Asianet Suvarna News Asianet Suvarna News

ಶೆಲ್ -ಹೂಪಿಯಿಂದ ಗ್ರಾಹಕರ ಮನೆ ಬಾಗಿಲಲ್ಲೇ ದ್ವಿಚಕ್ರ ವಾಹನ ಸರ್ವೀಸ್!

  • -      ತಂತ್ರಜ್ಞಾನ ಆಧಾರಿತ, ನುರಿತ ಮೆಕ್ಯಾನಿಕ್ ಗಳ ಮೂಲಕ ಕಾಂಟ್ಯಾಕ್ಟ್ ಲೆಸ್ ಸೇವಾ ಪರಿಹಾರಗಳು
  • -      ಕೋವಿಡ್-19 ನಿಂದ ಸಂಕಷ್ಟಕ್ಕೆ ಸಿಲುಕಿರುವ ಮೆಕ್ಯಾನಿಕ್ ಸಮುದಾಯಕ್ಕೆ ನೆರವು
Shell Lubricants and Hoopy begins doorstep step servicing solutions for two wheelers in India
Author
Bengaluru, First Published Sep 3, 2020, 2:11 PM IST
  • Facebook
  • Twitter
  • Whatsapp

ಬೆಂಗಳೂರು(ಸೆ.03): ಮನೆ ಬಾಗಿಲಲ್ಲೇ ದ್ವಿಚಕ್ರ ವಾಹನಗಳ ಸರ್ವೀಸ್ ಸೇವೆ ಆರಂಭಗೊಂಡಿದೆ.  ಫಿನಿಶ್ಡ್ ಲ್ಯೂಬ್ರಿಕೆಂಟ್ಸ್ ನಲ್ಲಿ ಜಾಗತಿಕ ನಾಯಕನ ಸ್ಥಾನದಲ್ಲಿರುವ ಶೆಲ್ ಲ್ಯೂಬ್ರಿಕೆಂಟ್ಸ್ ವಿಶ್ವದ ಅತಿದೊಡ್ಡ ದ್ವಿಚಕ್ರ ವಾಹನಗಳ ಮಾರುಕಟ್ಟೆಯಾಗಿರುವ ಹೂಪಿ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಇದರ ಮೂಲಕ ಭಾರತದಲ್ಲಿ ಕಾಂಟ್ಯಾಕ್ಟ್ ಲೆಸ್, ಸುಲಭವಾಗಿ ಲಭ್ಯತೆ ಮತ್ತು ವಿಶ್ವಾಸಾರ್ಹತೆಯ ಸೇವೆಗಳನ್ನು ಗ್ರಾಹಕರ ಮನೆ ಬಾಗಿಲಿಗೆ ತಲುಪಿಸಲಿದೆ.

ಗ್ರಾಹಕರ ಮನೆ ಬಾಗಿಲಿಗೆ ಕಾರು ಸರ್ವೀಸ್; ನೂತನ ಸೇವೆಗೆ ಭರ್ಜರಿ ರೆಸ್ಪಾನ್ಸ್.

ಕೋವಿಡ್-19 ನಿಂದಾಗಿ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಮೆಕ್ಯಾನಿಕ್ ಸಮುದಾಯಕ್ಕೆ ಆರ್ಥಿಕ ಆದಾಯದ ಮೂಲವನ್ನು ಒದಗಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಅದೇ ರೀತಿ ಗ್ರಾಹಕರಿಗೆ ಸುರಕ್ಷಿತವಾದ ಮತ್ತು ವಿಶ್ವಾಸಾರ್ಹವಾದ ಸೇವೆಗಳನ್ನು ಒದಗಿಸುವುದಾಗಿದೆ. ಕೋವಿಡ್-19 ವ್ಯವಹಾರಗಳ ಮೇಲೆ ತೀವ್ರ ರೀತಿಯ ಪರಿಣಾಮ ಬೀರಿದ ಪರಿಣಾಮ ಉದ್ಯೋಗವಿಲ್ಲದೇ ಭಾರತೀಯ ಮೆಕ್ಯಾನಿಕ್ ಸಮುದಾಯದ ಬಹುತೇಕ ಮಂದಿ ತಮ್ಮ ಊರುಗಳಿಗೆ ತೆರಳಬೇಕಾದ ಅನಿವಾರ್ಯತೆ ಬಂದೊದಗಿತ್ತು. ಇದರಿಂದಾಗಿ ಅವರಿಗೆ ದುಡಿಮೆ ಇಲ್ಲದೇ ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ.

