ಕಳಪೆ ರಸ್ತೆ ನಿರ್ಮಿಸಿದರೆ ಕಾಂಟ್ರಾಕ್ಟರ್‌ಗೆ 10 ಕೋಟಿ ಫೈನ್; ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ!
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಇದೀಗ ಹೊಸ ಆದೇಶ ಪಾಸ್ ಮಾಡಿದೆ. ಕಳಪೆ ರಸ್ತೆಗಳಿಂದ ಅಪಘಾತ ಸಂಭವಿಸಿದರೆ ಅಥವಾ ಪ್ರಯಾಣಿಕರ ಜೀವಕ್ಕೆ ಅಪಾಯದ ಎದುರಾದರೆ 10 ಕೋಟಿ ರೂಪಾಯಿ ದಂಡ, ಕಾಂಟ್ರಾಕ್ಟರ್ ಲೈಸೆನ್ಸ್ ಕ್ಯಾನ್ಸಲ್ ಸೇರಿದಂತೆ ಕಟ್ಟು ನಿಟ್ಟಿನ ಆದೇಶವನ್ನು NHAI ಪಾಸ್ ಮಾಡಿದೆ. ಈ ಕುರಿತ ವಿವರ ಇಲ್ಲಿದೆ.
ನವದೆಹಲಿ(ಜ.21): ಭಾರತದ ರಸ್ತೆಗಳ ಗುಣಮಟ್ಟ ಈಗ ಹೆಚ್ಚಾಗಿದೆ. ಅತ್ಯುತ್ತಮ ರಸ್ತೆಗಳು ನಿರ್ಮಾಣವಾಗುತ್ತಿದೆ. ಫ್ಲೈ ಓವರ್, ಸೇತುವೆ, ಸುರಂಗ ಮಾರ್ಗ ಸೇರಿದಂತೆ ಹಲವು ಅತ್ಯುತ್ತಮ ಗುಣಮಟ್ಟದ ರಸ್ತೆಗಳು ಭಾರತದಲ್ಲಿ ನಿರ್ಮಾಣ ಆಗಿವೆ. ಆದರೆ ಈಗಲೂ ಭಾರತದ ಹಲವು ಮೂಲೆಗಳಲ್ಲಿ ಕಳಪೆ ಗುಣಮಟ್ಟದ ರಸ್ತೆಗಳಿವೆ. ಡಾಂಬರು ಕಿತ್ತುಹೋಗಿ ದಶಕ ಕಳೆದರೂ ಇನ್ನೂ ಹಾಗೆ ಇರವ ರಸ್ತೆಗಳು ಇವೆ. ಇದೀಗ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹೊಸ ಆದೇಶ ಪಾಸ್ ಮಾಡಿದೆ.
ರಸ್ತೆ ಗುಂಡಿ ಸರಿಪಡಿಸುವವರೆಗೆ ಟೋಲ್ ದರ ಶೇ.50 ರಷ್ಟು ಕಡಿತ; ಮದ್ರಾಸ್ ಹೈಕೋರ್ಟ್!.
ಭಾರತದ ರಸ್ತೆ ಗುಣಮಟ್ಟ ಹೆಚ್ಚಿಸುವ ಉದ್ದೇಶದಿಂದ ನೂತನ ಆದೇಶ ಪಾಸ್ ಮಾಡಲಾಗಿದೆ. ನಿರ್ಮಿಸಿದ ರಸ್ತೆ ಕಳೆಪೆ ಗುಣಟ್ಟದ್ದಾಗಿದ್ದು, ರಸ್ತೆ ಕಾರಣದಿಂದ ಅಪಘಾತ ಅಥವಾ ಪ್ರಯಾಣಿಕರ ಜೀವಕ್ಕೆ ಅಪಾಯ ತಂದೊಡ್ಡಿದ್ದರೆ, ಈ ರಸ್ತೆ ನಿರ್ಮಿಸಿದ ಕಾಂಟ್ರಾಕ್ಟರ್ ಲೈಸೆನ್ಸ್ ರದ್ದಾಗಲಿದೆ. ಇಷ್ಟೇ ಅಲ್ಲ ಗರಿಷ್ಠ 10 ಕೋಟಿ ರೂಪಾಯಿ ದಂಡ ವಿಧಿಸಲಾಗುವುದು.
ಹೆದ್ದಾರಿಯಲ್ಲಿ ಮಾರಾಕಾಸ್ತ್ರಗಳಿಂದ ಕಾರು ದರೋಡೆ ಯತ್ನ, ಚಾಲಕನ ಸಮಯಪ್ರಜ್ಞೆಯಿಂದ ಬಚಾವ್!.
ಕಳಪೆ ರಸ್ತೆ, ರಸ್ತೆ ಗುಂಡಿ, ಚರಂಡಿ, ಸೇತುವೆ ಬಳಿ ಸರಿಯಾದ ರಸ್ತೆ ನಿರ್ಮಾಣ ಮಾಡದೆ ಅಪಘಾತಕ್ಕೆ ಕಾರಣವಾದರೆ, ಕಾಂಟ್ರಾಕ್ಟರ್ ಮತ್ತೆ ರಸ್ತೆ ನಿರ್ಮಿಸುವ ಕಾರ್ಯಕ್ಕಿಳಿಯುವುದು ಅಸಾಧ್ಯವಾಗಲಿದೆ. 3 ವರ್ಷ ನಿಷೇಧ ಸೇರಿದಂತೆ ಹಲವು ಕಟ್ಟಿನ ನಿಯಮಗಳು ಜಾರಿಯಾಗಿದೆ.