Hydrogen Fuel ಭವಿಷ್ಯತ್ತಿಗೆ ಇಂಧನ ಹೈಡ್ರೋಜನ್ ಫ್ಯುಯಲ್ ಸೆಲ್ ತಂತ್ರಜ್ಞಾನದತ್ತ ಭಾರತದ ದಿಟ್ಟ ಹೆಜ್ಜೆ!
- ಭಾರತದಲ್ಲಿ ಹೈಡ್ರೋಜನ್ ಇಂಧನ ಅಳವಡಿಕೆ
- ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ
- ಭಾರತದಲ್ಲಿ ಹೈಡ್ರೋಜನ್ ಇಂಧನ ಪ್ರಭಾವವೇನು?
ಮುಂಬೈ(ಮಾ.05): ಇಂಧನಗಳ ಮೇಲಿನ ಅವಲಂಬಿಕೆಯನ್ನು ತಗ್ಗಿಸಲು, ಆಟೋಮೊಬೈಲ್‍ಗಳಿಂದ ಏರ್ಪಡುತ್ತಿರುವ ವಾಯುಮಾಲಿನ್ಯವನ್ನು ನಿಯಂತ್ರಿಸಲು ಎಲೆಕ್ಟ್ರಿಕ್ ವಾಹನ ಜೊತೆಗೆ ಭವಿಷ್ಯದ ಇಂಧದತ್ತ ವಿಶ್ವ ಹೆಜ್ಜೆ ಇಡುತ್ತಿದೆ. ವಿಶ್ವದೆಲ್ಲೆಡೆ ವಿದ್ಯುಚ್ಛಕ್ತಿ ಸರಬರಾಜನ್ನು ಪ್ರಜಾತಾಂತ್ರೀಕರಣಗೊಳಿಸಲು ಬಹುಶಃ ಇಂದು ನಮಗಿರುವ ಅತಿದೊಡ್ಡ ಭರವಸೆ ಎಂದರೆ ಹೈಡ್ರೋಜನ್ ಫ್ಯುಯಲ್ ಸೆಲ್ ತಂತ್ರಜ್ಞಾನ. ಈ ಕುರಿತು ಟಾಟಾ ಮೋಟರ್ಸ್‍ನ ಅಧ್ಯಕ್ಷ ಹಾಗೂ ಸಿಟಿಒ ರಾಜೇಂದ್ರ ಪೇಟ್ಕರ್ , ಆಟೋಮೋಟಿವ್ ಕ್ಷೇತ್ರದ ಮೇಲೆ ಪ್ರಭಾವ ಮತ್ತು ಅದನ್ನು ಅಳವಡಿಸಿಕೊಳ್ಳಲು ಭಾರತದ ಸಿದ್ಧತೆಯ ಕುರಿತು ಮಾತನಾಡಿದ್ದಾರೆ.
ಹಾಗಾದರೆ ಹೈಡ್ರೋಜನ್ ಫ್ಯುಯಲ್ ಸೆಲ್ ತಂತ್ರಜ್ಞಾನ ಅಂದರೇನು?
ಸರಳವಾಗಿ ಹೇಳಬೇಕೆಂದರೆ, ಹೈಡ್ರೋಜನ್ ಫ್ಯುಯಲ್ ಸೆಲ್, ವಿದ್ಯುಚ್ಛಕ್ತಿಯನ್ನು ಉತ್ಪಾದಿಸುವುದಕ್ಕಾಗಿ ಜಲಜನಕದ(ಹೈಡ್ರೋಜನ್)ರಾಸಾಯನಿಕ ಶಕ್ತಿಯನ್ನು ಬಳಸಿಕೊಳ್ಳುತ್ತದೆ. ಇದು ವಿದ್ಯುಚ್ಛಕ್ತಿಯನ್ನು ಉತ್ಪಾದಿಸಲು ಜಲಜನಕ(ಹೈಡ್ರೋಜನ್)ಮತ್ತು ಆಮ್ಲಜನಕ(ಆಕ್ಸಿಜನ್)ವನ್ನು ಸಂಯೋಜಿಸುತ್ತದೆ ಮತ್ತು ನೀರು ಹಾಗೂ ಶಾಖವನ್ನು ಸಹ-ಉತ್ಪನ್ನಗಳಾಗಿ ಹೊರತರುತ್ತದೆ.
