ವಾಹನ ಖರೀದಿಸಿದ್ರೆ ರೋಡ್ ಟ್ಯಾಕ್ಸ್, ನೋಂದಣಿ ಶುಲ್ಕ್ ಕಟ್ಟೋದು ಬೇಡ!

ವಿದ್ಯುತ್ ಚಾಲಿತ ವಾಹನಗಳ ಬಳಕೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ತೆಲಂಗಾಣ ಸರಕಾರ ಎರಡು ದಿನಗಳ ಹಿಂದೆ ಎಲೆಕ್ರಿಕ್ ವೆಹಿಕಲ್ಸ್ ಪಾಲಿಯನ್ನು ಘೋಷಿಸಿದ್ದು, ಅನೇಕ ಉತ್ತೇಜನಕ್ರಮಗಳು ಹಾಗೂ ವಿನಾಯ್ತಿಗಳನ್ನು ಪ್ರಕಟಿಸಿದೆ.
 

Telangan government announces new EV policy- 2020

ತೆಲಂಗಾಣದಲ್ಲೇ ವಾಹನ ಖರೀದಿಸಿ, ನೋಂದಣಿ ಮಾಡಿಸಿಕೊಂಡರೆ ರಸ್ತೆ ತೆರಿಗೆ ಮತ್ತು ನೋಂದಣಿ ಶುಲ್ಕದ ಮೇಲೆ ಸಂಪೂರ್ಣವಾಗಿ ವಿನಾಯ್ತಿ ದೊರೆಯಲಿದೆ!

ಹೀಗೆ ಹೇಳಿದ ತಕ್ಷಣ ಆಶ್ಚರ್ಯವಾಗಬಹುದು. ಆದರೆ, ಈ ರೀತಿಯ ಶೇ.100ರಷ್ಟು ವಿನಾಯ್ತಿ ಸಿಗುತ್ತಿರುವುದು ಸಾಂಪ್ರದಾಯಿಕ ಇಂಧನ ವಾಹನಗಳ ಖರೀದಿಯ ಮೇಲಲ್ಲ. ಬದಲಿಗೆ ವಿದ್ಯುತ್ ಚಾಲಿತ(ಎಲೆಕ್ಟ್ರಿಕಲ್ ವೆಹಿಕಲ್-ಇವಿ) ವಾಹನಗಳ ಖರೀದಿ ಮೇಲೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ.

ಪ್ರತಿ 3 ನಿಮಿಷಕ್ಕೊಂದು ಮಾರುತಿ ಸುಜುಕಿ ಬಲೆನೋ ಹ್ಯಾಚ್‌ಬ್ಯಾಕ್ ಕಾರು ಮಾರಾಟ!

ರಾಜ್ಯದಲ್ಲಿ ಬ್ಯಾಟರಿ ಚಾಲಿತ ವಾಹನಗಳ ಬಳಕೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ತೆಲಂಗಾಣ ಸರಕಾರ ಮುಂದಿನ ಹತ್ತು ವರ್ಷಗಳ ವಿದ್ಯುತ್ ಚಾಲಿತ ವಾಹನಗಳ ನೀತಿಯನ್ನು(EV Policy) ಘೋಷಿಸಿದೆ. ಇದರ ಅನ್ವಯ ತೆಲಂಗಾಣದಲ್ಲಿ ಎಲೆಕ್ಟ್ರಿಕಲ್ ವಾಹನಗಳ ಖರೀದಿಸಿ ಮತ್ತು ನೋಂದಣಿ ಮಾಡಿಕೊಂಡರೆ, ರಸ್ತೆ ತೆರಿಗೆ(ರೋಡ್ ಟ್ಯಾಕ್ಸ್) ಮತ್ತು ರಿಜಿಸ್ಟ್ರೇಷನ್ ಫೀ(ನೋಂದಣಿ ಶುಲ್ಕ)ದ ಮೇಲೆ ಶೇ.100ರಷ್ಟು ವಿನಾಯ್ತಿ ನೀಡಲಿದೆ. ಎಲೆಕ್ಟ್ರಿಕ್ ವಾಹನಗಳ ಸಂಬಂಧ ಸಮಗ್ರ ನೀತಿ ಘೋಷಿಸಿದ ದೇಶದ ಮೂರನೇ ರಾಜ್ಯ ತೆಲಂಗಾಣವಾಗಿದೆ. ಇದಕ್ಕೂ ಮೊದಲು ದೆಹಲಿ ಮತ್ತು ಗುಜರಾತ್ ‌ರಾಜ್ಯಗಳು ಈ ಸಂಬಂಧ ನೀತಿಯನ್ನು ಘೋಷಿಸಿ, ಅನುಷ್ಠಾನಕ್ಕೆ ತರುವ ಪ್ರಯತ್ನವನ್ನು ಮಾಡುತ್ತಿವೆ. 

