ಇನ್ನೆಷ್ಟು ಓಡಿಸುತ್ತೀರಿ? 15 ವರ್ಷ ಹಳೇ ಸರ್ಕಾರಿ ವಾಹನ ರಿಜಿಸ್ಟ್ರೇಶನ್ ನವೀಕರಣ ಇಲ್ಲ

ಹಳೇ ವಾಹನ ಗುಜುರಿ ನಿಯಮ ಕಠಿಣವಾಗುತ್ತಿದೆ. 15 ವರ್ಷಕ್ಕಿಂತ ಹಳೇ ಸರ್ಕಾರಿ ವಾಹನಗಳ ಆರ್‌ಸಿ ನವೀಕರಣ ಇಲ್ಲ ಎಂದು ಸರ್ಕಾರ ಸ್ಪಷ್ಟವಾಗಿ ಹೇಳಿದೆ.

Rajasthan cancel 15 year old government vehicle RC renewals

ಜೈಪುರ(ಜ.13) ಕೇಂದ್ರ ಸರ್ಕಾರ ಕೆಲ ವರ್ಷಗಳ ಹಿಂದೆ ವಾಹನ ಗುಜುರಿ ನೀತಿ ಪರಿಚಯಿಸಿದೆ. ಇದೀಗ ಈ ನೀತಿ ಪರಿಣಾಮಕಾರಿಯಾಗಿ ಜಾರಿಗೆ ಬರುತ್ತಿದೆ. ಇನ್ನು ಮುಂದೆ 15 ವರ್ಷಕ್ಕಿಂತ ಹಳೇ ವಾಹನಗಳ ಬಳಕೆ ಸಾಧ್ಯವಾಗುವುದಿಲ್ಲ. ವಾಹನಕ್ಕೆ ಫಿಟ್ನೆಸ್ ಸರ್ಟಿಫಿಕೇಟ್ ಇದ್ದರೂ, ರಸ್ತೆಗೆ ಇಳಿಸುವಂತಿಲ್ಲ. ಕಾರಣ 15 ವರ್ಷ ಹಳೇ ವಾಹನಗಳ ರಿಜಿಸ್ಟ್ರೇಶನ್ ನವೀಕರಣ ರದ್ದು ಮಾಡಲಾಗಿದೆ. ಈ ಮಹತ್ವದ ನಿರ್ಧಾರವನ್ನು ರಾಜಸ್ಥಾನ ಸರ್ಕಾರ ತೆಗೆದುಕೊಂಡಿದೆ. ಮೊದಲ ಹಂತದಲ್ಲಿ ಇದೀಗ 15 ವರ್ಷ  ಹಳೇ ಸರ್ಕಾರಿ ವಾಹನಗಳ ಆರ್‌ಸಿ ನವೀಕರಣ ರದ್ದು ಮಾಡಿದೆ. ಇದೀಗ ಕೆಲವೆ ದಿನಗಳಲ್ಲಿ ಖಾಸಗಿ ವಾಹನಗಳ ಮೇಲೂ ಅನ್ವಯವಾಗುವ ಸಾಧ್ಯತೆ ಇದೆ.

15 ವರ್ಷಕ್ಕಿಂತ ಹಳೆಯ ಸರ್ಕಾರಿ ವಾಹನಗಳ ನೋಂದಣಿ ಪ್ರಮಾಣಪತ್ರವನ್ನು ನವೀಕರಿಸುವುದಿಲ್ಲ ಎಂದು ರಾಜಸ್ಥಾನ ಸಾರಿಗೆ ಇಲಾಖೆ ತಿಳಿಸಿದೆ. ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ (MoRTH) ನಿಯಮಗಳನ್ನು ಇತ್ತೀಚೆಗೆ ನವೀಕರಿಸಿದ್ದರಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಕುರಿತು ಟೈಮ್ಸ್ ಆಫ್ ಇಂಡಿಯಾ ಮಾಧ್ಯಮ ವರದಿ ಮಾಡಿದೆ. ಮಾಲಿನ್ಯ ತಗ್ಗಿಸಲು ಹಾಗೂ ಇಂಧನ ಉಳಿತಾಯ ಸಪ್ತಾಹ ಅಡಿಯಲ್ಲಿ ಈ ಕ್ರಮ ಭಾರಿ ಮಹತ್ವದ ಪಡೆದುಕೊಂಡಿದೆ. 

ಹಳೇ ವಾಹನ ಸ್ಕ್ರಾಪಿಂಗ್ ಆರಂಭ, ಅತ್ಯಾಧುನಿಕ ಘಟಕ ಉದ್ಘಾಟಿಸಿದ ಟಾಟಾ ಮೋಟಾರ್ಸ್!

