Vehicle Re Registration ಹಳೇ ವಾಹನ ಮಾಲೀಕರಿಗೆ ಗುಡ್ ನ್ಯೂಸ್ ನೀಡಿದ ಹೈಕೋರ್ಟ್!
- ಹಳೇ ವಾಹನ ರಸ್ತೆಗಿಳಿಸಲು ಪಾಲಿಸಬೇಕು ಹಲವು ನಿಯಮ
- ಹಳೆ ವಾಹನದ ಮರು ನೋಂದಣಿ, ಫಿಟ್ನೆಸ್, ಎಮಿಶನ್ ದುಬಾರಿ
- ಹಳೇ ವಾಹನ ಮಾಲೀಕರಿಗೆ ನೆಮ್ಮದಿ ತಂದ ದೆಹಲಿ ಕೋರ್ಟ್ ಆದೇಶ
ನವದೆಹಲಿ(ಏ.13): ವಾಯು ಮಾಲಿನ್ಯ ನಿಯಂತ್ರಣಕ್ಕೆ ತರಲುಹಳೇ ವಾಹನಗಳ ಬಳಕೆಗೆ ನಿರ್ಬಂಧ ಹೇರಿದೆ. ಇದಕ್ಕಾಗಿ ಗುಜುರಿ ನೀತಿಯನ್ನು ಜಾರಿಗೊಳಿಸಿದೆ. ಅತೀಯಾದ ಮಾಲಿನ್ಯವಿರುವ ದೆಹಲಿಯಲ್ಲಿ ಹಳೇ ವಾಹನ ಬಳಕೆಗೆ ಹಲವು ನಿಯಮ ಪಾಲಿಸಬೇಕು. ವಾಹನ ಮರು ನೋಂದಣಿ, ಫಿಟ್ನೆಸ್, ಎಮಿಶನ್ ಮಾಡಿಸಿಕೊಳ್ಳಬೇಕು. ಇವೆಲ್ಲವೂ ಅತ್ಯಂತ ದುಬಾರಿಯಾಗಿದೆ. ಇದರಿಂದ ಹಳೇ ವಾಹನ ಮಾಲೀಕರಿಗೆ ತೀವ್ರ ಸಮಸ್ಯೆಯಾಗಿತ್ತು. ಇದೀಗ ದೆಹಲಿ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. ವಾಹನ ಎಷ್ಟೇ ಹಳೆಯದಾದರೂ ಎಮಿಶನ್ ಟೆಸ್ಟ್ ಪಾಸಾದರೆ ಮರು ನೋಂದಣಿ ಅವಶ್ಯಕತೆ ಇಲ್ಲ ಎಂದು ದೆಹಲಿ ಹೈಕೋರ್ಟ್ ಹೇಳಿದೆ.
ದೆಹಲಿ ಹೈಕೋರ್ಟ್ ಹಲವು ಹಳೇ ವಾಹನ ಮಾಲೀಕರಿಗೆ ನೆಮ್ಮದಿ ತಂದಿದೆ. ಹಲವರು ತಮ್ಮ ಅಗತ್ಯಕ್ಕಾಗಿ ಮಾತ್ರ ಬಳಸುತ್ತಿದ್ದ ವಾಹನಗಳಿವೆ. ಇಂತಹ ವಾಹನಗಳು ಅತ್ಯುತ್ತಮ ಕಂಡೀಷನ್‌ನಲ್ಲಿದ್ದು, ಕಡಿಮೆ ಎಮಿಶನ್ ಹೊಂದಿದೆ. ಇಂತಹ ವಾಹನ ಮಾಲೀಕರಿಗೆ ದೆಹಲಿ ಹೈಕೋರ್ಟ್ ಆದೇಶ ನೆರವಾಗಲಿದೆ.
ವಾಹನ ಮಾಲೀಕರೇ ಎಚ್ಚರ, ಎಮಿಶನ್ ಟೆಸ್ಟ್ ಸರ್ಟಿಫಿಕೇಟ್ ಇಲ್ಲದಿದ್ರೆ 10 ಸಾವಿರ ರೂ ದಂಡ!
