ಮುಸ್ಲಿಂ ವ್ಯಾಪಾರಿಗಳ ಕಲ್ಲಂಗಡಿ ನಾಶ ಪ್ರಕರಣ, ಶ್ರಿರಾಮ ಸೇನಾ ಕಾರ್ಯಕರ್ತರಿಂದ ಪ್ರತಿ ದೂರು
ಧಾರವಾಡ ಕಲ್ಲಂಗಡಿ ಹಣ್ಣಿನ ಗಲಾಟೆ ವಿಚಾರಕ್ಕೆ ಸಂಭಂದಪಟ್ಟಂತೆ ಏ.19ರಂದು ಶ್ರಿರಾಮ ಸೇನಾ ಕಾರ್ಯಕರ್ತರಿಂದ ಧಾರವಾಡ ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ಪ್ರತಿ ದೂರು ದಾಖಲಾಗಿದೆ.
ವರದಿ : ಪರಮೇಶ್ವರ ಅಂಗಡಿ ಏಷ್ಯಾನೆಟ್ ಸುವರ್ಣನ್ಯೂಸ್
ಧಾರವಾಡ(ಏ.20): ಧಾರವಾಡ ಕಲ್ಲಂಗಡಿ ಹಣ್ಣಿನ ಗಲಾಟೆ ವಿಚಾರಕ್ಕೆ ಸಂಭಂದಪಟ್ಟಂತೆ ನಿನ್ನೆ ಶ್ರಿರಾಮ ಸೇನಾ ಕಾರ್ಯಕರ್ತರಿಂದ ಪ್ರತಿ ದೂರು ದಾಖಲಾಗಿದೆ. ಧಾರವಾಡ ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ಪ್ರಕರಣವನ್ನ ದಾಖಲಿಸಿದ್ದಾರೆ.
ಎಪ್ರಿಲ್ 09 ರಂದು ಧಾರವಾಡದ ಪ್ರತಿಷ್ಠಿತ ಕಲ್ಲಂಗಡಿ ಹಣ್ಣಿನ ವಿಚಾರಕ್ಕೆ ಸಂಭಂದಪಟ್ಟಂತೆ ಶ್ರಿರಾಮ ಸೇನಾ ಕಾರ್ಯಕರ್ತರು ನುಗ್ಗಿಕೇರಿ ದೇವಸ್ಥಾನಕ್ಕೆ ಹೋಗಿ ದಾಂದಲೆ ಮಾಡಿ ಮುಸ್ಲಿಂ ಯುವಕನ ಕಲ್ಲಂಘಡಿ ಹಣ್ಣಿನ ಅಂಗಡಿ ಒಡೆದು ಹಾಕಿದ್ದಾರೆ ಎಂದು ನಬೀಸಾಬ್ ಕಿಲ್ಲೆದಾರ ಎಂಬುವರು ದೂರು ಕೊಟ್ಟಿದ್ದರು..ದೂರಿನನ್ವಯ ನಾಲ್ವರು ಶ್ರಿರಾಮ ಸೇನಾ ಕಾರ್ಯಕರ್ತರು ಬಂದಿಸಲಾಗಿತ್ತು. ಸದ್ಯ ನಾಲ್ವರು ಜಾಮಿನ ಮೆಲೆ ಬಿಡುಗಡೆ ಯಾಗಿದ್ದಾರೆ.
ಮಹಾನಿಂಗ ಕಲ್ಲಂಗಡಿ ಗಲಾಟೆಯಲ್ಲಿ ಬಂಧನಕ್ಕೊಳಗಾಗಿದ್ದ ಕಾರ್ಯಕರ್ತ ನಿನ್ನೆ ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ಪ್ರತಿದೂರನ್ನ ದಾಖಲಿಸಿದ್ದಾರೆ. ಘಟನೆಯ ಬಗ್ಗೆ ಹೇಳಿದ್ದೆನೂ. ಅವತ್ತು ನಡೆದ ನಿಜವಾದ ಘಟನೆಯೇ ಬೇರೆಯಾಗಿತ್ತು ನಬೀಸಾಬ್ ಎಂಬಾತ ದೂರು ನೀಡಿದ್ದನು ಆದರೆ ನಬೀಸಾಬ್‌ಗೂ ನಮಗೂ ಭೇಟಿಯೇ ಇಲ್ಲ ಯಾವ ವ್ಯಕ್ತಿಯಿಂದ ಗಲಾಟೆ ಆಗಿತ್ತು ಅವನನ್ನ ಮರೆ ಮಾಚಿದ್ದಾರೆ, ಅದಕ್ಕಾಗಿ ನಬೀಸಾಬ್ ನನ್ನು ಮುಂದೆ ಮಾಡಿದ್ದಾರೆ. ಆತನಿಗೆ ವಯಸ್ಸಾಗಿದೆ, ಬಡವ ಅಂತಾ ಕ್ರಿಯೆಟ್ ಮಾಡಿದ್ದಾರೆ ನಾವು ಎರಡು ಬೈಕ್ ಮೇಲೆ ನಾಲ್ವರು ಹೋಗಿದ್ವಿ, ಕಲ್ಲಂಗಡಿ ತಿನ್ನೋಕೆ ಜೊತೆಗಿದ್ದ ಮೈಲಾರಪ್ಪ ಮುಂದಾದ, ಆಗ ಆತ ಉಗಿದು ಉಗಿದು ಕೊಡುತ್ತಿದ್ದ ಕಲ್ಲಂಗಡಿ ಹಣ್ಣು, ಅದನ್ನು ನಾವು ಪ್ರಶ್ನೆ ಮಾಡಿದ್ವಿ, ಅದಕ್ಕೆ ಸಂಬಂಧಿಸಿದಂತೆ ಜಗಳ ಶುರುವಾಯ್ತು,ಕಲ್ಲಂಗಡಿಯಂತೆ ಕತ್ತರಿಸ್ತೇನಿ ಎಂದು ಧಮಕಿ ಹಾಕಿದ್ದಾನೆ.
