6 ಸ್ಪೀಡ್ MT/AMT ಮತ್ತು 7 ಸ್ಪೀಡ್ DCA ಆಯ್ಕೆ, ಪೆಟ್ರೋಲ್ ಹಾಗೂ ಡೀಸೆಲ್ ವೇರಿಯೆಂಟ್, 6 ಏರ್‌ಬ್ಯಾಗ್‌ ಸೇರಿದಂತೆ ಗರಿಷ್ಠ ಸುರಕ್ಷತೆ, ಅತ್ಯಾಧುನಿಕ ಫೀಚರ್ಸ್ ಸೇರಿದಂತೆ ಹಲವು ವಿಶೇಷತೆಗಳು ಹೊಸ ಟಾಟಾ ನೆಕ್ಸಾನ್ ಕಾರು ಕೇವಲ 8.09 ಲಕ್ಷ ರೂಗೆ ಲಭ್ಯವಿದೆ 

ಬೆಂಗಳೂರು(ಸೆ.16) : ಟಾಟಾ ಮೋಟಾರ್ಸ್ ಸಂಪೂರ್ಣ ಹೊಸತನದ ನೆಕ್ಸಾನ್ ಕಾರು ಬಿಡುಗಡೆ ಮಾಡಿದೆ. ಭಾರತದಲ್ಲಿ ಅತೀ ಹೆಚ್ಚು ಮಾರಾಟವಾಗುವ ಈ ಎಸ್.ಯು.ವಿ ಕಾರು ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿರುವ ನೆಕ್ಸಾನ್ ಇದೀಗ ಹೊಸ ಅವತಾರದಲ್ಲಿ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಹೊಸ ಪೀಳಿಗೆಯ ನೆಕ್ಸಾನ್, ತನ್ನ ವರ್ಗದ ಎಲ್ಲ ವಾಹನಗಳಿಗಿಂತ ಹೊಸ ಅನುಭವವನ್ನು ನೀಡುತ್ತದೆ. , ಚಿಂತನಾಶೀಲ ಜನರ ಮೇಲೆ ಕ್ರಿಯಾತ್ಮಕ, ಭಾವನಾತ್ಮಕ ಪ್ರಭಾವವನ್ನು ಬೀರುತ್ತದೆ. ಹೊಸ ನೆಕ್ಸಾನ್: ಡಿಜಿಟಲ್ ಪ್ರೇರಿತ ವಿನ್ಯಾಸ, ಅಧಿಕ ಸುರಕ್ಷತೆ, ಸಮಕಾಲೀನ ತಂತ್ರಜ್ಞಾನ, ಅತ್ಯುತ್ತಮ ದರ್ಜೆಯ ಕಾರ್ಯಕ್ಷಮತೆಗಳಿಂದ ಕೂಡಿದ್ದು ದೇಶದಾದ್ಯಂತ ಬಹು-ಪೀಳಿಗೆಗಳವರನ್ನು ಆಕರ್ಷಿಸುತ್ತದೆ. ಫಿಯರ್‌ಲೆಸ್, ಕ್ರಿಯೇಟಿವ್, ಪ್ಯೂರ್ ಮತ್ತು ಸ್ಮಾರ್ಟ್ ಈ ನಾಲ್ಕು ವೇರಿಯೆಂಟ್‌‌ನಲ್ಲಿ ಕಾರು ಲಭ್ಯವಿದೆ. ಪೆಟ್ರೋಲ್ ಮತ್ತು ಡೀಸೆಲ್ ಎರಡೂ ಪವರ್‌ಟ್ರೇನ್‌ಗಳಲ್ಲಿ ಲಭ್ಯವರುವ ಈ ಕಾರಿನ ಆರಂಭಿಕ ಬೆಲೆ 8.09 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ)

