ಹುಬ್ಬಳ್ಳಿ(ಅ.08): ಜೆಡಿಎಸ್‌ನಿಂದ ಮತ್ತಷ್ಟು ಜನ ಹೊರಗೆ ಬಬರುತ್ತಾರೆ ಎಂದು ಸಚಿವ ಜಗದೀಶ್ ಶೆಟ್ಟರ್ ವಾಗ್ದಾಳಿ ನಡೆಸಿದ್ದಾರೆ. ಹುಬ್ಬಳ್ಳಿಯಲ್ಲಿ ಪಶ್ಚಿಮ ಪದವೀಧರ ಮತಕ್ಷೇತ್ರ ವಿಶೇಷ ಸಭೆಯಲ್ಲಿ ಮಾತನಾಡಿದ ಅವರು ಈ ಒಂದು ಶಾಕಿಂಗ್ ಹೇಳಿಕೆ ನೀಡಿದ್ದಾರೆ.

ಕಾಂಗ್ರೆಸ್ ಜೆಡಿಎಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅವರು, ಜೆಡಿಎಸ್‌ನಿಂದ ಮತ್ತಷ್ಟು ಶಾಸಕರು ಹೊರಗೆ ಬರುತ್ತಾರೆ ಎಂದು ಬಾಂಬ್ ಸಿಡಿಸಿದ್ದಾರೆ.

ಪರಿಹಾರ ಬಂದಿಲ್ಲ ಅಂತಿದ್ದ ಎಚ್‌ಡಿಕೆ, ಸಿದ್ದು ಈಗ ಇಷ್ಟೇನಾ ಎನ್ನುತ್ತಿದ್ದಾರೆ: ಈಶ್ವರಪ್ಪ

ಎಲ್ಲರ ಜೊತೆ ಸಮಾಲೋಚನೆ ನಡೆಸಿ ಪಶ್ಚಿಮ ಪದವೀಧರ ಮತಕ್ಷೇತ್ರಕ್ಕೆ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗುತ್ತದೆ. ಪದವೀಧರ ಚುನಾವಣೆಯನ್ನು ಗೆಲ್ಲಲು ತಂತ್ರ ಮಾಡಬೇಕು. ರಾಜ್ಯದಲ್ಲಿ ಹಾಗೂ ಕೇಂದ್ರದಲ್ಲಿ ನಮ್ಮ ಸರ್ಕಾರವಿದೆ. ಪ್ರತಿಪಕ್ಷಗಳಲ್ಲಿ ಒಗ್ಗಟ್ಟು ಇಲ್ಲ. ಅದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಹೇಳಿದ್ದಾರೆ.

ವಿಪಕ್ಷ ನಾಯಕನ ಆಯ್ಕೆ ಮಾಡೋಕೆ ಆಗ್ತಿಲ್ಲ:

ವಿರೋಧ ಪಕ್ಷದವರಿಗೆ ಪ್ರತಿಪಕ್ಷ ನಾಯಕನನ್ನು ಆರಿಸುವುದಕ್ಕೇ ಸಾಧ್ಯವಾಗ್ತಿಲ್ಲ. ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡ ಮೇಲೆ
ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಅಕ್ಕ ಪಕ್ಕದಲ್ಲಿಯೇ ಕುಳಿತು ಮಾತನಾಡುತ್ತಿದ್ದರು. ಆದರೆ ಮೈತ್ರಿ ‌ಬಿದ್ದ ಮೇಲೆ ತಮ್ಮೊಳಗೇ ಜಗಳವಾಡುತ್ತಿದ್ದಾರೆ ಎಂದಿದ್ದಾರೆ.

'ನಳಿನ್ ಕುಮಾರ್ ಕುಡುಕರಂತೆ ಮಾತನಾಡುತ್ತಾರೆ'

ಪಾಪದ ಕೋಡ ತುಂಬಿತ್ತು. ಹಾಗಾಗಿ ಮೈತ್ರಿ ಬಿದ್ದು ಹೋಯಿತು. ಜೆಡಿಎಸ್ ಪಕ್ಷ ಬಿಟ್ಟು ಶಾಸಕರು ಹೊರಗೆ ಬರುತ್ತಾರೆ ಎಂದು ಜೆ.ಡಿಎಸ್. ನಾಯಕರೇ ಹೇಳುತ್ತಿದ್ದಾರೆ ಎಂದಿದ್ದಾರೆ.

ಜಗತ್ತಿನ ಯಾವುದೇ ಇಂಜೆಕ್ಷನ್ ಕೊಟ್ರೂ ಕಾಂಗ್ರೆಸ್ ಬದುಕಲ್ಲ: ಒವೈಸಿ ಟಾಂಗ್