Budget 2022 Expectations: ಗೃಹ ಸಾಲದ ಬಡ್ಡಿ ಮೇಲೆ 5 ಲಕ್ಷ ರೂ. ಆದಾಯ ತೆರಿಗೆ ಕಡಿತದ ನಿರೀಕ್ಷೆಯಲ್ಲಿ ರಿಯಲ್ ಎಸ್ಟೇಟ್ ಉದ್ಯಮ

*ಕೊರೋನಾ ಮೂರನೇ ಅಲೆ ರಿಯಲ್ ಎಸ್ಟೇಟ್ ಉದ್ಯಮದ ಮೇಲೆ ಪರಿಣಾಮ ಬೀರೋ ಭೀತಿ
*ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ಈ ಬಾರಿಯ ಬಜೆಟ್ ನಲ್ಲಿ ಒತ್ತು ನೀಡೋ ನಿರೀಕ್ಷೆ
*ಗೃಹ ಸಾಲ ಸೇರಿದಂತೆ ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ಸಂಬಂಧಿಸಿದ ಕೆಲವು ನಿಯಮಗಳಲ್ಲಿ ಬದಲಾವಣೆಗೆ ಒತ್ತಾಯ

Rs 5 lakh Income Tax deduction on Home Loan interest is major expectation for real estate sector

Business Desk: ಕೇಂದ್ರ ಬಜೆಟ್ (Central Budget) ಮಂಡನೆಗೆ ಕೆಲವೇ ದಿನಗಳು ಬಾಕಿಯಿರುವಂತೆ ನಿರೀಕ್ಷೆಗಳು ಕೂಡ ಹೆಚ್ಚುತ್ತಿವೆ.  ರಿಯಲ್ ಎಸ್ಟೇಟ್ (Real Estate) ಉದ್ಯಮ (Business) ಕೂಡ ಈ ಬಾರಿಯ ಬಜೆಟ್ (Budget) ಬಗ್ಗೆ ದೊಡ್ಡ ನಿರೀಕ್ಷೆ ಹೊಂದಿದೆ. ಗೃಹ ಸಾಲದ (Home Loan) ಬಡ್ಡಿ (Interest) ಮೇಲಿನ ಆದಾಯ ತೆರಿಗೆ (Income Tax) ವಿನಾಯ್ತಿ (Relief) ಮಿತಿ  (limit) ಹೆಚ್ಚಳ ಸೇರಿದಂತೆ ಅನೇಕ ಬೇಡಿಕೆಗಳನ್ನು ರಿಯಲ್ ಎಸ್ಟೇಟ್ ಉದ್ಯಮ ಈಗಾಗಲೇ ಸರ್ಕಾರದ ಮುಂದಿಟ್ಟಿದೆ.
ಕೊರೋನಾ (Corona) ಒಂದನೇ ಅಲೆ ರಿಯಲ್ ಎಸ್ಟೇಟ್ ಕ್ಷೇತ್ರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿತ್ತು. ನಿವೇಶನ (Site), ಫ್ಲ್ಯಾಟ್ಸ್ (Flats), ಮನೆಗಳಿಗೆ (Houses) ಬೇಡಿಕೆ ತಗ್ಗಿತ್ತು. ಆದ್ರೆ 2021ರಲ್ಲಿ ರಿಯಲ್ ಎಸ್ಟೇಟ್ ಉದ್ಯಮ ಮತ್ತೆ ಹಳಿಗೆ ಬಂದಿತ್ತು. ಪ್ರಮುಖ ನಗರಗಳಲ್ಲಿ ಮನೆಗಳ ಮಾರಾಟ (Sale) ಕೋವಿಡ್ ಗೂ (COVID) ಮುನ್ನದ ಮಟ್ಟಕ್ಕೆ ಶೇ.90ಕ್ಕೆ ಜಿಗಿತ ಕಂಡಿತ್ತು. ಇನ್ನು ಹೊಸದಾಗಿ ಘೋಷಣೆಯಾದ ಪ್ರಾಜೆಕ್ಟ್ ಗಳ ಪ್ರಮಾಣ ಕೂಡ  2019ರ ಮಟ್ಟಕ್ಕೆ ತಲುಪಿತ್ತು. ಕಡಿಮೆ ಬಡ್ಡಿಯ ಗೃಹಸಾಲ, ಸ್ಥಿರ ಬೆಲೆಗಳು 2021ರಲ್ಲಿ ರಿಯಲ್ ಎಸ್ಟೇಟ್ ಉದ್ಯಮಕ್ಕೆ ಚೈತನ್ಯ ನೀಡಿದ್ದವು. ಈ ಸಾಲಿನ ಬಜೆಟ್ ನಲ್ಲಿ ಕೂಡ ಸರ್ಕಾರ ರಿಯಲ್ ಎಸ್ಟೇಟ್ ಉದ್ಯಮಕ್ಕೆ ಚೈತನ್ಯ ನೀಡುವಂತಹ ಕೆಲವು ಕ್ರಮಗಳನ್ನು ಕೈಗೊಳ್ಳಲಿದೆ ಎಂಬ ನಿರೀಕ್ಷೆಯನ್ನು ಡೆವಲಪರ್ಸ್ ಹೊಂದಿದ್ದಾರೆ.

