ದೇಶದ ಮೊದಲ ಹೈಡ್ರೋಜನ್ ಫ್ಯುಯೆಲ್ ಸೆಲ್ ಚಾಲಿತ ಬಸ್ ರಸ್ತೆಯಲ್ಲಿ ಓಡಾಟ ಆರಂಭಿಸಿದೆ.
ಟಾಟಾ ಮೋಟಾರ್ಸ್ ಭಾರತದ ಮೊದಲ ಹೈಡ್ರೋಜನ್ ಫ್ಯುಯೆಲ್ ಸೆಲ್ ಬಸ್ ತಯಾರಿಸಿದೆ. ಇದೀಗ ಈ ಬಸ್‌ಗಳನ್ನು ಇಂಡಿಯನ್ ಆಯಿಲ್‌ಗೆ ವಿತರಣೆ ಮಾಡಿದೆ. ಈ ಬಸ್ ಹಲವು ವಿಶೇಷತೆಗಳಿಂದ ಕೂಡಿದೆ.
ಬೆಂಗಳೂರು(ಸೆ.25) : ಭಾರತ ಪೆಟ್ರೋಲ್, ಡೀಸೆಲ್‌ಗೆ ಪರ್ಯಾಯವಾಗಿ ಈಗಾಗಲೇ ಹಲವು ಇಂಧನ ಮೂಲಗಳನ್ನು ಅಭಿವೃದ್ಧಿಪಡಿಸುತ್ತಿದೆ. ಈ ಪೈಕಿ ಹೈಡ್ರೋಜನ್ ಫ್ಯುಯೆಲ್ ಕೂಡ ಒಂದು. ಇದೀಗ ಟಾಟಾ ಮೋಟಾರ್ಸ್ ದೇಶದ ಮೊದಲ ಹೈಡ್ರೋಜನ್ ಇಂಧನ ಚಾಲಿತ ಬಸ್ ವಿತರಣೆ ಮಾಡಿದೆ. ಭಾರತೀಯ ತೈಲ ಕಾರ್ಪೋರೇಶನ್ ಲಿಮಿಟೆಡ್(ಐಓಸಿಎಲ್) ಈ ಬಸ್ ವಿತರಣೆ ಮಾಡಿದೆ. ಸಂಪೂರ್ಣ ಇಂಗಾಲ ನಿರೋಧಕವಾಗಿರುವ ಸಾರಿಗೆಯ ಹೊಸ ಯುಗಕ್ಕೆ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಹಸಿರು ನಿಶಾನೆ ತೋರುವ ಮೂಲಕ ವಿತರಣೆ ಮಾಡಿದರು.
ಜೂನ್ 2021ರಲ್ಲಿ, ಟಾಟಾ ಮೋಟಾರ್ಸ್ ಭಾರತದಲ್ಲಿ ಹೈಡ್ರೋಜನ್ ಆಧಾರಿತ ಪಿಇಎಂ ಇಂಧನ-ಸೆಲ್ ತಂತ್ರಜ್ಞಾನದ ಸಾಮರ್ಥ್ಯವನ್ನು ಮೌಲ್ಯಮಾಪನ ಮಾಡಲು 15 ಎಫ್ ಸಿ ಇ ವಿ ಬಸ್‌ಗಳನ್ನು ನೀಡಲು ಐಓಸಿಎಲ್ ನಿಂದ ಟೆಂಡರ್ ಪಡೆದಿತ್ತು. ಈ ಬಸ್ಸುಗಳನ್ನು ದೂರಪ್ರಯಾಣ ಮತ್ತು ನಗರದೊಳಗಿನ ಪ್ರಯಾಣಕ್ಕೆ ಸಂಭಾವ್ಯ ಸಮೂಹ ಸಾರಿಗೆ ಪರಿಹಾರವೆಂದು ನಿರ್ಣಯಿಸಲಾಗುತ್ತದೆ.
ಹೊಚ್ಚ ಹೊಸ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರು ಲಾಂಚ್, 465 ಕಿ.ಮೀ ಮೈಲೇಜ್ !
