ಕಾರು ಮಾರಾಟದಲ್ಲಿ ಹೊಸ ದಾಖಲೆ ಬರೆದ ಟಾಟಾ, ಜುಲೈ ತಿಂಗಳಲ್ಲಿ 81,790 ವಾಹನ ಸೇಲ್!

ಟಾಟಾ ಮೋಟಾರ್ಸ್ ಕಾರುಗಳಿಗೆ ಭಾರಿ ಬೇಡಿಕೆ ಇದೆ. ಕೈಗೆಟುಕುವ ದರ, ಗರಿಷ್ಠ ಸುರಕ್ಷತೆ ಸೇರಿದಂತೆ ಹಲವು ಕಾರಣಗಳಿಗೆ ಟಾಟಾ ಕಾರು ಗ್ರಾಹಕರ ಅಚ್ಚು ಮೆಚ್ಚಿನ ಕಾರಾಗಿದೆ. ಇದೀಗ ಜುಲೈ ತಿಂಗಳ ಸೇಲ್ಸ್ ವಿವರ ಪ್ರಕಟಗೊಂಡಿದೆ. ಶೇಕಡಾ 51 ರಷ್ಟು ಪ್ರಗತಿ ದಾಖಲಿಸುವ ಮೂಲಕ ಹೊಸ ದಾಖಲೆ ಬರೆದಿದೆ.
 

Tata motors clocks highest ever monthly sales in july 2022 51 percent YoY growth ckm

ಮುಂಬೈ(ಆ.02): ಭಾರತದ ಸ್ವದೇಶಿ ನಿರ್ಮಿತ ಟಾಟಾ ಮೋಟಾರ್ಸ್ ಕಾರು ಇದೀಗ ಮತ್ತೊಂದು ದಾಖಲೆ ಬರೆದಿದೆ.  ಮಾರಾಟದಲ್ಲಿ ಅತ್ಯಧಿಕ ಕಾರುಗಳನ್ನು ಮಾರಾಟ ಮಾಡುವ ಮೂಲಕ ಜುಲೈ ತಿಂಗಳಲ್ಲಿ ಶೇಕಡಾ 51 ರಷ್ಟು ಪ್ರಗತಿ ಸಾಧಿಸಿದೆ. ಜುಲೈ 2022ರಲ್ಲಿ ಟಾಟಾ ಮೋಟಾರ್ಸ್ 81,790 ಕಾರು ಮಾರಾಟ ಮಾಡಿದೆ. ಕಳೆದ ವರ್ಷ ಅಂದರೆ 2021ರ ಜುಲೈ ತಿಂಗಳಲ್ಲಿ 54,119 ಟಾಟಾ ಕಾರುಗಳು ಮಾರಾಟಗೊಂಡಿತ್ತು. ಇದಲ್ಲಿ ಎಲೆಕ್ಟ್ರಿಕ್ ಕಾರು ಮಾರಾಟವೂ ಒಳಗೊಂಡಿದೆ. SUV ಕಾರುಗಳ ಮಾರಾಟದಲ್ಲಿ ಶೇಕಡಾ 64 ರಷ್ಟು ಪ್ರಗತಿ ಸಾಧಿಸಿದೆ. ಇದರಲ್ಲಿ ಟಾಟಾ ಪಂಚ್, ನೆಕ್ಸಾನ್, ಹ್ಯಾರಿಯರ್ ಹಾಗೂ ಸಫಾರಿ ಕಾರುಗಳ ಬೇಡಿಕೆ ಹೆಚ್ಚಾಗಿದೆ. ಅದರಲ್ಲೂ ಟಾಟಾ ಪಂಚ್ ಗರಿಷ್ಠ ಮಾರಾಟ ದಾಖಲೆ ಬರೆದಿದೆ. ಜುಲೈ ತಿಂಗಳಲ್ಲಿ ಟಾಟಾ ಪಂಚ್ 11,007 ಕಾರುಗಳು ಮಾರಾಟಗೊಂಡಿದೆ. ಟಿಗೋರ್ ಸಣ್ಣ ಹ್ಯಾಚ್‌ಬ್ಯಾಕ್ ಕಾರು 5,433 ಕಾರುಗಳು ಮಾರಾಟಗೊಂಡಿದೆ. 