ಹೊಸ ನೆಕ್ಸಾನ್ ಅತ್ಯಾಕರ್ಷಕ ವೈಶಿಷ್ಟ್ಯಗಳು ಮತ್ತು ಗುಣಾಧಿಕ್ಯಗಳಿಂದಾಗಿ ಮಾರುಕಟ್ಟೆಯಲ್ಲಿ ಅದಕ್ಕೆ ಪ್ರತ್ಯೇಕ ಸ್ಥಾನವೇ ಇದೆ. ತ್ಯಾಧುನಿಕತೆ-ಶ್ರೇಷ್ಠವಿನ್ಯಾಸ-ಚೈತನ್ಯಶೀಲತೆ ಎಲ್ಲವೂ ಮೇಳೈಸಿರುವುದರಿಂದ ರಸ್ತೆಯ ಮೇಲೆ ಹೋಗುತ್ತಿದ್ದರೆ ಎಲ್ಲರ ಗಮನ ಸೆಳೆಯುತ್ತದೆ. ಅತ್ಯಾಧುನಿಕ ಸಂಪರ್ಕ ಸೌಲಭ್ಯಗಳು, ಉನ್ನತೀಕರಿಸಿದ ಸುರಕ್ಷತೆ ಮತ್ತು ನೋಟ... ಹೀಗೆ ಎಲ್ಲ ಅತ್ಯಾಧುನಿಕ ವೈಶಿಷ್ಟ್ಯಗಳಿಂದ ತುಂಬಿದ್ದು ಅನನ್ಯ ಅನುಭವವನ್ನು ನೀಡುತ್ತದೆ. ಹೀಗಾಗಿ ಹೊಸ ನೆಕ್ಸಾನ್ ತನ್ನ ವಿಭಾಗದಲ್ಲಿ ಉಳಿದೆಲ್ಲವುಗಳಿಗಿಂತ ಬಹಳ, ಬಹಳ ಮುಂದಿದೆ.

ಹೊಚ್ಚ ಹೊಸ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರು ಲಾಂಚ್, 465 ಕಿ.ಮೀ ಮೈಲೇಜ್ !

ಹೊಸ ನೆಕ್ಸಾನ್‌ನ ಪ್ರಮುಖ ಅಂಶಗಳು:
ಡಿಜಿಟಲ್ ಪ್ರೇರಿತ ವಿನ್ಯಾಸ: ಟಾಟಾ ಮೋಟಾರ್ಸ್‌ನಲ್ಲಿಯೇ ಐಕಾನಿಕ್ ಮತ್ತು ಕಾಲಾತೀತ ವಾಹನವೆಂಬ ತನ್ನ ಸ್ಥಾನವನ್ನು ನೆಕ್ಸಾನ್ ಭದ್ರಪಡಿಸಿಕೊಂಡಿದೆ. ಹೊಸ ನೆಕ್ಸಾನ್‌ನಲ್ಲಿ ಕಂಪನಿಯು ಇನ್ನಷ್ಟು ವಿಶಿಷ್ಟವಾದ ಲಕ್ಷಣಗಳನ್ನು ಸೇರಿಸಿದೆ. ತನ್ನ ಆಕರ್ಷಣೆಯನ್ನು ತಲೆಮಾರುಗಳಾದ್ಯಂತ ವಿಸ್ತರಿಸಿದೆ. ಮರುವಿನ್ಯಾಸಗೊಳಿಸಲಾದ ಮುಂಭಾಗ, ಬೈ-ಎಲ್ಇಡಿ ಹೆಡ್‌ಲ್ಯಾಂಪ್‌ಗಳು ಮತ್ತು ಅನುಕ್ರಮವಾಗಿರುವ ಎಲ್ಇಡಿ ಡಿ.ಅರ್.ಎಲ್.ಎಸ್., ಹಗಲಿರಲಿ ರಾತ್ರಿಯಿರಲಿ ಎಲ್ಲರ ಗಮನವನ್ನು ಸೆಳೆಯುತ್ತದೆ. ಡೇ-ಟೈಮ್ ಲಿಟ್, ಎಕ್ಸ್ ಫ್ಯಾಕ್ಟರ್ ಮತ್ತು ವೆಲ್-ಕಮ್ ಮತ್ತು ಗುಡ್-ಬೈ ಗಳ ಸಹಿತವಾದ ಟೈಲ್-ಲ್ಯಾಂಪ್‌ನಂತಹ ವೈಶಿಷ್ಟ್ಯಗಳು, ವರ್ಗ ಮತ್ತು ಆಧುನಿಕತೆಯ ಹವಾ ಸೃಷ್ಟಿಸುತ್ತದೆ. ಇದರೊಟ್ಟಿಗೆ, ಮಿಟುಕಿಸುವ ಬದಲು ಭಾವನೆಗಳನ್ನು ಉತ್ತೇಜಿಸುವ ಬ್ಲೇಡ್ ದೀಪಗಳು. ವಿಸ್ತರಿಸಿದ ಸ್ಪಾಯ್ಲರಿನಲ್ಲಿ ಸಾಮಾನ್ಯ ದೃಷ್ಟಿಗೆ ಬೀಳದಂತೆ ಮರೆಮಾಡಿದ ಹಿಂಬದಿಯ ವೈಪರ್. ಒಳಾಂಗಣದ ಕಲ್ಪನೆಯೇ ಪೂರ್ಣ ಹೊಸತಾಗಿದೆ. ಇದು 3-ಟೋನ್ ಡ್ಯಾಶ್‌ಬೋರ್ಡ್‌ನೊಂದಿಗೆ ಬರುತ್ತದೆ. ಜೀವಂತ ಮೇರುಕೃತಿಯಂತಿರುವ ಶ್ರೀಮಂತ ಲೆದರೆಟ್ ಮಿಡ್ ಪ್ಯಾಡ್. ಹೊಸ ಪೀಳಿಗೆಯ ಲೆದರಿನ ಹೊದಿಕೆಯಿರುವ 2-ಸ್ಪೋಕ್ಸಿರುವ ಫಿಜಿಟಲ್ ಸ್ಟೀರಿಂಗ್ ವೀಲ್ ಮೇಲೆ ನಮ್ಮ ಪ್ರಕಾಶಮಾನವಾದ ಲೋಗೋ. ಭಾರತದಲ್ಲೇ ಇದು ಮೊದಲ ಪ್ರಯತ್ನ. ಲೆದರೆಟ್ ಆರ್ಮ್‌ರೆಸ್ಟ್‌ ಇರುವ ಭವ್ಯವಾದ ಪೆಟ್ಟಿಗೆಯಂತಿರುವ ಐಷಾರಾಮಿ ಕ್ಯಾಬಿನ್ ನಿಂದಾಗಿ ನಿಯಂತ್ರಣ ಆರಾಮವೆನಿಸುತ್ತದೆ.