ಕಳೆದ ಕೆಲವು ತಿಂಗಳಲ್ಲಿ ನಾವು ದ್ವಿಚಕ್ರ ವಾಹನಗಳ ಮೆಕ್ಯಾನಿಕ್ ಗಳೊಂದಿಗೆ ಸಾವಿರಾರು ವರ್ಚುವಲ್ ಸಂವಾದಗಳನ್ನು ನಡೆಸಿದ ಸಂದರ್ಭದಲ್ಲಿ ತಮ್ಮ ವ್ಯವಹಾರಗಳು ಸಂಪೂರ್ಣ ಕುಸಿದಿವೆ ಮತ್ತು ತಮ್ಮ ಆದಾಯದ ಪರಿಸ್ಥಿತಿ ಅತಂತ್ರವಾಗಿದೆ ಎಂಬುದನ್ನು ನಮ್ಮ ಗಮನಕ್ಕೆ ತಂದರು. ಈ ಸಂಕಷ್ಟದಿಂದ ಪಾರು ಮಾಡಲು ಏನಾದರೂ ಮಾಡಬೇಕೆಂದು ನಮಗೆ ಮನವಿ ಮಾಡಿದರು ಮತ್ತು ಇದನ್ನು ಮನಗಂಡು ನಾವು ಈ ಉಪಕ್ರಮವನ್ನು ಆರಂಭಿಸುತ್ತಿದ್ದೇವೆ. ಇದು ಕೇವಲ ಮೆಕ್ಯಾನಿಕ್ ಸಮುದಾಯದ ಜೀವನೋಪಾಯವನ್ನು ಸುಧಾರಣೆ ಮಾಡುವುದಷ್ಟೇ ಅಲ್ಲ, ಅವರಲ್ಲಿ ಸ್ವಾವಲಂಬನೆಯ ಮಟ್ಟವನ್ನು ಸೃಷ್ಟಿಸಲಿದೆ ಎಂದು ಶೆಲ್ ಲ್ಯೂಬ್ರಿಕೆಂಟ್ಸ್ ಇಂಡಿಯಾದ ಕಂಟ್ರಿ ಹೆಡ್ ರಾಮನ್ ಓಝಾ ಹೇಳದರು.

ಶೆಲ್ ಮತ್ತು ಹೂಪಿ ಪಾಲುದಾರರಾಗಿ ಮೆಕ್ಯಾನಿಕ್ ಸಮುದಾಯ ಸುರಕ್ಷಿತವಾಗಿ ಹಿಂದಿನ ವ್ಯವಹಾರ ಮಟ್ಟಕ್ಕೆ ಹಿಂದಿರುಗುವಂತೆ ನೆರವಾಗಲಿದೆ. ಮುಂಬರುವ ದಿನಗಳಲ್ಲಿ, ಈ ಪಾಲುದಾರಿಕೆಯ ಮೂಲಕ 5000 ದಷ್ಟು ಮೆಕ್ಯಾನಿಕ್ ಗಳಿಗೆ ಸೂಕ್ತ ತರಬೇಡಿ ಮತ್ತು ಅವರು ವ್ಯವಹಾರವನ್ನು ಆರಂಭಿಸಲು ನೆರವಾಗಲಿದೆ. ಸಾಂಕ್ರಾಮಿಕದಿಂದ ತಮ್ಮ ಜೀವನೋಪಾಯಕ್ಕೆ ಒದಗಿರುವ ಸಂಕಷ್ಟದಿಂದ ಪಾರು ಮಾಡಿ ಅವರು ಎಂದಿನಂತೆ ಜೀವನ ನಿರ್ವಹಣೆ ಮಾಡಲು ನೆರವಾಗುವ ಗುರಿಯನ್ನು ಹಾಕಿಕೊಳ್ಳಲಾಗಿದೆ. ಈ ನೆರವಿನಿಂದ ಮೆಕ್ಯಾನಿಕ್ ಗಳು ಆಟೋಮೋಟಿವ್ ಉದ್ಯಮದ ಪರಿಣತರಿಂದ ಇತ್ತೀಚಿನ ತಂತ್ರಜ್ಞಾನ ಸೇರಿದಂತೆ ತಮ್ಮ ಕ್ಷೇತ್ರಕ್ಕೆ ಸಂಬಂಧಿಸಿದ ಜ್ಞಾನವನ್ನು ಪಡೆದುಕೊಂಡು ಸಬಲರಾಗಿ, ಸ್ವಯಂ-ಸುಸ್ಥಿರತೆಯ ಮೆಕ್ಯಾನಿಕ್ ಗಳಾಗಿ ಹೊರಹೊಮ್ಮಲಿದ್ದಾರೆ. ಈ ಪಾಲುದಾರಿಕೆ ಮತ್ತು ಕಾರ್ಯಕ್ರಮವು ಮೆಕ್ಯಾನಿಕ್ ಗಳಿಗೆ ಸ್ಥಿರವಾದ ಬ್ಯುಸಿನೆಸ್ ಅನ್ನು ಖಾತರಿಪಡಿಸುತ್ತದೆ. ಈ ಮೂಲಕ ಗ್ಯಾರೇಜ್ ಗಳಲ್ಲಿ ಶೇ.30-40 ರಷ್ಟು ಹೆಚ್ಚು ಆದಾಯ ಗಳಿಸುವ ಅವಕಾಶಗಳನ್ನು ಸೃಷ್ಟಿಸಲಿವೆ.

