ಟ್ರಕ್ ಚಾಲಕರಿಗೆ ಕನ್ನಡ ಸೇರಿದಂತೆ ಬಹುಭಾಷಾ ಕಾಲ್ ಸೆಂಟರ್ ಆರಂಭ!

ಭಾರತದ ಲಾಜಿಸ್ಟಿಕ್ಸ್ ಉದ್ಯಮವು 10 ಮಿಲಿಯನ್‍ಗಿಂತ ಹೆಚ್ಚು ದೂರ ಸಂಚಾರದ ಟ್ರಕ್‍ಗಳನ್ನು ಹೊಂದಿದೆ, ಅವುಗಳಲ್ಲಿ ಬಹುತೇಕ ಸಣ್ಣ ಟ್ರಕ್ ಮಾಲೀಕರು ಹೊಂದಿದ್ದು ಅವರು ಸಕಾಲಕ್ಕೆ ಸರಿಯಾದ ಲೋಡ್ ದೊರೆಯದೆ ಸಂಕಷ್ಟದಲ್ಲಿರುತ್ತಾರೆ. ಇವರಿಗೆ ನೆರವಾಗಲು ಬಹುಭಾಷಾ ಕಾಲ್ ಸೆಂಟರ್ ಆರಂಭಿಸಲಾಗಿದೆ.

Multi language including kannada call center introduce to truckers by lobb ckm

ಬೆಂಗಳೂರು(ಜು.19): ಲಾಬ್ಬ್ ಇಂದು ತನ್ನ ವೃದ್ಧಿಸುತ್ತಿರುವ ಟ್ರಕ್ಕರ್ ಗಳಿಗೆ ತನ್ನ ಅಪ್ಲಿಕೇಷನ್ ಮೂಲಕ ಈ ಸೇವೆಗಳನ್ನು ಬಳಸಲು ಬಹುಭಾಷೆಯ ಕಾಲ್ ಸೆಂಟರ್ ಪ್ರಕಟಿಸಿದೆ. ಪ್ರಾರಂಭದಲ್ಲಿ ಇದು ಕನ್ನಡ, ತಮಿಳು, ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಪ್ರಾರಂಭವಾಗಲಿದೆ. ಟ್ರಕ್ಕರ್ ಗಳು ಹೆಚ್ಚು ಶಿಕ್ಷಣ ಪಡೆಯದೇ ಇರುವುದರಿಂದ ಅವರು ಈ ಅಪ್ಲಿಕೇಷನ್ ಬಳಸಲು ಕುಟುಂಬದ ಮತ್ತು ಮಿತ್ರರ ನೆರವು ಪಡೆಯುತ್ತಾರೆ. ಲಾಬ್ಬ್ ಮತ್ತಷ್ಟು ಭಾಷೆಗಳನ್ನು ಸೇರ್ಪಡೆ ಮಾಡುವ ಉದ್ದೇಶ ಹೊಂದಿದೆ. ಲಾಬ್ಬ್ ಬೆಂಗಳೂರು ಮೂಲದ ತಂತ್ರಜ್ಞಾನ ಸ್ಟಾರ್ಟಪ್ ಆಗಿದ್ದು ಮುಂದಿನ ಬಿಲಿಯನ್ ನೆಟಿಜನ್‍ಗಳು ಮತ್ತು ಡಿಜಿಟಲಿ ಡಿಸ್ರಪ್ಟ್ ಲಾಜಿಸ್ಟಿಕ್ಸ್‍ನಲ್ಲಿ ಕಾರ್ಯ ನಿರ್ವಹಿಸುವ ಉದ್ದೇಶದಿಂದ 2015ರಲ್ಲಿ ಪ್ರಾರಂಭವಾಯಿತು, ತಂತ್ರಜ್ಞಾನ ಕ್ಷೇತ್ರದ ಪರಿಣಿತರಾದ ಜಯರಾಮ ರಾಜು ಮತ್ತು ವೇಣು ಕೊಂಡೂರ್ ಸ್ಥಾಪಿಸಿದರು.

ಭಾರತವು ಹಲವು ಭಾಷೆಗಳ ವೈವಿಧ್ಯಮಯ ದೇಶವಾಗಿದೆ. ಬಳಕೆದಾರರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ನಾವು ಅತ್ಯಂತ ಸರಳವಾಗಿ ಕೆಲಸ ಮಾಡುವ ಈ ವಿಶೇಷತೆಯನ್ನು ಪರಿಚಯಿಸಿದ್ದೇವೆ. ಕಾಲರ್ ಕರೆ ಮಾಡಿದಾಗ ಅವರಿಗೆ ಭಾಷೆ ಆಯ್ಕೆ ಮಾಡಿಕೊಳ್ಳಲು ಸೂಚಿಸಲಾಗುತ್ತದೆ ಮತ್ತು ಮುಂದಿನ ಸಂಭಾಷಣೆ ಅವರ ಆಯ್ಕೆಯ ಭಾಷೆಯಲ್ಲಿ ನಡೆಯುತ್ತದೆ. ತಂತ್ರಜ್ಞಾನವನ್ನು ಬಳಕೆದಾರರು ಬಳಸುವಂತಾಗಬೇಕು ಮತ್ತು ಅದು ಕೇವಲ ಭಾಷೆಯಿಂದಾಗಿ ಕೊರತೆಯಾಗಬಾರದು ಎನ್ನುವುದು ನಮ್ಮ ಉದ್ದೇಶ ಎಂದು ಲಾಬಬ್  ಸಿಇಒ ಮತ್ತು ಸಹ-ಸಂಸ್ಥಾಪಕ ವೇಣು ಕೊಂಡೂರ್ ಹೇಳಿದ್ದಾರೆ. 

