Asianet Suvarna News Asianet Suvarna News

Electric Vehicle Sales ಕರ್ನಾಟಕ, ದೆಹಲಿ ಹಿಂದಿಕ್ಕಿ ಮೊದಲ ಸ್ಥಾನಕ್ಕೇರಿದ ಉತ್ತರ ಪ್ರದೇಶ!

  • ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ಹೆಚ್ಚುತ್ತಿದೆ
  • ಭಾರತದಲ್ಲಿ ಹೊಸ ಹೊಸ ವಾಹನ ಮಾರುಕಟ್ಟೆಗೆ ಬಿಡುಗಡೆ
  • ಭಾರತದಲ್ಲಿ ಗರಿಷ್ಠ ಎಲೆಕ್ಟ್ರಿಕ್ ಕಾರು ಮಾರಾಟವಾಗುವ ರಾಜ್ಯದ ಪಟ್ಟಿ
Uttar Pradesh Delhi Karnataka emerged India top 3 states for electric vehicle sales ckm
Author
Bengaluru, First Published Dec 12, 2021, 9:18 PM IST
  • Facebook
  • Twitter
  • Whatsapp

ನವದೆಹಲಿ(ಡಿ.12):  ಕೇಂದ್ರ ಹಾಗೂ ಆಯಾ ರಾಜ್ಯ ಸರ್ಕಾರಗಳು ಎಲೆಕ್ಟ್ರಿಕ್ ವಾಹನ ಬಳಕೆಗೆ ಹೆಚ್ಚಿನ ಉತ್ತೇಜನ ನೀಡುತ್ತಿದೆ. ದೇಶದಲ್ಲಿ ಸಂಪೂರ್ಣವಾಗಿ ಮಾಲಿನ್ಯ ಮುಕ್ತ ಮಾಡಲು ಪಣತೊಟ್ಟಿದೆ. ಆದರೆ ಎಲೆಕ್ಟ್ರಿಕ್ ವಾಹನಗಳ ಬೆಲೆ ಜನಸಾಮಾನ್ಯರಿಗೆ ಕೈಗೆಟುವಂತಿಲ್ಲ. ಆದರೂ ಈಗಿನ ಪೆಟ್ರೋಲ್, ಡೀಸೆಲ್ ಬೆಲೆ ಕಾರಣ ಜನರು ಎಲೆಕ್ಟ್ರಿಕ್ ವಾಹನದತ್ತ ವಾಲುತ್ತಿದ್ದಾರೆ. ಹೀಗಾಗಿ ಎಲೆಕ್ಟ್ರಿಕ್ ವಾಹನ ಮಾರಾಟದಲ್ಲಿ ಏರಿಕೆ ಕಂಡಿದೆ. ಕರ್ನಾಟಕ ಹಾಗೂ ದೆಹಲಿಯಲ್ಲಿ ಗರಿಷ್ಠ ಎಲೆಕ್ಟ್ರಿಕ್ ವಾಹನ ಮಾರಾಟವಾಗುತ್ತಿತ್ತು. ಇದೀಗ ಈ ಸ್ಥಾನವನ್ನು ಉತ್ತರ ಪ್ರದೇಶ ಆಕ್ರಮಿಸಿಕೊಂಡಿದೆ.

ಭಾರತದಲ್ಲಿ ಎಲೆಕ್ಟ್ರಿಕ್ ವಾಹನ ಉತ್ತೇಜನಕ್ಕೆ FAME II ಯೋಜನೆ ಜಾರಿಗೊಳಿಸಲಾಗಿದೆ. ಈ ಯೋಜನೆ ಅಡಿಯಲ್ಲಿ ಕೇಂದ್ರ ಸರ್ಕಾರ ಕೆಲ ಸಬ್ಸಿಡಿ ನೀಡುತ್ತಿದೆ. ಈ ಮೂಲಕ ಎಲೆಕ್ಟ್ರಿಕ್ ವಾಹನ ಮಾರಾಟಕ್ಕೆ ಮತ್ತಷ್ಟು ವೇಗ ನೀಡಲು ಯತ್ನಿಸಿದೆ. ಇದರ ಫಲವಾಗಿ ಭಾರತದಲ್ಲಿ 8,70,141 ಎಲೆಕ್ಟ್ರಿಕ್ ವಾಹನಗಳು ರಸ್ತೆಯಲ್ಲಿ ಓಡಾಡುತ್ತಿದೆ. 

