ಭಾರತದ ರಸ್ತೆಗಳಲ್ಲಿ ಮಾರುತಿ ಸುಜುಕಿಯ ಹೆಚ್ಚಿನ ವಾಹನಗಳನ್ನು ನೀವು ಕಾಣಬಹುದು. ಮಧ್ಯಮ ವರ್ಗದವರ ಕಾರು ಕೊಳ್ಳುವ ಕನಸು ನನಸು ಮಾಡಿದ ಹೆಚ್ಚುಗಾರಿಕೆಯನ್ನು ಹೊಂದಿರುವ ಮಾರುತಿ ಸುಜುಕಿ ಕಂಪನಿ, ಕಾಲ ಕಾಲಕ್ಕೆ ಗ್ರಾಹಕರ ಬೇಡಿಕೆ ಹಾಗೂ ಪರಿಸರ ನಿಯಮಗಳಿಗೆ ಅನುಗುಣವಾಗಿ ತನ್ನ ಕಾರುಗಳನ್ನು ಉತ್ಪಾದಿಸುತ್ತಾ ಬಂದಿದೆ. ಈಗಲೂ ಭಾರತೀಯ ಕಾರು ಮಾರುಕಟ್ಟೆಯಲ್ಲಿ ತನ್ನದೇ ಆದ ಪಾರಮ್ಯ ಹೊಂದಿದೆ.

ಕಳೆದ ಕೆಲವು ದಿನಗಳಿಂದ ಮಾರುತಿ ಕಂಪನಿಯು ಭಾರತೀಯ ಮಾರುಕಟ್ಟೆಗೆ ತನ್ನ ಜನಪ್ರಿಯ ಮೂರು ಮಾದರಿಯ ಕಾರುಗಳ ಹೊಸ ಜನರೇಷನ್ ಆವೃತ್ತಿಯ ಕಾರುಗಳನ್ನು ಬಿಡುಗಡೆ ಮಾಡಲು ಮುಂದಾಗಲಿದೆ ಎಂಬ ಸುದ್ದಿ ಇತ್ತು. ಈ ಹಬ್ಬದ ಸೀಸನ್‌ನಲ್ಲಿ ಮಾರುತಿಯ ಒಂದು ಕಾರು ಗ್ರಾಹಕರಿಗೆ ಕೈ ಸಿಗಬೇಕಿತ್ತು. ಆದರೆ ಸಾಧ್ಯವಾಗಿಲ್ಲ.

ಶೀಘ್ರ ಮಾರುಕಟ್ಟೆಗೆ ಬರಲಿದೆ ಕವಾಸಕಿ W175 ಬೈಕ್?