2030ರ ವೇಳೆಗೆ 50 ಲಕ್ಷ ಟನ್ ಗ್ರೀನ್ ಹೈಡ್ರೋಜನ್ ಉತ್ಪಾದಿಸುವ ಗುರಿ: ಕೇಂದ್ರ ಸರ್ಕಾರದ ಮಹತ್ವದ ನೀತಿ!
ಪ್ರಮಾಣದಲ್ಲಿ ಇದು ಹೇಗೆ ಕಾರ್ಯನಿರ್ವಹಿಸುತ್ತದೆ?
ಫ್ಯುಯಲ್ ಸೆಲ್ ಸ್ಟ್ಯಾಕ್ ಈ ತಂತ್ರಜ್ಞಾನದ ಮೂಲದಲ್ಲಿದ್ದು ಇದು ರಾಸಾಯನಿಕ ಶಕ್ತಿಯನ್ನು ವಿದ್ಯುಚ್ಛಕ್ತಿಯನ್ನಾಗಿ ಪರಿವರ್ತಿಸುತ್ತದೆ. ಜಲಜನಕ ಮತ್ತು ಆಮ್ಲಜನಕವನ್ನು ಇದು ಇನ್‍ಪುಟ್ ಆಗಿ ಉಪಯೋಗಿಸಿಕೊಂಡು ವಿದ್ಯುಚ್ಛಕ್ತಿ ಉತ್ಪಾದಿಸುತ್ತದೆ. ಆನ್-ಬೋರ್ಡ್‍ನಲ್ಲಿ ಜಲಜನಕವನ್ನು ಶೇಖರಿಸಿ ಇಡುವುದಕ್ಕೆ ಜಲಜನಕದ ಟ್ಯಾಂಕ್ ಆಗತ್ಯವಾಗುತ್ತದೆ. ಯಾವುದೇ ಇತರ ಬಿಇವಿದಲ್ಲಿ ಇರುವಂತೆ, ಈ ಫ್ಯುಯಲ್ ಸೆಲ್ ಸ್ಟ್ಯಾಕ್‍ನಿಂದ ಉತ್ಪತ್ತಿಯಾಗುವ ವಿದ್ಯುಚ್ಛಕ್ತಿಯನ್ನು ಬ್ಯಾಟರಿಯಲ್ಲಿ ಶೇಖರಿಸಿಡಲಾಗುತ್ತದೆ. ಪರಿಶುದ್ಧವಾದ ಬ್ಯಾಟರಿ ಎಲೆಕ್ಟ್ರಿಕ್ ವೆಹಿಕಲ್ಸ್(ಬಿಇವಿ)ಗೆ ಹೋಲಿಸಿದರೆ ಈ ಬ್ಯಾಟರಿಯು ಗಾತ್ರದಲ್ಲಿ ಚಿಕ್ಕದಾಗಿರುತ್ತದೆ. ಇದು, ಸಾಗಣೆ, ಕೈಗಾರಿಕೆ/ವಾಣಿಜ್ಯ/ನಿವಾಸ ಕಟ್ಟಡಗಳು ಒಳಗೊಂಡಂತೆ ವಿವಿಧ ಕ್ಷೇತ್ರಗಳಾದ್ಯಂತ ಹಲವಾರು ಅಪ್ಲಿಕೇಶನ್‍ಗಳಿಗೆ ವಿದ್ಯುತ್ ಸರಬರಾಜು ಒದಗಿಸುವುದಕ್ಕೆ ಮತ್ತು ಬದಲು ಮಾಡುವಂತಹ ಸಿಸ್ಟಮ್‍ಗಳಲ್ಲಿ ದೀರ್ಘಾವಧಿ ಗ್ರಿಡ್-ಆಧಾರಿತ ವಿದ್ಯುತ್ ಶೇಖರಣೆಗೆ ಸೂಕ್ತವಾಗಿದೆ. ಪ್ರಸ್ತುತ ಕಾರ್ಯಾಚರಣೆಯಲ್ಲಿರುವಂತಹ ಮುಂದಿನ ತಾಂತ್ರಿಕ ವರ್ಧನೆಗಳೊಂದಿಗೆ, ಒಟ್ಟಾರೆ 30-35 % WTW (well-to-wheel) ಸಾಮರ್ಥ್ಯದಲ್ಲಿ ನಿರೀಕ್ಷಿತ ಸುಧಾರಣೆ ಏರ್ಪಡಲಿದೆ.