ದೆಹಲಿಯಲ್ಲಿ 10 ವರ್ಷಕ್ಕಿಂತ ಹಳೆಯ ಡೀಸೆಲ್ ವಾಹನ ಹಾಗೂ 15 ವರ್ಷಕ್ಕಿಂತ ಹಳೆಯ ಪೆಟ್ರೋಲ್ ವಾಹನ ಬಳಕೆ ನಿಷಿಧ್ಧವವಾಗಿದೆ. ಇದನ್ನು ಬಳಸಲೇಬೇಕೆಂದರೆ ವಾಹನದ ಕಂಡೀಷನ್, ಹೊಗೆ ಪರಿಶೀಲನೆ, ಮರು ನೋಂದಣಿಯಾಗಬೇಕು. ಈ ಎಲ್ಲಾ ದರಗಳನ್ನು ಈಗ ಮೂರುಪಟ್ಟು ಹೆಚ್ಚಿಸಲಾಗಿದೆ. ಇದರ ವಿರುದ್ಧ 72 ವರ್ಷದ ಪೆಂಟಪತಿ ಪುಲ್ಲ ರಾವ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿಯಲ್ಲಿ ತನ್ನ ಹೋಂಡಾ ಸಿಟಿ ಪೆಟ್ರೋಲ್ ಕಾರು 16 ವರ್ಷ ಹಳೆಯದಾಗಿದೆ. ಇದುವರೆಗೆ 20,000 ಕಿಲೋಮೀಟರ್ ಓಡಿದೆ. ಕಾರು ಅತ್ಯುತ್ತಮ ಕಂಡೀಷನ್‌ನಲ್ಲಿದೆ. ಎಮಿಶನ್ ಟೆಸ್ಟ್ ಕೂಡ ಪಾಸಾಗಿದೆ. ಈ ಕಾರನ್ನು ಮರು ನೋಂದಣಿ ಮಾಡುವುದು ದುಬಾರಿಯಾಗಿದೆ. ಹೊಸ ಕಾರು ಖರೀದಿ ತನ್ನಿಂದ ಸಾಧ್ಯವಿಲ್ಲ. ಈ ಕಾರನ್ನು ಮಾರಾಟ ಮಾಡಿದರೆ 25 ರಿಂದ 30,000 ರೂಪಾಯಿ ಸಿಗಲಿದೆ. ಹೀಗಾಗಿ ಎಮಿಷನ್ ಟೆಸ್ಟ್ ಪಾಸಾಗಿರುವ ಕಾರು ಬಳಕೆಗೆ ಅವಕಾಶ ನೀಡಬೇಕು ಎಂದು ಮನವಿ ಮಾಡಿದ್ದರು.
PUC ನಿಯಮ ಉಲ್ಲಂಘಿಸಿದ 440 ವಾಹನ ಮಾಲೀಕರಿಗೆ ಬಿತ್ತು ದುಬಾರಿ ದಂಡ!
ಈ ಅರ್ಜಿ ವಿಚಾರಣೆ ನಡೆಸಿದ ಹೈ ಕೋರ್ಟ್ ಎಮಿಶನ್ ಟೆಸ್ಟ್ ಪಾಸಾಗುವ ಹಳೇ ವಾಹನಗಳು ರಿ ರಿಜಿಸ್ಟ್ರೇಶನ್ ಮಾಡಿಸಿಕೊಳ್ಳುವ ಅಗತ್ಯವಿಲ್ಲ. ಅಂತಹ ವಾಹನಗಳನ್ನು ಸರ್ಕಾರ ಬಳಸಲು ಅವಕಾಶ ನೀಡಬೇಕು ಎಂದು ಸೂಚಿಸಿದೆ. ಹಳೇ ಕಾರು ವಾಯು ಮಾಲಿನ್ಯಕ್ಕೆ ಕಾರಣವಾಗಬಾರದು. ಹೀಗಾಗಿ ಎಮಿಶನ್ ಕಡಿಮೆ ಇದ್ದರೆ ಬಳಕೆಗೆ ಅವಕಾಶ ನೀಡಲು ಯಾವುದೇ ಅಡ್ಡಿ ಇಲ್ಲ ಎಂದು ದೆಹಲಿ ಹೈಕೋರ್ಟ್ ಹೇಳಿದೆ.
ಹಳೆಯ ವಾಹನಗಳು ರಸ್ತೆಗೆ ಇಳಿಯದಂತೆ ತಡೆಯುವ ನಿಟ್ಟಿನಲ್ಲಿ ಹೊಸ ನೀತಿ ಜಾರಿಗೆ ಸರ್ಕಾರ ನಿರ್ಧರಿಸಿದೆ. ಅದರನ್ವಯ 15 ವರ್ಷ ಹಳೆಯ ಪೆಟ್ರೋಲ್ ಮತ್ತು 10 ವರ್ಷ ಹಳೆಯ ಡೀಸೆಲ್ ವಾಹನಗಳನ್ನು ಮಾಲೀಕರು ಮರು ನೋಂದಣಿ ಮಾಡಿಸಬೇಕಾಗುತ್ತದೆ. ಹಾಲಿ ಇಂಥ ವಾಹನಗಳನ್ನು ಹೊಂದಿರುವ ಖಾಸಗಿ ವ್ಯಕ್ತಿಗಳು ಮರುನೋಂದಣಿಗೆ 600 ರು. ಶುಲ್ಕ ಪಾವತಿ ಮಾಡಿದರೆ ಸಾಕು. ಹೊಸ ನೀತಿ ಅನ್ವಯ ಈ ಶುಲ್ಕವನ್ನು 15000 ರು.ಗೆ ಹೆಚ್ಚಿಸಲಾಗುವುದು. ಅದೇ ರೀತಿಯ ವಾಣಿಜ್ಯ ವಾಹನಗಳ ಮರುನೋಂದಣಿ ಶುಲ್ಕವನ್ನು 1000 ರು.ನಿಂದ 20000 ರು.ಗೆ ಹೆಚ್ಚಿಸಲಾಗುವುದು. ಮಧ್ಯಮ, ಭಾರೀ ಗಾತ್ರದ ವಾಣಿಜ್ಯ ವಾಹನಗಳ ಮರು ನೋಂದಣಿ ಶುಲ್ಕ 1500 ರು.ನಿಂದ 40000 ರು.ಗೆ ಹೆಚ್ಚಿಸಲಾಗುವುದು.