ಪ್ರವಾಸ್ 3.0, ಮುಂದಿನ ಪೀಳಿಗೆ ಜನಸಾರಿಗೆ ಪರಿಹಾರಗಳನ್ನು ಪ್ರದರ್ಶಿಸಿದ ಟಾಟಾ ಮೋಟರ್ಸ್!
ಸುರಕ್ಷಿತವಾದ, ಸ್ಮಾರ್ಟ್ ಮತ್ತು ದೀರ್ಘಕಾಲ ಇರುವಂತಹ ಪ್ರಯಾಣಿಕ ಸಾರಿಗೆಗೆ ಟಾಟಾ ಮೋಟಾರ್ಸ್ ಹೊಸ ಅರ್ಥ ನೀಡಿದೆ. 3.0 ಪ್ರವಾಸ್ ಅಭಿಯಾನದಡಿ ಮುಂದಿನ ಪೀಳಿಗೆ ವಾಹನ ಪರಿಚಯಿಸಿದೆ.
ಬೆಂಗಳೂರು(ಆ.08): ಭಾರತದ ಅತಿದೊಡ್ಡ ವಾಣಿಜ್ಯ ವಾಹನಗಳ ತಯಾರಿಕಾ ಸಂಸ್ಥೆ ಹಾಗೂ ದೇಶದ ಮುಂಚೂಣಿ ಪ್ಯಾಸೆಂಜರ್ ವಾಣಿಜ್ಯ ಸಾರಿಗೆ ಸಂಸ್ಥೆಯಾದ ಟಾಟಾ ಮೋಟರ್ಸ್, ಆಗಸ್ಟ್ 5 ಮತ್ತು 6, 2022ರಂದು ಹೈದರಾಬಾದ್‌ನಲ್ಲಿ ನಡೆಯಲು ನಿಗದಿಯಾಗಿರುವ ಪ್ರವಾಸ್ 3.0ದಲ್ಲಿ ಏಳು ಅತ್ಯಾಧುನಿಕ ಜನಸಾರಿಗೆ ಪರಿಹಾರಗಳನ್ನು ಪ್ರದರ್ಶಿಸಲಿದೆ. ಭಾರತದ ಪ್ರಮುಖ ಬಸ್ ಹಾಗು ಕಾರು ಪ್ರಯಾಣ ಪ್ರದರ್ಶನದ ಮೂರನೇ ಆವೃತ್ತಿಯಲ್ಲಿ ವಿವಿಧ ಇಂಧನ ಆಯ್ಕೆಗಳಾದ್ಯಂತ ಪ್ರಬಲವಾದ ಉತ್ಪನ್ನ ಪೋರ್ಟ್ ಪೋಲಿಯೋವನ್ನು ಪ್ರದರ್ಶಿಸುತ್ತಿದೆ. ಪ್ರವಾಸ್ 3.0ದಲ್ಲಿ ತನ್ನ “ಸುರಕ್ಷಿತವಾದ, ಸ್ಮಾರ್ಟ್ ಆದ ಮತ್ತು ದೀರ್ಘಕಾಲ ಇರುವಂತಹ ಪ್ರಯಾಣಿಕ ಸಾರಿಗೆಯೆಡೆಗೆ” ಥೀಮ್‍ಗೆ ಅನುಗುಣವಾಗಿ ತನ್ನನ್ನು ಸಜ್ಜುಗೊಳಿಸಿಕೊಳ್ಳುತ್ತಾ ಟಾಟಾ ಮೋಟರ್ಸ್ ಕೊನೆ-ಮೈಲಿ ಮತ್ತು ಲಾಂಗ್-ಹಾಲ್ ಜನಸಾರಿಗೆ ಅಗತ್ಯಗಳೆರಡಕ್ಕೂ ಆಧುನಿಕವಾದ ಮತ್ತು ದೀರ್ಘಕಾಲ ಇರುವಂತಹ ಪರಿಹಾರಗಳನ್ನು ಪ್ರದರ್ಶಿಸುತ್ತಿದೆ.
