Asianet Suvarna News Asianet Suvarna News

250 ಕೆಜಿ ಭಾರ ಹೊತ್ತೊಯ್ಯಬಲ್ಲ ಜಿಪ್ ಕಾರ್ಗೊ ಎಲೆಕ್ಟ್ರಿಕ್ ಸ್ಕೂಟರ್!

ಭಾರತದಲ್ಲೀಗ ಎಲೆಕ್ಟ್ರಿಕ್ ಕಾರ್ಗೋ ದ್ವಿಚಕ್ರವಾಹನಗಳಿಗೂ ಬೇಡಿಕೆ ಸೃಷ್ಟಿಯಾಗುತ್ತಿದೆ. ಈ ಅವಕಾಶವನ್ನು ಬಳಸಿಕೊಳ್ಳಲು ಮುಂದಾಗಿರುವ ಜಿಪ್ ಎಲೆಕ್ಟ್ರಿಕ್, ಬಿ2ಬಿ ಉದ್ದೇಶಕ್ಕಾಗಿ ನಿರ್ಮಾಣವಾಗಿರುವ ಜಿಪ್ ಕಾರ್ಗೋ ಎಲೆಕ್ಟ್ರಿಕ್ ದ್ವಿಚಕ್ರವಾಹನವನ್ನು ಪರಿಚಯಿಸುತ್ತಿದೆ. ಎರಡು ವೆರಿಯೆಂಟ್‌ಗಳಲ್ಲಿ ಈ ಸ್ಕೂಟರ್ ಮಾರಾಟಕ್ಕೆ ಸಿಗಲಿದೆ. ಹಲವು ಅತ್ಯಾಧುನಿಕ ಫೀಚರ್‌ಗಳನ್ನು ಈ ಸ್ಕೂಟರ್‌ಗಳು ಹೊಂದಿವೆ.

Zypp electric to launch its new cargo scooter- Zypp Cargo
Author
Bengaluru, First Published Jul 23, 2021, 12:42 PM IST

ಭಾರತೀಯ ಆಟೋಮೊಬೈಲ್ ಮಾರುಕಟ್ಟೆಯಲ್ಲೀಗ ಸಂಚಲನ ಶುರುವಾಗಿದೆ. ವಿಶೇಷವಾಗಿ ಎಲೆಕ್ಟ್ರಿಕ್ ವಾಹನ ಮಾರುಕಟ್ಟೆ ಭಾರೀ ವೇಗವಾಗ ವರ್ಧಿತವಾಗುತ್ತಿದೆ. ಅದರಲ್ಲೂ ಎಲೆಕ್ಟ್ರಿಕ್ ದ್ವಿಚಕ್ರವಾಹನಗಳಿಗೆ ಎಲ್ಲಿಲ್ಲದ ಬೇಡಿಕೆ ಸೃಷ್ಟಿಯಾಗುತ್ತಿದೆ. ಅದರ ಪರಿಣಾಮ ಹಲವು ಕಂಪನಿಗಳು ಎಲೆಕ್ಟ್ರಿಕ್ ದ್ವಿಚಕ್ರವಾಹನಗಳನ್ನು, ಸ್ಕೂಟರ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿವೆ. ಈ ಸಾಲಿಗೆ ಜಿಪ್ ಎಲೆಕ್ಟ್ರಿಕ್ ಕಂಪನಿಯ ಸ್ಕೂಟರ್‌ ಸೇರ್ಪಡೆಯಾಗುತ್ತಿದೆ.

ಎಲೆಕ್ಟ್ರಿಕ್ ದ್ವಿಚಕ್ರವಾಹನ ಖರೀದಿಸಿದರೆ ಸ್ಟೇಟ್ GST ರಿಫಂಡ್!

ಭಾರತದಲ್ಲೇ ಮೊದಲ ಬಾರಿಗೆ ಬಿ2ಬಿ(ಬಿಸಿನೆಸ್ 2 ಬಿಸಿನೆಸ್) ಹೆವಿ ಎಲೆಕ್ಟ್ರಿಕ್ ಸ್ಕೂಟರ್ ಜಿಪ್ ಕಾರ್ಗೊ ಅನ್ನು ಲಾಂಚ್ ಮಾಡಲಾಗುವುದು ಎಂದು ಜಿಪ್ ಎಲೆಕ್ಟ್ರಿಕ್ ಕಂಪನಿ ಘೋಷಿಸಿದೆ. ಜಿಪ್ ಕಾರ್ಗೋ ಎರಡು ಬ್ಯಾಟರಿ ವೆರಿಯೆಂಟ್‌ಗಳಲ್ಲಿ ದೊರೆಯಲಿದೆ. ಸಿಂಗಲ್ ಬ್ಯಾಟರಿ ಜಿಪ್ ಕಾರ್ಗೋ ಬೆಲೆ ಅಂದಾಜು 59,000 ರೂಪಾಯಿ ಇದ್ದರೆ, ಡಬಲ್ ಬ್ಯಾಟರಿಗಳನ್ನು ಹೊಂದಿರುವ ಜಿಪ್ ಕಾರ್ಗೋ ಸ್ಕೂಟರ್ ಬೆಲೆ 74,000 ಇರಲಿದೆ. ಈ ಎರಡೂ ಬೆಲೆಯು ಎಕ್ಸ್‌ಶೋರೂಮ್ ಬೆಲೆಯಾಗಿದ್ದು, ಆನ್‌ರೋಡ್ ಪ್ರೈಸ್ ಇನ್ನೂ ಹೆಚ್ಚಾಗಬಹುದು ಮತ್ತು ಅದು ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿರುತ್ತದೆ. 

