Asianet Suvarna News Asianet Suvarna News

ಹಳೇ ವಾಹನ ಸ್ಕ್ರಾಪಿಂಗ್ ಆರಂಭ, ಅತ್ಯಾಧುನಿಕ ಘಟಕ ಉದ್ಘಾಟಿಸಿದ ಟಾಟಾ ಮೋಟಾರ್ಸ್!

20 ವರ್ಷ ಮೇಲ್ಪಟ್ಟ ಪ್ಯಾಸೆಂಜರ್ ವಾಹನ , 15 ವರ್ಷ ಮೇಲ್ಪಟ್ಟ ವಾಣಿಜ್ಯ ವಾಹನಗಳ ಸ್ಕ್ರಾಪಿಂಗ್ ಪಾಲಿಸಿಯನ್ನು ಕೇಂದ್ರ ಸರ್ಕಾರ ತಂದಿದೆ. ಇದರಂತೆ ಅವಧಿಗೆ ಮೇಲ್ಪಟ್ಟ ವಾಹನಗಳನ್ನು ಸ್ಕ್ರಾಪಿಂಗ್ ಮಾಡಲಾಗುತ್ತಿದೆ. ಇದೀಗ ಟಾಟಾ ಮೋಟಾರ್ಸ್ ತನ್ನ ಅತ್ಯಾಧುನಿಕ ವಾಹನ ಸ್ಕ್ರಾಪಿಂಗ್ ಘಟಕ ಉದ್ಘಾಟಿಸಿ, ವಾಹನಗಳನ್ನು ಸ್ಕ್ರಾಪಿಂಗ್ ಮಾಡಲು ಆರಂಭಿಸಿದೆ.
 

Tata Motors inaugurates registered vehicle scrapping facility near Delhi With hi-tech ckm
Author
First Published Mar 20, 2024, 1:59 PM IST

ದೆಹಲಿ(ಮಾ.20) ಹಳೇ ವಾಹನ ಸ್ಕ್ರಾಪಿಂಗ್ ಪಾಲಿಸಿಯನ್ನು ಕೇಂದ್ರ ಸರ್ಕಾರ ತಂದಿದೆ. ಇದರಿಂದ ನಿಗದಿತ ಅವಧಿ ಮೀರಿದ ಹಳೇ ವಾಹನಗಳನ್ನು ಸ್ಕ್ರಾಪಿಂಗ್ ಮಾಡಬೇಕು. ಇದೀಗ ಈ ವಾಹನ ಸ್ಕ್ರಾಪಿಂಗ್ ಆರಂಭಗೊಂಂಡಿದೆ. ದೆಹಲಿಯಲ್ಲಿ ಟಾಟಾ ಮೋಟಾರ್ಸ್ ತನ್ನ ಐದನೇ ವಾಹನ ಸ್ಕ್ರಾಪಿಂಗ್ ಘಟಕವನ್ನು ಆರಂಭಿಸಿದೆ.  Recycle with Respect,' (ಗೌರವದೊಂದಿಗೆ ಮರುಬಳಕೆ) ಎಂಬ ಹೆಸರಿನ ಘಟಕವನ್ನು, ಟಾಟಾ ಮೋಟರ್ಸ್‌ನ ಉದ್ಘಾಟಿಸಿದೆ. 

ಈ ಅತ್ಯಾಧುನಿಕ ಘಟಕವು, ಪರಿಸರ-ಸ್ನೇಹಿಯಾಗಿದೆ. ವಾರ್ಷಿಕವಾಗಿ ಜೀವಿತಾವಧಿಯ ಕೊನೆಯಲ್ಲಿರುವ 18,000 ವಾಹನಗಳನ್ನು ಸುರಕ್ಷಿತವಾಗಿ ಕಳಚುವ ಸಾಮರ್ಥ್ಯ ಹೊಂದಿದೆ. ಜೋಹರ್ ಮೋಟರ್ಸ್ ಸಹಭಾಗಿತ್ವದೊಂದಿಗೆ ಅಭಿವೃದ್ಧಿ ಪಡಿಸಲಾಗಿರುವ RVSF, ಎಲ್ಲಾ ಬ್ರ್ಯಾಂಡ್‌ಗಳ ಪ್ಯಾಸೆಂಜರ್ ಮತ್ತು ವಾಣಿಜ್ಯ ವಾಹನಗಳನ್ನು ಜವಾಬ್ದಾರಿಯುತವಾಗಿ ಸ್ಕ್ರ್ಯಾಪ್ ಮಾಡಲಿದೆ. ಈ ಮಹತ್ತರವಾದ ಮೈಲಿಗಲ್ಲು, ಜೈಪುರ, ಭುವನೇಶ್ವರ, ಸೂರತ್ ಹಾಗೂ ಚಂಡೀಗಢದಲ್ಲಿ ಪ್ರಾರಂಭಿಸಲಾಗಿದ್ದ ಟಾಟಾ ಮೋಟರ್ಸ್‌ನ ನಾಲ್ಕು ಹಿಂದಿನ RVSFಗಳ ಅನುಸರಣೆಯಲ್ಲಿದ್ದು, ದೀರ್ಘಕಾಲ ಉಳಿಯುವಂತಹ ಉಪಕ್ರಮಗಳನ್ನು ಮುಂದುವರಿಸಲು ಸಂಸ್ಥೆಯ ಬದ್ಧತೆಯನ್ನು ಪುನರುಚ್ಚರಿಸುತ್ತದೆ.

ಕರ್ನಾಟಕದಲ್ಲಿ ವಾಹನ ರಿಜಿಸ್ಟ್ರೇಶನ್‌ಗೆ ಹೆಚ್ಚುವರಿ 3% ಸೆಸ್, ಇವಿಗೆ ಲೈಫ್ ಟೈಮ್ ತೆರಿಗೆ ಹಾಕಿದ ಸರ್ಕಾರ!

