ಚಿಕ್ಕಮಗಳೂರಿಗೆ ಭೇಟಿ ನೀಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಬಿಜೆಪಿ ಮಹಿಳಾ ಕಾರ್ಯಕರ್ತೆಯರು ನೀಡಲು ಬಂದ ಅರಿಶಿನ-ಕುಂಕುಮವನ್ನು ನಿರಾಕರಿಸಿದ್ದಾರೆ. ಬಿಜೆಪಿಗರ ಬಾಗಿನದ ಅವಶ್ಯಕತೆ ಇಲ್ಲ ಎಂದು ಹೇಳಿ, ಕಾಂಗ್ರೆಸ್ ಕಾರ್ಯಕರ್ತರ ಸ್ವಾಗತವನ್ನು ಸ್ವೀಕರಿಸಿದರು.

ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್

ಚಿಕ್ಕಮಗಳೂರು : ಅರಿಶಿನ-ಕುಂಕುಮ ಅನ್ನೋದು ಮುತ್ತೈದೆಯರ ಪಾಲಿನ ಮುತ್ತೈದೆತನ. ಹಿಂದೂ ಸಂಪ್ರದಾಯದಲ್ಲಿ ಗೃಹಿಣಿಯರ ಜೀವನದಲ್ಲಿ ಅದಕ್ಕೆ ಸರಿಸಮನಾದ್ದದ್ದು ಮತ್ತೊಂದಿಲ್ಲ. ಎಂತದ್ದೇ ಸಂದರ್ಭ, ಎಷ್ಟೇ ಅವಸರವಿದ್ರು ಮುತ್ತೈದೆಯರು ಕುಂಕುಮ ಇಟ್ಟುಕೊಂಡು ಹೋಗಿ ಅಂದ್ರೆ ಇಡದೆ ಮುಂದೆ ಹೋಗಲ್ಲ. ಆದ್ರೆ, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಚಿಕ್ಕಮಗಳೂರು ಬಿಜೆಪಿ ಮಹಿಳಾ ಕಾರ್ಯಕರ್ತರು ಅರಿಶಿನ-ಕುಂಕುಮ ನೀಡಬೇಕೆಂದು ಮೂರುವರೆ ಗಂಟೆ ಕಾದರೂ ಅದೇ ಮಾರ್ಗವಾಗಿ ಹೋದ ಲಕ್ಷ್ಮೀ ಕಾರು ನಿಲ್ಲಿಸಲಿಲ್ಲ , ಬಿಜೆಪಿಗರ ಬಾಗಿನದ ಅವಶ್ಯಕತೆ ನನಗಿಲ್ಲ ಎಂದ ಬಿಜೆಪಿ ವಿರುದ್ದ ಸಚಿವೆ ಲಕ್ಷ್ಮೀ ವಾಗ್ದಾಳಿ ನಡೆಸಿದರು.

ಸಿದ್ದರಾಮಯ್ಯರಂತೆ ಕುಂಕುಮ ಕಂಡರೇ ಆಗಲ್ಲ ಸಚಿವೆಗೆ ಬಿಜೆಪಿ ಕಿಡಿ :

ಚಿಕ್ಕಮಗಳೂರು ನಗರದ ಪ್ರವಾಸಿ ಮಂದಿರದ ಬಳಿ ಇಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಳಕರ್ ವರ್ಸಸ್ ಬಿಜೆಪಿ ಪಕ್ಷದ ಮಹಿಳಾ ಕಾರ್ಯಕರ್ತರ ಹೋರಾಟಕ್ಕೆ ಕಾರಣವಾಗಿತ್ತು. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ಗೆ ಬಾಗಿನ ನೀಡಿಲು ಬಿಜೆಪಿ ಪಕ್ಷ ಮಹಿಳಾ ಕಾರ್ಯಕರ್ತರು ಬೆಳಿಗ್ಗೆ ಆಗಮಿಸಿದರು. ಬಿಜೆಪಿ ಮಹಿಳೆಯರು ಸಚಿವೆಗೆ ಏನೋ ಮಾಡ್ತಾರೆ ಅಂತ ಪ್ರವಾಸಿ ಮಂದಿರದ ಒಳಗೂ ಬಿಡದೇ ಗೇಟ್ ಗೆ ಬೀಗ ಹಾಕಿ ಬಿಗಿಭದ್ರತೆಯನ್ನು ಪೊಲೀಸರು ನೀಡಿದರು. ಸಚಿವೆ ಬರೋತನಕ ಹೋಗಲ್ಲ. ಅರಿಶಿನ-ಕುಂಕುಮ-ಬಾಗಿನ ಕೊಟ್ಟೇ ಹೋಗೋದು ಎಂದು ಮೂರುವರೆ ಗಂಟೆ ಐಬಿ ಬಾಗಿಲು ಕಾರ್ಯಕರ್ತರು ಕಾದ್ರು ಪ್ರಯೋಜನವಾಗಿಲ್ಲ ,ಹೌದು ಬೆಳಗಾವಿ ಅಧಿವೇಶನದ ವೇಳೆ ಸಿ.ಟಿ.ರವಿ-ಲಕ್ಷ್ಮೀ ಹೆಬ್ಬಾಳ್ಕರ್ ಮಧ್ಯೆಯ ಆ ಪದದ ಟಾಕ್ವಾರ್ ಬಳಿಕ ಲಕ್ಷ್ಮೀ ಮೊದಲ ಬಾರಿ ಜಿಲ್ಲೆಗೆ ಭೇಟಿ ನೀಡಿದ್ದರು. ಹೆಣ್ಣು ಮಗಳು ನಮ್ಮೂರಿಗೆ ಬಂದಿದ್ದಾರೆಂದು ಬಿಜೆಪಿಯ 15ಕ್ಕೂ ಹೆಚ್ಚು ಮಹಿಳೆಯರು ಅರಿಶಿನ-ಕುಂಕುಮ-ಬ್ಲೌಸ್ಪೀಸ್-ಹೂ-ಹಣ್ಣು-ಕಾಯಿ ಜೊತೆ ಲಕ್ಷ್ಮೀ ವಿಗ್ರದ ಬಾಗಿನ ನೀಡಲು ಇಂದು ಬೆಳಗ್ಗೆ 8.30ರಂದ ಐಬಿ ಕಾಯುತ್ತಿದ್ದರು. ಆದರೆ, 11.45ರ ವೇಳೆಗೆ ಅದೇ ಮಾರ್ಗದಲ್ಲಿ ಹೋದ ಲಕ್ಷ್ಮೀ ಕಾರು ನಿಲ್ಲಿಸದೇ ಹೋದರು. ಬಿಜೆಪಿಗರು ಲಕ್ಷ್ಮಿ ನಡೆಗೆ ಅಸಮಾಧಾನ ಹೊರಹಾಕಿ ಅವರಿಗೂ ಸಿದ್ದರಾಮಯ್ಯರಂತೆ ಕುಂಕುಮ ಕಂಡರೇ ಆಗಲ್ಲ ಅನ್ಸತ್ತೆ. ಅವರ ಮನೆಗೆ ಯಾರೇ ಹೋದರೂ ಅವರಿಗೂ ಅವರು ಅರಿಶಿನ-ಕುಂಕುಮ ನೀಡುವುದಿಲ್ಲ ಅನ್ಸತ್ತೆ ಎಂದು ತಾವು ತಂದಿದ್ದ ಬಾಗಿನವನ್ನ ಬಿಜೆಪಿ ಹಿರಿಯ ಕಾರ್ಯಕರ್ತೆಗೆ ನೀಡಿ ವಾಪಸ್ ಹೋಗಿದ್ದಾರೆ.

