ಮುಂಬೈ(ಡಿ.05): ಯುವಕರ ಗುಂಪೊಂಂದು ಕುಡಿಯುತ್ತಾ, ಕಾರಿನಲ್ಲಿ ತಿರುಗಾಡುವ ಮೂಲಕ ಸಾರ್ವಜನಿಕರಿಗೆ ಸಮಸ್ಯೆ ಮಾತ್ರವಲ್ಲ ಅಪಾಯವನ್ನುಂಟು ಮಾಡುತ್ತಿದ್ದ ಮೂವರು ಯುವಕರನ್ನು ಮುಂಬೈ ಪೊಲೀಸರು ಬಂದಿಸಿದ್ದಾರೆ. 

ಮತ್ತೆ ಏರಿಕೆಯಾಯ್ತು ಪೆಟ್ರೋಲ್, ಡೀಸೆಲ್ ದರ; ಕಳೆದೆರಡು ವರ್ಷದಲ್ಲೇ ಗರಿಷ್ಠ!

ಮುಂಬೈ ವೆಸ್ಟರ್ನ್ ಹೆದ್ದಾರಿಯಲ್ಲಿ ಚಲಿಸುತ್ತಿರುವ ಕಾರಿ ಕಿಟಕಿಯಿಂದ ಹೊರಬಂದು ಕುಳಿತು, ಮದ್ಯಪಾನ ಮಾಡುತ್ತಾ ಸಾಗಿದ್ದಾರೆ. ಅದು ಅತ್ಯಂತ ಅಪಾಯಕಾರಿಯೂ ಹೌದು. ಯುವಕರ ಪುಂಡಾಟವನ್ನು ಹಿಂಬದಿ ಸವಾರರು ವಿಡಿಯೋ ಮೂಲಕ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

 

ತಕ್ಷಣವೇ ಕಾರ್ಯಪ್ರವೃತ್ತರಾದ ಮುಂಬೈ ಪೊಲೀಸರು ಚಲಿಸುವ ಕಾರಿನಲ್ಲಿ ಮದ್ಯಪಾನ ಮಾಡಿದ ಮೂವರು ಯುವಕರನ್ನು ಅರೆಸ್ಟ್ ಮಾಡಿದ್ದಾರೆ. ಮಧ್ಯರಾತ್ರಿ 12 ಗಂಟೆಗೆ ಯುವಕರು ಈ ರೀತಿ ಪುಂಡಾಟ ಮಾಡಿದ್ದಾರೆ. ಈ ಯುವಕರ ಮೇಲೆ ಮುಂಬೈ ಪೊಲೀಸರು ರ್ಯಾಶ್ ಹಾಗೂ ನಿರ್ಲಕ್ಷ್ಯತನದ ಡ್ರೈವಿಂಗ್ ಕಾರಣ ಸೆಕ್ಷನ್ 279, ಅಪಾಯಕಾರಿ ಸ್ಟಂಟ್‌ಗಾಗಿ ಸೆಕ್ಷನ್ 336 ಸೇರಿದಂತೆ ಕೆಲ ಪ್ರಕರಣಗಳನ್ನು ದಾಖಲಿಸಿದ್ದಾರೆ.