ಮೇಲ್ಜಾತಿ ಬಡವರಿಗೂ ಉದ್ಯೋಗದಲ್ಲಿ ಮೀಸಲಾತಿ, ಮೋದಿ ಘೋಷಣೆ..!

ಲೋಕಸಭಾ ಚುನಾವಣೆಗೂ ಮುನ್ನವೇ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮೇಲ್ಜಾತಿಯ ಬಡವರಿಗೆ ಭರ್ಜರಿ ಗಿಫ್ಟ್ ನೀಡಿದ್ದಾರೆ. ಏನದು ಇಲ್ಲಿದೆ ಡಿಟೇಲ್ಸ್.

10 percent reservation approved by Union Cabinet for upper castes

ನವದೆಹಲಿ, (ಜ.7): 2019ರ ಲೋಕಸಭಾ ಚುನಾವಣೆಗೂ ಮುನ್ನವೇ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ, ಆರ್ಥಿಕವಾಗಿ ಹಿಂದುಳಿದ ಮೇಲ್ಜಾತಿಯ ಬಡವರಿಗೆ ಬಂಪರ್ ಉಡುಗೊರೆಯೊಂದನ್ನು ನೀಡಿದೆ.

ಮೇಲ್ವರ್ಗದಲ್ಲಿರುವ ಆರ್ಥಿಕವಾಗಿ ಹಿಂದುಳಿದವರಿಗೂ ಉದ್ಯೋಗದಲ್ಲಿ ಶೇ.10ರಷ್ಟು ಮೀಸಲಾತಿ ನೀಡಲು ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದೆ.

ಜನವರಿ 8 - 9 ರಂದು ಭಾರತ್ ಬಂದ್ : ಏನಿರುತ್ತೆ..? ಏನಿರಲ್ಲ..?

ಸೋಮವಾರ ನವದೆಹಲಿಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದ್ದು, ನಾಳೆ ಅಂದರೆ ಮಂಗಳವಾರ ಸಂಸತ್ ನಲ್ಲಿ ಈ ಐತಿಹಾಸಿಕ ಮಸೂದೆಯನ್ನು ಕೇಂದ್ರ ಸರ್ಕಾರ ಮಂಡಿಸಲಿದೆ.

ಈ ಮಸೂದೇ ಜಾರಿಗೆ ಬಂದರೆ ಉನ್ನತ ವರ್ಗಗಳಾದ ಜಾಟ್, ಗುಜ್ಜಾರ್, ರಜಪೂತ್, ಬನಿಯಾ, ಬ್ರಾಹ್ಮಣ ಸಮುದಾಯಕ್ಕೆ ಅನುಕೂಲವಾಗಲಿದೆ.

ಬಂದ್‌ನಿಂದ ರಾಜ್ಯಕ್ಕಾದ ನಷ್ಟವೆಷ್ಟು ಗೊತ್ತಾ?

ಈ ಮೀಸಲಾತಿಗೆ ಇರುವ ಕೆಲ ಷರತ್ತುಗಳು 
* ಶೇ.10ರಷ್ಟು ಮೀಸಲಾತಿ ಪಡೆಯಬೇಕಿದ್ದರೆ ಅವರ ವಾರ್ಷಿಕ ಆದಾಯ 8 ಲಕ್ಷಕ್ಕಿಂತ ಕೆಳಗಿರಬೇಕು. 
* 5 ಎಕರೆ ಭೂಮಿ, 1000 ಚದುರ ಅಡಿಗಿಂತ ಕಡಿಮೆ ವಿಸ್ತೀರ್ಣ  ಮನೆ ಹೊಂದಿರಬೇಕು.

Latest Videos
Follow Us:
Download App:
  • android
  • ios