ದಿಲ್ಲಿ ಬಳಿಯ ಗುರುಗ್ರಾಮ ಮೂಲದ ಅಡ್ವೆಂಚರ್ ಓವರ್‌ಲ್ಯಾಂಡ್ ಇತ್ತೀಚೆಗಷ್ಟೇ ಇಂಡಿಯಾ ಟು ಬ್ರಿಟನ್ ಬಸ್ ಸಂಚಾರ ಆರಂಭಿಸುವುದಾಗಿ ಹೇಳಿತ್ತು. ಇದೀಗ ಅದೇ ಕಂಪನಿ, ಇಂಡಿಯಾ ಟು ಸಿಂಗಾಪುರ ಬಸ್ ಸಂಚಾರ ಬಗ್ಗೆ ಹೇಳಿದೆ. ಅಂದ ಹಾಗೆ, ಈ ಬಸ್ ಮೂರು ದೇಶಗಳನ್ನು ದಾಟಿಕೊಂಡು ಸಿಂಗಾಪುರ ತಲುಪಲಿದೆ.
ನಾಲ್ಕೈದು ತಿಂಗಳ ಹಿಂದೆ ದಿಲ್ಲಿ ಟು ಬ್ರಿಟನ್‌ಗೆ ಬಸ್ ಸಂಚಾರ ಆರಂಭವಾಗಲಿದೆ ಎಂದು ಎಂಬ ಸುದ್ದಿಯನ್ನು ನೀವು ಕೇಳಿದ್ದೀರಿ. ಇದೀಗ ಭಾರತ ಮತ್ತು ಸಿಂಗಾಪುರ ಮಧ್ಯೆ ಬಸ್ ಸೇವೆ ಆರಂಭವಾಗಲಿದೆ!
ತಮಾಷೆ ಏನೆಂದರೆ, ಇಂಡಿಯಾ ಟು ಬ್ರಿಟನ್ ಬಸ್ ಸಂಚಾರ ಆರಂಭಿಸುವುದಾಗಿ ಹೇಳಿದ ಸಂಸ್ಥೆಯೇ ಇದೀಗ ಇಂಡಿಯಾ ಟು ಸಿಂಗಾಪುರಗೆ ಬಸ್ ಸಂಚಾರ ಆರಂಭಿಸುವುದಾಗಿದೆ ಹೇಳಿಕೊಂಡಿದೆ. ದೇಶ ದೇಶಗಳ ಮಧ್ಯೆ ಬಸ್ ಓಡಿಸುವುದಾಗಿ ಹೇಳಿಕೊಳ್ಳುತ್ತಿರುವ ಕಂಪನಿಯ ಹೆಸರು ಅಡ್ವೆಂಚರ್ ಓವರ್‌ಲ್ಯಾಂಡ್. ಈ ಕುರಿತು ಕಂಪನಿ ತನ್ನ ಟ್ವಿಟರ್ ಖಾತೆಯಲ್ಲಿ ಮಾಹಿತಿಯನ್ನು ಹಂಚಿಕೊಂಡಿದೆ.
ಭಾರತದಿಂದ ಬ್ರಿಟನ್ನಿಗೆ ಬಸ್ ಪ್ರವಾಸ: ಒಬ್ಬ ವ್ಯಕ್ತಿಗೆ ತಗುಲುವ ಶುಲ್ಕವಿಷ್ಟು!
ಭಾರತ ಮತ್ತು ಸಿಂಗಾಪುರ ಮಧ್ಯೆ ಸಂಚರಿಸಲಿರುವ ಈ ಬಸ್ ವ್ಹಾಯಾ ಮ್ಯಾನ್ಮಾರ್, ಥಾಯ್ಲೆಂಡ್ ಮತ್ತು ಮಲೇಷ್ಯಾ ಮೂಲಕ ಹೋಗಲಿದೆ. ಅಡ್ವೆಂಚರ್ ಓವರ್‌ಲ್ಯಾಂಡ್ ಈಗಾಗಲೇ ಬುಕ್ಕಿಂಗ್ ಆರಂಭಿಸಿದೆ. ಸಿಂಗಾಪುರಕ್ಕೆ ಬಸ್ ಅನ್ನು ಮಣಿಪುರದ ರಾಜಧಾನಿ ಇಂಪಾಲ್‌ನಿಂದ ನವೆಂಬರ್ 14ರಿಂದ ಆರಂಭಿಸುವುದಾಗಿ ಹೇಳಿಕೊಂಡಿದೆ. ಹಾಗಾಗಿ ಈಗಲೇ ಟಿಕೆಟ್ ಮುಂಗಡ ಕಾಯ್ದಿರಿಸಿಕೊಳ್ಳುವಂತೆ ಕೇಳಿಕೊಂಡಿದೆ.
