ಮುಂಬೈ(ಏ.06) ಮೆಕ್ಯಾನಿಕ್‌ಗಳ ಕೌಶಲ್ಯ ವೃದ್ಧಿ ಹಾಗೂ ಪ್ರೋತ್ಸಾಹ ನೀಡುವ ಸಲುವಾಗಿ ಶೆಲ್ ಅಡ್ವಾನ್ಸ್‌ನಿಂದ ದುನಿಯಾ ದೇಖೇಂಗಿ ಅಭಿಯಾನ ಆರಂ‘ವಾಗಿದೆ. ಸೆಲೆಬ್ರಿಟಿ ಹಾಗೂ ಬೈಕರ್ ರಣವಿಜಯ್ ಸಿಂಗ್ ಇದಕ್ಕೆ ರಾಯಭಾರಿಯಾಗಿದ್ದಾರೆ. ಈ ಅಭಿಯಾನದಂಗವಾಗಿ ಮೆಕ್ಯಾನಿಕ್‌ಗಳಾದ ಚೆನ್ನೆ‘ಯ ಎಸ್ ಮೋಹನ್ ರಾಜ್, ಪಂಜಾಬ್‌ನ ಮನ್‌ದೀಪ್ ಸಿಂಗ್ ಬದುಕಿನ ಕಥೆ ಹೇಳುವ ಫಿಲ್ಮ್‌ಗಳನ್ನು ಬಿಡುಗಡೆ ಮಾಡಲಾಗಿದೆ.

ಶೆಲ್ -ಹೂಪಿಯಿಂದ ಗ್ರಾಹಕರ ಮನೆ ಬಾಗಿಲಲ್ಲೇ ದ್ವಿಚಕ್ರ ವಾಹನ ಸರ್ವೀಸ್!.

ಮೊದಲ ಚಿತ್ರವು ಚೆನ್ನೈನ ಎಸ್. ಮೋಹನ್‌ರಾಜ್ ಅವರ ಜೀವನದಿಂದ ಸ್ಪೂರ್ಥಿ ಪಡೆದುಕೊಂಡಿದೆ. ಮೋಹನ್‌ರಾಜ್ ತಮ್ಮ ಪ್ರಯಾಣದ ಅನುಭವವನ್ನು ಹಂಚಿಕೊಂಡಿದ್ದಾರೆ. ಹಲವಾರು ತರಬೇತಿ, ಕೌಶಲ್ಯಭರತಿ ಮಾರ್ದರ್ಶನಗಳನ್ನು ಪಡೆದುಕೊಂಡಿರುವ ಮೊಹನ್, 12 ವರ್ಷ ಕಾಲ ಆಟೋ ವರ್ಕ್‌ಶಾಪ್ ಇಟ್ಟಕೊಂಡಿದ್ದಾರೆ.  ನವೀಕರಿಸಿರುವ ಅವರ ಅಟೋ ವರ್ಕ್ಸ್ ಶೆಲ್ ಬೆಂಬಲದೊಂದಿಗೆ ಯಶಸ್ವಿಯಾಗಿ ನಡೆಯುತ್ತಿದೆ. 

ಪಂಜಾಬ್‌ನ ಮೊಗಾದಿಂದ ಮಂದೀಪ್ ಸಿಂಗ್ ಅವರ ಸ್ಪೂರ್ತಿ ಕತೆ ಕೂಡ ಅನಾವರಣಗೊಂಡಿದೆ. ಶೆಲ್ ಅಡ್ವಾನ್ಸ್‌ನಿಂದ ಬದಕು ಬದಲಾಯಿಸಿಕೊಂಡ ಸ್ಪೂರ್ತಿಯ ಕತೆ ಇದಾಗಿದೆ.  ಇದೀಗ ಮಂದೀಪ್ ಸಿಂಗ್ ನೂರಕ್ಕೂ ಹೆಚ್ಚು ಯುವಕರಿಗೆ ತರಬೇತಿ ನೀಡುತ್ತಾರೆ ಈ ಕನಸನ್ನು ಮತ್ತಷ್ಟು ಸಕ್ರಿಯಗೊಳಿಸಲು ಶೆಲ್ ತನ್ನ ಕಾರ್ಯಾಗಾರವನ್ನು ಸಂಪೂರ್ಣವಾಗಿ ಮರುಬ್ರಾಂಡ್ ಮಾಡಿದ್ದಾರೆ. 

ದೇಖೇಂಗಿ ದುನಿಯಾ ಅಭಿಯಾನದಲ್ಲಿ ಇಂತಹ ಹಲವು ಸ್ಪೂರ್ತಿದಾಯಕ ಕತೆಗಳ ಹೊರಬರುತ್ತಿದೆ. ಶೆಲ್ ಅಡ್ವಾನ್ಸ್‌ನಿಂದ ಬದುಕು ಬದಲಿಸಿಕೊಂಡವರು  ಇದೀಗ ಇತರರಿಗೆ ಸ್ಪೂರ್ತಿಯಾಗಿದ್ದಾರೆ.