Telangan government announces new EV policy- 2020

ತೆಲಂಗಾಣದ ಹೊಸ ಇವಿ ನೀತಿಯ ಅನ್ವಯ, ಎಲೆಕ್ಟ್ರಿಕ್ ವೆಹಿಕಲ್‌ಗಳಿಗೆ ಬೇಡಿಕೆಯನ್ನು ಸೃಷ್ಟಿಸುವುದಕ್ಕೆ ಉತ್ತೇಜನ ನೀಡುವ ಕ್ರಮಗಳನ್ನು ಘೋಷಿಸಲಾಗಿದೆ. ಇದರಲ್ಲಿ ವಿದ್ಯುತ್ ಚಾಲಿತ ದ್ವಿಚಕ್ರವಾಹನಗಳು, ತ್ರಿಚಕ್ರ ವಾಹನಗಳು, ವಾಣಿಜ್ಯ ಪ್ಯಾಸೆಂಜರ್ ವಾಹನಗಳು,  ಖಾಸಗಿ ಕಾರುಗಳು ಮತ್ತು ಟ್ರ್ಯಾಕ್ಟರ್‌ಗಳು ಸೇರಿವೆ. ಅಂದರೆ, ಈ ಸೆಗ್ಮೆಂಟ್‌ನ ವಿದ್ಯುತ್ ಚಾಲಿತ ವಾಹನಗಳಿಗೆ ಬೇಡಿಕೆಯನ್ನು ಹೆಚ್ಚಿಸುವ ಉದ್ದೇಶ ತೆಲಂಗಾಣ ಸರಕಾರಕ್ಕಿದೆ. 

ತೆಲಂಗಾಣ ರಾಜ್ಯ ಎಲೆಕ್ಟ್ರಿಕ್ ವೆಹಿಕಲ್ ಮತ್ತು ಎನರ್ಜಿ ಸ್ಟೋರೇಜ್ ಪಾಲಿಸಿ ಪ್ರಕಾರ, ಈ ತೆರಿಗೆ ಮತ್ತು ಶುಲ್ಕ ವಿನಾಯ್ತಿಯು ತೆಲಂಗಾಣದಲ್ಲಿ ವಾಹನಗಳನ್ನು ಖರೀದಿಸಿದಾಗ ಮತ್ತು ಅಲ್ಲಿಯೇ ನೋಂದಣಿ ಮಾಡಿಸಿದಾಗ ಮಾತ್ರ ಅನ್ವಯವಾಗುತ್ತವೆ. ಹೈದ್ರಾಬಾದ್‌ನಲ್ಲಿ ನಡೆಯುತ್ತಿರುವ ತೆಲಂಗಾಣ ಇವಿ ಶೃಂಗದಲ್ಲಿ ತೆಲಂಗಾಣ ಎಲೆಕ್ಟ್ರಿಕ್ ವೆಹಿಕಲ್ ಮತ್ತು ಎನರ್ಜಿ ಸ್ಟೋರೇಜ್ ಪಾಲಿಸಿ 2020-2030 ನೀತಿಗೆ ಚಾಲನೆ ನೀಡಿದರು.

ಈ ನೀತಿಯು 2020ರಿಂದ 2030ರವರೆಗೆ ಚಾಲ್ತಿಯಲ್ಲಿರಲಿದೆ. ಈ ಕುರಿತು ಟ್ವಿಟರ್‌ನಲ್ಲೂ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ.

