Asianet Suvarna News Asianet Suvarna News

ಕರ್ನಾಟದಲ್ಲಿವೆ ದೇಶದಲ್ಲೇ ಅತಿ ಹೆಚ್ಚು ಹಳೆಯ ವಾಹನಗಳು!

ಇತ್ತೀಚೆಗೆ ಸಂಸತ್ತಿಗೆ ತಿಳಿಸಲಾದ ಮಾಹಿತಿಯಲ್ಲಿ ಕರ್ನಾಟಕ ಮತ್ತು ದಿಲ್ಲಿಯಲ್ಲಿ 20 ವರ್ಷ ಮೀರಿದ ವಾಹನಗಳು ಅತಿಹೆಚ್ಚಿನ ಸಂಖ್ಯೆಯಲ್ಲಿವೆ ಎಂಬುದು ಗೊತ್ತಾಗಿದೆ. ನಂತರದ ಸ್ಥಾನದಲ್ಲಿ ಉತ್ತರ ಪ್ರದೇಶ, ಕೇರಳ, ತಮಿಳುನಾಡು ಮತ್ತು ಪಂಜಾಬ್ ರಾಜ್ಯಗಳಿವೆ. ದೇಶದಲ್ಲಿ ಅಂದಾಜು 2.15 ಕೋಟಿ ಹಳೆಯ ವಾಹನಗಳಿವೆ.

Karnataka has more vehicles older than 20 years says minister
Author
Bengaluru, First Published Aug 3, 2021, 3:52 PM IST

ದೇಶದಲ್ಲೇ ರಾಜ್ಯದಲ್ಲಿ ಅತಿ ಹೆಚ್ಚು ಹಳೆಯ ವಾಹನಗಳು ಎಲ್ಲಿ ಓಡುತ್ತಿವೆ ಎಂಬ ಪ್ರಶ್ನೆಗೆ ಉತ್ತರ ಕರ್ನಾಟಕ ಮತ್ತು ದಿಲ್ಲಿ ಎಂದು ಹೇಳಬಹುದು. ನಿಜ, ಕೇಂದ್ರ ಸರಕಾರದ ಅಂಕಿಸಂಖ್ಯೆಗಳ ಪ್ರಕಾರ, ನಮ್ಮ ರಾಜ್ಯದಲ್ಲಿ 20 ವರ್ಷಕ್ಕೂ ಮೇಲ್ಪಟ್ಟ ಅವಧಿಯ ವಾಹನಗಳ ಸಂಖ್ಯೆ ತುಂಬಾ ಇದೆ. ಇದೇ ಸ್ಥಿತಿ ದಿಲ್ಲಿಯಲ್ಲೂ ಇದೆ.

ಸಂಸತ್ ಅಧಿವೇಶನ ನಡೆಯುತ್ತಿದ್ದು, ಪರಿಸರ ಇಲಾಖೆಯ ರಾಜ್ಯ ಸಚಿವ ಅಶ್ವಿನಿ ಚೌಬೇ ಸಂಸತ್ತಿಗೆ ನೀಡಿರುವ ಉತ್ತರದಲ್ಲಿ ಈ ಮಾಹಿತಿ ಒದಗಿಸಲಾಗಿದೆ. ಸಚಿವರು ನೀಡಿರುವ ಉತ್ತರದಲ್ಲಿ, ಕರ್ನಾಟಕ ಮತ್ತು ದಿಲ್ಲಿ ರಾಜ್ಯಗಳಲ್ಲಿ 75 ಲಕ್ಷಕ್ಕೂ ಅಧಿಕ ವಾಹನಗಳು 20 ವರ್ಷ ಅಥವಾ ಅದಕ್ಕಿಂತ ಮೇಲ್ಪಟ್ಟ ಹಳೆಯ ವಾಹನಗಳಿವೆ ಎಂದು ತಿಳಿಸಲಾಗಿದೆ.

ಅದೇ ವೇಳೆ, ಒಟ್ಟು ದೇಶದ ಸ್ಥಿತಿ ಗತಿಯನ್ನು ಗಣನೆಗೆ ತೆಗೆದುಕೊಂಡರೆ ಒಟ್ಟು 2.15 ಕೋಟಿ ವಾಹನಗಳು 20 ವರ್ಷಕ್ಕಿಂತ ಮೇಲ್ಪಟ್ಟ ವಾಹನಗಳು ಓಡುತ್ತಿವೆ. ಹಾಗಾಗಿ, ಸದ್ಯ ವಾಹನಗಳ ಸಂಖ್ಯೆಗೆ ಹೋಲಿಸಿದರೆ, ದೇಶದಲ್ಲಿ ಹಳೆಯ ವಾಹನಗಳ ಕಾರುಬಾರು ಜೋರಾಗಿಯೇ ಇದೆ ಎಂದು ಹೇಳಬಹುದು.