ಪ್ರಮುಖ ನಿರೀಕ್ಷೆಗಳೇನು?
ಗೃಹ ಸಾಲ ತೆರಿಗೆ ಕಡಿತ ಮಿತಿ  5ಲಕ್ಷ ರೂ.ಗೆ ಏರಿಕೆ 
ಆದಾಯ ತೆರಿಗೆ ಕಾಯ್ದೆ (Income Tax Act) ಸೆಕ್ಷನ್ 24ರಡಿಯಲ್ಲಿ ಗೃಹ ಸಾಲದ (Home Loan) ಬಡ್ಡಿ ಮೇಲಿನ ತೆರಿಗೆ ವಿನಾಯ್ತಿ ಮಿತಿಯನ್ನು ಈಗಿರೋ 2 ಲಕ್ಷ ರೂ.ನಿಂದ ಕನಿಷ್ಠ 5 ಲಕ್ಷ ರೂ. ತನಕ ಏರಿಕೆ ಮಾಡುವಂತೆ ರಿಯಲ್ ಎಸ್ಟೇಟ್ ಉದ್ಯಮಿಗಳು ಒತ್ತಾಯಿಸಿದ್ದಾರೆ.  ಸರ್ಕಾರ ಬಜೆಟ್ ನಲ್ಲಿಇಂಥದೊಂದು ತೀರ್ಮಾನ ಕೈಗೊಂಡರೆ ವಸತಿಗಳಿಗೆ ಬೇಡಿಕೆ ಹೆಚ್ಚಲಿದೆ ಎಂಬುದು ಅವರ ಅಭಿಪ್ರಾಯವಾಗಿದೆ. 

Budget 2022: ಕೇಂದ್ರ ಬಜೆಟ್ ಮಂಡನೆಗೆ ದಿನಗಣನೆ ಪ್ರಾರಂಭ; ಬಜೆಟ್ ಬಗ್ಗೆ ನಿಮಗೆಷ್ಟು ಗೊತ್ತು?

ಇನ್ನು ಗೃಹ ಸಾಲದ ಮೂಲ ಮೊತ್ತದ ಮರುಪಾವತಿ ಮೇಲಿನ ಕಡಿತ ಮಿತಿಯನ್ನು ಪರಿಷ್ಕರಿಸೋದು ಉತ್ತಮ ಎಂಬ ಅಭಿಪ್ರಾಯವನ್ನು ರಿಯಲ್ ಎಸ್ಟೇಟ್ ಉದ್ಯಮಿಗಳು ವ್ಯಕ್ತಪಡಿಸಿದ್ದಾರೆ. ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 80ಸಿ ಅಡಿಯಲ್ಲಿ ವೈಯಕ್ತಿಕ ತೆರಿಗೆ ವಿನಾಯ್ತಿ ಮಿತಿಯಲ್ಲಿ 2014ರ ನಂತರ ಯಾವುದೇ ಬದಲಾವಣೆಯಾಗಿಲ್ಲ. ಪ್ರಸ್ತುತ ಈ ಮಿತಿ ವಾರ್ಷಿಕ 1.5 ಲಕ್ಷ ರೂ. ಆಗಿದೆ.