ಕಾರ್ಯಕ್ಷಮತೆ: ನಗರ, ಗ್ರಾಮೀಣ ಅಥವಾ ಒರಟಾದ ಪರಿಸರವಿರಲಿ ನೆಕ್ಸಾನ್‌ನ ಕಾರ್ಯಕ್ಷಮತೆಯು ಸ್ವಲ್ಪವಾದರೂ ಕುಂದುವುದಿಲ್ಲ. ಇದೇ ಅದರ ಕಾರ್ಯಕ್ಷಮತೆಯ ಬಗ್ಗೆ ಹೇಳುತ್ತದೆ. ಸದೃಢವಾದ ಎಂಜಿನ್ ಮತ್ತು ಸುಧಾರಿತ ತಂತ್ರಜ್ಞಾನಗಳು ಯಾವುದೇ ಪರಿಸರಕ್ಕೂ ಸೂಕ್ತವಾಗಿ ಹೊಂದಿಕೊಳ್ಳುತ್ತವೆ; ರೋಮಾಂಚಕ ಚಾಲನಾ ಅನುಭವವನ್ನು ನೀಡುತ್ತವೆ. ಮೊನೊಸ್ಟೇಬಲ್ ಶಿಫ್ಟರ್‌ ಆಪರೇಟ್ ಮಾಡುವ ಇಂಟೆಲಿಜೆಂಟ್, 7-ವೇಗದ ಡಿಸಿಎ ಜೊತೆಗೆ ಚುರುಕಿನ ಮತ್ತು ಸ್ಪೋರ್ಟಿ ಪ್ಯಾಡಲ್ ಶಿಫ್ಟರ್‌. ಇದು, ಕಾರ್ಯಕ್ಷಮತೆಯನ್ನು ಪರಿಷ್ಕರಿಸಿ ಶ್ರಮವಿಲ್ಲದಂತೆ ಮಾಡುತ್ತದೆ. ಸುಧಾರಿತ 1.2ಲೀ ರೆವೊಟ್ರಾನ್ ಟರ್ಬೊ ಪೆಟ್ರೋಲ್ ಅಥವಾ 1.5ಲೀ ರೆವೊಟಾರ್ಕ್ ಕಾಮನ್ ರೈಲ್ ಡೀಸೆಲ್ ಎಂಜಿನ್ ಆಯ್ಕೆಯಿದ್ದು ಯಾವುದೇ ರಸ್ತೆಯಿದ್ದರೂ ಪ್ರಾಬಲ್ಯ ಸಾಧಿಸುತ್ತದೆ. ಇಂಜಿನ್ ಸಂಯೋಜನೆ ಬಗೆಗಳು: ಮ್ಯಾನ್ಯುಯಲ್, ಆಟೋಮೇಟೆಡ್ ಮ್ಯಾನ್ಯುಯಲ್, ಮತ್ತು ವೆಟ್ ಕ್ಲಚ್ 7 ಸ್ಪೀಡ್ ಡಿಸಿಎ ಟ್ರಾನ್ಸ್ಮಿಷನ್.

