ಬೆಂಗಳೂರು, (ಮೇ.09): ಕೊರೋನಾ ವೈರಸ್ ಸೋಂಕಿನ ಭೀತಿಯ ಹಿನ್ನಲೆಯಲ್ಲಿ ದೇಶಾದ್ಯಂತ ಲಾಕ್ ಡೌನ್ ಘೋಷಣೆಯಾಗಿದೆ. ಇಂತಹ ಸಂದರ್ಭದಲ್ಲಿ ರಾಜ್ಯ ವಿವಿಧ ವಿಶ್ವವಿದ್ಯಾಲಯಗಳಲ್ಲಿ ಮುಂದೂಡಲ್ಪಟ್ಟಿದ್ದ ಪದವಿ ಪರೀಕ್ಷೆಗನ್ನ ನಡೆಸಲು ಸಿದ್ಧತೆಗಳು ನಡೆದಿವೆ.

ಜುಲೈ ಇಲ್ಲವೇ ಆಗಸ್ಟ್‌ನಲ್ಲಿ ಪದವಿ ಪರೀಕ್ಷೆಗಳನ್ನು ನಡೆಸುವಂತೆ ಉಪ ಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ ಸಚಿವ ಡಾ.ಸಿಎಸ್.ಅಶ್ವಥ್ ನಾರಾಯಣ ಅವರು ರಾಜ್ಯದ ವಿಶ್ವವಿದ್ಯಾಲಯಗಳ ಕುಲಪತಿಗಳಿಗೆ ಸೂಚನೆ ನೀಡಿದ್ದಾರೆ.

10, 12ನೇ ತರಗತಿ ಪರೀಕ್ಷೆಗೆ ದಿನಾಂಕ ಘೋಷಣೆ..!

ಇಂದು (ಶನಿವಾರ) ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳ ಕುಲಪತಿಗಳೊಂದಿಗೆ ವೀಡಿಯೋ ಕಾನ್ಫೆರೆನ್ಸ್ ಮೂಲಕ ಚರ್ಚೆ ನಡೆಸಿದ್ದು, ಮೇ.30ರ ಒಳಗೆ ಆನ್ ಲೈನ್ ತರಗತಿಗಳನ್ನು ಮುಗಿಸಿ ಎಂದು ಸೂಚಿಸಿದರು.ಅಲ್ಲದೇ ಮೇ.17ರ ಬಳಿಕ ಪದವಿ ಪರೀಕ್ಷೆ ದಿನಾಂಕ ನಿಗಧಿ ಬಗ್ಗೆ ಕ್ರಮಕೈಗೊಳ್ಳಿ ಎಂದಿದ್ದಾರೆ. 

ಮೇ 30ರ ಒಳಗೆ ಪಠ್ಯಕ್ರಮದಲ್ಲಿ ಬಾಕಿ ಉಳಿದ ವಿಷಯಗಳನ್ನು ಬೋಧಿಸಿ, ಲಾಕ್ ಡೌನ್ ಬಳಿಕ ಪರೀಕ್ಷಾ ದಿನ ಘೋಷಿಸಲಾಗುವುದು ಎಂದಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆದ್ರೆ, ಜುಲೈ ಅಥವಾ ಆಗಸ್ಟ್ ತಿಂಗಳಲ್ಲಿ ಪದವಿ  ಪರೀಕ್ಷೆಗಳು ನಡೆಯುವ ಸಾಧ್ಯತೆಗಳಿವೆ.

ಇನ್ನು ಬಾಕಿ ಇರುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳನ್ನು ಜೂನ್‌ನಲ್ಲಿ ನಡೆಸಲು ರಾಜ್ಯ ಶಿಕ್ಷಣ ಇಲಾಖೆ ಯೋಚನೆ ಮಾಡಿದೆ. ಇದಾದ ಬಳಿಕ ವೃತ್ತಿಪರ ಕೋರ್ಸ್‌ ಪ್ರವೇಶ ಪರೀಕ್ಷೆ (CET) ನಡೆಸುವುದಾಗಿ ಸಚಿವ ಸುರೇಶ್ ಕುಮಾರ್ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.