ಪುಣೆಯಲ್ಲಿರುವ ಟಾಟಾ ಮೋಟಾರ್ಸ್‌ನ ವಿಶ್ವ ದರ್ಜೆಯ ಆರ್ & ಡಿ ಸೆಂಟರ್‌ನಲ್ಲಿರುವ ಮೀಸಲಾದ ಲ್ಯಾಬ್‌ನಲ್ಲಿ ನಿರ್ಮಿಸಲಾದ, ಈ 12-ಮೀಟರ್ ಉದ್ದದ ಬಸ್‌ಗಳನ್ನು ಕೆಳ ಮಹಡಿ ವಿನ್ಯಾಸದೊಂದಿಗೆ ಸುಲಭವಾಗಿ ಒಳಹೋಗಲು ಮತ್ತು ಹೊರಹೋಗಲು ವಿನ್ಯಾಸಗೊಳಿಸಲಾಗಿದೆ, ಇದರಲ್ಲಿ 35 ಪ್ರಯಾಣಿಕರು ಕುಳಿತುಕೊಳ್ಳಬಹುದು ಮತ್ತು ಯಶಸ್ವಿ ಕಠಿಣ ರಸ್ತೆ ಪರೀಕ್ಷೆಗಳು ಮತ್ತು ಮೌಲ್ಯಮಾಪನಗಳನ್ನು ನಡೆಸಿದ ನಂತರ ಇವುಗಳನ್ನು ವಿತರಿಸಲಾಯಿತು. ಸುಧಾರಿತ ಹೈಡ್ರೋಜನ್-ಆಧಾರಿತ ಪ್ರೋಟಾನ್ ಎಕ್ಸ್ ಚೇಂಜ್ ಮೆಂಬರೇನ್ (ಪಿಇಎಂ) ಇಂಧನ ಕೋಶ ತಂತ್ರಜ್ಞಾನವನ್ನು ಭಾರತೀಯ ಪರಿಸ್ಥಿತಿಗಳಿಗೆ ಅಳವಡಿಸಲು ಪ್ರಸಿದ್ಧ ಉದ್ಯಮ ಪಾಲುದಾರರು ಮತ್ತು ಸಂಶೋಧನಾ ಸಂಸ್ಥೆಗಳೊಂದಿಗೆ ಸಹಯೋಗದ ವಿಧಾನದಿಂದ ಟಾಟಾ ಮೋಟಾರ್ಸ್ ಪರಿಣತಿ ಮತ್ತು ಅನುಭವವನ್ನು ಪಡೆದುಕೊಂಡಿದೆ ಮತ್ತು ಬಸ್‌ಗಳನ್ನು ಅಭಿವೃದ್ಧಿಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ.
ಈ ಹೊಸ ಯುಗದ ಎಫ್ ಸಿ ಇ ವಿ ಬಸ್‌ಗಳಲ್ಲಿ ಅಳವಡಿಸಲಾಗಿರುವ ತಂತ್ರಜ್ಞಾನ ಮತ್ತು ಆವಿಷ್ಕಾರಗಳ ಕುರಿತು ಮಾತನಾಡಿದ ಟಾಟಾ ಮೋಟಾರ್ಸ್‌ನ ಅಧ್ಯಕ್ಷ ಮತ್ತು ಮುಖ್ಯ ತಂತ್ರಜ್ಞಾನ ಅಧಿಕಾರಿ ಶ್ರೀ ರಾಜೇಂದ್ರ ಪೇಟ್ಕರ್ ಹೀಗೆ ಹೇಳಿದ್ದಾರೆ, "ಟಾಟಾ ಮೋಟಾರ್ಸ್ ಅತ್ಯಾಧುನಿಕ, ಹೊಸ-ಪೀಳಿಗೆಯ, ತಾಂತ್ರಿಕವಾಗಿ-ಸುಧಾರಿಸಲ್ಪಟ್ಟ ಶೂನ್ಯ-ಹೊರಸೂಸುವಿಕೆ ಇಂಧನ ಕೋಶ ಚಾಲಿತ ಬಸ್ಸುಗಳನ್ನು ಐಓಸಿಎಲ್ ಗೆ ನೀಡಲು ಹೆಮ್ಮೆಪಡುತ್ತದೆ. ಇದು ಭಾರತದಲ್ಲಿ ಹಸಿರು ಸಾರಿಗೆಗೆ ಪ್ರಮುಖ ಮೈಲಿಗಲ್ಲಾಗಿದ್ದು, ಶಕ್ತಿ ವಾಹಕವಾಗಿ ಹೈಡ್ರೋಜನ್‌ನ ಪ್ರಬಲ ಸಾಮರ್ಥ್ಯವನ್ನು ಬಳಸಿಕೊಳ್ಳುತ್ತದೆ, ಸಾರಿಗೆ ವಲಯದಲ್ಲಿ ಹೈಡ್ರೋಜನ್ ಆರ್ಥಿಕತೆಯನ್ನು ಪ್ರಾರಂಭಿಸುತ್ತದೆ.