ಪೋರ್ನ್ ವೆಬ್‌ಸೈಟ್‌ಗಳಲ್ಲಿ Satish Jarkiholi ಹೆಸರಲ್ಲಿ ವಿಡಿಯೋ ಅಪ್‌ಲೋಡ್!
ಆಗ ಸ್ನೇಹಿತ ಮೈಲಾರಪ್ಪನನ್ನು ತಳ್ಳಿದ್ದನು. ಆಗ ಮೈಲಾರಪ್ಪ ತಳ್ಳುಗಾಡಿಗೆ ಡಿಕ್ಕಿ ಹೊಡೆದನು ಆಗ ಕಲ್ಲಂಗಡಿಗಳು ಕೆಳಗೆ ಬಿದ್ದಿದ್ದವು ನಾವು ನಾಲ್ವರು ಮಾತ್ರ ಇದ್ವಿ ಅವರು ಹದಿನೈದು ಜನರಷ್ಟು ಇದ್ದರು ಆಗ ನಾವು ಒಂದೇರಡು ಕಲ್ಲಂಗಡಿ ಒಡೆದಿದ್ವಿ. ಅದು ಮಾತ್ರ ಜನ ವಿಡಿಯೋ ಮಾಡಿದ್ದರು ಅದಕ್ಕಿಂತ ಮೊದಲಿನ ವಿಡಿಯೋ ಯಾರೂ ಮಾಡಿಲ್ಲ ಗಲಾಟೆ ಶುರುವಾದ ಬಳಿಕ ಜನ ವಿಡಿಯೋ ಮಾಡಿದ್ದಾರೆ, ಆ ವಿಡಿಯೋದಲ್ಲಿಯೂ ನಬೀಸಾಬ್ ಇಲ್ಲ ಆದರೂ ನಬೀಸಾಬ್ ಹೆದರಿಸು ಅಂತೆಲ್ಲ ಹೇಳುತ್ತಿದ್ದಾನೆ,
ಪ್ರತಿದೂರು ದಾಖಲು : ಹೀಗಾಗಿ ನಾವು ಈಗ ಪ್ರತಿದೂರು ದಾಖಲಿಸಿದ್ದೇವೆ ಚಾಕೂ ತೋರಿಸಿದ ವ್ಯಕ್ತಿ ಬಚ್ಚಿಡಲು ಇಷ್ಟೆಲ್ಲ ಕ್ರಿಯೆಟ್ ಮಾಡಿದ್ದಾರೆ ನಾವು ದೂರು ಕೊಟ್ಟಿದ್ದೆವೆ, ಪೋಲಿಸರು ಆ ವ್ಯಕ್ತಿ ಯಾರು ಎಂಬುದನ್ನ ಪೋಲಿಸರು ಕಂಡು ಹಿಡಿಯಲಿ , ಆ ಸ್ಥಳದಲ್ಲಿ ಯಾರಿದ್ರು ಅನದನೋದರ ಬಗ್ಗೆ ತನಿಖೆ ಮಾಡಲಿ ಎಂದು ನಾವು ನಾಲ್ವರು ಸೇರಿ ನಿನ್ನೆ ಗ್ರಾಮಿಣ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೆವೆ, ಆ ವ್ಯಕ್ತಿಯ ಬಗ್ಗೆ ಪೋಲಿಸರು ಪತ್ತೆ ಹಚ್ಚಬೇಕು ಸೂಕ್ತ ತನಿಖೆ ನಡೆಸಬೇಕು ಎಂದು ದೂರುದಾರ ಮಹಾನಿಂಗ್ ಐಗಳಿ ಒತ್ತಾಯ ಮಾಡಿದ್ದಾರೆ.
ಪ್ರಸಕ್ತ ಶೈಕ್ಷಣಿಕ ವರ್ಷದಿಂದ ನೈತಿಕ ಶಿಕ್ಷಣ ಪಠ್ಯಕ್ರಮದಲ್ಲಿ ಕುರಾನ್ ಸೇರ್ಪಡೆ BC NAGESH