'ಸುಳ್ ಹೇಳೋದ್ರಲ್ಲಿ ಮೊಯ್ಲಿನ ಮೀರಿಸ್ತಿದ್ದಾರೆ ಸಿದ್ದು, ಬಾಯ್ಬಿಟ್ರೆ ಬರೀ ಸುಳ್ಳು'...!

ಮೊದಲು ಮೊಯ್ಲಿ ಸುಳ್ಳಿನಿಂದ ಸಾಧನೆ ಮಾಡಿದ್ರು. ಈಗ ಸಿದ್ದರಾಮಯ್ಯ ಅವರನ್ನೂ ಮೀರಿಸಿ ಸುಳ್ಳು ಹೇಳುತ್ತಿದ್ದಾರೆ ಎಂದು ಸಚಿವ ಆರ್ ಅಶೋಕ್ ‌ಹೇಳಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ಮಾತನಾಡಿದ ಅವರು, ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

siddaramaiah is expert liar than Moily says r ashok

ಚಿಕ್ಕಬಳ್ಳಾಪುರ(ನ.03): ಮೊದಲು ಮೊಯ್ಲಿ ಸುಳ್ಳಿನಿಂದ ಸಾಧನೆ ಮಾಡಿದ್ರು. ಈಗ ಸಿದ್ದರಾಮಯ್ಯ ಅವರನ್ನೂ ಮೀರಿಸಿ ಸುಳ್ಳು ಹೇಳುತ್ತಿದ್ದಾರೆ ಎಂದು ಕಂದಾಯ ಸಚಿವ ಆರ್ ಅಶೋಕ್ ‌ಹೇಳಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ ಮಾತನಾಡಿದ ಅವರು, ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸಿದ್ದರಾಮಯ್ಯ ಬಾಯಿ ಬಿಟ್ರೆ ಸುಳ್ಳು ಸುಳ್ಳೆ ಮಾತನಾಡುತ್ತಾರೆ. ಮೊದಲು ಸುಳ್ಳಿನಿಂದ ಮೊಯ್ಲಿ ಸಾಧನೆ ಮಾಡಿದ್ರು. ಈಗ ಅವರನ್ನು ಮೀರಿಸಿ ಸಿದ್ದರಾಮಯ್ಯ ಸುಳ್ಳು ಹೇಳುತ್ತಿದ್ದಾರೆ. ನಮ್ಮಪ್ಪನಾಣೆ ಹೆಚ್. ಡಿ. ಕುಮಾರಸ್ವಾಮಿ, ಬಿ. ಎಸ್. ಯಡಿಯೂರಪ್ಪ ಸಿಎಂ ಆಗಲ್ಲ ಅಂತಿದ್ರು. ಇಬ್ಬರು ಸಿಎಂ ಆಗಿಬಿಟ್ರು ಎಂದು ಸಿದ್ದರಾಮಯ್ಯಗೆ ಟಾಂಗ್ ನೀಡಿದ್ದಾರೆ.

ವಿಪಕ್ಷ ನಾಯಕನೆಂದು ತೋರಿಸಿಕೊಳ್ಳಲು ಟೀಕೆ:

ವಿಪಕ್ಷ ನಾಯಕ ಸ್ಥಾನ ಹೋಗುತ್ತೆ ಅಂತಾ ಸಿದ್ದರಾಮಯ್ಯ ಸರ್ಕಾರದ ಮೇಲೆ ಟೀಕೆ ಮಾಡ್ತಿದ್ದಾರೆ. ಪರಮೇಶ್ವರ್, ಹೆಚ್. ಕೆ. ಪಾಟೀಲ್ ಅವರಿಗೆ ಸಿಗಬೇಕಿದ್ದ ವಿಪಕ್ಷ ಸ್ಥಾನ ಅಚಾನಕ್ಕಾಗಿ ಸಿದ್ದರಾಮಯ್ಯಗೆ ಸಿಕ್ಕಿದೆ. ನಾನು ವಿಪಕ್ಷ ನಾಯಕ ಎಂದು ತೋರಿಸಲು ಸಿದ್ದರಾಮಯ್ಯ ಟೀಕೆ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಸಿಎಂ ಬಿಎಸ್ ವೈ ಆಡಿಯೋ ಬಗ್ಗೆ ಕಾಂಗ್ರೆಸ್ ನಿಂದ ರಾಜ್ಯಪಾಲರಿಗೆ ದೂರು ನೀಡುವ ವಿಚಾರವಾಗಿ ಪ್ರತಿಕ್ರಿಯಿಸಿ, ದೂರು, ಟೀಕೆಗಳು ಮಾಡೋದ್ರಿಂದ ಏನು ಸಮಸ್ಯೆ ಆಗಲ್ಲ. ವಿರೋಧ ಪಕ್ಷದವರು ಆ ಕೆಲಸ ಮಾಡಬೇಕು, ಮಾಡ್ತಾರೆ ಅಷ್ಟೆ.  ಆ ರೀತಿ ನಡೆದ್ರೆ ದೇಶದಲ್ಲಿ ಯಾವ ಸರ್ಕಾರ ಕೂಡ ಒಂದು ದಿನ ಉಳಿಯಲು ಸಾಧ್ಯವಿಲ್ಲ. ಸಿಎಂ ಆಡಿಯೋ  ಸುಪ್ರೀಂ ಕೋರ್ಟ್ ಗೆ ಸಲ್ಲಿಸೋ ವಿಚಾರ. ಮೊಯ್ಲಿ  ಟೇಪ್ ಹಗರಣದಿಂದ ಇಲ್ಲಿಯವರೆಗೆ ಹಲವು ಆಡಿಯೊ ಗಳು ಬಂದಿವೆ. ಏನು ಮಾಡಲಿಕ್ಕೆ ಆಗಲ್ಲ ಎಂದಿದ್ದಾರೆ.

Latest Videos
Follow Us:
Download App:
  • android
  • ios