ರತನ್ ಟಾಟಾ ಮುಡಿಗೆ ಇನ್ನೊಂದು ಗರಿ, ಟಾಟಾ ಮೋಟಾರ್ಸ್ ಈಗ ದೇಶದ ನಂ.1 ಆಟೋಮೇಕರ್ ಬ್ರ್ಯಾಂಡ್!
ಗುರುವಾರದ ಮಾರುಕಟ್ಟೆ ಅಂತ್ಯದ ವೇಳೆಗೆ ಮಾರುತಿ ಸುಜುಕಿ ಕಂಪನಿಯ 3.93 ಲಕ್ಷ ಕೋಟಿ ರೂಪಾಯಿ ಮಾರುಕಟ್ಟೆ ಬಂಡವಾಳ ಹೊಂದಿದೆ. ಇದು ಟಾಟಾ ಮೋಟಾರ್ಸ್ ಕಂಪನಿಗಿಂತ 7335 ಕೋಟಿ ರೂಪಾಯಿ ಕಡಿಮೆಯಾಗಿದೆ.
ಮುಂಬೈ (ಜು.25): ಈ ವರ್ಷದ ಆರಂಭದಿಂದ ಟಾಟಾ ಮೋಟಾರ್ಸ್ ಷೇರಿನಲ್ಲಿ ಒಟ್ಟು ಶೇ. 40ರಷ್ಟು ಹೆಚ್ಚಳವಾಗಿದೆ. ಇದರ ಪರಿಣಾಮ ಎನ್ನುವಂತೆ ಟಾಟಾ ಮೋಟಾರ್ಸ್ ಕಂಪನಿಯ ಮಾರುಕಟ್ಟೆ ಮೌಲ್ಯವೀಗ 4 ಲಕ್ಷ ಕೋಟಿಇ ರೂಪಾಯಿ ದಾಟಿದೆ. ಈ ಹಾದಿಯಲ್ಲಿ ಟಾಟಾ ಮೋಟಾರ್ಸ್ ದೇಶದ ಅತಿದೊಡ್ಡ ಆಟೋಮೇಕರ್ ಎನ್ನುವ ಸ್ಥಾನವನ್ನು ಮತ್ತೊಮ್ಮೆ ಸಂಪಾದಿಸಿದೆ. ಮಾರುತಿ ಸುಜುಕಿ ಕಂಪನಿಯನ್ನು ಟಾಟಾ ಮೋಟಾರ್ಸ್ 2ನೇ ಸ್ಥಾನಕ್ಕೆ ತಳ್ಳಿದೆ. ಟಾಟಾ ಮೋಟಾರ್ಸ್‌ನ ಸಾಮಾನ್ಯ ಷೇರುಗಳು ಹಾಗೂ ಡಿವಿಆರ್ ಷೇರುಗಳನ್ನು ಒಟ್ಟುಗೂಡಿಸಿ 4 ಲಕ್ಷ ಕೋಟಿ ಮಾರುಕಟ್ಟೆ ಬಂಡವಾಳವನ್ನು ಸಂಪಾದಿಸಿದೆ.ಗುರುವಾರದ ಮಾರುಕಟ್ಟೆ ಅಂತ್ಯದ ವೇಳೆಗೆ ಮಾರುತಿ ಸುಜುಕಿ ಕಂಪನಿಯ 3.93 ಲಕ್ಷ ಕೋಟಿ ರೂಪಾಯಿ ಮಾರುಕಟ್ಟೆ ಬಂಡವಾಳ ಹೊಂದಿದೆ. ಇದು ಟಾಟಾ ಮೋಟಾರ್ಸ್ ಕಂಪನಿಗಿಂತ 7335 ಕೋಟಿ ರೂಪಾಯಿ ಕಡಿಮೆಯಾಗಿದೆ. ಕಳೆದ ಮಾರ್ಚ್‌ನಲ್ಲಿ ಮಾರುತಿ ಸುಜುಕಿ, ಟಾಟಾ ಮೋಟಾರ್ಸ್‌ಅನ್ನುಹಿಂದಿಕ್ಕಿ ದೇಶದ ಅತಿದೊಡ್ಡ ಆಟೋಮೇಕರ್ ಎನಿಸಿತ್ತು. ಐದು ತಿಂಗಳ ಹಿನ್ನಡೆಯ ಬಳಿಕ ಟಾಟಾ ಮೋಟಾರ್ಸ್ ಮತ್ತೊಮ್ಮೆ ಈ ಸ್ಥಾನಕ್ಕೇರಿದೆ.