30 ಸಾವಿರ ರೂಪಾಯಿಗೆ ಬುಕ್ ಮಾಡಿ ಟಾಟಾದ ಹೊಚ್ಚ ಹೊಸ ಡಾರ್ಕ್ ಎಡಿಶನ್ ಕಾರು!

ಆಧುನಿಕ ಸುರಕ್ಷತೆ: ರಚನೆಯಲ್ಲಿ ವರ್ಧನೆಗಳನ್ನು ಅಳವಡಿಸಿಕೊಳ್ಳುವ ಮೂಲಕ ನೆಕ್ಸಾನ್ ಕಠಿಣ GNCAP 2022 ಸುರಕ್ಷತಾ ಪ್ರೋಟೋಕಾಲ್‌ಗಳಿಗೆ ಅನುಗುಣವಾಗಿ ಆಧುನೀಕರಣ ಪ್ರಕ್ರಿಯೆಗೆ ಒಳಗಾಗಿದೆ. ಸಾಮಾನ್ಯವಾಗಿ 6 ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಆಸನದಲ್ಲಿದ್ದಾರೋ ಇಲ್ಲವೋ ಎಂಬುದನ್ನು ಪತ್ತೆಮಾಡುವ 3-ಪಾಯಿಂಟ್ ಹಿಂದಿನ ಸೀಟ್‌ಬೆಲ್ಟ್ ಗಳು, ಪ್ಯಾಸೆಂಜರ್ ಏರ್‌ಬ್ಯಾಗ್ ನಿಷ್ಕ್ರಿಯಗೊಳಿಸುವಿಕೆ ಸ್ವಿಚ್ ಮತ್ತು ISOFIX ಚೈಲ್ಡ್ ಸೀಟ್‌ ಗಳಂತಹ ಗುಣಮಟ್ಟದ ವೈಶಿಷ್ಟ್ಯಗಳೊಂದಿಗೆ ಕೂಡಿದ್ದು ಮನಸ್ಸಿಗೆ ಅತ್ಯಂತ ಶಾಂತಿಯನ್ನು ನೀಡುತ್ತದೆ. ಹೈ ಡೆಫಿನಿಷನ್ 360-ಡಿಗ್ರಿ, ಸರೌಂಡ್-ವ್ಯೂ ಸಿಸ್ಟಮ್, ಮುಂಭಾಗದ ಪಾರ್ಕಿಂಗ್ ಸಂವೇದಕಗಳು, ಮತ್ತು ಬ್ಲೈಂಡ್-ವ್ಯೂ ಮಾನಿಟರ್ ಗಳು ಜಾಗರೂಕತೆಯಿಂದ ಚಾಲನೆ ಮಾಡಲು ಸಮಯೋಚಿತ ಎಚ್ಚರಿಕೆಗಳನ್ನು ನೀಡುತ್ತವೆ. ಇ-ಕಾಲ್‌ ಸಹಿತ ಇದೆ. ಇದು, ತುರ್ತು ಪರಿಸ್ಥಿತಿಗಳಲ್ಲಿ ದಿನವಿಡೀ ಸಹಾಯ ದೊರೆಯುವಂತೆ ನೋಡಿಕೊಳ್ಳುತ್ತದೆ ಮತ್ತು ಕಾರ್ ಕೆಟ್ಟುನಿಂತರೆ ಯಾವುದೇ ಸಮಯದಲ್ಲಿ ಬಿ-ಕಾಲ್ ಸಹಾಯವನ್ನು ಪಡೆಯಬಹುದು. 

