ಗುರಗಾಂವ್(ಜ.22): ರಾಂಗ್ ಸೈಡ್ ಡ್ರೈವಿಂಗ್ ಬಹು ದೊಡ್ಡ ಅಪಾಯ ತಂದೊಡ್ಡಲಿದೆ. ಭಾರತದಲ್ಲಿ ಹೆಚ್ಚಾಗಿ ರಾಂಗ್ ಸೈಡ್ ಕಾಣಸಿಗುತ್ತದೆ. ನಗರಗಳಲ್ಲಿ, ಹೈವೇಗಳಲ್ಲಿ ರಾಂಗ್ ಸೈಡ್ ಡ್ರೈವಿಂಗ್ ಮಾಡುವುದು ಸಾಮಾನ್ಯವಾಗಿದೆ. ಇದೀಗ ಈ ರಾಂಗ್ ಸೈಡ್ ಡ್ರೈವಿಂಗ್‌‍ಗೆ ಬ್ರೇಕ್ ಹಾಕಲು ಗುರುಗಾಂವ್ ಪೊಲೀಸರು ಕಟ್ಟು ನಿಟ್ಟಾಗಿ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.

ಕಳಪೆ ರಸ್ತೆ ನಿರ್ಮಿಸಿದರೆ ಕಾಂಟ್ರಾಕ್ಟರ್‌ಗೆ 10 ಕೋಟಿ ಫೈನ್; ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ!.

ರಾಂಗ್ ಸೈಡ್ ಡ್ರೈವಿಂಗ್ ಮಾಡಿದರೆ ನೇರವಾಗಿ ಲೈಸೆನ್ಸ್ ರದ್ದಾಗಲಿದೆ. ತಾತ್ಕಾಲಿಕ ಅಲ್ಲ, ಶಾಶ್ವತವಾಗಿ ರದ್ದಾಗಲಿದೆ ಇಲ್ಲಿ ಕಾರಣವನ್ನೂ ಕೇಳುವುದಿಲ್ಲ, ರಾಂಗ್ ಸೈಡ್ ಡ್ರೈವ್ ಮಾಡಿದವನ ಮಾತನ್ನು ಪೊಲೀಸರು ಕೇಳುವುದಿಲ್ಲ. ಡ್ರೈವಿಂಗ್ ಲೈಸೆನ್ಸ್ ರದ್ದು ಮಾಡೋ ಮೂಲಕ ರಾಂಗ್ ಸೈಡ್ ಡ್ರೈವರ್ಸ್‌ಗೆ ಪಾಠ ಕಲಿಸಲು ಗುರುಗಾಂವ್ ಪೊಲೀಸರು ಮುಂದಾಗಿದ್ದಾರೆ. 

ಟ್ರಾಫಿಕ್ ನಿಯಮ ಮತ್ತಷ್ಟು ಕಠಿಣ; ಕಾರಿನ ಹಿಂಬದಿ ಸೀಟ್ ಬೆಲ್ಟ್ ಹಾಕದಿದ್ರೂ ದಂಡ!

2019ರಲ್ಲಿ ಗುರುಗಾಂವ್ ಪೊಲೀಸರು ರಾಂಗ್ ಸೈಡ್ ಡ್ರೈವ್ ಮಾಡಿದ ಕಾರಣಕ್ಕೆ 49,671 ಚಲನ್ ನೀಡಲಾಗಿದೆ. 2020ರ ವೇಳೆಗೆ 39,675 ಚಲನ್ ನೀಡಲಾಗಿದೆ.  ರಾಂಗ್ ಸೈಡ್ ಡ್ರೈವ್‌ನಿಂದ ಅಪಘಾತ ಪ್ರಮಾಣಗಳು ಹೆಚ್ಚಾಗುತ್ತಿದೆ.  ಹೀಗಾಗಿ ಟ್ರಾಫಿಕ್ ನಿಯಮ ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಗುರುಗಾಂವ್ ಪೊಲೀಸರು ಮನವಿ ಮಾಡಿದ್ದಾರೆ.