ಸಂಪೂರ್ಣ ಹೊಸತನ, 8.09 ಲಕ್ಷ ರೂಗೆ ಟಾಟಾ ನೆಕ್ಸಾನ್ ಕಾರು ಬಿಡುಗಡೆ!
ಸುರಕ್ಷತೆಗಾಗಿ ಸ್ಥಿರತೆ ನಿಯಂತ್ರಣ, ಸ್ಮರ್ಟ್ ಸಾರಿಗೆ ವ್ಯವಸ್ಥೆ, ಹೊಸ-ಪೀಳಿಗೆಯ ಟೆಲಿಮ್ಯಾಟಿಕ್ಸ್ ದಕ್ಷ, ಬಳಕೆದಾರ ಸ್ನೇಹಿ ವಾಹನ ನಿರ್ವಹಣೆ ಮತ್ತು ರೂಮಿ ಇಂಟೀರಿಯರ್ ಜೊತೆಗೆ ಟ್ರ್ಯಾಕಿಂಗ್ ಒಳಗೊಂಡಿದೆ. ಈ ಬೆಳವಣಿಗೆಯು ಟಾಟಾ ಮೋಟಾರ್ಸ್‌ನ ನಿರಂತರ ಬದ್ಧತೆ ಮತ್ತು ಇಂಗಾಲ ತಟಸ್ಥೀಕರಣದ ನಾಯಕತ್ವಕ್ಕೆ ಸಾಕ್ಷಿಯಾಗಿದೆ. ಪರಸ್ಪರ ಒಪ್ಪಂದದ ಭಾಗವಾಗಿ, ಟಾಟಾ ಮೋಟಾರ್ಸ್ ಮತ್ತು ಐಓಸಿಎಲ್ ಮುಂಬರುವ ದಿನಗಳಲ್ಲಿ ಪಿಇಎಂ ಇಂಧನ ಕೋಶಗಳಿಗೆ ಸಂಬಂಧಿಸಿದ ಕೋರ್ ತಂತ್ರಜ್ಞಾನದಲ್ಲಿ ಹೆಚ್ಚಿನ ಪ್ರಗತಿಯನ್ನು ಮುಂದುವರಿಸಲಿದೆ."
ಭಾರತದ ಅತಿದೊಡ್ಡ ಮತ್ತು ಅತ್ಯಂತ ನವೀನ ವಾಣಿಜ್ಯ ವಾಹನ ತಯಾರಕರಾಗಿರುವ ಟಾಟಾ ಮೋಟಾರ್ಸ್ ಸಂಶೋಧನೆ ಮತ್ತು ಅಭಿವೃದ್ಧಿ ಸೌಲಭ್ಯಗಳು ಬ್ಯಾಟರಿ-ಎಲೆಕ್ಟ್ರಿಕ್, ಹೈಬ್ರಿಡ್, ಸಿ ಎನ್ ಜಿ, ಎಲ್ ಎನ್ ಜಿ, ಹೈಡ್ರೋಜನ್ ಐಸಿಇ ಮತ್ತು ಹೈಡ್ರೋಜನ್ ಇಂಧನ ಸೆಲ್ ತಂತ್ರಜ್ಞಾನಗಳನ್ನು ಒಳಗೊಂಡಂತೆ ಪರ್ಯಾಯ ಇಂಧನ ತಂತ್ರಜ್ಞಾನದಿಂದ ನಡೆಸಲ್ಪಡುವ ನವೀನ ಸಾರಿಗೆ ಪರಿಹಾರಗಳನ್ನು ಸ್ಥಿರವಾಗಿ ವಿನ್ಯಾಸಗೊಳಿಸಿವೆ.