ಭಾರತ ಲಾಕ್‌ಡೌನ್; ಕಾರಿಗೆ MLA ಸ್ಟಿಕ್ಕರ್ ಅಂಟಿಸಿ ಯುವಕನ ತಿರುಗಾಟ!
ಕೊರೋನಾ ವೈರಸ್ ಕಾರಣ ಭಾರತ ಲಾಕ್‌ಡೌನ್ ಆಗಿದೆ. ಜನರಲ್ಲಿ ಮನೆಯಲ್ಲೇ ಇರಲು ಮನವಿ ಮಾಡಲಾಗಿದೆ. ಅನಗತ್ಯವಾಗಿ ತಿರುಗಾಡಬೇಡಿ ಎಂದು ಅದೆಷ್ಟೇ ಮನವಿ ಮಾಡಿದರೂ ಜನರೂ ಕೇಳುತ್ತಿಲ್ಲ. ಮನೆಯಿಂದ ಹೊರಬಂದು ತಿರುಗಾಡುತಲೇ ಇದ್ದಾರೆ. ಪೊಲೀಸರು ಲಾಠಿ ಚಾರ್ಚ್, ಫೈನ್ ಎಲ್ಲಾ ಪ್ರಯೋಗ ಮಾಡಿದರೂ ಜನರು ಅರ್ಥ ಮಾಡಿಕೊಳ್ಳುತ್ತಿಲ್ಲ. ಇದೀಗ ಕೆಲವರು ಹೊಸ ಉಪಾಯ ಮಾಡಿದ್ದಾರೆ.
ಹರ್ಯಾಣ(ಏ.05): ಲಾಕ್‌ಡೌನ್ ವೇಳೆ ಕೆಲ ಕಂಪನಿಗಳು ಕಾರ್ಯನಿರ್ವಹಿಸುತ್ತಿದೆ. ಇದಕ್ಕಾಗಿ ಕಂಪನಿಗಳು ಪೊಲೀಸರಿಂದ ಅನುಮತಿಯನ್ನು ಪಡೆದುಕೊಂಡಿದೆ. ಇನ್ನು ಹಾಲು, ತರಕಾರಿ ಸೇರಿದಂತೆ ಅಗತ್ಯ ವಸ್ತುಗಳ ವಾಹನಗಳು ಸ್ಟಿಕ್ಕರ್ ಅಂಟಿಸಿ ಸೇವೆ ನೀಡುತ್ತಿದೆ. ಇತ್ತ ಮನೆಯಲ್ಲಿರಲು ಸಾಧ್ಯವಾಗದ ಕೆಲವರು ವಾಹನ ಏರಿ ಓಡಾಟ ಆರಂಭಿಸಿದ್ದಾರೆ. ಪೊಲೀಸರು ಅಡ್ಡ ಹಾಕುವುದನ್ನು ತಪ್ಪಿಸಲು ತಮ್ಮ ವಾಹನಕ್ಕೆ ಆನ್ ಡ್ಯೂಟಿ, ಎರ್ಜಜೆನ್ಸಿ ಸ್ಟಿಕ್ಕರ್ ಅಂಟಿಸಿ ತಿರುಗಾಡುತ್ತಿದ್ದಾರೆ. ಹೀಗೆ ಯುವಕನೋರ್ವ ತನ್ನ ಕಾರಿಗೆ ಶಾಸಕನ ನಕಲಿ ಪಾಸ್ ಅಂಟಿಸಿ ತಿರುಗಾಡುತ್ತಿರುವ ಘಟನೆ ನಡೆದಿದೆ.
ಲಾಕ್‌ಡೌನ್ ದಿನ ಹೊಸ ಕಾರಿನಲ್ಲಿ ಜಾಲಿ ಡ್ರೈವ್; ಪೊಲೀಸ್ರಿಂದ ತಪ್ಪಿಸಿಕೊಂಡವನಿಗೆ ಜನರಿಂದ ಪಂಚಕಜ್ಜಾಯ!..