ಪ್ರಸ್ತುತ ಕಾಂಟ್ಯಾಕ್ಟ್ ಲೆಸ್ ಸೇವೆಗಳಿಗೆ ಗ್ರಾಹಕರಿಂದ ಹೆಚ್ಚು ಬೇಡಿಕೆಗಳು ಬರುತ್ತಿವೆ. ನಮ್ಮ ಪಾಲುದಾರಿಕೆಯು ಮುಂಗಡ ಬುಕಿಂಗ್ ಮಾಡಬಹುದಾದ ತಂತ್ರಜ್ಞಾನ ಆಧಾರಿತ ಪ್ಲಾಟ್ ಫಾರ್ಮ್ ಮೂಲಕ ಸುಲಭ ದರದ ಸೇವೆಗಳನ್ನು ಒದಗಿಸುತ್ತದೆ. ಅಲ್ಲದೇ, ಗ್ರಾಹಕರಿಗೆ ತಮ್ಮ ಬೇಡಿಕೆ ಅಥವಾ ಬುಕಿಂಗ್ ನ ರಿಯಲ್-ಟೈಂ ಆಧಾರದಲ್ಲಿ ಟ್ರ್ಯಾಕ್ ಸೇವೆಯನ್ನೂ ಪಡೆಯಬಹುದಾಗಿದೆ. ಅಲ್ಲದೇ, ಗ್ರಾಹಕರು ತಮ್ಮ ಮನೆಯಲ್ಲೇ ಕುಳಿತು ಆರಾಮವಾಗಿ ಆ್ಯಪ್ ಅಥವಾ ವೆಬ್ ಸೈಟ್ ಮೂಲಕ ಹಣ ಪಾವತಿ ಮಾಡಬಹುದಾಗಿದೆ. ಇದೆಲ್ಲಕ್ಕಿಂತ ಮುಖ್ಯವಾಗಿ, ಎಲ್ಲೇ ಇದ್ದರೂ, ಯಾವುದೇ ಸಮಯದಲ್ಲಾದರೂ ವಿಶ್ವಾಸಾರ್ಹತೆಯ ಮತ್ತು ನುರಿತ ವೃತ್ತಿಪರರಿಂದ ತಮ್ಮ ವಾಹನಗಳ ಸರ್ವೀಸ್ ಮಾಡಿಸಿಕೊಳ್ಳಬಹುದಾಗಿದೆ.