ಭವಿಷ್ಯದ ತಂತ್ರಜ್ಞಾನ: ಹೊಸ ನೆಕ್ಸಾನ್, ಇತ್ತೀಚಿನ ತಂತ್ರಜ್ಞಾನ ವೈಶಿಷ್ಟ್ಯಗಳಾದ ವಾಯ್ಸ್ ಅಸಿಸ್ಟೆಡ್ ಇಲೆಕ್ಟ್ರಿಕ್ ಸನ್‌ರೂಫ್, ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಸಹಿತವಾದ ಹರ್ಮನ್‌ ತಯಾರಿಸಿದ ನಾಜೂಕದ 10.25" ಇನ್ಫೋಟೈನ್‌ಮೆಂಟ್ ಸಿಸ್ಟಮ್, ಈ ವಿಭಾಗದಲ್ಲಿಯೇ ಪ್ರಥಮವಾದ 10.25" ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಐಆರ್‌ಎ 2.0 ಸಹಿತವಾದ ಕನೆಕ್ಟೆಡ್ ವೆಹಿಕಲ್ ತಂತ್ರಜ್ಞಾನ ಗಳನ್ನು ಹೊಂದಿದೆ. ಇವು, ಭಾರತೀಯ ಪ್ರಯಾಣಿಕರಿಗೆ ರಿಮೋಟ್ ಎಂಜಿನ್ ಸ್ಟಾರ್ಟ್ ಸ್ಟಾಪ್ ಮತ್ತು ಎಸಿ, 30+ ನ್ಯಾವಿಗೇಷನ್ ಮತ್ತು ಸುರಕ್ಷತಾ ವೈಶಿಷ್ಟ್ಯಗಳು ಮತ್ತು ಇನ್ನೂ ಹೆಚ್ಚಿನವುಗಳನ್ನು ನೀಡುತ್ತವೆ.

ಆಮೂಲಾಗ್ರ ಬದಲಾವಣೆ: ಹೊಸ ನೆಕ್ಸಾನ್, ಟಾಟಾ ಮೋಟಾರ್ಸ್‌ನ ಉತ್ಪನ್ನ ಕಾರ್ಯತಂತ್ರದಲ್ಲಿ ಒಂದು ಸಂಪೂರ್ಣ, ಮಾದರಿ ಬದಲಾವಣೆಯನ್ನು ಸೂಚಿಸುತ್ತದೆ. ಸಾಂಪ್ರದಾಯಿಕವಾದ ರೂಪಾಂತರಗಳನ್ನು ಬಿಟ್ಟು ಕ್ರಮವಾಗಿ ನಾಲ್ಕು ವಿಭಿನ್ನ ಸ್ವರೂಪಗಳಲ್ಲಿ ಲಭ್ಯವಿದೆ. ಪ್ರತಿಯೊಂದೂ ನಿರ್ದಿಷ್ಟ ಗ್ರಾಹಕರ ಅಗತ್ಯತೆಗಳನ್ನು ಪೂರೈಸುತ್ತದೆ. ಇದು, ಗ್ರಾಹಕರ ಆದ್ಯತೆಗಳನ್ನು ಗ್ರಹಿಸಿ ಅದಕ್ಕೆ ತಕ್ಕಂತಹ ಕೊಡುಗೆಗಳನ್ನು ನೀಡುವ ಬಗ್ಗೆ ಟಾಟಾ ಮೋಟಾರ್ಸ್‌ಗಿರುವ ಬದ್ಧತೆಯನ್ನು ಪ್ರದರ್ಶಿಸುತ್ತದೆ.

