Asianet Suvarna News Asianet Suvarna News

HSRP ನಂಬರ್ ಪ್ಲೇಟ್ ಅಳವಡಿಸದವರಿಗೆ ಗುಡ್ ನ್ಯೂಸ್ ನೀಡುತ್ತಾ ಕರ್ನಾಟಕ ಸರ್ಕಾರ?

ಕರ್ನಾಟಕದಲ್ಲಿ ವಾಹನಗಳಿಗೆ ಹೈಸೆಕ್ಯೂರಿಟಿ ನಂಬರ್ ಪ್ಲೇಟ್ ಕಡ್ಡಾಯ ಮಾಡಲಾಗಿದೆ. ಈಗಾಗಲೇ ನಂಬರ್ ಪ್ಲೇಟ್ ಅಳವಡಿ ಗಡುವನ್ನು ಕೆಲ ಬಾರಿ ವಿಸ್ತರಿಸಿ ಇದೀಗ ಮೇ.31 ಅಂತಿಮ ಗಡುವು ನೀಡಿದೆ. ಆದರೆ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ನಂಬರ್ ಪ್ಲೇಟ್ ಅಳವಡಿಕೆ ಮಾಡದ ಕಾರಣ ಗಡುವು ವಿಸ್ತರಿಸುತ್ತಾ? ಸರ್ಕಾರದ ನಿಲುವೇನು?
 

HRSP Number plate deadlines ends on may 31st Karnataka Vehicle owners expecting further extension ckm
Author
First Published May 4, 2024, 3:51 PM IST

ಬೆಂಗಳೂರು(ಮೇ.04)ವಾಹನಗಳಿಗೆ ಹೈಸೆಕ್ಯೂರಿಟಿ ನಂಬರ್ ಪ್ಲೇಟ್(HSRP) ಅಳವಡಿಕೆ ಕಡ್ಡಾಯವಾಗಿದೆ. ಆದರೆ ಸರ್ಕಾರ ನೀಡಿದ ಹಲವು ಗುಡುವುಗಳನ್ನು ವಿಸ್ತರಿಸಿ ಇದೀಗ ಮೇ.31ಕ್ಕೆ ಡೆಟ್‌ಲೈನ್ ನೀಡಲಾಗಿದೆ. ಅತೀ ಹೆಚ್ಚಿನ ಸಂಖ್ಯೆಯಲ್ಲಿ ಇನ್ನೂ ವಾಹನಗಳು HSRP ನಂಬರ್ ಪ್ಲೇಟ್ ಅಳವಡಿಸಿಲ್ಲ. ಹೀಗಾಗಿ ಜನರು ಮತ್ತೊಮ್ಮೆ ಗಡುವು ವಿಸ್ತರಣೆ ನಿರೀಕ್ಷೆಯಲ್ಲಿದ್ದಾರೆ. ಈ ಕುರಿತು ಸರ್ಕಾರದ ನಿಲುವೇನು ಅನ್ನೋ ಕುತೂಹಲ ಮನೆ ಮಾಡಿದೆ. ಆದರೆ ಮೇ.31ಕ್ಕೆ ನೀಡಿರುವ ಅಂತಿಮ ಗಡುವು ಸದ್ಯಕ್ಕೆ ವಿಸ್ತರಣೆಯಾಗುವ ಸಾಧ್ಯತೆಗಳು ಕಡಿಮೆ. ಕಾರಣ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಸರ್ಕಾರ ಈ ಕುರಿತು ಗಡುವು ವಿಸ್ತರಣೆ ಮಾಡುವ ಸಾಧ್ಯತೆಗಳಿಲ್ಲ. ಆದರೆ ಜೂನ್ 4 ರಂದು ಲೋಕಭಾ ಫಲಿತಾಂಶ ಘೋಷಣೆಯಾದ ಬಳಿಕ ನೀತಿ ಸಂಹಿತೆ ತೆರವಾಗಲಿದೆ. ಬಳಿಕ ವಾಹನಗಳ HSRP ಅಂಕಿ ಸಂಖ್ಯೆ ನೋಡಿಕೊಂಡು ಸರ್ಕಾರ ನಿರ್ಧಾರ ತೆಗೆದುಕೊಳ್ಳಲಿದೆ.

