಅವಕಾಶ ನೀಡಲಾಗುತ್ತದೆ. ಹೊಸ ವೇಳಾಪಟ್ಟಿಯ ನೋಟಿಫಿಕೇಶನ್ ಶುಕ್ರವಾರದ ಹೊತ್ತಿಗೆ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.