ಹೆಬ್ಬಾಳ ಫ್ಲೈ ಓವರ್ ಬಳಿ ಸರಣಿ ಅಪಘಾತ; ಫುಲ್ ಟ್ರಾಫಿಕ್ ಜಾಮ್!
ಬೆಂಗಳೂರು ನಗರದೊಳಗೆ ಇದೀಗ ಅಪಘಾತ ಪ್ರಕರಣಗಳು ಹೆಚ್ಚಾಗುತ್ತಿದೆ. ಇತ್ತೀಚೆಗೆ ಮುಖ್ಯಮಂತ್ರಿ ನಿವಾಸದ ಮುಂದೆ ಐಷಾರಾಮಿ ಕಾರು ಅಪಘಾತಕ್ಕೀಡಾಗಿ ಭಾರಿ ಆತಂಕ ಸೃಷ್ಟಿಸಿತ್ತು. ಇದೀಗ ಹೆಬ್ಬಾಳ ಫ್ಲೈ ಓವರ್ ಬಳಿ ಸರಣಿ ಅಫಾತ, ಮತ್ತೊಂದೆಡೆ ಹಿಟ್ ಅಂಡ್ ರನ್ ಪ್ರಕರಣಗಳು ದಾಖಲಾಗಿದೆ.
ಕೊರೋನಾ ವಕ್ಕರಿಸಿದಾಗ ಖಾಲಿಯಾಗಿದ್ದ ಬೆಂಗಳೂರು ಇದೀಗ ಮತ್ತೆ ಗಿಜಿಗಿಡುತ್ತಿದೆ. ಇಷ್ಟೇ ಅಲ್ಲ ಮತ್ತೆ ಅಪಘಾತ ಪ್ರಕರಣಗಳು ಹೆಚ್ಚಾಗುತ್ತಿದೆ.
ಹೆಬ್ಬಾಳ ಫ್ಲೈ ಓವರ್ ಬಳಿ ಸರಣಿ ಅಪಘಾತ ಸಂಭವಿಸಿದೆ. ಆಟೋದ ಹಿಂಭಾಗಕ್ಕೆ ಕಾರು ಡಿಕ್ಕಿಯಾದ ಪರಿಣಾಮ ಒಂದರ ಹಿಂದೆ ಒಂದರಂತೆ ಕಾರುಗಳು ಅಪಘಾತಕ್ಕೀಡಾಗಿದೆ.
4 ವಾಹನಗಳು ಒಂದಕ್ಕೊಂದು ಡಿಕ್ಕಿಯಾಗಿದೆ. ಕಾರಿನ ಏರ್‌ಬ್ಯಾಗ್ ಓಪನ್ ಆದರ ಕಾರಣ ಯಾವುದೇ ಪ್ರಾಣ ಹಾನಿ ಸಂಭಸಿಲ್ಲ. ಆದರೆ ವಾಹನಗಳು ಜಖಂ ಗೊಂಡಿದೆ.
ಸರಣಿ ಅಪಘಾತ ಕಾರಣ ಹೆಬ್ಬಾಳ ಫ್ಲೈ ಓವರ್ ಸೇರಿದಂತೆ ಸುತ್ತಲಿನ ರಸ್ತೆಗಳು ಸಂಪೂರ್ಣ ಟ್ರಾಫಿಕ್ ಜಾಮ್ ಆಗಿದೆ. ವಾಹನ ಸವಾರರು ಎರಡೆರಡು ಗಂಟೆ ರಸ್ತೆಯಲ್ಲಿ ನಿಲ್ಲಬೇಕಾಗಿ ಬಂತು
ಸ್ಥಳಕ್ಕೆ ಆರ್.ಟಿ.ನಗರ ಸಂಚಾರಿ ರಾಣಾ ಪೊಲೀಸರು ಭೇಟಿ ನೀಡಿ, ಡಿಕ್ಕಿಯಾದ ವಾಹನ ತೆರವುಗೊಳಿಸಿದರು. ಇತರ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.
ಇನ್ನು ಬೆಂಗಳೂರಿನಲ್ಲಿ ಮತ್ತೊಂದು ಕಾರು ಅಪಘಾತ ಪ್ರಕರಣ ದಾಖಲಾಗಿದೆ. ಐಶಾರಾಮಿ ಕಾರಿನಿಂದ ಅಪಘಾತ ಮಾಡಿ ಎಸ್ಕೇಪ್ ಆಗುವ ಪ್ರಕರಣ ದಾಖಲಾಗಿದೆ.
ಘಟನೆ ಸಂಬಂಧ ಕಬ್ಬನ್ ಪಾರ್ಕ್ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶರವೇಗದಲ್ಲಿ ಬಂದು ಎಸ್ಕೇಪ್ ಆಗಿರುವ ಆರೋಪಿ ಚಾಲಕನಿಗಾಗಿ ಹುಡುಕಾಟ ಆರಂಭಗೊಂಡಿದೆ.