ಜುಲೈ 2022 ಟಾಟಾ ಮೋಟಾರ್ಸ್(Tata Motors) ಎಲೆಕ್ಟ್ರಿಕ್ ಕಾರುಗಳ ಪೈಕಿ ಗರಿಷ್ಠ ಸಾಧನೆ ಮಾಡಿದೆ. ಜುಲೈ 2022ರಲ್ಲಿ 4,022 ಟಾಟಾ ಎಲೆಕ್ಟ್ರಿಕ್ ಕಾರುಗಳು(Tata EV) ಮಾರಾಟಗೊಂಡಿದೆ. ಜುಲೈ 2021ರಲ್ಲಿ 604 ಟಾಟಾ ಎಲೆಕ್ಟ್ರಿಕ್ ಕಾರುಗಳು ಮಾರಾಟಗೊಂಡಿತ್ತು. ಮೂಲಕ ಎಲೆಕ್ಟ್ರಿಕ್ ಕಾರಿನಲ್ಲಿ ಶೇಕಡಾ 566 ರಷ್ಟು ಪ್ರಗತಿ ಸಾಧಿಸಿದೆ. ಸಿಎನ್‌ಜಿ ಕಾರು ಮಾರಾಟದಲ್ಲಿ ಟಾಟಾ ಪ್ರಗತಿ ಸಾಧಿಸಿದೆ. 5,293 ಸಿಎನ್‌ಜಿ ಕಾರುಗಳು ಮಾರಾಟಗೊಂಡಿದೆ.  ಟಾಟಾ ಟಿಯಾಗೋ ಹಾಗೂ ಟಿಗೋರ್ ಸಿಎನ್‌ಜಿ ಕಾರುಗಳಿಗೆ ಭಾರಿ ಬೇಡಿಕೆ ಪಡೆದುಕೊಂಡಿದೆ.

ಹಚ್ಚುವರಿ ಫೀಚರ್ಸ್ ಹಾಗೂ ಅತ್ಯಾಧುನಿಕ ತಂತ್ರಜ್ಞಾನದ ನೆಕ್ಸಾನ್ EV ಪ್ರೈಮ್‍ ಕಾರು ಬಿಡುಗಡೆ!

ಟಾಟಾ ಮೋಟಾರ್ಸ್ ಕಾರುಗಳ ಪೈಕಿ ಅತೀ ಕಡಿಮೆ ಬೆಲೆ ಕಾರು ಅನ್ನೋ ಹೆಗ್ಗಳಿಕೆಗೆ ಟಾಟಾ ಟಿಯಾಗೋ ಪಾತ್ರವಾಗಿದೆ. ಟಾಟಾ ಟಿಯಾಗೋ ಕಾರಿನ ಎಕ್ಸ್ ಶೋ ರೂಂ ಬೆಲೆ 5.40 ಲಕ್ಷ ರೂಪಾಯಿ. ಇನ್ನು ಟಾಟಾ ಸಫಾರಿ  ಗರಿಷ್ಠ ಮೊತ್ತದ ಕಾರು. ಸಫಾರಿ ಬೆಲೆ 15.35 ಲಕ್ಷ ರೂಪಾಯಿಯಿಂದ 23.56 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ).

ಟಾಟಾ ವಾಣಿಜ್ಯ ವಾಹನಗಲ್ಲೂ ಪ್ರಗತಿ ಸಾಧಿಸಿದೆ. ಶೇಕಡಾ 44 ರಷ್ಟು ಪ್ರಗತಿ ಸಾಧಿಸಿರುವ ಟಾಟಾ ವಾಣಿಜ್ಯ ವಾಹನ ಮಾರಾಟ ಹೊಸ ದಾಖಲೆ ಬರೆದಿದೆ. 31,473 ವಾಣಿಜ್ಯ ವಾಹನ ಜುಲೈ 2022ರಲ್ಲಿ ಮಾರಾಟಗೊಂಡಿದೆ. 2021ರ ಜುಲೈ ತಿಂಗಳಲ್ಲಿ ಈ ಮಾರಾಟ ಪ್ರಮಾಣ 21,796 ಕಾರುಗಳು ಮಾರಾಟಗೊಂಡಿದೆ. M&HCV ವಾಹನಗಳ ಪೈಕಿ ಶೇಕಡಾ 57 ರಷ್ಟು ಮಾರಾಟ ಪ್ರಗತಿ ಸಾಧಿಸಿದೆ. 2022ರ ಜುಲೈ ತಿಂಗಳಲ್ಲಿ 8,522  M&HCV ವಾಹನ ಮಾರಾಟಗೊಂಡಿದೆ. ಇನ್ನು ಜುಲೈ 2021ರಲ್ಲಿ M&HCV ವಾಹನಗಳ ಮಾರಾಟ ಪ್ರಮಾಣ 5,416.

ಗರಿಷ್ಠ ಮಾರಾಟವಾದ ಟಾಪ್ 10 ಕಾರು, ಅಗ್ರಸ್ಥಾನದಲ್ಲಿ ವ್ಯಾಗನರ್, ನೆಕ್ಸಾನ್‌!

ವಾಣಿಜ್ಯ ವಾಹನಗಳ ರಫ್ತುವಿನಲ್ಲೂ ಟಾಟಾ ಪ್ರಗತಿ ಸಾಧಿಸಿದೆ. 2,681 ವಾಣಿಜ್ಯ ವಾಹನಗಳನ್ನು ಜುಲೈ  ತಿಂಗಳಲ್ಲಿ ವಿದೇಶಕ್ಕೆ ರಫ್ತು ಮಾಡಲಾಗಿದೆ. 2021ರ ಜುಲೈ ತಿಂಗಳಲ್ಲಿ ರಫ್ತು ಪ್ರಮಾಣ 2,052 ಆಗಿತ್ತು.
 

Latest Videos
Follow Us:
Download App:
  • android
  • ios