ದ್ವಿಚಕ್ರ ವಾಹನದಲ್ಲಿ 4 ವರ್ಷದೊಳಗಿನ ಮಕ್ಕಳ ಕರೆದೊಯ್ಯಲು ಪಾಲಿಸಬೇಕು ಹೊಸ ನಿಯಮ!
- ಭಾರತದಲ್ಲಿ ವಾಹನ ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಮತ್ತೆ ನಿಯಮ ತಿದ್ದುಪಡಿ
- ಮೋಟಾರು ವಾಹನ ಕಾಯ್ದೆ ತಿದ್ದುಪಡಿ, ಮಕ್ಕಳೊಂದಿಗೆ ರೈಡ್‌ಗೆ ಹೊಸ ರೂಲ್ಸ್
- 4 ವರ್ಷದೊಳಗಿನ ಮಕ್ಕಳೊಂದಿಗೆ ಬೈಕ್, ಸ್ಕೂಟರ್ ರೈಡ್‌ಗೆ ಪಾಲಿಸಬೇಕು ಹೊಸ ನಿಯಮ
ನವದೆಹಲಿ(ಅ.26): ವಾಹನ ಪ್ರಯಾಣಿಕರ ಸುರಕ್ಷತೆಗಾಗಿ*Safety) ಭಾರತದಲ್ಲಿ ನಿಯಮ ಮತ್ತಷ್ಟು ಕಠಿಣಗೊಳಿಸಲಾಗಿದೆ. ಇದೀಗ ಮಕ್ಕಳ ಸುರಕ್ಷತೆಗೆ(Child Safety) ಮೋಟಾರು ವಾಹನ ಕಾಯ್ದೆಯಲ್ಲಿ ಮತ್ತೆ ತಿದ್ದುಪಡಿ ಮಾಡಲಾಗಿದೆ. ಪರಿಣಾಮ 4 ವರ್ಷದೊಳಗಿನ ಮಕ್ಕಳನ್ನು ಬೈಕ್ ಅಥವೂ ಸ್ಕೂಟರ್‌ನಲ್ಲಿ ಕರೆದೊಯ್ಯುವಾಗಿ ಹೊಸ ನಿಯಮ ಪಾಲಿಸಲೇಬೇಕು. ಈ ನಿಯಮ ಉಲ್ಲಂಘಿಸಿದರೆ ದುಬಾರಿ ಕಂಡ ಪಾವತಿಸಬೇಕು.
ಮೋಟಾರು ವಾಹನ ಕಾಯ್ದೆ: ಮೊಬೈಲ್ ಬಳಕೆಗೆ ಅವಕಾಶ ಆದರೆ ಷರತ್ತು ಅನ್ವಯ!
ಮೋಟಾರು ವಾಹನ ಕಾಯ್ದೆಯ(motor vehicle act) ಸೆಕ್ಷನ್ 129ನ್ನು ತಿದ್ದುಪಡಿ ಮಾಡಲಾಗಿದೆ. ಇದೀಗ ನೂತನ ನಿಯಮದ ಪ್ರಕಾರ 4 ವರ್ಷದೊಳಗಿನ ಮಕ್ಕಳನ್ನು ದ್ವಿಚಕ್ರ ವಾಹನದಲ್ಲಿ ಕರೆದೊಯ್ಯುವಾಗ ವಾಹನ ವೇಗ 40 ಕಿ.ಮೀ ಪ್ರತಿ ಗಂಟೆಗೆ(not be more than 40 kmph.) ಮೀರುವಂತಿಲ್ಲ. ಒಂದು ವೇಳೆ 40 ಕಿ.ಮೀ ವೇಗಗಕ್ಕಿಂತ ಹೆಚ್ಚಿದ್ದರೆ ಮೋಟಾರು ವಾಹನ ನಿಯಮ ಉಲ್ಲಂಘನೆಯಾಗಲಿದೆ. ಇಷ್ಟೇ ಅಲ್ಲ ದುಬಾರಿ ದಂಡ ಕೂಡ ಪಾವತಿಸಬೇಕು.
6 ಟ್ರಾಫಿಕ್ ನಿಯಮ; ತಿಳಿದುಕೊಳ್ಳಿ ದಂಡ ಕಟ್ಟೋ ಮುನ್ನ!
4 ವರ್ಷದೊಳಗಿನ ಮಕ್ಕಳೊಂದಿಗೆ ಬೈಕ್(Bike) ಅಥವಾ ಸ್ಕೂಟರ್(Scooter) ರೈಡ್ ಹೋಗುವಾಗ ಮಕ್ಕಳು ಹೆಲ್ಮೆಟ್(Helment) ಖಡ್ಡಾಯವಾಗಿ ಧರಿಸಬೇಕು. ಈ ಹೆಲ್ಮೆಟ್ ASTM 1447 ಅಥವಾ ಯುರೋಪಿಯನ್ (CEN) BS EN 1080/BS EN 1078 ಸ್ಟಾಂಡರ್ಡ್ ಹೆಲ್ಮೆಟ್ ಆಗಿರಬೇಕು. 9 ರಿಂದ 4 ವರ್ಷದೊಳಗಿನ ಮಕ್ಕಳ ಸೈಕಲ್ ಹೆಲ್ಮೆಟ್ ರೀತಿಯ ಸ್ಟಾಂಡರ್ಡ್ ಹೆಲ್ಮೆಟನ್ನು ಮಕ್ಕಳಿಗೂ ಹಾಕಬೇಕು.