ಸಮಾಜದ ಬಹುಪಾಲು ಜನರು ಈ ಹಿಂದೆಂದಿಗಿಂತಲೂ ಹೆಚ್ಚು ಪರೀಕ್ಷಾ ಸಮಯವನ್ನು ಎದುರಿಸುತ್ತಿದ್ದಾರೆ. ಒಂದು ಕಂಪನಿಯಾಗಿ ನಾವು ಮೆಕ್ಯಾನಿಕ್ ಸಮುದಾಯಕ್ಕೆ ಒಂದು ಉತ್ತಮ ಕೆಲಸದ ವಾತಾವರಣ ಸೃಷ್ಟಿ ಮಾಡುವುದು ಮತ್ತು ಉತ್ತಮ ಅವಕಾಶಗಳನ್ನು ಸೃಷ್ಟಿ ಮಾಡುವ ನಿಟ್ಟಿನಲ್ಲಿ ಅವರಿಗೆ ನೆರವಾಗುವ ದಿಸೆಯಲ್ಲಿ ಮುನ್ನಡಿ ಇಟ್ಟಿದ್ದೇವೆ. ಈ ಮೂಲಕ ದೇಶದ ಚಲನಶೀಲ ಪರಿಸರ ವ್ಯವಸ್ಥೆಗೆ ಒಂದು ಕೊಡುಗೆಯಾಗಿ ನೀಡುತ್ತಿದ್ದೇವೆ. ಇದರೊಂದಿಗೆ ನಮ್ಮ ಗ್ರಾಹಕರಿಗೆ ಸುರಕ್ಷಿತವಾದ ವಿಶ್ವಾಸಾರ್ಹತೆಯ ಮನೆ ಆಧಾರಿತ ಆಯ್ಕೆಗಳನ್ನು ಹೊಂದುವ ಅವಕಾಶಗಳನ್ನು ನೀಡುತ್ತಿದ್ದೇವೆ ಎಂದು ಒಝಾ ಹೇಳಿದರು.

ಹೂಪಿಯ ಸಹ-ಸಂಸ್ಥಾಪಕ ಮತ್ತು ಸಿಒಒ ಶಶಾಂಕ್ ದುಬೆ ಅವರು ಮಾತನಾಡಿ, ``ಶೆಲ್ ಅನ್ನು ನಮ್ಮ ಲ್ಯೂಬ್ರಿಕೆಂಟ್ ಪಾಲುದಾರರನ್ನಾಗಿ ಮಾಡಿಕೊಳ್ಳಲು ನಮಗೆ ಸಂತಸವೆನಿಸುತ್ತಿದೆ. ಶೆಲ್ ಒಂದು ವಿಶ್ವಾಸಾರ್ಹವಾದ ಮತ್ತು ಗುಣಮಟ್ಟದ ಸಂಸ್ಥೆಯಾಗಿದ್ದು, ಇದರೊಂದಿಗೆ ಮಾಡಿಕೊಂಡಿರುವ ಸಹಭಾಗಿತ್ವದ ಮೂಲಕ ಸವಾಲುಗಳನ್ನು ಎದುರಿಸುತ್ತಿರುವ ಜನರ ಮನೆ ಬಾಗಿಲಲ್ಲೇ ಅನುಕೂಲಕರವಾದ, ಸುರಕ್ಷಿತ ಮತ್ತು ಗುಣಮಟ್ಟದ ಸೇವೆಗಳನ್ನು ಒದಗಿಸಲು ಸಾಧ್ಯವಾಗುತ್ತದೆ. ನಮ್ಮ ಈ ಪಾಲುದಾರಿಕೆ ಒಂದು ಮೈಲುಗಲ್ಲಾಗಿದ್ದು, ಕೋವಿಡ್-19 ಸಂಕಷ್ಟದ ಈ ಸಂದರ್ಭದಲ್ಲಿ ಗ್ರಾಹಕರು ಸುರಕ್ಷಿತವಾದ ಅತ್ಯುತ್ಕೃಷ್ಠ ಗುಣಮಟ್ಟದ ದ್ವಿಚಕ್ರ ವಾಹನಗಳ ಸರ್ವೀಸ್ ಅನುಭವವನ್ನು ಪಡೆಯಲಿದ್ದಾರೆ’’ ಎಂದು ಬಣ್ಣಿಸಿದರು.

Follow Us:
Download App:
  • android
  • ios