• ನಿರ್ಭೀತ ವ್ಯಕ್ತಿತ್ವ - ಇಲ್ಲ ಎನ್ನುವ ಮಾತೇ ಇಲ್ಲ. ಲಾಂಗ್ ಡ್ರೈವ್ ಇರಲಿ ಅಥವಾ ಗುಡ್ಡ-ಗಾಡುಗಳ ಡ್ರೈವ್ ಇರಲಿ, ಯಾವಾಗಲೂ 'ಸಿದ್ಧ'.
• ಸೃಜನಾತ್ಮಕ ವ್ಯಕ್ತಿತ್ವ – ಪ್ರತಿಯೊಬ್ಬರಲ್ಲೂ ಮಗುವಿನ ಸ್ವಭಾವ ಅಡಗಿದೆ. ಈ ಮಗು ಯಾವಾಗಲೂ ಸೃಜನಶೀಲ ಮತ್ತು ಹೊಸತನ್ನು ಅರಸುತ್ತಿರುತ್ತದೆ. ಇಡೀ ಜಗತ್ತನ್ನೇ ಶೋಧಿಸಲು ಬಯಸುತ್ತಿರುತ್ತದೆ.
• ಶುದ್ಧ ವ್ಯಕ್ತಿತ್ವ – ತತ್-ಕ್ಷಣಕ್ಕೆ ಜೀವಿಸಬಯಸುವ ಗ್ರಾಹಕರಿಗೆ. ಚಿಕ್ಕ ಚಿಕ್ಕ ಸಂತೋಷಗಳನ್ನು ಅನುಭವಿಸುವುದು. ನೀವು ನೀವಾಗಿರುವುದರಲ್ಲಿಯೇ ಹೆಮ್ಮೆ ಪಡಿ ಮತ್ತು ಪರಮೋತ್ಕೃಷ್ಟತೆಯ ಜೀವನ ನಡೆಸಿ.
• ಸ್ಮಾರ್ಟ್ ವ್ಯಕ್ತಿತ್ವ – ಫಲಿತಾಂಶಗಳು ಮತ್ತು ಪ್ರಾಯೋಗಿಕತೆಯನ್ನು ನಂಬುವ ಗ್ರಾಹಕರು. ಜೀವನಕ್ಕೆ ಸ್ಮಾರ್ಟ್ ವಿಧಾನ 

2017 ರಲ್ಲಿ ಅಸ್ತಿತ್ವಕ್ಕೆ ಬಂದಾಗಿನಿಂದಲೂ ನೆಕ್ಸಾನ್, ಭಾರತೀಯ ಎಸ್.ಯು.ವಿ. ವಿಭಾಗದಲ್ಲಿ ಅಳಿಸಲಾಗದ ಛಾಪನ್ನು ಮೂಡಿಸಿದೆ; ಹೊಸ ಹೊಸ ಗ್ರಾಹಕರ ವಿವಿಧ ಶ್ರೇಣಿಗಳನ್ನು ಆಕರ್ಷಿಸುತ್ತದೆ. ನೆಕ್ಸಾನ್, ನಿಜವಾಗಿಯೂ ನೂತನ ಪಥ ನಿರ್ಮಾಪಕ ಮತ್ತು ಭಾರತದಲ್ಲಿ ಟಾಟಾ ಮೋಟಾರ್ಸ್‌ನ ಯಶಸ್ಸಿನ ಮೂಲಾಧಾರ. ಎಲ್ಲ ವಯೋಮಾನ ವರ್ಗಗಳ ಎಸ್‌ಯುವಿ ಉತ್ಸಾಹಿಗಳ ಹೃದಯ ಮತ್ತು ಮನಸ್ಸುಗಳನ್ನು ನಿರಂತರವಾಗಿ ಸೆರೆಹಿಡಿದಿದೆ. ಪ್ರತಿ 5 ಕಾರುಗಳಲ್ಲಿ ಒಂದು ನೆಕ್ಸಾನ್ ಆಗಿರುವಷ್ಟು ಪ್ರಭಾವಶಾಲಿ ಪಾಲನ್ನು ಸಂಪಾದಿಸಿದೆ. ವಾಣಿಜ್ಯ ವಿಜಯದ ಜೊತೆಗೆ ನೆಕ್ಸಾನ್, ಭಾರತದಲ್ಲಿನ ಎಸ್‌ಯುವಿ ವಿಭಾಗವನ್ನು ಮರು-ರೂಪಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದೆ. ಆಧುನಿಕ ವಿನ್ಯಾಸ, ಸುಧಾರಿತ ಸುರಕ್ಷತಾ ವೈಶಿಷ್ಟ್ಯಗಳು ಮತ್ತು ಸೌಕರ್ಯ ಮತ್ತು ಅನುಕೂಲತೆಗಳ ಉತ್ತಮ ಸಂಯೋಜನೆಯತ್ತ ಉದ್ಯಮನದ ಗಮನವನ್ನು ಹೊರಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ.