Asianet Suvarna News Asianet Suvarna News

ಎಥೆನಾಲ್, ಎಲೆಕ್ಟ್ರಿಕ್ ವಾಹನ ಆಯ್ತು, ಈಗ ಗ್ರೀನ್ ಹೈಡ್ರೋಜನ್ ಇಂಧನ

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಗ್ರೀನ್ ಹೈಡ್ರೋಜನ್ ಇಂಧನ ಬಳಕೆಯ  ಸಾಧ್ಯತೆಗಳ ಬಗ್ಗೆ ಪರಿಶೀಲಿಸುತ್ತಿದೆ. ಈ ಬಗ್ಗೆ ಸಚಿವ ನಿತಿನ್ ಗಡ್ಕರಿ ಅವರು ಸುಳಿವು ಬಿಟ್ಟುಕೊಟ್ಟಿದ್ದಾರೆ. ಗ್ರೀನ್ ಹೈಡ್ರೋಜನ್ ಬಳಕೆಯಿಂದ ಸಾಂಪ್ರದಾಯಿಕ ಇಂಧನ ಮೇಲಿನ ಅವಲಂಬನೆ ಕಡಿಮೆಯಾಗುವುದರ ಜೊತೆಗೆ ಪರಿಸರ ಸಂರಕ್ಷಣೆಯೂ ಆಗಲಿದೆ.

Central government is considering green hydrogen is as fuel
Author
Bengaluru, First Published Jul 30, 2021, 1:12 PM IST

ಹೆಚ್ಚುತ್ತಿರುವ ಪೆಟ್ರೋಲ್ ಮತ್ತು ಡೀಸೆಲ್ ಬೇಡಿಕೆಯನ್ನು ತಗ್ಗಿಸುವುದು ಮತ್ತು ಪರಿಸರ ಸಂರಕ್ಷಣೆ ಸಂಬಂಧ ಕೇಂದ್ರ ಸರಕಾರವು, ಸಾಂಪ್ರದಾಯಿಕ ಇಂಧನಕ್ಕೆ ಪರ್ಯಾಯ ಮಾರ್ಗಗಳನ್ನು ಶೋಧಿಸುತ್ತಲೇ  ಇದೆ. ಈಗಾಗಲೇ ಎಲೆಕ್ಟ್ರಿಕ್ ವಾಹನಗಳು, ಎಥೆನಾಲ್ ಮಿಶ್ರಿತ ಇಂಧನ ಬಳಕೆಗೆ ಹೆಚ್ಚಿನ ಆದ್ಯತೆಯನ್ನು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ನೀಡುತ್ತಿವೆ.

ಸಾಂಪ್ರದಾಯಿಕ ಇಂಧನಕ್ಕೆ ಪರ್ಯಾಯವಾಗಿ ಕೇಂದ್ರ ಸರ್ಕಾರವು ಗ್ರೀನ್ ಹೈಡ್ರೋಜನ್ ಇಂಧನವನ್ನು ಜನಪ್ರಿಯಗೊಳಿಸುವ ಸಂಬಂಧ ಚಿಂತನೆ ನಡೆಸಿದೆ. ಭಾರತೀಯ ರಸ್ತೆಗಳಲ್ಲಿ ಓಡಾಡುವ ವಾಹನಗಳಿಗೆ ಗ್ರೀನ್ ಹೈಡ್ರೋಜನ್ ಅನ್ನು ಇಂಧನವಾಗಿ ಬಳಸುವ ಅವಕಾಶವನ್ನು ಸೃಷ್ಟಿಸಿಕೊಳ್ಳುತ್ತಿದೆ ಕೇಂದ್ರ ಸರ್ಕಾರ.

ಎಲೆಕ್ಟ್ರಿಕ್ ದ್ವಿಚಕ್ರವಾಹನ ಖರೀದಿಸಿದರೆ ಸ್ಟೇಟ್ GST ರಿಫಂಡ್!