Best electric scooters:ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸುವ ಪ್ಲಾನ್ ನಿಮಗಿದೆಯಾ, ಇಲ್ಲಿದೆ ಟಾಪ್ 10 ಟು ವ್ಹೀಲರ್!

ಕರ್ನಾಟಕ, ದೆಹಲಿಯಲ್ಲಿ ಅತೀ ಹೆಚ್ಚು ಎಲೆಕ್ಟ್ರಿಕ್ ವಾಹನಗಳು ರಿಜಿಸ್ಟ್ರೇಶನ್ ಆಗುತ್ತಿತ್ತು. ಈ ಮೂಲಕ ಮೊದಲೆರಡು ಸ್ಥಾನ ಹಂಚಿಕೊಂಡಿತ್ತು. ಆದರೆ ಇದೀಗ ಉತ್ತರ ಪ್ರದೇಶ ಮೊದಲ ಸ್ಥಾನಕ್ಕೇರಿದೆ. ಉತ್ತರ ಪ್ರದೇಶದಲ್ಲಿ ಇದುವರಗೆ ನೋಂದಾಯಿತ ಎಲೆಕ್ಟ್ರಿಕ್ ವಾಹನಗಳ ಸಂಖ್ಯೆ 2,55,700.  ದೆಹಲಿ ಎರಡನೇ ಸ್ಥಾನದಲ್ಲಿದೆ. ದೆಹಲ್ಲಿ ನೋಂದಾಯಿತ ಎಲೆಕ್ಟ್ರಿಕ್ ವಾಹನಗಳ ಸಂಖ್ಯೆ 1,25,347. ಮೂರನೇ ಸ್ಥಾನದಲ್ಲಿರುವ ಕರ್ನಾಟಕದಲ್ಲಿ ರಿಜಿಸ್ಟರ್ಡ್ ಆಗಿರುವ ಎಲೆಕ್ಟ್ರಿಕ್ ವಾಹನಗಳ ಸಂಖ್ಯೆ 72,544.  

ಅತಿ ಹೆಚ್ಚು ನೋಂದಾಯಿತ ಎಲೆಕ್ಟ್ರಿಕ್ ವಾಹನಗಳನ್ನು ಹೊಂದಿರುವ ರಾಜ್ಯ
ಉತ್ತರ ಪ್ರದೇಶ : 2,55,700
ದೆಹಲಿ : 1,25,347
ಕರ್ನಾಟಕ : 7,2,544)
ಬಿಹಾರ : 58,014
ಮಹಾರಾಷ್ಟ್ರ : 52,506

Bounce Infinity Electric Vehicle : ಬೌನ್ಸ್‌ನಿಂದ ವಿದ್ಯುತ್ ಚಾಲಿತ ದ್ವಿಚಕ್ರ ವಾಹನ ಉತ್ಪಾದನೆ

ದೇಶದಲ್ಲಿ ಅತೀ ಹೆಚ್ಚು ಎಲೆಕ್ಟ್ರಿಕ್ ಸ್ಕೂಟರ್ ಸ್ಟಾರ್ಟ್ ಅಪ್ ಹೊಂದಿರುವ ನಗರ ಬೆಂಗಳೂರು. ಬೆಂಗಳೂರಿನಲ್ಲಿ ಎದರ್ ಎನರ್ಜಿ, ಓಲಾ, ಸಿಂಪಲ್ ಒನ್, ಬೌನ್ಸ್ ಸೇರಿದಂತೆ ಹಲವು ಕಂಪನಿಗಳು ಇವೆ. ದೇಶಾದ್ಯಂತ ಈ ಕಂಪನಿಗಳು ಎಲೆಕ್ಟ್ರಿಕ್ ಸ್ಕೂಟರ್ ವಿತರಣೆ ಮಾಡುತ್ತಿದೆ. ಇನ್ನು ಪ್ರೈವೇಗ್ ಅನ್ನೋ ಎಲೆಕ್ಟ್ರಿಕ್ ಕಾರು ಕಂಪನಿ ಕೂಡ ಕಾರ್ಯನಿರ್ವಹಿಸುತ್ತಿದೆ. ಶೀಘ್ರದಲ್ಲೇ ಪ್ರೈವೇಗ್ ಎಲೆಕ್ಟ್ರಿಕ್ ಕಾರು ಬಿಡುಗಡೆಯಾಗಲಿದೆ.