ಬಿಜೆಪಿಗರ ಬಾಗಿನದ ಅವಶ್ಯಕತೆ ನನಗಿಲ್ಲ :

ಇನ್ನು ಮಾಧ್ಯಮದವರು ನೀವು ಅರಿಶಿನ-ಕುಂಕುಮ ಬೇಡ ಎಂದು ವಾಪಸ್ ಬಂದದ್ದು ಏಕೆ ಎಂದು ಪ್ರಶ್ನಿಸಿದ್ದಕ್ಕೆ ಸದನದಲ್ಲಿ ಆಡಬಾರದ್ದಾ ಆಡಿ, ಮರ್ಯಾದೆ ಕಳೆದು, ಮಾಡಬಾರದ ಅವಮಾನ ಮಾಡಿ ಈಗ ಬಾಗಿನವಾ. ನನಗೆ ಬಿಜೆಪಿಗರ ಬಾಗಿನದ ಅವಶ್ಯಕತೆ ಇಲ್ಲ ಎಂದು ಸಾರಾಸಗಟಾಗಿ ತಿರಸ್ಕರಿಸಿದ್ದಾರೆ. ಚಿಕ್ಕಮಗಳೂರು ಜನ ನನ್ನನ್ನ ಮನೆಮಗಳಂತೆ ಪ್ರೀತಿಯಿಂದ ಸ್ವಾಗತ ಕೋರಿದ್ದಾರೆ ಎಂದು ಕಾಂಗ್ರೆಸ್ ಕಾರ್ಯಕರ್ತರ ಪ್ರೀತಿಯನ್ನ ಹೊಗಳಿದ್ದಾರೆ. ಇನ್ನು ಲಕ್ಷ್ಮೀ ಹೆಬ್ಬಾಳ್ಕರ್ಗೆ ಕಾಂಗ್ರೆಸ್ ಕಾರ್ಯಕರ್ತರು ಅದ್ಧೂರಿ ಸ್ವಾಗತ ಕೋರಿದ್ದು, ನಗರದ ಬೋಳರಾಮೇಶ್ವರ ದೇಗುಲದಿಂದ ಎಐಟಿ ವೃತ್ತದವರೆಗೂ ಸುಮಾರು ಮೂರು ಕಿ.ಮೀ. ಬೃಹತ್ ಬೈಕ್ ಜಾಥಾದ ಮೂಲಕ ರೋಡ್ ಶೋ ನಡೆಸಿದ್ದಾರೆ. ಮಾರ್ಗ ಮಧ್ಯೆ ಜೆಸಿಬಿ ಮೂಲಕ ಬೃಹತ್ ಹೂವಿನ ಹಾರ ಹಾಕಿ ಸನ್ಮಾನಿಸಿದ್ದಾರೆ. ಒಟ್ಟಾರೆ, ಸದನದಲ್ಲಿ ಸಿ.ಟಿ.ರವಿ-ಲಕ್ಷ್ಮೀ ಹೆಬ್ಬಾಳ್ಕರ್ ಮಧ್ಯೆ ನಡೆದ ಆ ಪದದ ಟಾಕ್ ವಾರ್ ಗೆ ಲಕ್ಷ್ಮೀ ಹೆಬ್ಬಾಳ್ಕರ್ ಮುತ್ತೈದೆಯರು ನೀಡಿದ ಅರಿಶಿನ-ಕುಂಕುಮವನ್ನ ಸಾರಾಸಗಟಾಗಿ ತಿರಸ್ಕರಿಸಿ ನನಗೆ ಬಿಜೆಪಿಗರ ಬಾಗಿನದ ಅವಶ್ಯಕತೆ ಇಲ್ಲ ಎಂದು ಕಾರಣ ಕೂಡ ನೀಡಿದ್ದಾರೆ.