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಇಲಾಖೆಯ ಸಚಿವ ನಿತಿನ್ ಗಡ್ಕರಿ ಅವರು ಗ್ರೀನ್ ಹೈಡ್ರೋಜನ್ ಅನ್ನು ಇಂಧನವಾಗಿ ಬಳಸುವ ಸಂಬಂಧ ತೀವ್ರ ಆಸಕ್ತರಾಗಿದ್ದರೆ. ಭಾರತದ ಹವಾಮಾನ ಗುರಿಗಳನ್ನು ಸಾಧಿಸುವ ಪ್ರಯತ್ನದಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಪರ್ಯಾಯವಾಗಿ ಕಾರ್ಯನಿರ್ವಹಿಸಲು ಸಂಭಾವ್ಯ ಸಾರಿಗೆ ಇಂಧನವಾಗಿ ಗ್ರೀನ್ ಹೈಡ್ರೋಜನ್ ಬಗ್ಗೆ ತಮ್ಮ ಸಚಿವಾಲಯ ಗಂಭೀರವಾಗಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿಕೊಂಡಿದ್ದಾರೆ.

ಸಾಂಪ್ರದಾಯಿಕ ಇಂಧನಕ್ಕೆ ಪರ್ಯಾಯ ಇಂಧನ ಹಾಗೂ ಎಲೆಕ್ಟ್ರಿಕ್ ವಾಹನಗಳ ಬಳಕೆಯ ಅಗತ್ಯತೆಯನ್ನು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಮೊದಲಿನಿಂದಲೂ ಹೇಳುತ್ತಾ ಬಂದಿದ್ದಾರೆ. ಗ್ರೀನ್ ಹೈಡ್ರೋಜನ್ ಪ್ರಚುರಪಡಿಸುವ ಸಂಬಂಧ ಎಲೆಕ್ಟ್ರಿಕ್ ವಾಹನಗಳಿಗೆ ನೀಡುವಂತೆ ಒಂದಿಷ್ಟು ರಿಯಾಯ್ತಿಯನ್ನು ಹೈಡ್ರೋಜನ್ ಆಧರಿತ ಕಾರುಗಳ ಖರೀದಿಗೂ ನೀಡುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ. ಆ ಮೂಲಕ ಪರ್ಯಾಯ ಇಂಧನ ಬಳಕೆ ಹಾಗೂ ಭಾರತ ಇಟ್ಟುಕೊಂಡಿರುವ ಹವಾಮಾನ ಗುರಿಗಳನ್ನು ಈಡೇರಿಸಿಕೊಳ್ಳುವುದಾಗಿದೆ.

ಹೈಡ್ರೋಜನ್ ಮತ್ತು ಗ್ಯಾಸ್ ಬೇಸ್ಡ್ ಮೊಬಿಲಿಟಿ ಸಂಬಂಧ ಸಮಾವೇಶವೊಂದರಲ್ಲಿ ಮಾತನಾಡಿದ ಅವರು, ನಾವು ಗ್ರೀನ್ ಹೈಡ್ರೋಜನ್ ಬಗ್ಗೆ ಸಂಭಾವ್ಯ ಸಾರಿಗೆ ಇಂಧನವಾಗಿ ನಿರೀಕ್ಷಿಸುತ್ತಿದ್ದೇವೆ. ಎಲೆಕ್ಟ್ರಿಕ್ ವಾಹನಗಳಿಗೆ ನಾವು ಯಾವ ರೀತಿಯ ರಿಯಾಯ್ತಿಗಳನ್ನು ನೀಡುತ್ತೇವೆಯೋ, ನಾವು ಗ್ರೀನ್ ಹೈಡ್ರೋಜನ್‌ಗೂ ಅದೇ ರೀತಿಯ ಅದೇ ರೀತಿಯ ರಿಯಾಯ್ತಿಗಳನ್ನು ನೀಡಬಹುದು ಎಂದು ತಿಳಿಸಿದ್ದಾರೆ.