ಅಲ್ಟೋ, ಸೆಲೆರಿಯೊ ಮತ್ತು ವಿಟಾರಾ ಬ್ರೇಜಾ

ಈಗಾಗಲೇ ಭಾರತೀಯ ಗ್ರಾಹಕರಿಂದ ಮನಸೊರೆಗೊಂಡಿರುವ ಅಲ್ಟೋ, ಸೆಲೆರಿಯೊ ಹಾಗೂ ವಿಟಾರಾ ಬ್ರೇಜಾ ಕಾರುಗಳು ನ್ಯೂ ಜನರೇಷನ್ ಆವೃತ್ತಿಯ ಕಾರುಗಳನ್ನು ಬಿಡುಗಡೆ ಮಾಡಲಿದೆ. ಈ ಪೈಕಿ, ನೆಕ್ಸ್ಟ್ ಜನರೇಷನ್ ಅಲ್ಟೋ ಕಾರು ಡಿಸೆಂಬರ್ 2020ರ ಹೊತ್ತಿಗೆ ಜಗತ್ತಿನಾದ್ಯಂತ ಬಿಡುಗಡೆಗೊಳ್ಳಲಿದ್ದು, ಭಾರತೀಯ ಮಾರುಕಟ್ಟೆಗೆ ಮುಂದಿನ ವರ್ಷ ಕಾಲಿಡಲಿದೆ. ಹೊಸ ಮಾದರಿಯ ವಿಟರಾ ಬ್ರೇಜಾ 2022ರಲ್ಲಿ ಬಿಡುಗಡೆಯಾಗಲಿದೆ ಎಂಬ ಸುದ್ದಿಗಳಿವೆ. ಈ ಮೂರು ಕಾರುಗಳ ಪೈಕಿ ಸೆಲೆರಿಯೊ ಮೊದಲಿಗೆ ರಸ್ತೆಗಳಿಗಿಳಿಯಬೇಕಿತ್ತು. ಎಂಟ್ರಿ ಲೇವಲ್ ಹ್ಯಾಚ್ ಬ್ಯಾಕ್ ಕಾರು ಸೆಲೆರಿಯೊ ಈ ವರ್ಷದ ಹಬ್ಬದ ಸೀಸನ್‌ನಲ್ಲಿ ಗ್ರಾಹಕರಿಗೆ ಸಿಗಬೇಕಿತ್ತು. ಆದರೆ, ಕೆಲವು ಕಾರಣಗಳಿಂದಾಗಿ  ಮುಂದಿನ ವರ್ಷದ ಆರಂಭದಲ್ಲಿ ಬಿಡಗಡೆಯಾಗಲಿದೆ ಎನ್ನುತ್ತಿವೆ ವರದಿಗಳು.

ಮುಂದಿನ ವರ್ಷದಲ್ಲಿ ಭಾರತೀಯ ಮಾರುಕಟ್ಟೆಗೆ ಬರುವ ಎಲ್ಲ ಸಾಧ್ಯತೆಗಳಿರುವ ಸೆಲೆರಿಯೊ ಕಾರು, ಹಲವು ಪ್ರಮುಖ ಬದಲಾವಣೆಗಳಿಗೆ ಸಾಕ್ಷಿಯಾಗಲಿದೆ ಎನ್ನಲಾಗುತ್ತಿದೆ. ಕಾರಿನ ಒಟ್ಟು ವಿನ್ಯಾಸ ಹಾಗೂ ಫೀಚರ್‌ಗಳಲ್ಲಿ ಬದಲಾವಣೆಗಳನ್ನು ನಾವು ನಿರೀಕ್ಷಿಸಬಹುದಾಗಿದೆ. ಹಾಲಿ ಚಾಲ್ತಿಯಲ್ಲಿರುವ ಸೆಲೆರಿಯೊಗೆ ಹೋಲಿಸಿದರೆ ಈ ಹೊಸ ಸೆಲೆರಿಯೊ ಕಾರಿನ ಇಂಟಿರೀಯರ್  ಲೇಔಟ್ ಇನ್ನೂ ಹೆಚ್ಚು ಆಕರ್ಷಕವಾಗಿರಲಿದ್ದು, ಹೊಸ ಹೊಸ ಫೀಚರ್‌ಗಳು ಕೂಡ ಸೇರ್ಪಡೆಯಾಗುವ ಸಾಧ್ಯತೆಗಳಿವೆ. ಈ ಪೈಕಿ ಸ್ಮಾರ್ಟ್ ಪ್ಲೇ ಸ್ಟುಡಿಯೋ ಟಚ್‌ಸ್ಕ್ರೀನ್ ಇನ್ಪೋನೆಮೆಂಟ್ ಸಿಸ್ಟಮ್ ಹೆಚ್ಚು ಗಮನ ಸೆಳೆಯಲಿದೆ  ಎನ್ನುತ್ತಾರೆ ಆಟೋಮೊಬೈಲ್ ಕ್ಷೇತ್ರದ ತಜ್ಞರು.