EVs, Hydrogen Fuel: ಎಲೆಕ್ಟ್ರಿಕ್, ಹೈಡ್ರೋಜನ್ ಚಾಲಿತ ವಾಹನಗಳು ಭಾರತದ ಭವಿಷ್ಯದ ಆಯ್ಕೆ: ಕೆಪಿಐಟಿ ಮುಖ್ಯಸ್ಥ
ಈ ದೀರ್ಘಾವಧಿ ಇರುವಂತಹ ಮತ್ತು ಅಗ್ಗದ ಬೆಲೆಯ ತಂತ್ರಜ್ಞಾನಕ್ಕೆ ಯಾವುದೇ ವಾಸ್ತವ-ಜಗತ್ತಿನ ಪ್ರಯೋಜನಗಳಿವೆಯೆ?
ಹೌದು! ಪ್ರಾಥಮಿಕ ಇಂಧನಗಳಂತಲ್ಲದೆ(ಅಂದರೆ, ಇದ್ದಿಲು, ಪೆಟ್ರೋಲಿಯಮ್ ಅಧಾರಿತ ಅಥವಾ ನವೀಕರಿಸಬಹುದಾದವುಗಳು) ಜಲಜನಕವು ಘರ್ಷಣೆಯಾದಾಗ ಶೂನ್ಯ ಹೊಗೆಯುಗುಳುವಿಕೆ ಏರ್ಪಡಿಸುವುದರಿಂದ, ಜಾಗತಿಕ ಪರಿವರ್ತನೆಗೆ ಅದನ್ನು ಮುಂದಿನ ಪೀಳಿಗೆಯ ಇಂಧನ ಎಂದೇ ಪರಿಗಣಿಸಲಾಗಿದೆ. ಇನ್ನೂ ಆಳಕ್ಕಿಳಿದು ಹೇಳಬೇಕೆಂದರೆ, ಹೈಡ್ರೋಜನ್ ಫ್ಯುಯಲ್ ಸೆಲ್‍ಗಳು ಅಧಿಕ ಶಕ್ತಿ ಸಾಂದ್ರತೆ ಹೊಂದಿದ್ದು ಬಿಇವಿಗಳಿಗಿಂತ ಹೆಚ್ಚು ವೇಗವಾಗಿ ಇವುಗಳನ್ನು ಹಾಕಬಹುದು ಮತ್ತು ವಾಣಿಜ್ಯ ವಾಹನ ಅಪ್ಲಿಕೇಶನ್‍ಗಳಿಗಾಗಿ, ಒಂದೇ ಚಾರ್ಜ್‍ನಲ್ಲಿ, 500 ಕಿ.ಮೀ ರೇಂಜ್ ವರೆಗೆ ಓಡುವ ವಾಹನಗಳಲ್ಲಿ ದೀರ್ಘ-ರೇಂಜ್ ಅಪ್ಲಿಕೇಶನ್‍ಗಳಲ್ಲೂ ಬಳಸಬಹುದು.
ಇದು ಎಷ್ಟು ಬೇಗ ನಿಜವಾಗುತ್ತದೆ?
ನೀವೇ ಊಹಿಸುವಂತೆ, ಈ ತಂತ್ರಜ್ಞಾನ ಹಾಗೂ ಇದರ ಬೃಹತ್ ಅಳವಡಿಕೆ, ಜಗತ್ತಿನಾದ್ಯಂತ ಸರ್ಕಾರಗಳ ಗಮನವನ್ನು ಸೆಳೆದಿದೆ. ಜಪಾನ್, ಚೀನಾ, ಯುಎಸ್‍ಎ, ಹಾಗೂ ಕೊರಿಯಾದಂತಹ ದೇಶಗಳು ಮತ್ತುಯೂರೋಪ್‍ನ ಕೆಲವು ಭಾಗಗಳು ಹೈಡ್ರೋಜನ್ ಫ್ಯುಯಲ್ ಸೆಲ್ ತಂತ್ರಜ್ಞಾನದ ಶೀಘ್ರ ಅಳವಡಿಕೆಗೆ ಒತ್ತುನೀಡುತ್ತಿವೆ.