ಕರ್ನಾಟಕ ಮೋಟಾರ್ ವಾಹನ ಕಾಯ್ದೆ ತಿದ್ದುಪಡಿ: ಯಾವುದಕ್ಕೆ ಎಷ್ಟು ದಂಡ..?
ತಿದ್ದುಪಡಿಯಲ್ಲಿ ಮತ್ತೊಂದು ಕಠಿಣ ನಿಯಮವನ್ನು ಜಾರಿ ಮಾಡಲಾಗಿದೆ. ನೂತನ ನಿಯಮ ಪ್ರಕಾರ ಬೈಕ್ ಸವಾರ ಹಾಗೂ ಹಿಂಬದಿಯ ಮಗುವಿಗೆ ಸುರಕ್ಷತಾ ಸಾಧನವೊಂದು(safety harness) ಇರಬೇಕು. ಮಗುವನ್ನು ಬೈಕ್ ಸವಾರನ ಜೊತೆ ಕಟ್ಟುವ ಬೆಲ್ಟ್ ರೀತಿಯ ಸುರಕ್ಷತಾ ಸಾಧನ ಇರಬೇಕು. ಈ ಸುರಕ್ಷ ಸಾಧನದಿಂದ ಮಗುವಿ ಬೆಲ್ಟ್ ರೀತಿಯಲ್ಲಿ ಹಾಕಿ ಈ ಬೆಲ್ಟನ್ನು ಬೈಕ್ ಸವಾರನ ಶೋಲ್ಡರ್ ಲೂಪ್‌ಗೆ ಜೋಡಿಸುವಂತಿರಬೇಕು. ಇದು ಹೊಂದಾಣಿಕೆ ಮಾಡುವಂತಿರಬೇಕು, ಸೊಂಟಪಟ್ಟಿ ಹಾಗೂ ಭುಜಕ್ಕೆ ಜೋಡಿಸುವ ಎರಡು ಪಟ್ಟಿಗಳನ್ನು ಹೊಂದಿರಬೇಕು. ಈ ಸುರಕ್ಷತಾ ಸಾಧನದಿಂದ ಮಗುವಿನ ದೇಹ ಬೈಕ್ ಸವಾರನ ಜೊತೆ ಭದ್ರವಾಗಿ ಅಂಟಿಕೊಳ್ಳಬೇಕು. ಮಗು ಕೈಬಿಟ್ಟರು, ನಿದ್ರಿಸಿದರು ಬೈಕ್ ಸವಾರನ ಬೆನ್ನಿಗೆ ಹೊಂದಿಕೊಂಡು ಭದ್ರವಾಗಿರಬೇಕು.
ಹೊಸ ನಿಯಮ: ಆ್ಯಂಬುಲೆನ್ಸ್‌ಗೆ ಅಡ್ಡ ಬಂದರೆ 10 ಸಾವಿರ ರೂ. ದಂಡ!
ಇದರ ಜೊತೆಗೆ ರೈಡಿಂಗ್ ಗೇರ್ ಅಂದರೆ ವಯಸ್ಕರು ಹಾಕಿಕೊಳ್ಳುವ ನೀ ಪ್ಯಾಡ್ ಸೇರಿದಂತೆ ಮಕ್ಕಳ ಸುರಕ್ಷತಾ ಸಾಧನಗಳು ಇರಬೇಕು. ದ್ವಿಚಕ್ರ ವಾಹನ ರೈಡ್ ವೇಳೆ ಅಪಘಾತ ಪ್ರಕರಣಗಳು ಹೆಚ್ಚಾಗುತ್ತಿದೆ. ಈ ರೀತಿ ಪ್ರಕರಣಗಳಲ್ಲಿ ಮಕ್ಕಳು ಗಂಭೀರವಾಗಿ ಗಾಯಗೊಳ್ಳುತ್ತಿದ್ದಾರೆ. ಇಷ್ಟೇ ಅಲ್ಲ ಹಲವು ಪ್ರಕರಣಗಳು ಸಾವಿನಲ್ಲಿ ಅಂತ್ಯಗೊಂಡಿದೆ. ಹೀಗಾಗಿ ವಯಸ್ಕರ ಪ್ರಯಾಣ ಸುರಕ್ಷತೆ ಜೊತೆಗೆ ಮಕ್ಕಳ ಪ್ರಯಾಣದ ಸುರಕ್ಷತೆ ಹೆಚ್ಚಿಸಲು ಕೇಂದ್ರ ಮೋಟಾರು ವಾಹನ ಕಾಯ್ದಿ ತಿದ್ದುಪಡಿ ಮಾಡಿದೆ.
ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಬಿಡುಗಡೆ ಮಾಡಿದ ಅಂಕಿ ಅಂಶಗಳ ಪ್ರಕಾರ 2019ರಲ್ಲಿ 11,168 ಮಕ್ಕಳು ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಸರಾಸರಿ ನೋಡಿದರೆ 31 ಮಕ್ಕಳು ಪ್ರತಿ ದಿನ ರಸ್ತೆ ಅಪಘಾತದಲ್ಲಿ ಸಾವನ್ನಪ್ಪುತ್ತಿದ್ದಾರೆ. ಹೀಗಾಗಿ ಮಕ್ಕಳ ಸುರಕ್ಷತೆಗೆ ಹೆಚ್ಚಿನ ಕಾಳಜಿವಹಿಸುವ ಅಗತ್ಯವಿದೆ ಅನ್ನೋ ಕೂಗು ಹಿಂದಿನಿಂದಲೂ ಇದೆ. ಇದೀಗ ಕೇಂದ್ರ ದಿಟ್ಟ ನಿರ್ಧಾರ ಕೈಗೊಂಡಿದೆ.