250 ಕೆಜಿ ಭಾರ ಹೊತ್ತೊಯ್ಯಬಲ್ಲ ಜಿಪ್ ಕಾರ್ಗೊ ಎಲೆಕ್ಟ್ರಿಕ್ ಸ್ಕೂಟರ್

ಒಂದು ವೇಳೆ,  ಭಾರತದಲ್ಲಿ ಗ್ರೀನ್ ಹೈಡ್ರೋಜನ್ ಇಂಧನ ಸಾಧ್ಯವಾದರೆ ಅದು ಒಟ್ಟಾರೆ ಇಂಧನ ಬಳಕೆಯ ಮೇಲೆ ಭಾರೀ ಪರಿಣಾಮ ಬೀರಲಿದೆ. ಈಗಾಗಲೇ ಸರ್ಕಾರವು ಇಂಧನ ಜತೆ ಎಥೆನಾಲ್ ಮಿಶ್ರಣ ಮಾಡುವ ಬಗ್ಗೆ ಕೇಂದ್ರ ಸರ್ಕಾರವು ಮೊದಲನೇ ಕರಡು ಅಧಿಸೂಚನೆಯನ್ನು ಹೊರಡಿಸಿದೆ. ಒಂದು ವೇಳೆ, ಗ್ರೀನ್ ಹೈಡ್ರೋಜನ್‌ ಕೂಡ ಸ್ಥಾನವನ್ನು ಪಡೆದುಕೊಂಡರೆ, ಎಥೆನಾಲ್ ಬಳಿಕ ಎರಡನೇ ಪರ್ಯಾಯ ಇಂಧನ ಸ್ಥಾನವನ್ನು ಗ್ರೀನ್ ಹೈಡ್ರೋಜನ್ ತುಂಬಲಿದೆ ಎಂದು ವಿಶ್ಲೇಷಿಸಬಹುದು.

ಪೆಟ್ರೋಲ್‌ಗೆ ಎಥೆನಾಲ್ ಮಿಶ್ರಣ ಮಾಡುವುದರಿಂದಲೇ ಇಂಧನ ತುಟ್ಟಿಯನ್ನ ತಗ್ಗಿಸಬಹುದಾಗಿದೆ. ಈಗಾಗಲೇ 100 ಗಡಿ ದಾಟಿರುವ ಪೆಟ್ರೋಲ್ ದರವನ್ನು ಈ ಎಥೆನಾಲ್ ಬಳಕೆಯಿಂದ ತಗ್ಗಿಸಬಹುದು. ಕರಡು ಅಧಿಸೂಚನೆಯ ಪ್ರಕಾರ, ಆಟೋಮೆಟಿವ್ ಫ್ಯುಯೆಲ್ ಆಗಿ ಪೆಟ್ರೋಲ್‌ನಲ್ಲಿ ಶೇ.12 ಮತ್ತು ಶೇ.15ರಷ್ಟು ಎಥೆನಾಲ್ ‌ಮಿಶ್ರಣ ಮಾಡಲು ಅವಕಾಶ ನೀಡಬಹುದು ಎಂದು ಹೇಳಲಾಗಿದೆ. ಎಥೆನಾಲ್ ಮಿಶ್ರಣದಿಂದ ವಾಹನಗಳಿಂದ ಉಂಟಾಗುವ ಮಾಲಿನ್ಯವನ್ನು ತಡೆಗಟ್ಟಬಹುದು. ಹೆಚ್ಚುತ್ತಿರುವ ಇಂಧನ ಬೆಲೆಗಳನ್ನು ನಿಯಂತ್ರಿಸಬಹುದು.

ಮತ್ತೊಂದೆಡೆ, ಪ್ಯಾರಿಸ್ ಒಪ್ಪಂದದ ಪ್ರಕಾರ ಭಾರತವು 2030ರ ಹೊತ್ತಿಗೆ ಹೊರ ಸೂಸುವ ಇಂಗಾಲ ಪ್ರಮಾಣವನ್ನು ಶೇ.33ರಿಂದ 35ರಷ್ಟು ಕಡಿಮೆ ಮಾಡುವ ಗುರಿಯನ್ನು ಹಾಕಿಕೊಂಡಿದೆ. ಜೊತೆಗೆ, 2050ರ ಹೊತ್ತಿಗೆ ಹೊರಸೂಸುವ ಇಂಗಾಲ ಪ್ರಮಾಣವನ್ನು ಶೂನ್ಯಕ್ಕೆ ಇಳಿಸುವ ಗುರಿಯನ್ನೂ ಭಾರತ ಹಾಕಿಕೊಂಡಿದೆ.

ಬೆನೆಲಿ 502c ಬೈಕ್ ಬಿಡುಗಡೆ, ಬೆಲೆ ಎಷ್ಟು, ಏನೆಲ್ಲ ವಿಶೇಷತೆಗಳಿವೆ?

ಈ ದಿಸೆಯಲ್ಲಿ ಕೇಂದ್ರ ಸರ್ಕಾರ ಈಗಾಗಲೇ ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಿವೆ. ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆ ಮತ್ತು ಬಳಕೆಗೆ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಅದೇ ರೀತಿ, ಎಥೆನಾಲ್ ಮಿಶ್ರಿತ ಇಂಧನ ಬಳಕೆಗೂ ಆದ್ಯತೆ ನೀಡಲಾಗುತ್ತಿದೆ.

Follow Us:
Download App:
  • android
  • ios