ಪ್ರವಾಸ್‍ನ ಇತ್ತೀಚಿನ ಆವೃತ್ತಿಯಲ್ಲಿ ಭಾಗವಹಿಸುವುದಕ್ಕೆ ಟಾಟಾ ಮೋಟರ್ಸ್ ಹರ್ಷಿಸುತ್ತದೆ. ಹೊಸ ಉತ್ಪನ್ನಗಳು ಹಾಗೂ ತಂತ್ರಜ್ಞಾನವನ್ನು ಪ್ರದರ್ಶಿಸುವುದರ ಜೊತೆಗೆ ಈ ವರ್ಗದೊಳಗೆ ಆಪರೇಟರುಗಳು, ವ್ಯಾಪಾರ ಸಂದರ್ಶಕರು ಮತ್ತು ಇತರ ಭಾಗೀದಾರರ ನಡುವೆ ಆಳವಾದ ಸಹಯೋಗವನ್ನು ಒದಗಿಸುವುದಕ್ಕೆ ಇದು ಒಂದು ಅದ್ಭುತ ವೇದಿಕೆಯಾಗಿ ಹೊರಹೊಮ್ಮಿದೆ. ಈ ವರ್ಷದ ಥೀಮ್ ಪ್ರಧಾನವಾಗಿ, ದೀರ್ಘಕಾಲ ಇರುವಂತಹ ಸಾರಿಗೆಯನ್ನು ವಾಸ್ತವಗೊಳಿಸಲು ಬೆಳೆಯುತ್ತಿರುವ ತಂತ್ರಜ್ಞಾನ ಮತ್ತು ಆವಿಷ್ಕಾರವನ್ನು ಬಳಸಿಕೊಳ್ಳುವ ಅಗತ್ಯವನ್ನು ಒತ್ತಿಹೇಳುತ್ತದೆ. ಈ ಉದ್ಯಮದಲ್ಲಿ ಅಗ್ರಮಾನ್ಯ ಸಂಸ್ಥೆಯಾಗಿ ಟಾಟಾ ಮೋಟರ್ಸ್ ಸದಾ ಈ ದೂರದೃಷ್ಟಿಗೆ ಅನುಗುಣವಾಗಿಯೇ ಕಾರ್ಯನಿರ್ವಹಿಸುತ್ತಿದ್ದು ನಮ್ಮ ವೈವಿಧ್ಯಮಯವಾದ ಮತ್ತು ಸ್ಮಾರ್ಟ್ ಆದ ಉತ್ಪನ್ನ ಶ್ರೇಣಿಯು, ತನ್ನ ಸುರಕ್ಷತೆ, ಆರಾಮ ಹಾಗೂ ಸಾಮರ್ಥ್ಯದ ವಿಶಿಷ್ಟ ವಾಗ್ದಾನದೊಂದಿಗೆ, ವಿವಿಧ ರೀತಿಯ ಪರಿಶುದ್ಧವಾದ ಇಂಧನ ಆಯ್ಕೆಗಳೊಂದಿಗೆ ಬರುತ್ತದೆ ಎಂದು ಟಾಟಾ ಮೋಟರ್ಸ್‍ನ ಬಸ್‍ಗಳ ಪ್ರಾಡಕ್ಟ್ ಲೈನ್‍ನ ಉಪಾಧ್ಯಕ್ಷ ರೋಹಿತ್ ಶ್ರಿವಾಸ್ತವ ಹೇಳಿದ್ದಾರೆ.
ಟಾಟಾ ಟಿಯಾಗೊ NRG ವಾರ್ಷಿಕೋತ್ಸವ, ಹೊಚ್ಚ ಹೊಸ XT ಕಾರು ಬಿಡುಗಡೆ!
