ಬದಲಾಗುತ್ತಿರುವ ಕಾಲಕ್ಕೆ ಸರಿಯಾಗಿ ನಾವೂ ಬದಲಾಗಬೇಕು. ಹಿಂದೆ ಆಫೀಸಿಗೆ ಹೋಗಿ ಗಂಟೆ ಗಟ್ಟಲೆ ಕೆಲಸ ಮಾಡಿ, ಪೂರ್ತಿ ಜೀವನ ಕಳೆಯಬೇಕಿತ್ತು. ಆದರೆ ಇಂದು ಸ್ಮಾರ್ಟ್ ಆಗಿ ಕೆಲಸ ಮಾಡುವ ಮೂಲಕ ಹಣಗಳಿಸಬಹುದು. ಅದಕ್ಕಾಗಿ ಆಫೀಸ್‌ಗೇ ಹೋಗಲೇಬೇಕು ಎಂದೇನೂ ಇಲ್ಲ. ಮನೆಯಲ್ಲಿಯೇ ಕುಳಿತು ಹಣ ಗಳಿಸಬಹುದು. 

ಟ್ಯೂಷನ್: ಮಕ್ಕಳಿಗೆ ಮನೆ ಪಾಠ ಹೇಳಿ ಕೊಡಬಹುದು. ಈಗ ಪ್ರತಿಯೊಬ್ಬರೂ ತಮ್ಮ ಮಕ್ಕಳು ಉತ್ತಮ ರೀತಿಯಲ್ಲಿ ಕಲಿತು ಸಾಧಿಸಬೇಕೆಂದು ಬಯಸಿ ಟ್ಯೂಷನ್‌ಗೆ ಸೇರಿಸುತ್ತಾರೆ. ಅದನ್ನೇ ಕಾಯಕವನ್ನಾಗಿ ಮಾಡಿಕೊಳ್ಳಬಹುದು.

ಇಂಥಾ ಉದ್ಯೋಗಗಳೂ ಇವೆ ಸ್ವಾಮಿ!

ಆನ್ ಲೈನ್ ಕೌನ್ಸೆಲಿಂಗ್ : ಇದು ಮನೆಯಲ್ಲಿ ಕುಳಿತು ಹಣ ಗಳಿಸುವ ಒಂದು ಬೆಸ್ಟ್ ವಿಧಾನ. ಸ್ಕೂಲ್ ಕಾಲೇಜು ಅಥವಾ ದೊಡ್ಡ ದೊಡ್ಡ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ರೀತಿಯ ಮಾಹಿತಿ ನೀಡಲು ಶೈಕ್ಷಣಿಕ ವರ್ಷ ಆರಂಭವಾಗುವ ಮುನ್ನ ಕೌನ್ಸೆಲಿಂಗ್ ಮಾಡಿಸುತ್ತಾರೆ. ಈ ಸಮಯದಲ್ಲಿ ನೀವು ಆನ್ ಲೈನ್ ಕೌನ್ಸೆಲರ್ ಆಗಿ ಕಾರ್ಯ ನಿರ್ವಹಿಸಬಹುದು.  

ಟ್ರಾನ್ಸ್ಲೇಟರ್ : ನಿಮಗೆ ಹೆಚ್ಚಿನ ಭಾಷಾ ಜ್ಞಾನವಿದ್ದರೆ ಅದನ್ನೇ ಕರಿಯರ್ ಆಗಿ ರೂಪಿಸಿಕೊಳ್ಳಬಹುದು. ಹಲವು ಕಂಪನಿಗಳು ಮನೆಯಲ್ಲಿಯೇ ಕೂತು ಟ್ರಾನ್ಸ್ಲೇಟ್ ಮಾಡುವಂಥ ಕೆಲಸ ನೀಡುತ್ತವೆ. ನೀವು ವಿದೇಶಿ ಕಂಪನಿಗಳ ಕೆಲಸವನ್ನೂ ಮಾಡಬಹುದು. ಈ ಕೆಲಸ ಮಾಡಲು ಬಹು ಭಾಷಾ ಜ್ಞಾನದ ಜೊತೆಗೆ ಸ್ಮಾರ್ಟ್ ಆಗಿರಬೇಕು.

PUC ನಂತರ ಮುಂದೇನು? ಇಲ್ಲಿದೆ ಸಿಂಪಲ್ ಟಿಪ್ಸ್

ವೆಬ್ ಡಿಸೈನಿಂಗ್: ಐಟಿ ಸೆಕ್ಷನ್‌ನಲ್ಲಿ ಈ ವಿಭಾಗ ಇದೆ. ಇದನ್ನು ಮನೆಯಲ್ಲಿ ಕುಳಿತುಕೊಂಡೇ ಮಾಡಬಹುದು. ದೊಡ್ಡ ದೊಡ್ಡ ಕಂಪನಿಗಳೂ ಇಂಥ ಜನರನ್ನು ಆರಿಸುತ್ತಾರೆ. ನೀವು ವೆಬ್ ಡಿಸೈನಿಂಗ್ ಕೋರ್ಸ್ ಮಾಡಿದ್ದರೆ ಮನೆಯಲ್ಲಿಯೇ ಕುಳಿತು ವೆಬ್ ಡೆವಲಪ್, ಡಿಸೈನ್ ಮಾಡಬಹುದು. ಜೊತೆಗೆ ವಿದ್ಯಾಭ್ಯಾಸವೂ ಮುಂದುವರೆಸಬಹುದು. 

ಬರಹಗಾರರು: ಉತ್ತಮ ಬರಹಗಾರರಾಗಿದ್ದರೆ ಕ್ರಿಯೇಟಿವ್ ರೈಟರ್ ಆಗಿ ವಿವಿಧ ಕಂಪನಿಗಳಿಗೆ ಕೆಲಸ ಮಾಡಬಹುದು. ಪತ್ರಿಕೆ, ಮ್ಯಾಗಝಿನ್, ವೆಬ್ ಸೈಟ್‌ಗಳಿಗೆ ಕೆಲಸ ಮಾಡಬಹುದು. ಇದು ಹೆಚ್ಚು ಬೇಡಿಕೆ ಇರೋ ಕ್ಷೇತ್ರವೀಗ.

ರಿಸರ್ಚ್ ಅಸಿಸ್ಟೆಂಟ್: ಹೆಚ್ಚಿನ ಕಂಪನಿಗಳು ತಮ್ಮ ಸ್ಪೆಷಲ್ ಪ್ರಾಜೆಕ್ಟ್‌ಗಾಗಿ ವಿಶೇಷ ಹೋಮ್ ರಿಸರ್ಚ್ ಅಸಿಸ್ಟಂಟ್‌ಗಳನ್ನು ನೇಮಿಸಿಕೊಳ್ಳುತ್ತವೆ. ಕಂಪ್ಯೂಟರ್ ಮತ್ತು ಲ್ಯಾಪ್‌ಟಾಪ್ ಸ್ಮಾರ್ಟ್ ಆಗಿ ಹ್ಯಾಂಡಲ್ ಮಾಡಲು ತಿಳಿದಿರಬೇಕು. ಮೆದುಳು ಚುರುಕಾಗಿ ಕೆಲಸ ಮಾಡಿದರೆ ಈ ಕೆಲಸದಿಂದ ಹೆಚ್ಚಿನ ಹಣ ಸಂಪಾದಿಸಬಹುದು. 

ಕೆಲಸ ಬಿಡುವ ಸಮಯದಲ್ಲಿ ಈ ತಪ್ಪುಗಳನ್ನು ಮಾಡಬೇಡಿ....