ವಸ್ತುಗಳ ಹಂಚಿಕೆಯ ಕೊನೆಯ ಹಂತದಲ್ಲಿ(ಲಾಸ್ಟ್ ಮೈಲ್ ಲಾಜಿಸ್ಟಿಕ್ಸ್) ನೆರವಾಗುವ ದೃಷ್ಟಿಯಿಂದಲೇ ಈ ಸ್ಕೂಟರ್‌ಗಳನ್ನು ವಿಶೇಷವಾಗಿ ನಿರ್ಮಾಣ ಮಾಡಲಾಗಿದೆ. 40ಎಎಚ್ ಬ್ಯಾಟರಿ ಹೊಂದಿರುವ ಸ್ಕೂಟರ್ 250 ಕೆ.ಜಿ ಭಾರವನ್ನು ಹೊತ್ತೊಯ್ಯಬಲ್ಲದು. ಹಾಗೆಯೇ, ಒಮ್ಮೆ ಚಾರ್ಜಿಂಗ್ ಮಾಡಿದರೆ ಈ ಸ್ಕೂಟರ್ 120 ಕಿ.ಮೀ.ವರೆಗೂ ಓಡುತ್ತದೆ. 

ಜಿಪ್ ಕಾರ್ಗೋ ಎಲೆಕ್ಟ್ರಿಕ್ ಕಾರ್ಗೋ ಸ್ಕೂಟರ್ ಬದಲಾಯಿಸಬಹುದಾದ ಬ್ಯಾಟರಿಗಳನ್ನು ಹೊಂದಿರಲಿದೆ ಮತ್ತು ಅದರ ವಾಹನಗಳಿಗೆ ಎರಡು ಬ್ಯಾಟರಿ ವ್ಯವಸ್ಥೆಯನ್ನು ಬೆಂಬಲಿಸುತ್ತದೆ ಮತ್ತು ಆರಂಭದಲ್ಲಿ ದೆಹಲಿ-ಎನ್‌ಸಿಆರ್ ಪ್ರದೇಶದಲ್ಲಿ ಮಾತ್ರವೇ ಈ ಸ್ಕೂಟರ್‌ಗಳು ಕಾರ್ಯನಿರ್ವಹಿಸಲಿವೆ. ಉಳಿದ ನಗರಗಳಲ್ಲಿ ಯಾವಾಗ ಇವುಗಳ ಬಳಕೆಯಾಗಲಿದೆ ಎಂಬ ಬಗ್ಗೆ ಕಂಪನಿಯು ಯಾವುದೇ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ. 

499 ರೂಪಾಯಿ ಕೊಟ್ಟು Ola Electric ಸ್ಕೂಟರ್ ಬುಕ್ ಮಾಡ್ಕೊಳ್ಳಿ!

ಮೂರು ವರ್ಷಗಳು ಸಂಪೂರ್ಣ ಸಮೀಕ್ಷೆ ನಡೆಸಿದ ಬಳಿಕವಷ್ಟೇ ಜಿಪ್ ಕಾರ್ಗೋ ಲಾಂಚ್ ಮಾಡುತ್ತಿರುವು ಬಗ್ಗೆ ನಮಗೆ ತುಂಬ ಸಂತೋಷವಿದೆ. ಬಿ2ಬಿಗೋಸ್ಕರವೇ ನಿರ್ಮಾಣವಾಗಿರುವ ಭಾರತದ ಮೊದಲ ಹೆವಿಡ್ಯೂಟಿ ಮತ್ತು ಇಂಟರ್ನೆಟ್ ಆಪ್ ಥಿಂಗ್ಸ್(ಐಒಟಿ) ಸಕ್ರಿಯ ಎಲೆಕ್ಟ್ರಿಕ ಸ್ಕೂಟರ್ ಜಿಪ್ ಕಾರ್ಗೋ ಇಂದು ನಮ್ಮ ಮುಂದಿದೆ. ಇದು ಸಂಪೂರ್ಣವಾಗಿ ಒಇಎಂ(ಒರಿಜಿನಲ್ ಇಕ್ವಿಪ್‌ಮೆಂಟ್ ಮ್ಯಾನುಫಾಕ್ಚರ್ಸ್)ವಾಗಿದ್ದು, ವೈವಿಧ್ಯಮಯ ಸರಕು ಅವಶ್ಯಕತೆಗಳಿಗೆ ಹೊಂದಿಕೊಳ್ಳುವ ವಿನ್ಯಾಸ ಸಂವೇದನೆಯೊಂದಿಗೆ ಇದು ಸುಲಭ ಸವಾರಿ ಅನುಭವವನ್ನು ನೀಡುತ್ತದೆ ಎಂದು ಜಿಪ್ ಎಲೆಕ್ಟ್ರಿಕ್ ಕಂಪನಿಯ ಸಹ ಸಂಸ್ಥಾಪಕ ಮತ್ತು ಸಿಇಒ ಆಕಾಶ್ ಗುಪ್ತಾ ತಿಳಿಸಿದ್ದಾರೆ.