ಪ್ರವಾಸ್ 3.0ದಲ್ಲಿ ಟಾಟಾ ಮೋಟರ್ಸ್‍ನ ವಾಹನ ಶ್ರೇಣಿಯು, ನಗರಾಂತರ ಮತ್ತು ಐಶಾರಾಮೀ ಪ್ರಯಾಣಕ್ಕಾಗಿ ಇರುವ ಭಾರತದ ಪ್ರಪ್ರಥಮ ಫ್ರಂಟ್ ಇಂಜಿನ್ 13.5-ಮೀಟರ್-ಬಸ್ ಮ್ಯಾಗ್ನಾ ಸ್ಲೀಪರ್ ಕೋಚ್‍ಅನ್ನು ಹೊಂದಿದೆ. ಪ್ರದರ್ಶನದಲ್ಲಿ, ಪರ್ಯಾಯ-ಇಂಧನ-ಶಕ್ತಿಯ ವಾಹನಗಳೂ ಒಳಗೊಂಡಿದ್ದು ಇವು ಸಿಬ್ಬಂದಿ ಸಾರಿಗೆಗಾಗಿಯೇ ವಿಶೇಷವಾಗಿ ವಿನ್ಯಾಸಗೊಳಿಸಲಾಗಿರುವ 9/9 ಅಲ್ಟ್ರಾ ಎಲೆಕ್ಟ್ರಿಕ್ ಬಸ್, 913 ಲಾಂಗ್ ರೇಂಜ್ ಸಿಎನ್‍ಜಿ ಬಸ್ ಮತ್ತು ಎಲ್‍ಪಿಒ 10.2 ಸಿಎನ್‍ಜಿ ಎಸಿ ಶಾಲಾ ಬಸ್ ಒಳಗೊಂಡಿದೆ. ಪ್ರದರ್ಶನದಲ್ಲಿ, ಐಶಾರಾಮಿಯಾದ ಪ್ರವಾಸ ಪ್ರಯಾಣಕ್ಕಾಗಿ ಸೂಕ್ತವಾಗಿರುವಂತಹ ಆತ್ಯಾಧುನಿಕ ಸೌಲಭ್ಯಗಳಿರುವ ಪರಿವರ್ತಿಸಬಹುದಾದ ಕ್ಯಾರವಾನ್ ಕೂಡ ಪ್ರದರ್ಶಿತಗೊಳ್ಳುತ್ತಿದೆ. ಕೊನೆ-ಮೈಲಿ ಪ್ರಯಾಣಿಕ ಸಾರಿಗೆಗೆ ಸೂಕ್ತವಾದ ಐತಿಹಾಸಿಕ ವಿಂಗರ್ 9S ಮತ್ತು ಮ್ಯಾಜಿಕ್ ಎಕ್ಸ್‍ಪ್ರೆಸ್, ಪರಿಸರಸ್ನೇಹಿ ಸೀಟಿಂಗ್ ವಿನ್ಯಾಸ ಹಾಗೂ ವಿಶಾಲವಾದ ಏರ್ಪಾಡುಗಳೊಂದಿಗೆ ಚಾಲಕ ಮತ್ತು ಪ್ರಯಾಣಿಕರು ಇಬ್ಬರಿಗೂ ಸರಿಸಾಟಿಯಿಲ್ಲದ ಆರಾಮ ಒದಗಿಸುತ್ತದೆ. ಪ್ರದರ್ಶನಗೊಳ್ಳುತ್ತಿರುವ ಪ್ರತಿಯೊಂದು ಉತ್ಪನ್ನವೂ ಅತ್ಯಧಿಕ ಸಾಮರ್ಥ್ಯ ಮತ್ತು ಲಾಭದಯಕತೆ ಸಂಭಾವ್ಯತೆಯೊಂದಿಗೆ ಅತಿಕಡಿಮೆ ಒಟ್ಟೂ ಕಾರ್ಯಾಚರಣೆ ವೆಚ್ಚಗಳನ್ನು ಹೊಂದಿದೆ.
ಕಾರು ಮಾರಾಟದಲ್ಲಿ ಹೊಸ ದಾಖಲೆ ಬರೆದ ಟಾಟಾ, ಜುಲೈ ತಿಂಗಳಲ್ಲಿ 81,790 ವಾಹನ ಸೇಲ್!
