ಹೊಸ ವರ್ಷದಿಂದ ಎಲ್ಲಾ ವಾಹನಕ್ಕೆ ಫಾಸ್ಟ್ ಟ್ಯಾಗ್ ಕಡ್ಡಾಯ; ಟೋಲ್‌ನಲ್ಲಿ ನಿಲ್ಲುವ ಅವಶ್ಯಕತೆ ಇಲ್ಲ!
First Published Dec 24, 2020, 9:13 PM IST
ಕೇಂದ್ರ ಸರ್ಕಾರ 2016ರಲ್ಲಿ ವಾಹನಗಳಿಗೆ ಫಾಸ್ಟ್ ಟ್ಯಾಗ್ ನಿಯಮ ಜಾರಿ ಮಾಡಿದೆ. 2017ರಿಂದ ಬಿಡುಗಡೆಯಾಗುವ ಎಲ್ಲಾ ಹೊಸ ವಾಹನಗಳಿಗೆ ಫಾಸ್ಟ್ ಕಡ್ಡಾಯ ಮಾಡಲಾಗಿದೆ. ಇದೀಗ 2021ರ ಜನವರಿಗೆ 1 ರಿಂದ ಎಲ್ಲಾ ವಾಹನಗಳಿಗೆ ಫಾಸ್ಟ್ ಟ್ಯಾಗ್ ಕಡ್ಡಾಯ ಮಾಡಿದೆ. ಹೊಸ ನಿಯಮ ಮಾಹಿತಿ ಇಲ್ಲಿದೆ.

ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಸಾರಿಗೆ ನಿಯಮದಲ್ಲಿ ಹಲವು ಬದಲಾವಣೆ ಹಾಗೂ ಆಧುನಿಕ ಸ್ಪರ್ಶ ನೀಡಿದ್ದಾರೆ. ಇದರಲ್ಲಿ ಫಾಸ್ಟ್ ಟ್ಯಾಕ್ ಕಡ್ಡಾಯ ಪ್ರಮುಖವಾಗಿದೆ.

ಜನವರಿ 1, 2021ರಿಂದ ಎಲ್ಲಾ ವಾಹನಗಳಿಗೆ ಫಾಸ್ಟ್ ಟ್ಯಾಗ್ ಕಡ್ಡಾಯ ಮಾಡಲಾಗಿದೆ ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ. ವರ್ಚುವಲ್ ಕಾರ್ಯಕ್ರಮದ ಮೂಲಕ ಗಡ್ಕರಿ ಈ ಘೋಷಣೆ ಮಾಡಿದ್ದಾರೆ.
Today's Poll
ಎಷ್ಟು ಜನರೊಂದಿಗೆ ಆನ್ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?