ಭಾರತದಲ್ಲಿರುವ ಎಲೆಕ್ಟ್ರಿಕ್ ಕಾರು:
ಹುಂಡೈ ಕೋನಾ ಎಲೆಕ್ಟ್ರಿಕ್ 
ಮಹೀಂದ್ರ ಇ-ವೆರಿಟೊ 
ಮಹೀಂದ್ರ e2o
ಟಾಟಾ ಟಿಗೋರ್ ಇವಿ
ಟಾಟಾ ನೆಕ್ಸಾನ್ EV 
ಎಂಜಿ  ZS EV
ಮರ್ಸಿಡಿಸ್ ಬೆಂಜ್ EQC
ಆಡಿ ಇ ಟ್ರಾನ್
ಜಾಗ್ವಾರ್ ಐ ಪೇಸ್
BYD E6 ಕಾರು

2025ರ ಹೊತ್ತಿಗೆ ಟಾಟಾದಿಂದ 10 ಹೊಸ ಎಲೆಕ್ಟ್ರಿಕ್ ವಾಹನಗಳು!

ರಿವೋಲ್ಟ್ ಮೋಟಾರ್ಸ್, ಕಬಿರಾ, ಕೋಮಾಕಿ ಸೇರಿದಂತೆ 4ಕ್ಕೂ ಹೆಚ್ಚು ಎಲೆಕ್ಟ್ರಿಕ್ ಸ್ಕೂಟರ್ ಭಾರತದ ಮಾರುಕಟ್ಟೆಯಲ್ಲಿ ಲಭ್ಯವಿದೆ. ಇನ್ನು ಬಜಾಜ್ ಚೇತರ್, ಟಿವಿಎಸ್ ಐಕ್ಯೂಬ್, ಓಲಾ, ಹೀರೋ, ಸಿಂಪಲ್ ಒನ್, ಒಕಿನಾವಾ, ಬೌನ್ಸ್, ಪ್ಯೂರ್ ಸೇರಿದಂತೆ 16ಕ್ಕೂ ಎಲೆಕ್ಟ್ರಿಕ್ ಸ್ಕೂಟರ್ ಭಾರತದಲ್ಲಿ ಲಭ್ಯವಿದೆ. ಕೆಲ ಸ್ಕೂಟರ್ ನಗರಗಳಲ್ಲಿ ಮಾತ್ರ ಲಭ್ಯವಿದೆ.

ಮಹೀಂದ್ರ ಎಲೆಕ್ಟ್ರಿಕ್ ಟಿರಿಯೋ, ಕೇರಳಾ ನೀಮ್ ಜಿ ಸೇರಿದಂತೆ 8ಕ್ಕೂ ಹೆಚ್ಚು ಎಲೆಕ್ಟ್ರಿಕ್ ಆಟೋ ರಿಕ್ಷಾಗಳು ಭಾರತದಲ್ಲಿದೆ. ಇನ್ನು ಟಾಟಾ ಮೋಟಾರ್ಸ್, ಅಶೋಕ್ ಲೈಲಾಂಡ್ ಸೇರಿದಂತೆ 5 ಕ್ಕೂಹೆಚ್ಚು ಎಲೆಕ್ಟ್ರಿಕ್ ಬಸ್‌ಗಳು ಭಾರತದಲ್ಲಿದೆ. ಇದರಲ್ಲಿ ಮೊದಲ ಎಲೆಕ್ಟ್ರಿಕ್ ಬಸ್ ಬಿಡುಗಡೆ ಮಾಡಿದ ಹೆಗ್ಗಳಿಕೆಗೆ ಬೆಂಗಳೂರಿಗಿದೆ. 2014ರಲ್ಲೇ ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ಬಸ್ ಬಿಡುಗಡೆ ಮಾಡಲಾಗಿತ್ತು.5 ಮಿನಿ ಎಲೆಕ್ಟ್ರಿಕ್ ಟ್ರರ್ ಲಭ್ಯವಿದೆ.

 

Follow Us:
Download App:
  • android
  • ios