ಎಥೆನಾಲ್, ಎಲೆಕ್ಟ್ರಿಕ್ ವಾಹನ ಆಯ್ತು, ಈಗ ಗ್ರೀನ್ ಹೈಡ್ರೋಜನ್ ಇಂಧನ

ಸಚಿವರ ಹಂಚಿಕೊಂಡಿರುವ ಮಾಹಿತಿಯಲ್ಲಿ ಕರ್ನಾಟಕದಲ್ಲಿ 39.38 ಲಕ್ಷ ವಾಹನಗಳು 20 ವರ್ಷಕ್ಕಿಂತ ಮೇಲ್ಟಟ್ಟದ್ದಾಗಿದ್ದರೆ, ಈ ಪ್ರಮಾಣ ದಿಲ್ಲಿಯಲ್ಲಿ 36.14 ಲಕ್ಷವಿದೆ. ನಂತರದ ಸ್ಥಾನದಲ್ಲಿ ಅತಿದೊಡ್ಡ ರಾಜ್ಯ ಎನಿಸಿಕೊಂಡಿರುವ ಉತ್ತರ ಪ್ರದೇಶವಿದೆ. ಈ ರಾಜ್ಯದಲ್ಲಿ ಒಟ್ಟು  26.20 ಲಕ್ಷ ವಾಹನಗಳು 20 ವರ್ಷ ಅಥವಾ ಅದಕ್ಕಿಂತ ಹಳೆಯ ವಾಹನಗಳು ಓಡುತ್ತಿವೆ. 

ಕರ್ನಾಟಕ, ದಿಲ್ಲಿ ಮತ್ತು ಉತ್ತರ ಪ್ರದೇಶ ಮಾತ್ರವಲ್ಲದೇ, ದಕ್ಷಿಣ ಭಾರತದ ಕೇರಳ, ತಮಿಳುನಾಡು ರಾಜ್ಯಗಳಲ್ಲೂ ಅತಿ ಹೆಚ್ಚಿನ ಹಳೆಯ ವಾಹನಗಳಿವೆ. ಕೇರಳದಲ್ಲಿ 20 ವರ್ಷಕ್ಕಿಂತ ಹಳೆಯ ವಾಹನಗಳ ಸಂಖ್ಯೆ 20.67 ಲಕ್ಷ. ಅದೇ ರೀತಿ, ತಮಿಳುನಾಡಿನಲ್ಲಿ 15.99 ಲಕ್ಷ ವಾಹನಗಳು 20 ವರ್ಷಗಳನ್ನು ಪೂರೈಸಿವೆ.

ಕೇರಳ ಮತ್ತು ತಮಿಳುನಾಡು ನಂತರದ ಸ್ಥಾನದಲ್ಲಿ ಪಂಜಾಬ್ ರಾಜ್ಯವಿದೆ. ಸಚಿವರು ನೀಡಿರುವ ಮಾಹಿತಿಯ ಪ್ರಕಾರ, ಪಂಜಾಬ್‌ನಲ್ಲಿ 14.32 ಲಕ್ಷ ವಾಹನಗಳ 20 ವರ್ಷವನ್ನು ಮೀರಿವೆ. 

ಬೆನೆಲಿ 502c ಬೈಕ್ ಬಿಡುಗಡೆ, ಬೆಲೆ ಎಷ್ಟು, ಏನೆಲ್ಲ ವಿಶೇಷತೆಗಳಿವೆ?

ಈ ಪಟ್ಟಿಗೆ ಆಂಧ್ರಪ್ರದೇಶ, ಮಧ್ಯಪ್ರದೇಶ, ತೆಲಂಗಾಣ ಮತ್ತು ಲಕ್ಷದ್ವೀಪ ರಾಜ್ಯಗಳನ್ನು ಸೇರಿಸಿಲ್ಲ. ಈ ರಾಜ್ಯಗಳು ಕೇಂದ್ರೀಕೃತ ವಾಹನ 4 ಪೋರ್ಟಲ್‌ನಲ್ಲಿ ನೋಂದಣಿ ಮಾಡಿಕೊಂಡಿಲ್ಲ. ಹಾಗಾಗಿ, ಈ ರಾಜ್ಯಗಳ ಮಾಹಿತಿ ದೊರಕದ್ದರಿಂದ ಈ ಪಟ್ಟಿಗೆ ಸೇರಿಸಲಾಗಿಲ್ಲ ಎಂದು ಸಚಿವರು ಸಂಸತ್ತಿಗೆ ತಿಳಿಸಿದ್ದಾರೆ. 

