Asianet Suvarna News Asianet Suvarna News

2025ರ ಹೊತ್ತಿಗೆ ಟಾಟಾದಿಂದ 10 ಹೊಸ ಎಲೆಕ್ಟ್ರಿಕ್ ವಾಹನಗಳು!

ದೇಶದ ಆಟೋಮೊಬೈಲ್ ವಲಯದ ಪ್ರಮುಖ ಕಂಪನಿಯಾಗಿರುವ ಟಾಟಾ ಮೋಟಾರ್ಸ್‌ನ ವಾರ್ಷಿಕ ವರದಿಯನ್ನು ಪ್ರಕಟಿಸಲಾಗಿದ್ದು, ಅದರಲ್ಲಿ ಕಂಪನಿಯು 2025ರ ಹೊತ್ತಿಗೆ 10 ಎಲೆಕ್ಟ್ರಿಕ್ ವಾಹನಗಳನ್ನು ಪರಿಚಯಿಸುವ ಗುರಿಯನ್ನು ಹಾಕಿಕೊಂಡಿದೆ. ಆ ಮೂಲಕ ಪ್ರವರ್ಧಮಾನಕ್ಕೆ ಬರುತ್ತಿವೆ ಎಲೆಕ್ಟ್ರಿಕ್ ವಾಹನಗಳ ಮಾರಾಟದ ಅವಕಾಶವನ್ನು ಬಳಸಿಕೊಳ್ಳಲು ಯೋಜನೆಯ ಹಾಕಿಕೊಂಡಿದೆ.

Tata motors will bring 10 new EV to market by 2025
Author
Bengaluru, First Published Jul 1, 2021, 10:00 AM IST

ದೇಶಿ ಮಾರುಕಟ್ಟೆಯಲ್ಲಿ ಈಗ ಎಲೆಕ್ಟ್ರಿಕ್ ವಾಹನಗಳ ಮಾರಾಟದ ಪೈಪೋಟಿ ಹೆಚ್ಚಾಗುತ್ತಿದೆ. ಬಹುತೇಕ ಎಲ್ಲ ವಾಹನ ಉತ್ಪಾದನಾ ಕಂಪನಿಗಳು ಸಾಂಪ್ರದಾಯಿಕ ಇಂಧನ ಆಧರಿತ ವಾಹನಗಳ ಜೊತೆಗೆ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಯನ್ನು ಹೆಚ್ಚಿಸುತ್ತಿವೆ. ಈಗಾಗಲೇ, ಹಲವು ಎಲೆಕ್ಟ್ರಿಕ್ ವಾಹನಗಳ ಮಾರುಕಟ್ಟೆಯಲ್ಲಿದ್ದು, ಗ್ರಾಹಕರ ಮೆಚ್ಚುಗೆಯನ್ನು ಗಳಿಸುತ್ತಿವೆ.

ಈ ಪೈಕಿ ದೇಶದ ಪ್ರಮುಖ ಕಂಪನಿಯಾಗಿರುವ ಟಾಟಾ ಮೋಟಾರ್ಸ್ ಈಗಾಗಲೇ ಕೆಲವು ಎಲೆಕ್ಟ್ರಿಕ್ ವಾಹನಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಈ ಪೈಕೆ ಟಾಟಾ ನಿಕ್ಸಾನ್ ಹೆಚ್ಚು ಜನಪ್ರಿಯವಾಗುತ್ತಿದೆ. ಇದೇ ವೇಳೆ, ಕಂಪನಿಯು ಮುಂಬರುವ 2025ರ ಹೊತ್ತಿಗೆ ಇನ್ನೂ 10 ಎಲೆಕ್ಟ್ರಿಕ್ ವಾಹನಗಳನ್ನು ಮಾರುಕಟ್ಟೆಗೆ ಪರಿಚಯಿಸುವ ಯೋಜನೆ ರೂಪಿಸಿಕೊಂಡಿದೆ.

ಎಲೆಕ್ಟ್ರಿಕ್ ಕಾರ್ ಖರೀದಿಗೆ 1.50 ಲಕ್ಷ ರೂ.ವರೆಗೆ ಸಬ್ಸಿಡಿ, ನೋಂದಣಿ ಫ್ರೀ!

ಟಾಟಾ ಮೋಟಾರ್ಸ್‌ನ ಚೇರ್ಮನ್ ಎನ್ ಚಂದ್ರಶೇಖರನ್ ಅವರ ಈ ಕ್ರಮವು ವ್ಯವಹಾರ ಮಾದರಿಯನ್ನು ಹೆಚ್ಚು ಸುಸ್ಥಿರವಾಗಿಸುವ ಗುರಿಯನ್ನು ಹೊಂದಿದೆ. ಎಲೆಕ್ಟ್ರಿಕ್  ವಾಹನಗಳ ಸಂಖ್ಯೆನ್ನು ಹೆಚ್ಚಿಸುವ ಉದ್ದೇಶವನ್ನು ಟಾಟಾ ಮೋಟಾರ್ಸ್ ಹೊಂದಿದೆ.