ಹಳೆಯ ವಾಹನಗಳನ್ನು ಈ ತಿಂಗಳ ಅಂತ್ಯದ ವೇಳೆಗೆ ರಾಜ್ಯದ ಅಧಿಕೃತ ಸ್ಕ್ರ್ಯಾಪ್ ಕೇಂದ್ರಗಳಿಗೆ ಕಳುಹಿಸಬೇಕು ಎಂದು ಸಾರಿಗೆ ಇಲಾಖೆ ಎಲ್ಲಾ ಸರ್ಕಾರಿ ಇಲಾಖೆಗಳಿಗೆ ಪತ್ರ ಬರೆದಿದೆ. 15 ವರ್ಷಕ್ಕಿಂತ ಹಳೆಯ ವಾಹನಗಳಿಗೆ ಸರಿಯಾದ ಫಿಟ್ನೆಸ್ ಪರೀಕ್ಷೆ ನಡೆಸಿದ ನಂತರವೇ ಅನುಮತಿ ನೀಡಲಾಗುತ್ತದೆ. ಆದರೆ ಹಂತ ಹಂತವಾಗಿ ಹಳೆಯ ವಾಹನಗಳನ್ನು ನಿಲ್ಲಿಸುವ ಉದ್ದೇಶದಿಂದ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಮಾರ್ಗಸೂಚಿಗಳನ್ನು ನವೀಕರಿಸಲಾಗಿದೆ. ಈಗ ಸರ್ಕಾರಿ ಇಲಾಖೆಗಳಲ್ಲಿ ಬಳಸುತ್ತಿರುವ ಹಳೆಯ ವಾಹನಗಳ ನೋಂದಣಿ ಪ್ರಮಾಣಪತ್ರವನ್ನು ನವೀಕರಿಸುವುದಿಲ್ಲ ಮತ್ತು ಅವುಗಳನ್ನು ಸ್ಕ್ರ್ಯಾಪ್ ಮಾಡಬೇಕಾಗುತ್ತದೆ ಎಂದು ಸಾರಿಗೆ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಪೊಲೀಸ್ ವಾಹನ, ಸರ್ಕಾರಿ ಕಚೇರಿಗಳ ವಾಹನ, ಆಸ್ಪತ್ರೆ ಸೇರಿದಂತೆ ಸರ್ಕಾರಿ ಇಲಾಖೆ, ಸರ್ಕಾರಿ ಕಚೇರಿಗಳಲ್ಲಿ ಬಳಕೆಯಾಗುತ್ತಿರುವ ವಾಹನಗಳು 15 ವರ್ಷಕ್ಕಿಂತ ಹಳೆಯದಾಗಿದ್ದರೆ ಗುಜುರಿಗೆ ಹಾಕಬೇಕು. ಈ ವಾಹನಗಳನ್ನು ಮರು ಬಳಕೆ ಮಾಡುವಂತಿಲ್ಲ. ಸರ್ಕಾರದ ಎಲ್ಲಾ ವಿಭಾಗದಲ್ಲಿ ಈ ನಿಯಮ ಪಾಲನೆಯಾದ ಬೆನ್ನಲ್ಲೇ ಖಾಸಗಿ ವಾಹನಗಳ ಮೇಲೂ ನಿಯಮ ಅನ್ವಯಿಸಲು ರಾಜಸ್ಥಾನ ಸರ್ಕಾರ ಮುಂದಾಗಿದೆ. 

2022ರ ಜುಲೈನಲ್ಲಿ ಹೊರಡಿಸಲಾದ ರಾಜ್ಯ ಸರ್ಕಾರದ ಸ್ಕ್ರ್ಯಾಪ್ ನೀತಿಯ ಪ್ರಕಾರ, ವಾಹನ ಮಾಲೀಕರು ವಾಣಿಜ್ಯ ವಾಹನವನ್ನು ೧೫ ವರ್ಷಗಳವರೆಗೆ ಮತ್ತು ಖಾಸಗಿ ಕಾರನ್ನು 20 ವರ್ಷಗಳವರೆಗೆ ಬಳಸಬಹುದು. ಅದರ ನಂತರ, ಸ್ವಯಂಚಾಲಿತ ಫಿಟ್ನೆಸ್ ಕೇಂದ್ರದಲ್ಲಿ ವಾಹನವು ಫಿಟ್ ಆಗಿಲ್ಲ ಎಂದು ಕಂಡುಬಂದರೆ, ವಾಹನವನ್ನು ಸ್ಕ್ರ್ಯಾಪ್ ಮಾಡಬೇಕಾಗುತ್ತದೆ. ವಾಯುಮಾಲಿನ್ಯ, ಗಾಳಿಯ ಗುಣಮಟ್ಟ ಕ್ಷೀಣಿಸುತ್ತಿರುವ ರಾಜ್ಯದ ನಗರ, ಪಟ್ಟಣ ಹಾಗೂ ಸ್ಮಾರ್ಟ್ ಸಿಟಿಗಳಿಗೆ ಈ ನಿರ್ದೇಶನಗಳನ್ನು ನೀಡಲಾಗಿದೆ. ಆದರೆ ಇತ್ತೀಚಿನ ನಿರ್ದೇಶನಗಳು ರಾಜ್ಯಾದ್ಯಂತ ಸರ್ಕಾರಿ ಇಲಾಖೆಗಳು ಬಳಸುವ ಎಲ್ಲಾ ವಾಹನಗಳಿಗೂ ಅನ್ವಯಿಸುತ್ತವೆ ಎಂದು ವರದಿಗಳು ತಿಳಿಸಿವೆ.

Vehicle Scrap Policy ಹಳೇ ವಾಹನ ಮಾಲೀಕರು ಪ್ರತಿ ವರ್ಷ ಮಾಡಬೇಕು FC,ಕಟ್ಟಬೇಕು ಗ್ರೀನ್ ಟ್ಯಾಕ್ಸ್, ಇದ್ಕಿಂತ ಹೊಸ ವಾಹನವೇ ಲೇಸು
 

 

Latest Videos
Follow Us:
Download App:
  • android
  • ios