ಬೆಂಗಳೂರು(ಏ.11): ಬೈಕ್‌ ಹಾಗೂ ಸ್ಕೂಟರ್‌ನಲ್ಲಿ ಮಿರರ್ ತೆಗೆದು ರೈಡ್ ಮಾಡುವುದು ಹೆಚ್ಚಿನವರ ಟ್ರೆಂಡ್  ಆಗಿದೆ. ಮಿರರ್ ಬೈಕ್ ಲುಕ್ ಕಡಿಮೆಗೊಳಿಸುತ್ತೆ ಅನ್ನೋ ವಾದವೂ ಇದೆ. ಇನ್ನು ಇಂಡಿಕೇಟರ್ ಹಾಕೋ ಜಾಯಮಾನ ಬಹುತೇಕರಿಗಿಲ್ಲ. ತಿರುವು ಪಡೆದುಕೊಳ್ಳುವಾಗ ಕೈ, ಕಾಲು, ತಲೆಯಲ್ಲಿ ಸಿಗ್ನಲ್ ಕೊಡುವುದೇ ಹೆಚ್ಚಿನವರ ವಾಡಿಕೆ. ಆದರೆ ಇನ್ನುಮುಂದೆ ಈ ಸಂಪ್ರದಾಯ ನಡೆಯುವುದಿಲ್ಲ. ಕಾರಣ ಮಿರರ್ ಇಲ್ಲದಿದ್ದರೆ ಹಾಗೂ  ಇಂಡಿಕೇಟರ್ ಕಾರ್ಯನಿರ್ವಹಿಸಿದಿದ್ದರೆ ದಂಡ ಬೀಳಲಿದೆ.

ಟ್ರಾಫಿಕ್ ನಿಯಮ ಮತ್ತಷ್ಟು ಕಠಿಣ; ಕಾರಿನ ಹಿಂಬದಿ ಸೀಟ್ ಬೆಲ್ಟ್ ಹಾಕದಿದ್ರೂ ದಂಡ!.

ಇಂಡಿಕೇಟರ್, ರೇರ್ ಮಿರರ್ ಹೊಸ ನಿಯಮವಲ್ಲ. ಆದರೆ ಇಷ್ಟವರೆಗೆ ಈ ನಿಯಮವನ್ನು ಪೊಲೀಸರು ಕಟ್ಟು ನಿಟ್ಟಾಗಿ ಜಾರಿಗೊಳಿಸಿಲ್ಲ. ಆದರೆ ಇದೀಗ ಈ  ಕ್ರಮಕ್ಕೆ ಮುಂದಾಗಿದ್ದಾರೆ. ದ್ವಿಚಕ್ರ ವಾಹನದಲ್ಲಿ ಮಿರರ್ ಇಲ್ಲದಿದ್ದರೆ, ಇಂಡಿಕೇಟರ್ ಹಾಕದ ಅಭ್ಯಾಸ ಮುಂದುವರಿಸಿದರೆ 500 ರೂಪಾಯಿ ದಂಡ ಹಾಕುವುದಾಗಿ ಸಂಚಾರ ಪೊಲೀಸ್ ಆಯುಕ್ತ ಬಿಆರ್ ರವಿಕಾಂತೇಗೌಡ ಹೇಳಿದ್ದಾರೆ.

ದುಬಾರಿ ಫೈನ್ ಕಟ್ಟಗಲಾಗದೇ ಪೊಲೀಸರ ಬಳಿ ಸ್ಕೂಟರ್ ಬಿಟ್ಟು ಹೋದ ಸವಾರ!

ನಗರದಲ್ಲಿ ಸಂಭವಿಸುತ್ತಿರುವ ಹೆಚ್ಚಿನ ಅಪಘಾತ ವರದಿಯಲ್ಲಿ ಮಹತ್ವದ ಮಾಹಿತಿ ಬಹಿರಂಗವಾಗಿದೆ. ಇಂಡಿಕೇಟರ್ ಹಾಕದೆ ದ್ವಿಚಕ್ರ ವಾಹನ ಚಲಾಯಿಸುವ ಕಾರಣ ಅಪಘಾತ ಪ್ರಮಾಣ ಹೆಚ್ಚಾಗುತ್ತಿದೆ. ಅಡ್ಡಾದಿಡ್ಡಿ ವಾಹನ ರೈಡ್ ಮಾಡುವುದು, ಸಿಗ್ನಲ್ ನೀಡದೆ ತಿರುವು ತೆಗೆದುಕೊಳ್ಳುವುದೇ ಅಪಘಾತಗಳಿಗೆ ಕಾರಣವಾಗುತ್ತಿದೆ. ಹೀಗಾಗಿ ಬೆಂಗಳೂರು ಪೊಲೀಸರು ಈ ನಿರ್ಧಾರ ಮಾಡಿದ್ದಾರೆ.