ಕೊಚ್ಚಿ(ಜ.09): ಭೀಕರ ಅಪಘಾತದಲ್ಲಿ ಕಾರು ರಭಸವಾಗಿ ನಾಲ್ಕು ಪಲ್ಟಿಯಾಗಿದೆ. ಬಳಿಕ ಮುಗುಚಿ ಬಿದ್ದಿದೆ. ಆದರೆ ಚಾಲಕ, ಆತನ ಕುಟುಂಬಸ್ಥರು ಯಾವುದೇ ಅಪಾಯವಿಲ್ಲದೆ ಕಾರಿನಿಂದ ಹೊರಬಂದಿದ್ದಾರೆ. ಇದಕ್ಕೆ ಕಾರಣ 5 ಸ್ಟಾರ್ ಸೇಫ್ಟಿ. ಅಪಘಾತವಾದ ಕಾರು ಟಾಟಾ ಹ್ಯಾರಿಯರ್ SUV.ಟಾಟಾ ಕಾರುಗಳು 5 ಸ್ಟಾರ್ ಸೇಫ್ಟಿಂಗ್ ರೇಟಿಂಗ್ ಹೊಂದಿದೆ. ಇದು ಗರಿಷ್ಠ ಸುರಕ್ಷತೆಯ ಕಾರು. ಹೀಗಾಗಿ ಭೀಕರ ಅಪಘಾತದಲ್ಲೂ ಯಾವುದೇ ಅಪಾಯವಿಲ್ಲದೆ ಕುಟುಂಬ ಪಾರಾದ ಘಟನೆ ನಡೆದಿದೆ.

ಸೇತುವೆಯಿಂದ 15 ಅಡಿ ಕೆಳಕ್ಕೆ ಬಿದ್ದ ಟಾಟಾ ನೆಕ್ಸಾನ್, ಪ್ರಯಾಣಿಕರು ಸೇಫ್!.

ಕೇರಳದ ಸಜೀವ್ ಪಾಲಕುನ್ನು ತನ್ನ ಟಾಟಾ ಹ್ಯಾರಿಯರ್ ಮೂಲಕ ಕುಟುಂಬದ ಜೊತೆ ಪ್ರಯಾಣ ಬೆಳೆಸಿದ್ದಾರೆ. ವೇಗವಾಗಿ ಸಾಗುತ್ತಿದ್ದ ಕಾರು ದಾರಿ ಮಧ್ಯ ಅಪಘಾತಕ್ಕೀಡಾಗಿದೆ. ವೇಗ ಹಾಗೂ ಅಪಘಾತದ ರಭಸಕ್ಕೆ ಕಾರು ನಾಲ್ಕು ಪಲ್ಟಿಯಾಗಿ ಎತ್ತರಕ್ಕೆ ಚಿಮ್ಮಿ ನೆಲಕ್ಕೆ ಅಪ್ಪಳಿಸಿದೆ. ಮಗುಚಿ ಬಿದ್ದ ಕಾರು ನಜ್ಜುಗುಜ್ಜಾಗಿದೆ. ಆಧರೆ ಒಳಗಿದ್ದ ಪ್ರಯಾಣಿಕರು ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ.

ಸುರಕ್ಷತೆಯಲ್ಲಿ ಭಾರತದ ಕಾರುಗಳಿಗೆ ಅಗ್ರಸ್ಥಾನ, ವಿದೇಶಿ ಕಾರುಗಳಿಗಿಲ್ಲ ಸ್ಥಾನ!.

ಕಾರಿನಿಂದ ಹೊರಬಂದು ಸುಧಾರಿಸಿಕೊಂಡ ಮಾಲೀಕ ಸಜೀವ್ ಮೊದಲು ಹೇಳಿದ್ದು, ಟಾಟಾ ಮೋಟಾರ್ಸ್‌ಗೆ ಧನ್ಯವಾದ. ಕಾರಣ ಟಾಟಾದ 5 ಸ್ಟಾರ್ ಸೇಫ್ಟಿ ಕಾರಾದ ಕಾರಣ ತಾನು ಹಾಗೂ ಕುಟುಂಬಸ್ಥರು ಸುರಕ್ಷಿತವಾಗಿ ಇದ್ದೇವೆ. ಗರಿಷ್ಠ ಸುರಕ್ಷತೆಯ ಕಾರಾಗಿರುವ ಕಾರಣ ನಾವು ಬದಕುಳಿದಿದ್ದೇವೆ ಎಂದು ಸಜೀವ್ ಹೇಳಿದ್ದಾರೆ.

ಟಾಟಾ ಮೋಟಾರ್ಸ್ ಕಾರುಗಳೆಲ್ಲಾ ಗ್ಲೋಬಲ್ NCAP ಕ್ರಾಶ್ ಟೆಸ್ಟ್‌ನಲ್ಲಿ 5 ಸ್ಟಾರ್ ರೇಟಿಂಗ್ ಪಡೆದಿದೆ. ಇನ್ನು ಟಾಟಾ ಹ್ಯಾರಿಯರ್ ಕಾರು ಕೂಡ ಗರಿಷ್ಠ ಸೇಫ್ಟಿ 5 ಸ್ಟಾರ್ ಹೊಂದಿದೆ. ಇಷ್ಟೇ ಅಲ್ಲ ಡ್ರೈವರ್, ಕೋ ಡ್ರೈವರ್, ಪ್ಯಾಸೆಂಜರ್ ಸೈಡ್ ಏರ್‌ಬ್ಯಾಗ್ ಸೇರಿದಂತೆ ಒಟ್ಟು 6 ಏರ್‌ಬ್ಯಾಗ್ ಹ್ಯಾರಿಯರ್ ಕಾರಿನಲ್ಲಿದೆ. ABS, EBD,ಟ್ರಾಕ್ಷನ್ ಕಂಟ್ರೋಲ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಹಿಲ್ ಹೋಲ್ಡ್ ಅಸಿಸ್ಟ್, ಕಾರ್ನರಿಂಗ್ ಸ್ಟೆಬಿಲಿಟಿ ಕಂಟ್ರೋಲ್ ಸೇರಿದಂತೆ ಹಲವು ಸುರಕ್ಷತಾ ಫೀಚರ್ಸ್ ಈ ಕಾರಿನಲ್ಲಿದೆ.

ಹೀಗಾಗಿ ಹೆಚ್ಚಿನ ಅಪಘಾತಗಳಲ್ಲಿ ಕಾರಿನೊಳಗಿರುವ ಪ್ರಯಾಣಿಕರು ಸುರಕ್ಷಿತವಾಗಿರುತ್ತಾರೆ. ಇದೊಂದೆ ಘಟನೆಯಲ್ಲ ಹಲವು ಬಾರಿ ಟಾಟಾ 5 ಸ್ಟಾರ್ ಸೇಫ್ಟಿ ಸಾಬೀತಾಗಿದೆ. ಹಲವು ಅಪಘಾತಗಳಲ್ಲಿ ಮಾಲೀಕರು ಟಾಟಾ ಕಾರಿನ ಸುರಕ್ಷತೆಯನ್ನು ಹೊಗಳಿದ್ದಾರೆ.