ನವದೆಹಲಿ(ಡಿ.30): ಟೋಲ್ ಪ್ಲಾಜಾಗಳಲ್ಲಿ ಸಂಚಾರ ದಟ್ಟಣೆ ಹಾಗೂ ಸುಗಮ ಸಂಚಾರಕ್ಕಾಗಿ ಕೇಂದ್ರ ಸರ್ಕಾರ ವಾಹನಗಳಿಗೆ ಫಾಸ್ಟ್ ಟ್ಯಾಗ್ ಕಡ್ಡಾಯ ಮಾಡಿದೆ. ಹೊಸ ವರ್ಷದಿಂದ ಎಲ್ಲಾ ವಾಹನಗಳಿಗೆ ಫಾಸ್ಟ್ ಟ್ಯಾಗ್ ಕಡ್ಡಾಯ ಎಂದಿದೆ. ಇದೀಗ ಸರ್ಕಾರ ಈ ಗಡುವನ್ನು ಮತ್ತಷ್ಟು ವಿಸ್ತರಿಸುವ ಸಾಧ್ಯತೆ ಇದೆ. ಇದರ ಜೊತೆಗೆ ಕೆಲ ಫೀಚರ್ಸ್ ನೀಡಿದೆ.

Fastag ಮೂಲಕ ಪ್ರತಿ ದಿನ ಸಂಗ್ರಹವಾಗುವ ಹಣವೆಷ್ಟು? ಇಲ್ಲಿದೆ ಸಂಪೂರ್ಣ ಮಾಹಿತಿ!..

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಪ್ರಾಧಿಕಾರ ಇದೀಗ ಫಾಸ್ಟ್ ಟ್ಯಾಗ್ ಆ್ಯಪ್ ಬಳೆಕಯನ್ನು ಮತ್ತಷ್ಟು ಸುಲಭಗೊಲಿಸಿದೆ. ಹೊಸ ಫೀಚರ್ಸ್ ಮೂಲಕ ಫಾಸ್ಟ್ ಟ್ಯಾಗ್ ಖಾತೆಯಲ್ಲಿ ಉಳಿದಿರುವ ಹಣವನ್ನು ಸುಲಭವಾಗಿ ಪರಿಶೀಲಿಸಬಹುದು. ಹಣ ಇದ್ದಲ್ಲಿ ಹಸಿರು ಬಣ್ಣ, ಹಣ ಕಡಿಮೆ ಇದ್ದಲ್ಲಿ ಆರೇಂಜ್ ಹಾಗೂ ನಿಗದಿತ ಮಟ್ಟಕ್ಕಿಂತ ಕಡಿಮೆ ಇದ್ದರೆ ಕೆಂಪು ಬಣ್ಣದಲ್ಲಿ ತೋರಿಸಲಿದೆ.

ಹೊಸ ವರ್ಷದಿಂದ ಎಲ್ಲಾ ವಾಹನಕ್ಕೆ ಫಾಸ್ಟ್ ಟ್ಯಾಗ್ ಕಡ್ಡಾಯ; ಟೋಲ್‌ನಲ್ಲಿ ನಿಲ್ಲುವ ಅವಶ್ಯಕತೆ ಇಲ್ಲ!.
 
ಬಳಕೆದಾರರು ಸುಲಭವಾಗಿ ಫಾಸ್ಟ್ ಟ್ಯಾಗ್ ರೀಚಾರ್ಜ್ ಮಾಡಿಕೊಳ್ಳಬಹುದು. ಇನ್ನು ಫಾಸ್ಟ್ ಟ್ಯಾಗ್‌ನಲ್ಲಿ ಹಣವಿಲ್ಲದೆ ಟೋಲ್ ದಾಟುವ ಯತ್ನ ಮಾಡಿದರೆ, ಟೋಲ್ ಸೆಂಟರ್ ಅಂತಹ ಫಾಸ್ಟ್ ಟ್ಯಾಗನ್ನು ಕಪ್ಪು ಪಟ್ಟಿಗೆ ಸೇರಿಸಲಾಗುತ್ತಿತ್ತು. ರಿಚಾರ್ಜ್ ಮಾಡಿದರೂ ಕೆಲ ಹೊತ್ತು ಇದು ಕಪ್ಪು ಪಟ್ಟಿಯಲ್ಲೇ ಇರುತ್ತಿತ್ತು. ಹೀಗಾಗಿ ಮುಂದಿನ ಟೋಲ್ ದಾಟಲು ಕಷ್ಟವಾಗುತ್ತಿತ್ತು.

ನೂತನ ಫೀಚರ್ಸ್‌ನಲ್ಲಿ ಕಪ್ಪು ಪಟ್ಟಿಯಲ್ಲಿದ್ದ ಫಾಸ್ಟ್ ಟ್ಯಾಗ್‌ಗೆ ರಿಚಾರ್ಜ್ ಮಾಡಿದ ತಕ್ಷಣವೇ, ಅಂದರೆ ಕೇವಲ 3 ನಿಮಿಷದಲಲ್ಲಿ ಆಕ್ಟೀವೇಟ್ ಆಗಲಿದೆ. ಈ ರೀತಿ ರಿಚಾರ್ಜ್, ಸ್ಟೇಟಸ್ ಚೆಕ್ ಸೇರಿದಂತೆ ಹಲವು ಫೀಚರ್ಸ್ ನೂತನ ಫಾಸ್ಟ್ ಟ್ಯಾಗ್‌ನಲ್ಲಿ ನೀಡಲಾಗಿದೆ.