ಈ ವರ್ಷ ಕಂಪನಿಯ ವಾಹನಗಳ ಉತ್ಪಾದನೆಯಲ್ಲಿ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆ ಪ್ರಮಾಣ ಶೇ.2ರಷ್ಟು ಏರಿಕೆಯಾಗಿದೆ. ಕಂಪನಿಯು ಎಲೆಕ್ಟ್ರಿಕ್ ನೆಕ್ಸಾನ್ ಇವಿಯನ್ನು ಕಳೆದ ವರ್ಷ ಲಾಂಚ್ ಮಾಡಿತ್ತು. ಅಲ್ಲಿಂದ ಇಲ್ಲಿಯವರೆಗೂ ಕಂಪನಿಯು 4,000 ನೆಕ್ಸಾನ್ ಇವಿ ವಾಹನಗಳನ್ನು ಮಾರಾಟ ಮಾಡಿದೆ.

ಮುಂಬರುವ ವರ್ಷಗಳಲ್ಲಿ ಕಂಪನಿಯು ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಯನ್ನು ಹೆಚ್ಚಿಸುವ ಸಾಧ್ಯತೆ ಇದೆ. ಭಾರತೀಯ ಮಾರುಕಟ್ಟೆಯಲ್ಲಿ ಈ ಬದಲಾವಣೆಯನ್ನು ಮುನ್ನಡೆಸಲಿದೆ. 2025ರ ಹೊತ್ತಿಗೆ ಟಾಟಾ ಮೋಟಾರ್ಸ್ ಕನಿಷ್ಠ 10 ಎಲೆಕ್ಟ್ರಿಕ್ ವಾಹನಗಳನ್ನು ಹೊಂದಿರಲಿದೆ. ಒಂದು ಸಮೂಹ ಸಂಸ್ಥೆಯಾಗಿ ನಾವು ದೇಶಾದ್ಯಂತ ಚಾರ್ಜಿಂಗ್ ಸ್ಟೇಷನ್ ಸೇರಿದಂತೆ ಮೂಲಸೌಕರ್ಯಗಳನ್ನು ಸ್ಥಾಪಿಸಲಿದ್ದೇವೆ ಎಂದು ಕಂಪನಿಯ 2020-21 ವಾರ್ಷಿಕ ವರದಿಯಲ್ಲಿ ಚಂದ್ರಶೇಖರನ್ ಅವರು ತಿಳಿಸಿದ್ದಾರೆ.

ಥಾರ್‌ಗೆ ಠಕ್ಕರ್ ನೀಡಲು ಬರ್ತಿದೆ ಫೋರ್ಸ್ ಮೋಟರ್ಸ್‌ನ ಗೂರ್ಖಾ

ಸಂಪರ್ಕಿತ ಮತ್ತು ಸ್ವಾಯತ್ತ ವಾಹನಗಳ ಪ್ರಪಂಚದತ್ತ ಬ್ರ್ಯಾಂಡ್ ಪ್ರಗತಿಗೆ ಸಹಾಯ ಮಾಡುವ ಗ್ರೂಪಿನೊಳಗೇ ಆಟೋಮೋಟಿವ್ ಸಾಫ್ಟ್‌ವೇರ್ ಮತ್ತು ಎಂಜಿನಿಯರಿಂಗ್ ಅನ್ನು ಸ್ಥಾಪಿಸುವ ಅವಕಾಶವನ್ನು ಕಂಪನಿಯು ಎದುರು ನೋಡುತ್ತಿದೆ ಎಂದು ಅವರು ಹೇಳಿದ್ದಾರೆ. ಸುಸ್ಥಿರ ಸಂಪರ್ಕದ ಮೇಲೆ ಕಂಪನಿಯ ತನ್ನ ಗಮನ ಕೇಂದ್ರೀಕರಿಸಿದ್ದು, ಟಾಟಾ ಗ್ರೂಪ್ ಭಾರತ ಮತ್ತು ಪ್ರಪಂಚದಲ್ಲಿ ಗ್ರಾಹಕರ ನಡವಳಿಕೆಯ ಬದಲಾವಣೆಯನ್ನು ವಶಪಡಿಸಿಕೊಳ್ಳುವ ಪ್ರಕ್ರಿಯೆಯನ್ನು ವೇಗಗೊಳಿಸಲು ಬಯಸಿದೆ ಎಂದೂ ವರದಿಯಲ್ಲಿ ತಿಳಿಸಲಾಗಿದೆ.