ಈ ಬಸ್ ಮ್ಯಾನ್ಮಾರ್, ಥಾಯ್ಲೆಂಡ್ ಮತ್ತು ಮಲೇಷ್ಯಾ ಮೂಲಕ ಸಿಂಗಾಪುರಕ್ಕೆ ತೆರಳಲಿದೆ. ಸಿಂಗಾಪುರದ ಪ್ರವಾಸದ ವೇಳೆ, ಮ್ಯಾನ್ಮಾರ್‌ನ ಕಾಳೆ ಮತ್ತು ಯಾಂಗೂನ್, ಥಾಯ್ಲೆಂಡ್‌ನ ಬ್ಯಾಂಕಾಕ್, ಕ್ರಬಿ ಮತ್ತು ಕೌಲಾಲಂಪುರ ನಗರಗಳನ್ನು ನೋಡಬಹುದಾಗಿದೆ. ಈ ನಗರಗಳ ಮೂಲಕವೇ ಬಸ್ ಸಂಚರಿಸಲಿದೆ.
ಇದೇ ವೇಳೆ, ಫಸ್ಟ್ ಕಮ್ ಫಸ್ಟ್ ಸರ್ವೀಸ್ ಆಧಾರದ ಮೇಲೆ 20 ಸೀಟುಗಳಿಗೆ ಬುಕ್ಕಿಂಗ್ ಸ್ವೀಕರಿಸುವುದಾಗಿ ಕಂಪನಿ ಹೇಳಿಕೊಂಡಿದೆ. ಭಾರತದಿಂದ ಸಿಂಗಾಪುರ ಮತ್ತು ಸಿಂಗಾಪುರದಿಂದ ಭಾರತದವರೆಗೆ ಪ್ರಯಾಣ ಇರಲಿದೆ. ಅಂದ ಹಾಗೆ, ಭಾರತದಿಂದ ಸಿಂಗಾಪುರಕ್ಕೆ ಒಂದ ಸುತ್ತಿನ ಪ್ರಯಾಣ ಪೂರ್ತಿಗೊಳಿಸಲು 20 ದಿನಗಳು ಬೇಕಾಗುತ್ತದೆ.
ಭಾರತದಿಂದ ಬ್ರಿಟನ್‌ಗೆ ಬಸ್
ಅಡ್ವೆಂಚರ್ ಓವರ್‌ಲ್ಯಾಂಡ್ ಎಂಗ ಖಾಸಗಿ ಪ್ರವಾಸೋದ್ಯಮ ಸಂಸ್ಥೆಯು ದೆಹಲಿಯಿಂದ ಲಂಡನ್‌ಗೆ 2021ರ ಮೇ ತಿಂಗಳಲ್ಲಿ ಐತಿಹಾಸಿಕ ಪ್ರವಾಸ ಆಯೋಜಿಸಿದೆ. ಒಬ್ಬ ವ್ಯಕ್ತಿಗೆ 15 ಲಕ್ಷ ರೂಪಾಯಿ ಶುಲ್ಕ ನಿಗದಿಪಡಿಸಲಾಗಿದ್ದು, ಅದರಲ್ಲಿ ಊಟ, ತಿಂಡಿ, ಹೋಟೆಲ್ ವಾಸ್ತವ್ಯ, ವೀಸಾ ಶುಲ್ಕಗಳು ಇತ್ಯಾದಿಗಳೆಲ್ಲವೂ ಇರುತ್ತದೆ. ಮಧ್ಯೆದಲ್ಲಿ ಎಲ್ಲಾದರೂ ಇಳಿದು ವಿಮಾನದಲ್ಲಿ ಪ್ರಯಾಣಿಸಬೇಕು ಅನ್ನಿಸಿದರೆ ಪ್ರವಾಸಿಗರು ತಾವೇ ಹಣ ಪಾವತಿಸಿ ವ್ಯವಸ್ಥೆ ಮಾಡಿಕೊಳ್ಳಬೇಕಾಗುತ್ತದೆ.
8 ವರ್ಷಕ್ಕಿಂತ ಹಳೆಯ ವಾಹನಗಳ ಮೇಲೆ ಗ್ರೀನ್ ಟ್ಯಾಕ್ಸ್
ದೆಹಲಿ ಟು ಲಂಡನ್ ಬಸ್ ಮಣಿಪುರದ ಇಂಫಾಲ್‌ನಿಂದ ಹೊರಡಲಿದೆ. ಒಟ್ಟು 17 ದೇಶಗಳನ್ನು ಹಾದು ಲಂಡನ್ನಿಗೆ ತಲುಪಲಿದೆ. ಬಸ್ ಸಂಚರಿಸಲಿರುವ ಒಟ್ಟು ದೂರ 20 ಸಾವಿರ ಕಿ.ಮೀ. ಪ್ರವಾಸದ ಅವಧಿ 70 ದಿನಗಳು. ಭಾರತದಿಂದ ಮ್ಯಾನ್ಮಾರ್, ಥಾಯ್ಲೆಂಡ್, ಲಾವೋಸ್, ಚೀನಾ, ಕೀರ್ಗಿಸ್ತಾನ್, ಉಜ್ಬೆಕಿಸ್ತಾನ, ಕಜಕಸ್ತಾನ, ರಷ್ಯಾ, ಲಾಟ್ವಿಯಾ, ಲಿಥುವೇನಿಯಾ, ಪೊಲೆಂಡ್, ಜೆಕ್ ಗಣರಾಜ್ಯ, ಜರ್ಮನಿ, ಬೆಲ್ಜಿಯಂ ಮಾರ್ಗವಾಗಿ ಬ್ರಿಟನ್‌ಗೆ ಪ್ರವೇಶ ಪಡೆಯಲಿದೆ. ದಾರಿಯಲ್ಲಿ ಸಿಗುವ ಎಲ್ಲ ಪ್ರವಾಸಿ ತಾಣಗಳಲ್ಲಿ ಎರಡು ರಾತ್ರಿ ಉಳಿದುಕೊಳ್ಳುವ ವ್ಯವಸ್ಥೆ ಮಾಡಲಾಗಿದೆ ಎಂದು ಸಂಸ್ಥೆಯ ಸಂಸ್ಥಾಪಕ ತುಷಾರ್ ತಿಳಿಸಿದ್ದರು.
ಪ್ರವಾಸಿಗರು ತಮಗಿಷ್ಟವಾದ ದೇಶದಲ್ಲಿ ಇಳಿದುಕೊಂಡು ಹೆಚ್ಚು ದಿನ ಅಲ್ಲೇ ಕಾಲ ಕಳೆಯುವ ಸೌಲಭ್ಯವೂ ಇದೆ. ಇದಕ್ಕಾಗಿ ಹಾಪ್ ಆನ್ ಹಾಪ್ ಆಫ್ ಸೌಲಭ್ಯ ನೀಡಲಾಗುತ್ತಿದೆ. ಮುಂದೆ ತಮ್ಮದೇ ವೆಚ್ಚದಲ್ಲಿ ವಿಮಾನದಲ್ಲಿ ಬಂದು ಅವರು ಬಸ್ ಹತ್ತಬೇಕಾಗುತ್ತದೆ ಅಥವಾ ಭಾರತಕ್ಕೆ ಮರಳಬೇಕಾಗುತ್ತದೆ. ಪ್ರವಾಸಿಗರಿಗೆ ಜೀವಮಾನದಲ್ಲೇ ಅತ್ಯಂತ ಥ್ರಿಲ್ಲಿಂಗ್ ಅನುಭವವನ್ನು ನೀಡಲು ಈ ಪ್ರವಾಸ ಆಯೋಜಿಸಲಾಗಿದೆ ಎಂದು ತುಷಾರ್ ಹೇಳಿದ್ದರು.
ಇದೀಗ ಇಂಡಿಯಾ ಟು ಬ್ರಿಟನ್ ಬಸ್ ಪ್ರವಾಸ ಶುರುವಾಗುವ ಮೊದಲೇ ಕಂಪನಿ ಇಂಡಿಯಾ ಟು ಸಿಂಗಾಪುರ ಪ್ರವಾಸ ಘೋಷಿಸಿದೆ. ಇದಕ್ಕೆ ಜನರಿಂದ ಯಾವ ರೀತಿ ಪ್ರತಿಕ್ರಿಯೆ ಸಿಗಲಿದೆ ನೋಡಬೇಕು.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Jan 28, 2021, 5:59 PM IST