ಮೂರನೇ ಸ್ಥಾನದಲ್ಲಿ ಮಹೀಂದ್ರಾ & ಮಹೀಂದ್ರಾ ಕಂಪನಿಯಿದ್ದು, ಇದರ ಮಾರುಕಟ್ಟೆ ಮೌಲ್ಯ 3.5 ಲಕ್ಷ ಕೋಟಿ ರೂಪಾಯಿ ಆಗಿದೆ. ನಿಫ್ಟಿ ಆಟೋ ಮಾರ್ಕೆಟ್ ಸೂಚ್ಯಂಕದಲ್ಲಿ ಈ ಮೂರು ಕಂಪನಿಗಳ ಪಾಲು ಶೇ. 50 ಆಗಿದೆ. ಒಟ್ಟಾರೆ ನಿಫ್ಟಿ ಆಟೋದ ಮೌಲ್ಯ 23.4 ಲಕ್ಷ ಕೋಟಿ ರೂಪಾಯಿ ಆಗಿದೆ.
ಜಪಾನಿನ ಬ್ರೋಕರೇಜ್ ಸಂಸ್ಥೆ ನೊಮುರಾದಿಂದ ಟಾಟಾ ಮೋಟಾರ್ಸ್ ಷೇರುಗಳ ಖರೀದಿಯನ್ನು ನ್ಯೂಟ್ರಲ್‌ನಿಂದ ಖರೀದಿಗೆ ಅಪ್‌ಗ್ರೇಡ್ ಮಾಡಿದ ಕಾರಣಕ್ಕೆ ಟಾಟಾ ಮೋಟಾರ್ಸ್ ಮಾರುಕಟ್ಟೆಯಲ್ಲಿ ಮತ್ತೊಮ್ಮೆ ಏರಿಕೆ ಕಾಣುತ್ತಿದೆ. ಕಂಪನಿಯು ತನ್ನ ಲಾಭಾಂಶವನ್ನು ಹೆಚ್ಚಿಸಲು ಜಾಗ್ವಾರ್ ಲ್ಯಾಂಡ್ ರೋವರ್ (ಜೆಎಲ್‌ಆರ್) ನಿಂದ ಗಮನಾರ್ಹವಾದ ಮೇಲುಗೈಯನ್ನು ಹೊಂದಬಹುದು ಎಂದು ನೋಮುರಾ ಅಭಿಪ್ರಾಯಪಟ್ಟಿದೆ.
ಭಾರತದ ಮೊದಲ SUV ಕೂಪ್ ಟಾಟಾ ಕರ್ವ್ ಕಾರು ಅನಾವರಣ, ಆ.7ಕ್ಕೆ ಲಾಂಚ್!
ಟಾಟಾ ಮೋಟಾರ್ಸ್ ಕಂಪನಿಯ ಷೇರುಗಳು ಗುರುವಾರ ಶೇ. 6.2ರಷ್ಟು ಏರಿಕೆ ಕಂಡಿದೆ. ಇದು 2023ರ ಜನವರಿಯ ಬಳಿಕ ಒಂದೇ ದಿನದಲ್ಲಿ ಟಾಟಾ ಮೋಟಾರ್ಸ್ ಷೇರುಗಳ ಗರಿಷ್ಠ ಏರಿಕೆ ಪ್ರಮಾಣವಾಗಿದೆ. ಅದಲ್ಲದೆ, ಕಂಪನಿ ತನ್ನ ದಾಖಲೆಯ ಗರಿಷ್ಠ 1094.10 ರೂಪಾಯಿವರರೆಗೆ ಮುಟ್ಟಿತ್ತು.ಮುಂದಿನ 12 ತಿಂಗಳಲ್ಲಿ ಟಾಟಾ ಮೋಟಾರ್ಸ್ ಷೇರುಗಳು 1294 ರೂಪಾಯಿಗೆ ಮುಟ್ಟಬಹುದು ಎಂದು ನೊಮುರಾ ಹೇಳಿದೆ. ಇನ್ನು ಟಾಟಾ ಮೋಟಾರ್ಸ್ ಕಂಪನಿಯ ಷೇರುಗಳು ಷೇರುದಾರರಿಗೆ ಶೇ. 101ರಷ್ಟು ರಿಟರ್ನ್ ನೀಡಿದೆ.
ಭರ್ಜರಿ ಡಿಸ್ಕೌಂಟ್ ಆಫರ್ ಘೋಷಿಸಿದ ಟಾಟಾ, SUV ಕಾರುಗಳಿಗೆ 1.4 ಲಕ್ಷ ರೂ ವರೆಗೆ ರಿಯಾಯಿತಿ!