ಷರತ್ತುಗಳು ಅನ್ವಯ
ಹೊಸ ನೀತಿಯ ಪ್ರಕಾರ, ಮೊದಲ ಎರಡು ಲಕ್ಷ ಎಲೆಕ್ಟ್ರಿಕ್ ದ್ವಿಚಕ್ರವಾಹನಗಳು, 20,000 ಎಲೆಕ್ಟ್ರಿಕ್ ತ್ರಿ ಚಕ್ರ ವಾಹನಗಳು, 20,000 ಎಲೆಕ್ಟ್ರಿಕ್ ಕಮರ್ಷಿಯಲ್ ವೆಹಿಕಲ್‌ಗಳು ಮತ್ತು 500 ಎಲೆಕ್ಟ್ರಿಕ್ ಬಸ್‌ಗಳ ಖರೀದಿಗೆ ಮಾತ್ರ ಶೇ.100ರಷ್ಟು ರಸ್ತೆ ತೆರಿಗೆ ಮತ್ತು ನೋಂದಣಿ ಶುಲ್ಕ ವಿನಾಯ್ತಿ ದೊರೆಯಲಿದೆ. ಹಾಗೆಯೇ ರಾಜ್ಯದಲ್ಲಿ ಈಗಾಗಲೇ ಚಾಲ್ತಿಯಲ್ಲಿರುವ ಮಾರ್ಗದರ್ಶಿಗಳ ಅನ್ವಯ ಎಲೆಕ್ಟ್ರಿಕ್ ಟ್ರ್ಯಾಕ್ಟರ್‌ಗಳನ್ನು ಖರೀದಿಸಬಹುದಾಗಿದೆ. ಈ ಮಾರ್ಗದರ್ಶಿಗಳನ್ನು ರಾಜ್ಯದ ರಸ್ತೆ ಸಾರಿಗೆ ಇಲಾಖೆ ನಿಗದಿಪಡಿಸಿದೆ. ಇದರ ಜೊತೆಗೆ 5000 ಎಲೆಕ್ಟ್ರಿಕ್‌ ಕಾರುಗಳ ಖರೀದಿಗೂ ರಾಜ್ಯ ಸರಕಾರವು  ಶೇ.100ರಷ್ಟು ವಿನಾಯ್ತಿ ನೀಡಲಿದ್ದು, ಈ ಪೈಕಿ ಅರ್ಧದಷ್ಟು ಕಮರ್ಷಿಯಲ್ ಉದ್ದೇಶ ವಾಹನಗಳಿಗೆ ಮೀಸಲು ನೀಡಲಾಗಿದೆ. ಅಂದರೆ, ಟ್ಯಾಕ್ಸಿ, ಟೂರಿಸ್ಟ್ ಕ್ಯಾಬ್‌ಗಳಿಗೆ ಈ ಉತ್ತೇಜನ ಸಿಗಲಿದೆ. ಎಲೆಕ್ಟ್ರಿಕ್ ಟ್ರ್ಯಾಕ್ಟರ್‌ಗಳ ಖರೀದಿಗೂ ಶೇ.100ರಷ್ಟು ರಸ್ತೆ ತೆರಿಗೆ ಮತ್ತು ನೋಂದಣಿ ಶುಲ್ಕ ವಿನಾಯ್ತಿ ದೊರೆಯಲಿದೆ.

ಮುಂದಿನ ವರ್ಷ ಭಾರತಕ್ಕೆ ಎಂಟ್ರಿ ಕೊಡುತ್ತೆ ಸೆಲ್ಫ್‌ ಡ್ರೈವ್ ಟೆಸ್ಲಾ ಕಾರ್

ಎಲೆಕ್ಟ್ರಿಕ್ ವಾಹನಗಳಿಗೆ ಅಗತ್ಯ ಮೂಲ ಸೌಕರ್ಯದ ಬಗ್ಗೆಯೂ ಈ ನೀತಿಯಲ್ಲಿ ಆದ್ಯತೆ ನೀಡಲಾಗಿದೆ. ಅಂದರೆ, ಫಾಸ್ಟ್ ಚಾರ್ಜಿಂಗ್ ಪಾಯಿಂಟ್‌ಗಳ ಸ್ಥಾಪನೆಯ ಸಂಬಂಧವೂ ಗಮನ ಹರಿಸಲಾಗಿದೆ. ಮೊದಲ ಹಂತದಲ್ಲಿ ಹೈದರಾಬಾದ್‌ನಲ್ಲಿ ಸಾಕಷ್ಟು ಪ್ರಮಾಣದಲ್ಲಿ ಚಾರ್ಜಿಂಗ್ ಪಾಯಿಂಟ್‌ ಸ್ಥಾಪನೆಗಳ ಬಳಿಕ ಹಂತ ಹಂತವಾಗಿ ರಾಜ್ಯದ ಇತರ ನಗರಗಳಲ್ಲೂ ಚಾರ್ಜಿಂಗ್ ಮೂಲ ಸೌಕರ್ಯ ಒದಗಿಸಲು ಎಲ್ಲ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಹೊಸ ನೀತಿಯಲ್ಲಿ ತಿಳಿಸಲಾಗಿದೆ.

Suzuki Celerio: ಸೂಪರ್ ಲೇಔಟ್ ಇರೋ ಕಾರು ಮಾರುಕಟ್ಟೆಗೆ ಯಾವಾಗ..? ಇಲ್ಲಿದೆ ಡೀಟೆಲ್ಸ್

Latest Videos
Follow Us:
Download App:
  • android
  • ios