ಭಾರತವೂ ಕೂಡ ಈ ಯೋಜನೆಯಲ್ಲಿ ಹಿಂದೆ ಬಿದ್ದಿಲ್ಲ. ಕೇಂದ್ರ ಸರ್ಕಾರದ ರಾಷ್ಟ್ರೀಯ ಜಲಜನಕ ಯೋಜನೆ(National Hydrogen Mission) ಮತ್ತು ಭವಿಷ್ಯತ್ತಿನಲ್ಲಿ ನಮ್ಮ ದೇಶವನ್ನು ವಿದ್ಯುತ್-ಸ್ವತಂತ್ರವನ್ನಾಗಿ ಮಾಡಲು ಭಾರತವನ್ನು ಹಸಿರು ಜಲಜನಕ ಉತ್ಪಾದನೆಯ ಕೇಂದ್ರವನ್ನಾಗಿ ಮಾಡುವ ಅದರ ಯೋಜನೆಯ ಬಗ್ಗೆ ನೀವು ಸುದ್ದಿಗಳಲ್ಲಿ ಈಗಾಗಲೇ ಓದಿರಬಹುದು. ಟಾಟಾ, ರಿಲಯನ್ಸ್, ಆದಾನಿ ಒಳಗೊಂಡಂತೆ, ಹಲವಾರು ಭಾರತೀಯ ಸಂಘಟಿತ ಸಂಸ್ಥೆಗಳು ಈ ಯೋಜನೆಗೆ ಬೆಂಬಲ ಸೂಚಿಸುವ ತಮ್ಮ ಆಸಕ್ತಿಯನ್ನು ವ್ಯಕ್ತಪಡಿಸಿವೆ.
ಟಾಟಾ ಮೋಟರ್ಸ್ ಪ್ರಾರಂಭದಲ್ಲೇ ಕಾಣಿಸಿಕೊಂಡು ಈಗಾಗಲೇ ಹೈಡ್ರೋಜನ್ ಫ್ಯುಯಲ್ ಸೆಲ್ ಚಾಲಿತ ವಾಹನಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಮಹತ್ತರವಾದ ಪ್ರಗತಿ ಸಾಧಿಸಿದೆ ಎಂದು ತಿಳಿದುಕೊಂಡಿರುವುದಕ್ಕೆ ನಿಮಗೆ ಹೆಮ್ಮೆಯಾಗಬಹುದು. ಈಗ್ಗೆ ಕೆಲವು ಸಮಯದಿಂದ, ನಿಬದ್ಧವಾದ ಸಂಶೋಧನೆ ಹಾಗೂ ಅಭಿವೃದ್ಧಿ ಕೇಂದ್ರವು ಕಾರ್ಯಾಚರಣೆಯಲ್ಲಿದ್ದು ಭವಿಷ್ಯತ್ತು-ಸಿದ್ಧವಾದ ಮೊಬಿಲಿಟಿ ಪರಿಹಾರಗಳನ್ನು ಒದಗಿಸುವುದಕ್ಕಾಗಿ ತಂತ್ರಜ್ಞಾನದ ಪ್ರಯೋಜನಗಳನ್ನು ವರ್ಧಿಸುವ ಕುರಿತು ಶೋಧಿಸುತ್ತಿದೆ. ಈ ತಂತ್ರಜ್ಞಾನವನ್ನು ಅರ್ಥಮಾಡಿಕೊಂಡು ಗರಿಷ್ಟಗೊಳಿಸಲು40-50 ಉಜ್ವಲ ಬುದ್ಧಿಗಳು ಕಾರ್ಯನಿರತವಾಗಿವೆ. ಆಟೋ ಎಕ್ಸ್ ಪೋ 2012ದಲ್ಲಿ ನಾವು ಹೈಡ್ರೋಜನ್ ಪ್ಯುಯಲ್ ಸೆಲ್ ಚಾಲಿತ ಬಸ್‍ನ ಪ್ರಾರಂಭಿಕ ಪ್ರೊಟೋಟೈಪ್‍ಅನ್ನು ಪ್ರದರ್ಶಿಸಿದ್ದೆವು. ಮೇಲಾಗಿ, ಟಾಟಾ ಮೋಟರ್ಸ್, ಇಂಡಿಯನ್ ಆಯಿಲ್ ಕಾರ್ಪೋರೇಶನ್ ನಿಂದ 15 ಹೈಡ್ರೋಜನ್ ಪ್ಯುಯಲ್ ಸೆಲ್ ಚಾಲಿತ ಬಸ್‍ಗಳಿಗೆ ಕಾಂಟ್ರಾಕ್ಟ್ ಪಡೆದುಕೊಂಡ ಏಕೈಕ ಭಾರತೀಯ ಒಇಎಮ್ ಆಗಿದ್ದು, ಮುಂದಿನ ಎರಡು ವರ್ಷಗಳಲ್ಲಿ ಅವುಗಳನ್ನು ಸರಬರಾಜು ಮಾಡಲಾಗುತ್ತದೆ.
