ಹುಬ್ಬಳ್ಳಿ(ನ.05): ಸಿಡಿ ಮಾಡ್ಸೋದ್ರಲ್ಲಿ ಸಿದ್ದರಾಮಯ್ಯ ಎಕ್ಸ್‌ಪರ್ಟ್ ಎಂದು ಡಿಸಿಎಂ ಲಕ್ಷ್ಮಣ ಸವದಿ ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಡಿಸಿಎಂ ಲಕ್ಷ್ಮಣ ಸವದಿ ವಾಗ್ದಾಳಿ ನಡೆಸಿದ್ದಾರೆ.

ಸಿದ್ದರಾಮಯ್ಯ ಎರಡು ಬಾರಿ ಸಿಡಿ ಮಾಡಿಸಿದ ಉದಾಹರಣೆ ಇದೆ. ಒಂದು ಬಾರಿ ಬಿಎಸ್ ವೈ ಜೊತೆ ಲಿಂಗಾಯತರಿಲ್ಲ ಅನ್ನೋ ಆಡಿಯೋ ಮಾಡಿಸಿದ್ದರು. ಇನ್ನೊಂದು ಸಲ ಧರ್ಮಸ್ಥಳದಲ್ಲಿ ಲೋಕಸಭಾ ಚುನಾವಣೆ ನಂತರ ಸರ್ಕಾರ ಬೀಳಲಿದೆ ಅನ್ನೋ ಸಿಡಿ ಮಾಡಿಸಿದ್ದರು. ಸಿದ್ದರಾಮಯ್ಯನವರು ಸುಳ್ಳು ಹೇಳುವುದು ಬಿಡಲಿ ಎಂದಿದ್ದಾರೆ.

'ಸುಳ್ ಹೇಳೋದ್ರಲ್ಲಿ ಮೊಯ್ಲಿನ ಮೀರಿಸ್ತಿದ್ದಾರೆ ಸಿದ್ದು, ಬಾಯ್ಬಿಟ್ರೆ ಬರೀ ಸುಳ್ಳು'

ಅನರ್ಹರ ಬಗ್ಗೆ ಹಗುರವಾಗಿ ಮಾತನಾಡಬಾರದೆಂದು ಬಿಎಸ್ ವೈ ಹೇಳಿದ್ದು ನಿಜ. ಬಿಎಸ್ ವೈ ಆಡಿಯೋವನ್ನು ತಿರುಚಿ ಬಿಡುಗಡೆ ಮಾಡಲಾಗಿದೆ. ಬಿಜೆಪಿ ಸಭೆಯಲ್ಲಿ ಮೊಬೈಲ್ ಗಳಿಗೆ ಅವಕಾಶ ಇತ್ತು. ಈ ಬಗ್ಗೆ ಬಿಜೆಪಿ ರಾಜಾಧ್ಯಕ್ಷ ನಳೀನ್ ಕುಮಾರ ಕಟೀಲ್ ತನಿಖೆ ಮಾಡುತ್ತಿದ್ದಾರೆ. ತನಿಖೆಯ ನಂತರ ಯಾರು ಮಾಡಿದ್ದು ಯಾಕೆ ಮಾಡಿದ್ರು ಅನ್ನೋದು ಬಯಲಿಗೆ ಬರಲಿದೆ ಎಂದು ಹೇಳಿದ್ದಾರೆ.

ಆಡಿಯೋಗೂ ಹೈಕಮಾಂಡಗೂ ಸಂಬಂಧವಿಲ್ಲ

ಹೈಕಮಾಂಡ್ ಸೂಚಿಸಿದ ಹಾಗೆ ಕೇಳುವ ವ್ಯಕ್ತಿ ನಾನು. ಹೈಕಮಾಂಡ್ ವಿಧಾನಸಭೆಗೆ ಸೂಚಿಸಿದರೆ ವಿಧಾನಸಭೆ, ವಿಧಾನಪರಿಷತ್ ಗೆ ಸೂಚಿಸಿದರೆ ವಿಧಾನಪರಿಷತ್ ಗೆ ಸ್ಪರ್ಧೆ ಮಾಡುವೆ. ನಾನು ಹೈಕಮಾಂಡ್ ಆದೇಶ ಪಾಲಿಸುವ ವ್ಯಕ್ತಿ ಎಂದಿದ್ದಾರೆ.

ಹುಣಸೂರು ಉಪಚುನಾವಣೆ : ಯೋಗೇಶ್ವರ್‌ ಸ್ಪರ್ಧೆ ಖಚಿತ?