ಮನೆ ಖರೀದಿ ಸಾಮರ್ಥ್ಯ ಮಾನದಂಡ ಬದಲಾವಣೆ
ಪ್ರಸ್ತುತ ಮನೆ ಖರೀದಿಗೆ ಸಂಬಂಧಿಸಿದ ಮಾನದಂಡಗಳಲ್ಲಿ ಬದಲಾವಣೆ ಮಾಡಲು ರಿಯಲ್ ಎಸ್ಟೇಟ್ ಉದ್ಯಮ ಆಗ್ರಹಿಸಿದೆ. ಪ್ರಸ್ತುತ ಆಸ್ತಿಯ ಗಾತ್ರ, ಬೆಲೆ ಹಾಗೂ ಖರೀದಿದಾರ ಆದಾಯ ಪರಿಗಣಿಸಿ ಅವರ ಖರೀದಿ ಸಾಮರ್ಥ್ಯ ನಿರ್ಧರಿಸಲಾಗುತ್ತದೆ. ಮೆಟ್ರೋ ನಗರಗಳಲ್ಲಿ ಈ ಮಿತಿ ಪ್ರಸ್ತುತ 45 ಲಕ್ಷ ರೂ.ಇದ್ದು, ಅದನ್ನು 1.50 ಕೋಟಿ ರೂ.ಗೆ ಹೆಚ್ಚಿಸುವಂತೆ ಆಗ್ರಹಿಸಲಾಗಿದೆ. ಮೆಟ್ರೋ ಹೊರತುಪಡಿಸಿ ಇತರ ನಗರಗಳಲ್ಲಿ ಈ ಮಿತಿಯನ್ನು 75 ಲಕ್ಷ ರೂ.ಗೆ ಹೆಚ್ಚಿಸುವಂತೆ ಒತ್ತಾಯಿಸಲಾಗಿದೆ. ಇನ್ನು ಅಪಾರ್ಟ್ಮೆಂಟ್ ಗಾತ್ರವನ್ನು ಮೆಟ್ರೋಗಳಲ್ಲಿ 60ಚದರ ಮೀಟರ್ ನಿಂದ 90 ಚದರ ಮೀಟರ್ ಗೆ ಹಾಗೂ ಮೆಟ್ರೋ ಹೊರತುಪಡಿಸಿದ್ರೆ ಇತರ ನಗರಗಳಲ್ಲಿ 90 ಚ.ಮೀ.ನಿಂದ 120 ಚ.ಮೀ.ಗೆ ಏರಿಕೆ ಮಾಡುವಂತೆ ತಿಳಿಸಲಾಗಿದೆ.

Union Budget 2022: ಕೇಂದ್ರ ಬಜೆಟ್ ಮಂಡನೆ ಫೆಬ್ರವರಿ 1ಕ್ಕೆ ಫಿಕ್ಸ್ ; ಜ. 31ರಿಂದ ಸಂಸತ್ತಿನ ಅಧಿವೇಶನ ಆರಂಭ

ಪಿಎಂ ಆವಾಸ್ ಯೋಜನೆ ಅವಧಿ ವಿಸ್ತರಣೆ
ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿಯಲ್ಲಿ ಮಧ್ಯಮ ವರ್ಗದ ಗುಂಪುಗಳಿಗೆ ಸಬ್ಸಿಡಿ ಯೋಜನೆಯನ್ನು 2022ರ ಡಿಸೆಂಬರ್ 31ರ ತನಕ ವಿಸ್ತರಿಸುವಂತೆ ಒತ್ತಾಯಿಸಲಾಗಿದೆ.


 

Latest Videos
Follow Us:
Download App:
  • android
  • ios