ಮಹಿಳೆಯರ ಫ್ರೀ ಬಸ್‌ನಿಂದ ಗಂಡಸರಿಗೆ ಪ್ರಯಾಸ, ಖರೀದಿಸಿ ಮಾರುತಿ ಕಾರು ಜಾಹೀರಾತು ವೈರಲ್!

ಮಹಿಳೆಯರ ಉಚಿತ ಬಸ್ ಪ್ರಯಾಣದಿಂದ ಪುರುಷರ ಪ್ರಯಾಣ ಪ್ರಯಾಸವಾಗಿದೆ. ಸೀಟು ಸಿಗದೆ ಪ್ರಯಾಣಿಸುವ ಅನಿವಾರ್ಯತೆ ಎದುರಾಗಿದೆ. ಯೋಜನೆ, ಇದೇ ಸಂದರ್ಭ ಬಳಸಿಕೊಂಡ ಮಾರುತಿ ಡೀಲರ್, ಅದ್ಭುತ ಜಾಹೀರಾತು ಪ್ರಕಟಿಸಿದ್ದಾರೆ. ಈ ಜಾಹೀರಾತು ನೋಡಿದ ಬಳಿಕ ಗಂಡಸರು ಕಾರು ಖರೀದಿಸಲು ಮನಸ್ಸು ಮಾಡುವ ಸಾಧ್ಯತೆ ಹೆಚ್ಚು.
 

Maruti Dealer use Karnataka Govt Women Free bus Shakti scheme as a advertisement campaign Goes viral ckm

ಬೆಂಗಳೂರು(ಜು.25) ಕಾಂಗ್ರೆಸ್ ಉಚಿತ ಗ್ಯಾರೆಂಟಿ ಮೂಲಕ ಮಹಿಳೆಯರಿಗೆ ಫ್ರಿ ಬಸ್ ಯೋಜನೆ ನೀಡಲಾಗಿದೆ. ಇದರಿಂದ ಬಸ್‌ನಲ್ಲಿ ನಡೆಯುತ್ತಿರುವ ಅದ್ವಾನಗಳು ವೈರಲ್ ಆಗಿದೆ. ಇದರ ಜೊತೆಗೆ ಪುರುಷರ ಬಸ್ ಪ್ರಯಾಣ ಕಷ್ಟವಾಗಿದೆ. ನಿಂತುಕೊಂಡೆ ಬಸ್ ಪ್ರಯಾಣ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಇದೇ ವಿಚಾರ ಮುಂದಿಟ್ಟು ಮಾರುತಿ ಕಾರು ಡೀಲರ್ ಪ್ರಕಟಿಸಿದ ಜಾಹೀರಾತು ಭಾರಿ ವೈರಲ್ ಆಗಿದೆ. ಚಿಂತೆ ಬೇಡ ಶೇಕಡ 100 ರಷ್ಟು ಸಾಲದೊಂದಿಗೆ ಖರೀದಿಸಿ ಅಲ್ಟೋ ಕಾರು ಎಂಬ ಜಾಹೀರಾತಿಗೆ ಭಾರಿ ಮೆಚ್ಚುಗೆಯೂ ವ್ಯಕ್ತವಾಗಿದೆ.