ಹರ್ಯಾಣದ ಯುವಕ ತನ್ನ ಟೊಯೋಟಾ ಫಾರ್ಚುನರ್ ಕಾರಿಗೆ MLA ಸ್ಟಿಕ್ಕರ್ ಅಂಟಿಸಿದ್ದಾರೆ. ಬಳಿಕ ಲಾಕ್‌ಡೌನ್ ಆರಂಭವಾದ ದಿನದಿಂದ ಓಡಾಟ ಶುರುಮಾಡಿದ್ದಾನೆ. ಲಾಕ್‌ಡೌನ್ ಕಾರಣ ರಸ್ತೆಗಳೆಲ್ಲಾ ಖಾಲಿ ಖಾಲಿ. ಹೀಗಾಗಿ ಫಾರ್ಚುನರ್ ಕಾರು ಮೂಲಕ ಲಾಂಗ್ ಡ್ರೈವ್ ಸೇರಿದಂತೆ ಮೋಜು ಮಸ್ತಿಗೆ ಇಳಿದಿದ್ದಾನೆ. ಕೆಲವೆಡೆ MLA ಕಾರು ಎಂದು ಮುಂದೆ ಸಾಗಲು ಅನುವು ಮಾಡಿಕೊಟ್ಟಿದ್ದಾರೆ.
ದೆಹಲಿ ಸಹರಾನ್ಪುರ್ ಮುಖ್ಯರಸ್ತೆಯಲ್ಲಿ ಸಂಚರಿಸುವಾಗ ಪೊಲೀಸರು ನಿಲ್ಲಿಸಿ ಯುವಕನನ್ನು ಪ್ರಶ್ನಿಸಿದ್ದಾರೆ. ಈ ವೇಳೆ ಯುವಕ ಉತ್ತರಿಸಲು ತಡಬಡಾಯಿಸಿದ್ದಾನೆ. ಇದು ಯಾವ MLA ಕಾರು, ಅವರಿಗೆ ಫೋನ್ ಮಾಡಿ, ಇಲ್ಲಾ ಅವರ ಹೆಸರು ಹೇಳಿ ನಾವೇ ಫೋನ್ ಮಾಡುತ್ತೇವೆ ಎಂದಿದ್ದಾರೆ. ಆದರೆ ಯುವಕನಿಂದ ಯಾವುದೇ ಉತ್ತರ ಬರಲಿಲ್ಲ. ಇತ್ತ ಪೊಲೀಸರು ಫಾರ್ಚುನರ್ ಕಾರಿನ ನಂಬರ್ ನಮೂದಿಸಿ, ಯಾರಾದರೂ MLA ಈ ನಂಬರಿನ ಕಾರು ಬಳಸುತ್ತಿದ್ದಾರೆ ಎಂದು ಪರೀಶಿಲಿಸಿದ್ದಾರೆ. ಈ ವೇಳೆ ಇದು ನಕಲಿ MLA ಪಾಸ್ ಎಂದು ದೃಢಪಟ್ಟಿದೆ.
ಲಾಕ್‌ಡೌನ್ ನಿಯಮ ಉಲ್ಲಂಘಿಸಿ ಮೊಮ್ಮಗನ ಜೊತೆ ರೋಡಿನಲ್ಲಿ ಜೆಡಿಎಸ್ ನಾಯಕನ ಆಟ!.
ಅನವಶ್ಯಕವಾಗಿ ತಿರುಗಾಟ, ಲಾಕ್‌ಡೌನ್ ಆದೇಶ ಉಲ್ಲಂಘನೆ, ಶಾಸಕರ ಹೆಸರಿನಲ್ಲಿ ವಂಚನೆ ಸೇರದಂತೆ ಕೆಲ ಕೇಸ್ ದಾಖಲಿಸಿ 10,500 ರೂಪಾಯಿ ದಂಡ ಹಾಕಿದ್ದಾರೆ. ಇದು ಮೊದಲ ಘಟನೆಯಲ್ಲಿ ಈ ರೀತಿ ಹಲವರು ಮಾಡುತ್ತಿದ್ದಾರೆ ಎಂದು ಹರ್ಯಾಣ ಸರ್ಪುರ್ ಪೊಲೀಸರು ಹೇಳಿದ್ದಾರೆ. ಪ್ರತಿ ದಿನ ಅನವಶ್ಯಕಾವಿಗ ತಿರುಗಾಡುತ್ತಿದ್ದ ಕನಿಷ್ಠ 2000 ಕ್ಕೂ ಹೆಚ್ಚು ವಾಹನಗಳಿಗೆ ದಂಡ ಹಾಕುತ್ತಿದ್ದೇವೆ. ಆದರೂ ಜನರು ಗಂಭೀರತೆಯನ್ನು ಅರಿತುಕೊಂಡಿಲ್ಲ ಎಂದು ಪೊಲೀಸರು ಹೇಳಿದ್ದಾರೆ.