ದೇಶದ ಇನ್ನೂ ಹಲವು ರಾಜ್ಯಗಳಲ್ಲಿ 20 ವರ್ಷಕ್ಕಿಂತ ಮೇಲ್ಪಟ್ಟ ವಾಹನಗಳು ಕಾರ್ಯಾಚರಣೆ ನಡೆಸುತ್ತಿರುವದು ಕಳವಳಕಾರಿಯಾಗಿದೆ. ಇದು ಪ್ರಯಾಣಿಕರ ಸುರಕ್ಷತೆ ಮತ್ತು ಪರಿಸರ ಮಾಲಿನ್ಯ ವಿಷಯದಲ್ಲೂ ಹಿನ್ನಡೆಗೆ ಕಾರಣವಾಗಲಿದೆ. 

ದಿಲ್ಲಿಯಲ್ಲಂತೂ ಇದು ಆತಂಕದ ಸಂಗತಿಯೇ ಆಗಿದೆ. ಯಾಕೆಂದರೆ, ದಿಲ್ಲಿಯಲ್ಲಿ ಪರಿಸರ ಮಾಲಿನ್ಯ ನಿಯಂತ್ರಣಕ್ಕಾಗಿ ಹಳೆಯ ವಾಹನಗಳ ಮೇಲೆ ಸುಪ್ರೀಂ ಕೋರ್ಟ್ ಗದಾಪ್ರಹಾರವೇ ಮಾಡಿದೆ. ಮೂರು ವರ್ಷಗಳ ಹಿಂದೆ ಸುಪ್ರೀಂ ಕೋರ್ಟ್, ನೋಂದಣಿಯಾಗಿರುವ 10 ವರ್ಷಕ್ಕಿಂತ ಹಳೆಯ ಡಿಸೇಲ್ ವಾಹನಗಳು ಮತ್ತು 15 ವರ್ಷಕ್ಕಿಂತ ಹಳೆಯ ಪೆಟ್ರೋಲ್ ವಾಹನಗಳು ರಾಜಧಾನಿಯಲ್ಲಿ ಕಾರ್ಯಾಚರಣೆ ನಡೆಸುವಂತಿಲ್ಲ ಎಂದು ಹೇಳಿತ್ತು.  ಆದರೆ, ಈಗ ಹೊರ ಬಂದಿರುವ ಮಾಹಿತಿಯ ಸುಪ್ರೀಂ ಕೋರ್ಟ್‌ನ ತೀರ್ಪಿನ ಹಿನ್ನೆಲೆಯಲ್ಲಿ ಭಾರಿ ಮಹತ್ವದ ಪಡೆದುಕೊಳ್ಳುವ ಸಾಧ್ಯತೆ ಇದೆ. 

250 ಕೆಜಿ ಭಾರ ಹೊತ್ತೊಯ್ಯಬಲ್ಲ ಜಿಪ್ ಕಾರ್ಗೊ ಎಲೆಕ್ಟ್ರಿಕ್ ಸ್ಕೂಟರ್!

ಇದೇ ವೇಳೆ, ದೇಶದ ಕೆಲವು ರಾಜ್ಯಗಳಲ್ಲಿ ಹಳೆಯ ವಾಹನಗಳು ಕಾರ್ಯಾಚರಣೆ ನಡೆಸುತ್ತಿರುವುದು ನಿಜವಾದರೂ ಆ ವಾಹನಗಳು ವಾಯುಮಾಲಿನ್ಯಕ್ಕೆ ಕಾರಣವಾಗುತ್ತಿಲ್ಲ. ಹಾಗೆಯೇ, ಈ ವಾಹನಗಳಿಂದ ಎಷ್ಟರಮಟ್ಟಿಗೆ ಮಾಲಿನ್ಯ ವಾಗಲಿದೆ ಎಂಬುದುನ್ನು ನಿರ್ಧರಿಸುವ ಅಗತ್ಯವಿದೆ ಎಂದು ಸಚಿವರು ಸಂಸತ್ತಿಗೆ ತಿಳಿಸಿದ್ದಾರೆ.

Follow Us:
Download App:
  • android
  • ios