2025ರ ಹೊತ್ತಿಗೆ ಜಾಗ್ವಾರ್ ಸಂಪೂರ್ಣವಾಗಿ ಎಲೆಕ್ಟ್ರಿಕ್ ಆಗಲಿದ್ದು, ಶೇ.60ರಷ್ಟು ವಾಹನಗಳು ಎಲೆಕ್ಟ್ರಿಕ್ ವಾಹನಗಳಾಗಲಿವೆ. ಅದೇ ವೇಳೆ, 2030ರ ಹೊತ್ತಿಗೆ ಈ ಪ್ರಮಾಣವನ್ನು ಸಂಪೂರ್ಣವಾಗಿ ಶೇ.100ರಷ್ಟು ಸಾಧಿಸುವ ಗುರಿಯನ್ನು ಕಂಪನಿ ಹಾಕಿಕೊಂಡಿದೆ ಎಂದು ಹೇಳಲಾಗುತ್ತಿದೆ. ಪರಿಸರ ಸುಸ್ಥಿರತೆ ಮತ್ತು ಹವಾಮಾನ ಸ್ಥಿತಿಸ್ಥಾಪಕತ್ವದ ಅಡಿಪಾಯದ ಮೇಲೆ ನಿರ್ಮಿಸಲಾದ ವ್ಯವಹಾರ ಮಾದರಿಗಳ ಬಗ್ಗೆ ಚಂದ್ರಶೇಖರನ್ ಒತ್ತಿ ಹೇಳಿದರು.  ಈ ಮೆಗಾಟ್ರೆಂಡ್‌ಗಳನ್ನು ಪರಿಹರಿಸಲು ಮತ್ತು ಹತೋಟಿಗೆ ತರಲು, ಸುಸ್ಥಿರ ವ್ಯವಹಾರ ಮಾದರಿಗಳನ್ನು ನಮ್ಮ ಕಾರ್ಯತಂತ್ರದ ತಳಪಾಯವನ್ನಾಗಿ ಮಾಡಲು ನಾವು ಯೋಜಿಸುತ್ತೇವೆ ಎಂದು ಅವರು ವರದಿಯಲ್ಲಿ ತಿಳಿಸಿದ್ದಾರೆ.

ಟಾಟಾ ಮೋಟಾರ್ಸ್ ದೇಶದ ಪ್ರಮುಖ ವಾಹನ ತಯಾರಿಕಾ ಕಂಪನಿಯಾಗಿದೆ. ದೇಶದ ಆಟೋ ಮಾರುಕಟ್ಟೆಯಲ್ಲಿ ಪ್ರಯಾಣಿಕ, ವಾಣಿಜ್ಯ ಹಾಗೂ ಸೇನಾ ಉದ್ದೇಶದ ವಾಹನಗಳ ಮಾರಾಟದಲ್ಲಿ ತನ್ನದೇ ಪ್ರಭಾವವನ್ನು ಹೊಂದಿದೆ. ಕಂಪನಿಯ, ಟಿಯಾಗೋ, ಟಿಗೋರ್,  ನೆಕ್ಸಾನ್, ಹ್ಯಾರಿಯರ್, ಸಫಾರಿಯಂಥ ಪ್ರಯಾಣಿಕ ವಾಹನಗಳು ಬಹು ಜನಪ್ರಿಯವಾಗಿವೆ.

ಯಮಹಾದಿಂದ ಹೊಸ ಫ್ಯಾಸಿನೋ 125 ಫೈ ಹೈಬ್ರಿಡ್ ಸ್ಕೂಟರ್

ಪ್ರಯಾಣಿಕ ವಾಹನಗಳ ಜತೆಗೆ ವಾಣಿಜ್ಯ ಬಳಕೆಯ ವಾಹನಗಳ ಉತ್ಪಾದನೆಯಲ್ಲೂ ಟಾಟಾ ಮೋಟಾರ್ಸ್ ಮುಂಚೂಣಿಯಲ್ಲಿದೆ. ಈಗ ಕಂಪನಿಯ ಹೆಚ್ಚಿನ ಸಂಖ್ಯೆಯಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಉತ್ಪಾದಿಸುವ ಗುರಿಯನ್ನು ಹಾಕಿಕೊಳ್ಳುವ ಮೂಲಕ ಮತ್ತೊಂದು ಹೊಸ ಹಾದಿಗೆ ತೆರೆದುಕೊಳ್ಳುತ್ತಿದೆ. ಭವಿಷ್ಯದಲ್ಲಿ ಎಲೆಕ್ಟ್ರಿಕ್ ವಾಹನಗಳೇ ಇರಲಿರುವುದರಿಂದ ಕಂಪನಿಯು ಅದಕ್ಕೆ ತಕ್ಕಂತೆ ಸಿದ್ದತೆ ಮಾಡಿಕೊಳ್ಳುತ್ತಿದೆ.

Follow Us:
Download App:
  • android
  • ios