ಜಿಪ್ ಕಾರ್ಗೋ ಹಲವು ವಿಶಿಷ್ಟವಾದ ಫೀಚರ್‌ಗಳನ್ನು ಒಳಗೊಂಡಿದೆ. ವರ್ಣಾಲಂಕೃತ ಡಿಸ್‌ಪ್ಲೇ ಪ್ಯಾನೆಲ್ಸ್, ಮೆಟಲ್ ಬಾಡಿ ವಿನ್ಯಾಸ, ಸಾಕಷ್ಟು ವಿಶಾಲವಾದ ಸ್ಟೋರೇಜ್, ಎರಡು ಸೀಟುಗಳು, ಕೃತಕ ಬುದ್ಧಿಮತ್ತೆ(ಎಐ) ಸಕ್ರಿಯ ಹಾಗೂ ಬ್ಯಾಟರಿ, ವೆಹಿಕಲ್ ಮತ್ತು ಡ್ರೈವರ್ ಟ್ರ್ಯಾಕ್ ಮಾಡಲು ಅನುಕೂಲವಾಗು ಐಒಟಿ ಫೀಚರ್‌ಗಳನ್ನು ಈ ಸ್ಕೂಟರ್ ಹೊಂದಿದೆ.
 

Zypp electric to launch its new cargo scooter- Zypp Cargo

ಇವುಗಳ ಜೊತೆಗೆ ಜಿಪ್ ಕಾರ್ಗೋ ಹೊಂದಿರುವ ಐಒಟಿ ವ್ಯವಸ್ಥೆಯನ್ನು ನೀವು ತುಂಬ ಸುಲಭವಾಗಿ ಲಾಜಿಸ್ಟಿಕ್ಸ್ ಪಾರ್ಟರ್ನರ್ಸ್, ಇ ಕಾಮರ್ಸ್ ಕಂಪನಿಗಳು ಮತ್ತು ಫುಡ್ ಡೆಲಿವರಿ ಕಾರ್ಯನಿರ್ವಾಹಕ ಕಂಪನಿಗಳ ಜತೆ ಸಂಪರ್ಕಿಸಬಹುದಾಗಿದೆ. ಇದರಿಂದಾಗಿ ರಿಯಲ್ ಟೈಮ್ ಡೇಟಾ ಪಡೆಯಲು ಸಾಧ್ಯವಾಗುತ್ತದೆ. ಪೂರೈಸಲಾದ ಅಂತರ, ಪಾರಾಮೀಟರ್‌ಗಳ ಬಳಕೆ, ಸರಾಸರಿ ಉಪಯೋಗ ಇತ್ಯಾದಿ ಮಾಹಿತಿಗಳನ್ನು ತಿಳಿಯಲು ನೆರವಾಗಲಿದೆ. ಈ ಹಿನ್ನೆಲೆಯಲ್ಲಿ ಅತ್ಯಾಧುನಿಕ ಫೀಚರ್‌ಗಳನ್ನು ಒಳಗೊಂಡಿರುವ ಈ ಜಿಪ್ ಕಾರ್ಗೋ ವಿಶಿಷ್ಟವಾಗಿದೆ.

ಬುಕ್ಕಿಂಗ್ ಆರಂಭವಾದ ಕೆಲವೇ ನಿಮಿಷದಲ್ಲಿ ಎಲ್ಲಾ ಸೋಲ್ಡೌಟ್, ಯಾವ ಬೈಕಿದು?

ಭಾರತಲ್ಲಿ ಈಗ ಎಲೆಕ್ಟ್ರಿಕ್ ದ್ವಿಚಕ್ರವಾಹನಗಳ ಅಬ್ಬರ ಶುರುವಾಗಿದೆ. ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆ ಮತ್ತು ಬಳಕೆಗೆ ಹೆಚ್ಚಿನ ಉತ್ತೇಜನ ನೀಡುವ ಕ್ರಮಗಳನ್ನು ಕೈಗೊಳ್ಳುತ್ತಿವೆ. ಪರಿಣಾಮ ಹಲವು ಕಂಪನಿಗಳು ಈ ವಲಯದಲ್ಲಿ ಹೆಚ್ಚಿನ ಹೂಡಿಕೆಯನ್ನು ಮಾಡುತ್ತಿವೆ. ಅವಕಾಶಗಳನ್ನು ಬಳಸಿಕೊಳ್ಳಲು ಮುಂದಾಗಿವೆ.

Follow Us:
Download App:
  • android
  • ios