Asianet Suvarna News Asianet Suvarna News

ಕ್ರೇನ್ ಇಲ್ಲ, ಪ್ರಪಾತಕ್ಕೆ ಬಿದ್ದ ಲಾರಿಯನ್ನು ಗ್ರಾಮಸ್ಥರೇ ಸೇರಿ ಮೇಲೆತ್ತಿದ ವಿಡಿಯೋ ವೈರಲ್!

ಅಪಘಾತದಲ್ಲಿ ಶುಂಠಿ ಸಾಗಿಸುತ್ತಿದ್ದ ಲಾರಿ ಪ್ರಪಾತಕ್ಕೆ ಉರುಳಿ ಬಿದ್ದಿದೆ. ಚಾಲಕ ಅಪಾಯದಿಂದ ಪಾರಾಗಿದ್ದಾನೆ. ಇನ್ನುಳಿದಿರುವುದು ಲಾರಿಯನ್ನು ಮೇಲಕ್ಕೆತ್ತುವುದು. ಆದರೆ ಆ ಗ್ರಾಮದಲ್ಲಿ ಕ್ರೇನ್ ಇಲ್ಲ, ಇತರ ಯಾವ ಮಶೀನ್ ಕೂಡ ಇಲ್ಲ. ಹೀಗಾಗಿ ಗ್ರಾಮಸ್ಥರೇ ಒಟ್ಟು ಗೂಡಿ ಲಾರಿ ಮೇಲಕ್ಕೆತ್ತಲು ನಿರ್ಧರಿಸಿದರು. ಈ ವಿಡಿಯೋ ವೈರಲ್ ಆಗಿದೆ.

People pulling truck out of the gorge with the help of ropes in nagaland ckm
Author
Bengaluru, First Published Jan 11, 2021, 7:43 PM IST

ನಾಗಾಲ್ಯಾಂಡ್(ಜ.11): ಆ ಊರಿನಲ್ಲಿ ಕ್ರೇನ್ ಇಲ್ಲ, ಇತರ ಯಾವ ಮಶೀನ್ ಕೂಡ ಇಲ್ಲ, ಪ್ರಾಪತಕ್ಕುರುಳಿದ ಲಾರಿಯನ್ನು ಮೇಲಕ್ಕೆತ್ತಲು ಯಾವುದೇ ದಾರಿಗಳಿಲ್ಲ. ಹೀಗಾಗಿ ಗ್ರಾಮಸ್ಥರೇ ಒಟ್ಟು ಸೇರಿ ಲಾರಿಯನ್ನು ಎಳೆದು ಮೇಲಕ್ಕೆ ತಂದಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ. ಈ ಘಟನೆ ನಡೆದಿರುವುದು ನಾಗಾಲ್ಯಾಂಡ್‌ನ ಪೆಕ್ ಜಿಲ್ಲೆಯ ಕುಟ್ಸಾಪೋ ಗ್ರಾಮದಲ್ಲಿ ನಡೆದಿದೆ.

ಅಪಘಾತದಲ್ಲಿ ಕಾರು 4 ಪಲ್ಟಿಯಾದರೂ ಪ್ರಯಾಣಿಕರು ಸೇಫ್; ಟಾಟಾಗೆ ಸಲಾಂ ಹೇಳಿದ ಮಾಲೀಕ !.

ಶುಂಠಿ ಸಾಗಿಸುತ್ತಿದ್ದ ಲಾರಿ ಕುಟ್ಸಾಪೋ ಬಳಿ ಅಪಘಾಕ್ಕೀಡಾಗಿ ಪ್ರಪಾತಕ್ಕೆ ಉರುಳಿದೆ. ಅದೃಷ್ಟವಶಾತ್ ಚಾಲಕ ಅಪಾಯಿಂದ ಪಾರಾಗಿದ್ದಾನೆ. ಬೆಟ್ಟ ಗುಡ್ಡಗಳ ಕುಗ್ರಮಾವಾಗಿರುವ ಕುಟ್ಸಾಪೋದಲ್ಲಿ ಕ್ರೇನ್ ಸೇರಿದಂತೆ ವಾಹನಗಳನ್ನು ಮೇಲಕ್ಕೆತ್ತಲು ಯಾವುದೇ ಮಶೀನ್ ಇಲ್ಲ. ಹೀಗಾಗಿ ಗ್ರಾಮಸ್ಥರ ಲಾರಿಗೆ  ಹಗ್ಗ ಕಟ್ಟಿ ಎಳೆದಿದ್ದಾರೆ.

ಲಾರಿಯನ್ನು ಹಗ್ಗದ ಮೂಲಕ ಎಳೆದು ಮೇಲಕ್ಕೆ ತಂದಿದ್ದಾರೆ. ಈ ವಿಡಿಯೋ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಲಾಗಿದೆ. ಗ್ರಾಮಸ್ಥರ ಒಗ್ಗಟ್ಟು ಹಾಗು ಜನಶಕ್ತಿಗೆ ಇದು ಅತ್ಯುತ್ತಮ ಉದಾಹರಣೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

 

Follow Us:
Download App:
  • android
  • ios