ಕರ್ನಾಟದಲ್ಲಿ ಸರಿಸುಮಾರು 55 ಲಕ್ಷ ವಾಹನಳು HSRP ನಂಬರ್ ಪ್ಲೇಟ್ ಅಳಡಿಸಿಕೊಂಡಿದೆ. ಇದಕ್ಕಿಂತ ದುಪ್ಪಟ್ಟು ವಾಹನಗಳು ಇನ್ನೂ ಅಳವಡಿಸಿಕೊಂಡಿಲ್ಲ. ಇದು ಸರ್ಕಾರದ ತಲೆನೋವಿಗೆ ಕಾರಣವಾಗಿದೆ. ಲೋಕಸಭಾ ಚುನಾವಣೆ ಕಾರಣದಿಂದ HSRP ನಂಬರ್ ಪ್ಲೇಟ್ ಅಳವಡಿಕೆ, ಬುಕಿಂಗ್ ಗಣನೀಯವಾಗಿ ಇಳಿಕೆಯಾಗಿದೆ. ಕರ್ನಾಟಕದಲ್ಲಿ ನಡೆದ ಮೊದಲ 14 ಕ್ಷೇತ್ರಗಳ ಮತದಾನದ ಬಳಿಕ ಈ ಕ್ಷೇತ್ರಗಳಲ್ಲಿ HSRP ನಂಬರ್ ಪ್ಲೇಟ್ ಬುಕಿಂಗ್ ಹಾಗೂ ಅಳವಡಿಕೆ ಏರಿಕೆಯಾಗಿದೆ. ಆದರೆ ಉತ್ತರ ಕರ್ನಾಟಕ ಹಾಗೂ ಗ್ರಾಮೀಣ ಭಾಗದಲ್ಲಿ HSRP ನಂಬರ್ ಪ್ಲೇಟ್ ಅಳವಡಿಕೆಯಲ್ಲಿ ಹೆಚ್ಚಿನ ವ್ಯತ್ಯಾಸವಾಗಿಲ್ಲ.

52 ಲಕ್ಷಕ್ಕೆ ಏರಿಕೆಯಾದ ಎಚ್‌ಎಸ್‌ಆರ್‌ಪಿ ನಂಬರ್‌ ಪ್ಲೇಟ್‌ ಅಳವಡಿಕೆ: ಜೂ.1ರಿಂದ ದಂಡ ಪ್ರಯೋಗ?

ಮೇ.07ರಂದು ಕರ್ನಾಟಕದಲ್ಲಿ ಇನ್ನುಳಿದ 14 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಮೇ.8ರಿಂದ HSRP ನಂಬರ್ ಪ್ಲೇಟ್ ಬುಕಿಂಗ್ ಹಾಗೂ ಅಳವಡಿಕೆ ಹೆಚ್ಚಾಗುವ ನಿರೀಕ್ಷೆಯನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ. ಮತದಾನ ಕಾರಣ ಮುಂದಿಟ್ಟುಕೊಂಡು ಸರ್ಕಾರ HSRP ನಂಬರ್ ಪ್ಲೇಟ್ ಅಳವಡಿಕೆ ಗಡುವನ್ನು ಕೊನೆಯ ಬಾರಿಗೆ ವಿಸ್ತರಣೆ ಮಾಡುವ ಸಾಧ್ಯತೆ ಇದೆ. 

ಒಂದು ವೇಳೆ ರಾಜ್ಯ ಸರ್ಕಾರ HSRP ನಂಬರ್ ಪ್ಲೇಟ್ ಅಳವಡಿಕೆ ಅವಧಿ ವಿಸ್ತರಣೆ ಮಾಡಿದರೆ ಮತ್ತೆ ಮೂರು ತಿಂಗಳು ಅಂದರೆ ಆಗಸ್ಟ್ ಅಂತ್ಯಕ್ಕೆ ಡೆಡ್‌ಲೈನ್ ನೀಡುವ ಸಾಧ್ಯತೆ ಇದೆ. ಸದ್ಯ ಚುನಾವಣೆ ಹಾಗೂ ನೀತಿ ಸಂಹಿತೆ ಕಾರಣ ಸರ್ಕಾರ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಂತಿಲ್ಲ. 

HSRP ನಂಬರ್ ಪ್ಲೇಟ್ ಬುಕಿಂಗ್ ವೇಳೆ ಮೋಸಹೋಗಬೇಡಿ, ಕರ್ನಾಟಕದಲ್ಲಿ QR ಹಗರಣ ಬೆಳಕಿಗೆ!

HSRP ನಂಬರ್ ಪ್ಲೇಟ್‌ನ್ನು ಆನ್‌ಲೈನ್ ಮೂಲಕ ಬುಕ್ ಮಾಡಿಕೊಳ್ಳಬೇಕು. ಅಲ್ಲೇ ಪಾವತಿ ಮಾಡಬೇಕು.  Book my hsrp.com ಅಥವಾ www.siam.in ವೆಬ್‌ಸೈಟ್‌ಗೆ ತೆರಳಿ ವಾಹನದ ರಿಜಿಸ್ಟ್ರೇಶನ್ ನಂಬರ್, ಎಂಜಿನ್, ಚಾಸಿ , ವಿಳಾಸ ಸೇರಿದಂತೆ ಇತರ ಮಾಹಿತಿಗಳನ್ನು ನೀಡಿ ಬುಕಿಂಗ್ ಮಾಡಿಕೊಳ್ಳಬೇಕು. ಹತ್ತಿರದ ಡೀಲರ್ ವಿಳಾಸ ಆಯ್ಕೆ ಮಾಡಿಕೊಳ್ಳಬೇಕು. ಇದರಿಂದ ನೀವು ಬುಕ್ ಮಾಡಿದ  HSRP ನಂಬರ್ ಪ್ಲೇಟ್  ಹತ್ತಿರದ ಡೀಲರ್ ಬಳಿ ಬರಲಿದೆ. ನಿಗದಿತ ದಿನಾಂಕದಂದು ತೆರಳಿ ಅಳವಡಿಸಿಕೊಳ್ಳಬಹುದು.   

Latest Videos
Follow Us:
Download App:
  • android
  • ios