ಈ ಜಾಹೀರಾತು ಇದೀಗ ಎಲ್ಲೆಡೆ ವೈರಲ್ ಆಗಿದೆ. ಭಾರಿ ಚರ್ಚೆಯಾಗುತ್ತಿದೆ. ಸಿದ್ದರಾಮಯ್ಯ ಸರ್ಕಾರದ ಶಕ್ತಿ ಯೋಜನೆಯಿಂದ ಪುರುಷರಿಗೆ ಆಗುತ್ತಿರುವ ಸಮಸ್ಯೆಯನ್ನು ಬಳಸಿಕೊಂಡು ಜಾಹೀರಾತು ಪ್ರಕಟಿಸಲಾಗಿದೆ. ನಮಗೆ ತಿಳಿದಿದೆ ಅನ್ನೋ ಹೆಡ್‌ಲೈನ್ ಮೂಲಕ ಈ ಜಾಹೀರಾತನ್ನು ಡೀಲರ್ ತನ್ನ ಶೋ ರೂಂ ಮುಂಭಾಗದಲ್ಲಿ ಹಾಕಿದ್ದಾರೆ. ನಮಗೆ ತಿಳಿದಿದೆ. ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಮಹಿಳೆಯರು ಜಾಸ್ತಿ ಫ್ರೀ ಬಸ್ ಪ್ರಯಾಣ ಮಾಡುವುದರಿಂದ ಗಂಡಸರು ತುಂಬಾ ಪ್ರಯಾಸದಿಂದ ನಿಂತುಕೊಂಡೆ ಪ್ರಯಾಣಿಸಬೇಕಾದ ಅನಿವಾರ್ಯತೆ ಇದೆ.ಆದ್ದರಿಂದ ಖರೀದಿಸಿದ ಹೊಚ್ಚ ಹೊಸ ಮಾರುತಿ ಅಲ್ಟೋ ಕೆ10 ಕಾರು. ಆನ್‌ರೋಡ್ ಮೇಲೆ ಶೇಕಡಾ 100 ರಷ್ಟು ಸಾಲ ಸೌಲಭ್ಯ ನಮ್ಮಲ್ಲಿ ಲಭ್ಯ ಎಂದು ಈ ಜಾಹೀರಾತಿನಲ್ಲಿ ಪ್ರಕಟಿಸಲಾಗಿದೆ.

ಉಚಿತ ಬಸ್‌ ಪ್ರಯಾಣ ಎಫೆಕ್ಟ್‌: ಬೀದರ್‌ನಲ್ಲಿ ಸೀಟಿಗಾಗಿ ನಾರಿಮಣಿಯರ ಕಿತ್ತಾಟ !

ಈ ಜಾಹೀರಾತಿನ ಕೆಳಗೆ ಮಾಂಡೋವಿ ಮೋಟಾರ್ಸ್ ಎಂದು ಬರೆಯಲಾಗಿದೆ. ಹೀಗಾಗಿ ಮಾಂಡೋವಿ ಮೋಟಾರ್ಸ್ ಮಾಡಿರುವ ಈ ಜಾಹೀರಾತ ಇದೀಗ ಕರ್ನಾಟಕದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ಪುರುಷರು ಬಸ್ ಪ್ರಯಾಣದ ಸಂಕಷ್ಟದಲ್ಲಿರುವುದನ್ನೇ ಬಂಡವಾಳ ಮಾಡಿರುವ ಈ ಜಾಹೀರಾತು ಗಂಡಸರನ್ನು ಕಾರು ಖರೀದಿಸುವಂತೆ ಪ್ರೇರಿಪಿಸುತ್ತಿದೆ. ಈ ಜಾಹೀರಾತು ವ್ಯಾಟ್ಸ್ಆ್ಯಪ್ ಮೂಲಕವೂ ಭಾರಿ  ಸಂಚಲನ ಸೃಷ್ಟಿಸಿದೆ.

ಮಹಿಳಾ ಶಕ್ತಿ ಯೋಜನೆಯನ್ನೇ ಪ್ರಮುಖ ಆಧಾರವಾಗಿಟ್ಟುಕೊಂಡು ಈ ಜಾಹೀರಾತು ತಯಾರಿಸಲಾಗಿದೆ. ಸಿದ್ದರಾಮಯ್ಯ ಸರ್ಕಾರ ಚುನಾವಣೆಗೂ ಮುನ್ನವೇ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ನೀಡುವುದಾಗಿ ಘೋಷಿಸಿತ್ತು. ಇದರ ಜೊತೆಗೆ ಇತರ 4 ಉಚಿತ ಭಾಗ್ಯಗಳನ್ನು ಘೋಷಿಸಿತ್ತು. ಈ ಪೈಕಿ ಮಹಿಳೆಯರ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆಗೆ ಮೊದಲು ಚಾಲನೆ ನೀಡಲಾಗಿತ್ತು.

