Asianet Suvarna News Asianet Suvarna News

ಕೊರೋನಾ ಬಲಿಗಿಂತ ಆತಂಕ ಹೆಚ್ಚಿಸಿದ ಭಾರತದ ರಸ್ತೆ ಅಪಘಾತ ವರದಿ !

ವಿಶ್ವವನ್ನೇ ಬೆಚ್ಚಿಬೀಳಿಸುತ್ತಿರುವ ಕೊರೋನಾ ವೈರಸ್ ಇದೀಗ 2ನೇ ಅಲೆಗೆ ಸಜ್ಜಾಗಿದೆ. ಭಾರತದಲ್ಲಿ ಇದೀಗ ದಿನದಿಂದ ದಿನಕ್ಕೆ ಕೊರೋನಾ ಪ್ರಕರಣ ಸಂಖ್ಯೆ ಮಾತ್ರವಲ್ಲ ಕೊರೋನಾಗೆ ಬಲಿಯಾಗುತ್ತಿರುವ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಕಳೆದ ವರ್ಷ ಭಾರತದಲ್ಲಿ 1.46 ಲಕ್ಷ ಮಂದಿ ಕೊರೋನಾಗೆ ಬಲಿಯಾಗಿದ್ದಾರೆ. ಆದರೆ ಭಾರತದ ರಸ್ತೆ ಅಪಘಾತ ವರದಿ ದೇಶವನ್ನೇ ಬೆಚ್ಚಿ ಬೀಳಿಸುವಂತಿದೆ. ಈ ಕುರಿತ ಅಂಕಿ ಅಂಶ ಇಲ್ಲಿದೆ.

Road Accident more dangerous than coronavirus Nitin gadkari reveals stats in Lok sabha ckm
Author
Bengaluru, First Published Mar 18, 2021, 7:08 PM IST

ನವದೆಹಲಿ(ಮಾ.18): ಕೊರೋನಾ ವೈರಸ್‌ಗೆ ಕಳೆದ ವರ್ಷ(2020) 1.46 ಲಕ್ಷ ಮಂದಿ ಭಾರತದಲ್ಲಿ ಬಲಿಯಾಗಿದ್ದಾರೆ. ಈ ಮೂಲಕ ವೈರಸ್ ಸೃಷ್ಟಿಸಿದ ಆತಂಕ, ಆರೋಗ್ಯ ಸಮಸ್ಯೆ. ಆರ್ಥಿಕ ಸಮಸ್ಯೆ ಒಂದೆರಡಲ್ಲ. ಕೊರೋನಾ ವೈರಸ್ ದೇಶದ ಪ್ರತಿಯೊಬ್ಬರಲ್ಲೂ ಒಂದು ಎಚ್ಚರಿಕೆಯ ವಾತಾವರಣವನ್ನು ಸೃಷ್ಟಿಸಿದೆ. ಆದರೆ ಕಳೆದ ವರ್ಷದ ರಸ್ತೆ ಅಪಘಾತ ವರದಿ ಈ ಕೊರೋನಾ ಅಂಕಿ ಸಂಖ್ಯೆಯನ್ನು ಮೀರಿಸುತ್ತಿದೆ.

ಡ್ರೈವರ್, ಸಹ ಪ್ರಯಾಣಿಕ ಸೀಟ್‌ಗೆ ಏರ್‌ಬ್ಯಾಗ್ ಕಡ್ಡಾಯ; ಸುರಕ್ಷತೆಯಲ್ಲಿ ರಾಜಿ ಇಲ್ಲ ಎಂದ ಕೇಂದ್ರ!

ಲೋಕಸಭೆಯಲ್ಲಿ ನಿತಿನ್ ಗಡ್ಕರಿ ಈ ಕುರಿತು ಅಂಕಿ ಅಂಶ ಬಿಡುಗಡೆ ಮಾಡಿದ್ದಾರೆ. ಕಳೆದ ವರ್ಷ(2020) ಭಾರತದಲ್ಲಿ ರಸ್ತೆ ಅಪಘಾತಕ್ಕೆ ಬಲಿಯಾದವರ ಸಂಖ್ಯೆ 1.50 ಲಕ್ಷ. ಅಂದರೆ ಕೊರೋನಾಗೆ ಬಲಿಯಾದವರ ಸಂಖ್ಯೆಗಿಂತ ಹೆಚ್ಚು. ಇದು ಎಚ್ಚರಿಕೆಯ ಕರೆ ಗಂಟೆಯಾಗಿದೆ ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ.

ರಸ್ತೆ ಅಪಘಾತದಲ್ಲಿ ಬಲಿಯಾದವರಲ್ಲಿ ಹೆಚ್ಚಿನವರ ವಯಸ್ಸು 18 ರಿಂದ 35. ಭಾರತದ ಯುವ ಜನಾಂಗವೇ ರಸ್ತೆ ಅಪಘಾತಕ್ಕೆ ಬಲಿಯಾಗುತ್ತಿದೆ ಎಂದು ಗಡ್ಕರಿ ಹೇಳಿದ್ದಾರೆ. ರಸ್ತೆ ಅಪಘಾತ ಗಣನೀಯ ಪ್ರಮಾಣದಲ್ಲಿ ಕಡಿಮೆ ಮಾಡಲು ಸರ್ಕಾರ ಎಲ್ಲಾ ಪ್ರಯತ್ನ ಮಾಡುತ್ತಿದೆ ಎಂದು ಗಡ್ಕರಿ ಹೇಳಿದ್ದಾರೆ.

ಹೆಬ್ಬಾಳ ಫ್ಲೈ ಓವರ್ ಬಳಿ ಸರಣಿ ಅಪಘಾತ; ಫುಲ್ ಟ್ರಾಫಿಕ್ ಜಾಮ್!

ಕೊರೋನಾಗೆ ಹೋಲಿಸಿದರೆ ಭಾರತದಲ್ಲಿ ರಸ್ತೆ ಅಪಘಾತವೇ ಹೆಚ್ಚು ಆತಂಕ ತರುತ್ತಿದೆ. ಈ ಕುರಿತು ಎಚ್ಚರ ವಹಿಸಬೇಕಾದ ಅಗತ್ಯವಿದೆ.

Follow Us:
Download App:
  • android
  • ios