ಕಮಾಲ್ ಮಾಡಿದ ಮಾರುತಿಯ ವಿಟಾರಾ ಬ್ರೆಜಾ

ಇತ್ತೀಚೆಗೆ ಬಿಡುಗಡೆಯಾದ ಚಿತ್ರಗಳನ್ನು ಗಮನಿಸಿದರೆ ಸೆಲೆರಿಯೊ ಕಾರು ಹ್ಯಾಚ್‌ಬ್ಯಾಕ್‌ಗಿಂತ ಹೆಚ್ಚು ಎಸ್‌ಯುವಿ ರೀತಿಯ ವಿನ್ಯಾಸದಲ್ಲಿರಲಿದೆ ಎಂದು ಹೇಳಲಾಗುತ್ತಿದೆ. ಹೊಸ ಮಾದರಿಯ ಎಲ್‌ಇಡಿ ಡಿಆರ್‌ಎಲ್ ಒಳಗೊಂಡ ಪ್ರೋಜೆಕ್ಟರ್ ಹೆಡ್‌ಲ್ಯಾಂಪ್ ಮತ್ತು  ಅತ್ಯಾಕರ್ಷಕ ಬಂಪರ್ ಇರಬಹುದು ಎಂದು ಹೇಳಲಾಗುತ್ತಿದೆ. ಕಾರಿನ ಹೊರಂದವು ಇನ್ನಷ್ಟು ಅತ್ಯಾಕರ್ಷವಾಗಿಯೂ ಮತ್ತು ಎಸ್‌ಯುವಿ ರೀತಿಯಲ್ಲಿ ಭಾಸವಾಗುವಂತೆ ಇರಲಿದೆ ಎನ್ನಲಾಗುತ್ತಿದೆ.

ಇನ್ನು ಕಾರಿನ ಶಕ್ತಿಶಾಲಿ ಎಂಜಿನ್  ಬಗ್ಗೆ ಮಾತನಾಡುವುದಾದರೆ, ಹೊಸ ಕಾರಿನಲ್ಲಿ ಮಾರುತಿ 1.2 ಲೀ. ಕೆ ಸೀರಿಸ್ ಎಂಜಿನ್‌ಗಳನ್ನು ಅಳವಡಿಸುವ ಸಾಧ್ಯತೆ ಇದೆ. ಜೊತೆಗೆ 1.0 ಲೀ  ಮೂರು ಸಿಲೆಂಡರ್ ಪೆಟ್ರೋಲ್ ಎಂಜಿನ್ ಕೂಡ ಇರಲಿದೆ. ಹಳೆ ಸೆಲೆರಿಯೊ 83ಬಿಎಚ್‌ಪಿ ಉತ್ಪಾದಿಸುತ್ತಿದ್ದರೆ ಹೊಸ ಎಂಜಿನ್ 68ಬಿಎಚ್‌ಪಿ ಉತ್ಪಾದಿಸಲಿದೆ. ಹಾಗೆಯೇ ಐದು ಸ್ಪೀಡ್ ಮ್ಯಾನುಯುಲ್ ಮ್ತತು ಆಟೋಮ್ಯಾಟಿಕ್ ಗಿಯರ್ (ಎಎಂಟಿ) ಗಿಯರ್ ಬಾಕ್ಸ್‌ಗಳ್ಲಿ ಈ ಸೆಲೆರಿಯೊ ದೊರೆಯಲಿದೆ.

ಇವೆಲ್ಲವೂ ಈಗಾಗಲೇ ಸಿಕ್ಕಿರುವ ಮಾಹಿತಿಯನ್ನಾಧರಿಸಿದ ಸಂಗತಿಗಳು. ಆದರೆ ಒಟ್ಟಾರೆ ಹೊಸ ಮಾದರಿಯ ಸೆಲೆರಿಯೊ ಯಾವ ರೀತಿಯಲ್ಲಿದೆ ಎಂಬುದು ಗೊತ್ತಾಗಬೇಕಿದ್ದರೆ ಮುಂದಿನ ವರ್ಷದ ಆರಂಭದವರೆಗೂ ಕಾಯಬೇಕಾಗಬಹುದು.

ಹಬ್ಬಕ್ಕೆ ಡಬಲ್ ಧಮಾಕ; ಮಾರುತಿ ಸ್ವಿಫ್ಟ್ ಲಿಮಿಟೆಡ್ ಎಡಿಶನ್ ಕಾರು ಬಿಡುಗಡೆ!