 

ಟಾಟಾ ಮೋಟಾರ್ಸ್‌ನಿಂದ ಮತ್ತೊಂದು ಮೈಲಿಗಲ್ಲು; 21 ಹೊಸ ವಾಣಿಜ್ಯ ವಾಹನ ಅನಾವರಣ!

ಲಾಬ್ಬ್ ಟ್ರಾನ್ಸ್‍ಪೋರ್ಟರ್ ಗಳನ್ನು ಟ್ರಕ್ಕರ್ ಗಳೊಂದಿಗೆ ತಡೆರಹಿತವಾಗಿ ಸಂಪರ್ಕಿಸಲು ಮಾರ್ಕೆಟ್‍ಪ್ಲೇಸ್ ಸೃಷ್ಟಿಸಿದ್ದು ಅದು ರಾಷ್ಟ್ರಮಟ್ಟದ ಪೂರೈಕೆ ಬೇಡಿಕೆಯನ್ನು ಪೂರೈಸುತ್ತದೆ. ಭಾರತದ ಅತ್ಯಂತ ದೊಡ್ಡ ಸಾರಿಗೆ ಕೇಂದ್ರಗಳಾದ ನಮಕ್ಕಲ್(ತಮಿಳುನಾಡು), ವಿಜಯವಾಡ(ಆಂಧ್ರ ಪ್ರದೇಶ) ಮತ್ತು ಅಂಬಾಲಾ(ಪಂಜಾಬ್)ಗಳಲ್ಲಿದೆ. 

ಭಾರತದ ಲಾಜಿಸ್ಟಿಕ್ಸ್ ಉದ್ಯಮವು 10 ಮಿಲಿಯನ್‍ಗಿಂತ ಹೆಚ್ಚು ದೂರ ಸಂಚಾರದ ಟ್ರಕ್‍ಗಳನ್ನು ಹೊಂದಿದೆ, ಅವುಗಳಲ್ಲಿ ಬಹುತೇಕ ಸಣ್ಣ ಟ್ರಕ್ ಮಾಲೀಕರು ಹೊಂದಿದ್ದು ಅವರು ಸಕಾಲಕ್ಕೆ ಸರಿಯಾದ ಲೋಡ್ ದೊರೆಯದೆ ಸಂಕಷ್ಟದಲ್ಲಿರುತ್ತಾರೆ. ಲಾಬ್ಬ್ ಅವರಿಗೆ ತನ್ನ ಪ್ರೊಪ್ರೈಟರಿ ಟ್ರಕ್ ಡಿಸ್ಕವರಿ ಮಾಡೆಲ್ ಮೂಲಕ ವಿಶಿಷ್ಟವಾದ ವಾಹನಗಳು, ಮಾರ್ಗಗಳು ಮತ್ತು ನೋಡ್‍ಗಳ ಜಾಲ ಸೃಷ್ಟಿಸಿ ಬೇಡಿಕೆ ಮತ್ತು ಪೂರೈಕೆಯನ್ನು ಹೊಂದಿಸುತ್ತದೆ ಮತ್ತು ಮೆಷಿನ್ ಆಧರಿತ ಮ್ಯಾಚಿಂಗ್ ಎಂಜಿನ್‍ಗೆ ಚಲಿಸುತ್ತದೆ. 

ಲಾಬ್ಬ್ ಎಐ ಆಧರಿತ ಪ್ಲಾಟ್‍ಫಾರಂ ಆಗಿದ್ದು ಇಂಟರ್‌ಸಿಟಿ ಲಾಜಿಸ್ಟಿಕ್ಸ್‍ನಲ್ಲಿ ಸಂಚಲನ ಉಂಟು ಮಾಡಲಿದೆ. ಭಾರತದ ಲಾಂಗ್- ಹಾಲ್ ಇಂಟರ್‍ಸಿಟಿ ಲಾಜಿಸ್ಟಿಕ್ಸ್ ಮಾರುಕಟ್ಟೆ ಸುಮಾರು 100 ಬಿಲಿಯನ್ ಡಾಲರ್ ಮೌಲ್ಯ ಹೊಂದಿದೆ. ಲಾಬ್ಬ್ ಟ್ರಕ್ಕರ್ ಗಳ ನಿಲುಗಡೆ ಕಡಿಮೆ ಮಾಡಿ ಹಾಗೂ ಡಿಜಿಟಲ್ ಪಾವತಿಗಳ ಮೂಲಕ ಶೇ.30ರಷ್ಟು ಆದಾಯ ಹೆಚ್ಚಿಸುವ ಗುರಿ ಹೊಂದಿದೆ. ಪ್ರಸ್ತುತ ಲಾಬ್ಬ್ ಭಾರತದಾದ್ಯಂತ 18 ಪ್ರಮುಖ ಕೈಗಾರಿಕಾ ಕೇಂದ್ರಗಳಲ್ಲಿ ಕಾರ್ಯಾಚರಣೆ ಮಾಡುತ್ತಿದೆ. ಇಂದು 900ಕ್ಕೂ ಹೆಚ್ಚು ಲಾಜಿಸ್ಟಿಕ್ ಕಂಪನಿಗಳು 5000 ಟ್ರಕ್ಕರ್ ಗಳು ಮತ್ತು 20,000ಕ್ಕೂ ಹೆಚ್ಚು ಫ್ಲೀಟ್‍ಗಳೊಂದಿಗೆ ಕಾರ್ಯ ನಿರ್ವಹಿಸುತ್ತಿದೆ. 
 

Latest Videos
Follow Us:
Download App:
  • android
  • ios