ಸಂಪೂರ್ಣವಾಗಿ ಡಿಜಿಟೀಕರಣಗೊಂಡಿರುವ ಈ ಘಟಕವು, ಕ್ರಮವಾಗಿ, ವಾಣಿಜ್ಯ ವಾಹನಗಳು ಹಾಗೂ ಪ್ಯಾಸೆಂಜರ್ ವಾಹನಗಳಿಗಾಗಿಯೇ ನಿಬದ್ಧವಾದ ಸೆಲ್-ಟೈಪ್ ಮತ್ತು ಲೈನ್-ಟೈಪ್ ಭಾಗಕಳಚುವಿಕೆ(ಡಿಸ್‌ಮ್ಯಾಂಟ್ಲಿಂಗ್)ಯೊಂದಿಗೆ ಸಜ್ಜುಗೊಂಡಿದೆ ಹಾಗೂ ಇದರ ಎಲ್ಲಾ ಕಾರ್ಯಾಚರಣೆಗಳೂ ಅಡಚಣೆರಹಿತ ಮತ್ತು ಕಾಗದರಹಿತ. ಹೆಚ್ಚುವರಿಯಾಗಿ, ಟೈರ್ ಗಳು, ಬ್ಯಾಟರಿಗಳು, ಇಂಧನ, ಆಯಿಲ್‌ಗಳು, ದ್ರವಗಳು ಹಾಗೂ ಅನಿಲಗಳು ಒಳಗೊಂಡಂತೆ, ವಿವಿಧ ಭಾಗಗಳ ಸುರಕ್ಷಿತ ಮಿಲೇವಾರಿಗಾಗಿ ನಿಬದ್ಧವಾದ ಸ್ಟೇಶನ್‌ಗಳಿವೆ. 

ಸಂಚಾರದ ಭವಿಷ್ಯತ್ತನ್ನು ರೂಪಿಸಲು ಆವಿಷ್ಕಾರ ಹಾಗೂ ದೀರ್ಘಸ್ಥಾಯಿತ್ವವನ್ನು ಮುನ್ನಡೆಸುವಲ್ಲಿ ಟಾಟಾ ಮೋಟರ್ಸ್ ಮುನ್ನೆಲೆಯಲ್ಲಿದೆ. ನಮ್ಮ ಐದನೇ ಸ್ಕ್ರ್ಯಾಪಿಂಗ್ ಘಟಕದ ಪ್ರಾರಂಭವು, ಹೆಚ್ಚು ದೀರ್ಘಕಾಲ ಉಳಿಯುವಂತಹ ಪದ್ಧತಿಗಳು ಹಾಗೂ ಜವಾಬ್ದಾರಿಯುತ ವಾಹನ ಮಿಲೇವಾರಿಗೆ ಸುಲಭ ಪ್ರವೇಶಾವಕಾಶ ಒದಗಿಸುವ ನಿಟ್ಟಿನಲ್ಲಿ ಒಂದು ಮಹತ್ತರವಾದ ಹೆಜ್ಜೆಯಾಗಿದೆ ಎಂದು ಟಾಟಾ ಮೋಟರ್ಸ್‌ನ ಎಕ್ಸಿಕ್ಯೂಟಿವ್ ಡೈರೆಕ್ಟರ್ ಗಿರೀಶ್ ವಾಘಾ ಹೇಳಿದ್ದಾರೆ. 

ಡ್ರೈವಿಂಗ್ ಲೈಸೆನ್ಸ್ ಪಡೆಯುವುದು ಇನ್ನು ಸುಲಭವಲ್ಲ, ಟ್ರಾಫಿಕ್ ರಸ್ತೆಯಲ್ಲೂ ಮಾಡಬೇಕು ಡ್ರೈವ್!

ಸ್ಕ್ರ್ಯಾಪ್‌ನಿಂದ ಮೌಲ್ಯ ಸೃಷ್ಟಿಯು, ಒಂದು ವರ್ತುಲ ಆರ್ಥಿಕತೆಯ ನಿರ್ಮಾಣ ಮಾಡಬೇಕೆನ್ನುವ ನಮ್ಮ ದೃಷ್ಟಿಕೋನಕ್ಕೆ ಅನುಗುಣವಾಗಿದೆ. ಇದು, ದೀರ್ಘಕಾಲ ಉಳಿಯುವಂತಹ ಆಟೋಮೋಟಿವ್ ಪದ್ಧತಿಗಳನ್ನು ಪ್ರೋತ್ಸಾಹಿಸುವ ಸರ್ಕಾರದ ಪ್ರಯತ್ನಗಳಿಗೂ ಕೊಡುಗೆ ಸಲ್ಲಿಸುತ್ತದೆ. ಈ ಅತ್ಯಾಧುನಿಕ ಘಟಕವು, ವಾಹನಗಳನ್ನು ಜವಾಬ್ದಾರಿಯುತವಾಗಿ ಮಿಲೇವಾರಿ ಮಾಡುವಲ್ಲಿ ಹೊಸ ಮಾನದಂಡಗಳನ್ನು ಸ್ಥಾಪಿಸಿ, ಎಲ್ಲರಿಗೂ ಹೆಚ್ಚು ದೀರ್ಘಕಾಲ ಉಳಿಯುವಂತಹ, ಪರಿಶುದ್ಧವಾದ ಭವಿಷ್ಯತ್ತಿಗೆ ಮಾರ್ಗ ಕಲ್ಪಿಸುತ್ತದೆ ಎಂದರು. 

Follow Us:
Download App:
  • android
  • ios