ಭವಿಷ್ಯತ್ತಿಗಾಗಿ ಪರಿಶುದ್ಧವಾದ ಹಾಗೂ ದೀರ್ಘಕಾಲ ಇರುವಂತಹ ಸಾರಿಗೆ ಪರಿಹಾರಗಳ ದೂರದೃಷ್ಟಿಯೆಡೆಗೆ ಟಾಟಾ ಮೋಟರ್ಸ್ ಬದ್ಧವಾಗಿದೆ. ಪರ್ಯಾಯ ಇಂಧನ ತಂತ್ರಜ್ಞಾನವನ್ನು ಪ್ರೋತ್ತ್ಸಾಹಿಸಲು ಅದು ನಿರ್ಣಾಯಕ ಕ್ರಮಗಳನ್ನು ಕೈಗೊಂಡಿದೆ. ಅದು, ಇಂಡಿಯನ್ ಆಯಿಲ್ ಕಾರ್ಪೋರೇಶನ್‍ನಿಂದ 15 ಹೈಡ್ರೋಜನ್ ಫ್ಯುಯೆಲ್ ಸೆಲ್ ಬಸ್‍ಗಳಿಗಾಗಿ ಆರ್ಡರ್ ಪಡೆದುಕೊಂಡ ಪ್ರಪ್ರಥಮ ಬಾರತೀಯ ವಾಹನ ತಯಾರಿಕಾ ಸಂಸ್ಥೆಯಾಗಿದೆ. ಬ್ಯಾಟರಿ ಎಲೆಕ್ಟ್ರಿಕ್ ಸಾರಿಗೆಯ ಕ್ಷೇತ್ರದಲ್ಲಿ ಟಾಟಾ ಮೋಟರ್ಸ್ ಮಾರುಕಟ್ಟೆ ಮುಂದಾಳು ಸಂಸ್ಥೆಯಾಗಿದ್ದು ದೇಶದ ಹಲವಾರು ನಗರಗಳಲ್ಲಿ 715 ಟಾಟಾ ಮೋಟರ್ಸ್ ಇ-ಬಸ್‍ಗಳನ್ನು ಸರಬರಾಜು ಮಾಡಿ ಇವೆಲ್ಲವೂ ಒಟ್ಟಾರೆಯಾಗಿ 40 ದಶಲಕ್ಷ ಕಿಲೋ ಮೀಟರ್ ಗಿಂತ ಹೆಚ್ಚಿನ ದೂರ ಕ್ರಮಿಸಿವೆ. ವಿವಿಧ ವರ್ಗಗಳಾದ್ಯಂತ ವ್ಯಾಪಕ ಶ್ರೇಣಿಯ ಸಿಎನ್‍ಜಿ ಬಸ್‍ಗಳನ್ನು ಒದಗಿಸುವ ಮೂಲಕ ಸಂಸ್ಥೆಯು ಆಪರೇಟರ್‍ಗಳಿಗೆ ಕಡಿಮೆ ಕಾರ್ಯಾಚರಣೆ ವೆಚ್ಚಗಳು ಮತ್ತು ಹೆಚ್ಚಿನ ಲಾಭದಾಯಕತೆಯನ್ನು ಖಾತರಿಪಡಿಸುತ್ತಿದೆ.
ಟಾಟಾ ಮೋಟರ್ಸ್‍ನ ಪ್ಯಾಸೆಂಜರ್ ವಾಣಿಜ್ಯ ವಾಹನಗಳಲ್ಲಿ, ಟಾಟಾ ಮೋಟರ್ಸ್ ಸಾಮಾನ್ಯ ಫಿಟ್‍ಮೆಂಟ್ ಆದ ಫ್ಲೀಟ್ ಎಡ್ಜ್ ಅಳವಡಿಕೆಯಾಗಿದ್ದು ಇದು ಗರಿಷ್ಟ ಫ್ಲೀಟ್ ನಿರ್ವಹಣೆಗಾಗಿ ಟಾಟಾ ಮೋಟರ್ಸ್‍ನ ಮುಂದಿನ ಪೀಳಿಗೆ ಡಿಜಿಟಲ್ ಪರಿಹಾರವಾಗಿದೆ. ಫ್ಲೀಟ್ ಎಡ್ಜ್, ಗ್ರಾಹಕರು ತಮ್ಮ ಇಡೀ ವ್ಯಾಪಾರ ಕಾರ್ಯಾಚರಣೆಗಳ ಮೇಲೆ ಉತ್ತಮ ನಿಯಂತ್ರಣ ಹೊಂದುವುದಕ್ಕಾಗಿ ಅವರಿಗೆ ಮೊದಲಿನಿಂದ ಕೊನೆಯವರೆಗಿನ ಸಂಪರ್ಕಗೊಂಡ ಅನುಭವ ಒದಗಿಸುತ್ತದೆ.