ಮಹಿಳೆಯರು ಬಿಎಂಟಿಸಿ ಹಾಗೂ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಬಸ್‌ನಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ಮಾಡಿಕೊಡಲಾಗಿದೆ. ಈ ಯೋಜನೆಯಿಂದ ಮಹಿಳೆಯರು ಸರ್ಕಾರಿ ಬಸ್ ಪ್ರಯಾಣ ಹೆಚ್ಚಾಗಿದೆ. ಬಸ್‌ ಸಂಪೂರ್ಣ ಭರ್ತಿಯಾಗುತ್ತಿದೆ. ವಿಶೇಷವಾಗಿ ವಾರಾಂತ್ಯದಲ್ಲಿ ಪ್ರವಾಸಿ ತಾಣಕ್ಕೆ ತೆರಳುವುದು, ದೇವಸ್ಥಾನ ಸೇರಿದಂತೆ ತೀರ್ಥ ಕ್ಷೇತ್ರಗಳ ಪ್ರಯಾಣವೂ ಹೆಚ್ಚಾಗಿದೆ. 

ಶಕ್ತಿ ಯೋಜನೆ ಎಫೆಕ್ಟ್‌ ಹೈರಾಣಾದ ವಿದ್ಯಾರ್ಥಿಗಳು.....

ಬಸ್‌ನಲ್ಲಿ ಸೀಟು ಸಿಗದೆ ಮಹಿಳೆಯರು ಬಡಿದಾಡಿಕೊಂಡ ಹಲವು ಘಟನೆಗಳು ವರದಿಯಾಗಿದೆ. ಈ ಕುರಿತ ವಿಡಿಯೋಗಳು ವೈರಲ್ ಆಗಿದೆ. ಬಸ್‌ನಲ್ಲಿ ಪುರುಷರು ಸೀಟು ಸಿಗದೆ ಪರದಾಡಿದ ವಿಡಿಯೋಗಳು ವೈರಲ್ ಆಗಿತ್ತು. ಇನ್ನು ಜುಲೈ ಮೊದಲ ವಾರಕ್ಕೆ ಶಕ್ತಿ ಯೋಜನೆಯಡಿ 15 ಕೋಟಿ ಮಹಿಳೆಯರು ಉಚಿತ ಬಸ್ ಪ್ರಯಾಣ ಮಾಡಿದ್ದರು.  ಜೂ.11 ರಂದು ರಾಜ್ಯ ಸರ್ಕಾರ ಶಕ್ತಿ ಯೋಜನೆಗೆ ಚಾಲನೆ ನೀಡಿತ್ತು. ಆರಂಭದಿಂದ ಈವರೆಗೆ ಒಟ್ಟು 14.93 ಕೋಟಿ ಮಹಿಳೆಯರು ರಾಜ್ಯದ ಸಾರಿಗೆ ಸಂಸ್ಥೆಗಳ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣ ನಡೆಸಿ ಯೋಜನೆಯ ಲಾಭ ಪಡೆದುಕೊಂಡಿದ್ದಾರೆ. ಒಟ್ಟಾರೆ, 353.47 ಕೋಟಿ ರು. ಮೊತ್ತದ ಟಿಕೆಟ್‌ ಅನ್ನು ಮಹಿಳಾ ಪ್ರಯಾಣಿಕರು ಪಡೆದುಕೊಂಡಿದ್ದಾರೆ.

Maruti Dealer use Karnataka Govt Women Free bus Shakti scheme as a advertisement campaign Goes viral ckm

Latest Videos
Follow Us:
Download App:
  • android
  • ios