ಆಟೋ ಶೋಗಳಲ್ಲಿ ಕೇವಲ ಪರಿಕಲ್ಪನೆಯಾಗಿ ಮಾತ್ರ ನೋಡಿದ ಅಥವಾ ಸೈ-ಫೈ ಚಲನಚಿತ್ರಗಳಲ್ಲಿ ಮಾತ್ರ ನೋಡಿದ ವಿಷಯವನ್ನು ಗ್ರಾಹಕರು ನಿಜವಾಗಿಯೂ ವಾಸ್ತವದಲ್ಲಿ ನೋಡುವರೆ? ಟಾಟಾ ಮೋಟರ್ಸ್ ಪ್ರೊಟೋಟೈಪ್ ಮಾಡಿದ ಹೈಡ್ರೋಜನ್ ಪ್ಯುಯಲ್ ಸೆಲ್ ಚಾಲಿತ ಬಸ್ ~300ಕಿ.ಮೀ ರೇಂಜ್ ಹೊಂದಿದ್ದು, ಭಾರೀ ತೂಕವನ್ನು ಹೊರಬಲ್ಲುದಾದುದರಿಂದ ಮತ್ತು ಲಾಂಗ್-ಹಾಲ್ ಫ್ರೈಟ್ ಸಾಗಣೆಯನ್ನು ಪೂರೈಸುವುದರಿಂದ, ಮಧ್ಯಮ ಹಾಗೂ ಭಾರೀ ವಾಹನ ಫ್ಲೀಟ್‍ಗಳ ಮಾಲೀಕರ ಗಮನವನ್ನು ಸೆಳೆಯಲು ಸಮರ್ಥವಾಗಿದೆ. ಅಗ್ಗವಾಗಿ ಓಡುವ, ದೂರದೂರಕ್ಕೆ ಸಾಗುವ ಮತ್ತು ಪರಿಸರದ ಮೇಲೆ ಮೃದುವಾಗಿರುವ ವಾಹನಗಳನ್ನು ಹೊಂದಿರುವುದಕ್ಕೆ ಯಾರೂ ಬೇಡ ಎನ್ನುವುದಿಲ್ಲ, ಅಲ್ಲವೆ?
ಇದೆಲ್ಲವೂ ಒಂದು ಕಟ್ಟುಕಥೆಯಂತೆ ಭಾಸವಾಗುತ್ತಿದೆ, ಏನಿದರ ಒಳಮರ್ಮ? ನಿಜ ಹೇಳಬೇಕೆಂದರೆ, ಇದರಲ್ಲಿ ಒಳಮರ್ಮವೇನೂ ಇಲ್ಲ. ಆದರೆ ಯಾವುದೇ ಹೊಸ ತಂತ್ರಜ್ಞಾನದಲ್ಲಿರುವಂತೆ, ಫ್ಯುಯಲ್ ಟ್ರಕ್‍ಗಳು, ಬಸ್‍ಗಳು ಮತ್ತು ಕಾರುಗಳು ಭಾರತೀಯ ರಸ್ತೆಗಳಲ್ಲಿ ಸಾಮಾನ್ಯ ದೃಶ್ಯವಾಗುವುದಕ್ಕೆ ಸ್ವಲ್ಪ ಕಾಲವಂತೂ ಹಿಡಿಯುತ್ತದೆ. ಹಸಿರು ಇಂಧನಕ್ಕೆ ಬೆಂಬಲ ಒದಗಿಸಲು, ತಂತ್ರಜ್ಞಾನ ಮತ್ತು ಉತ್ಪನ್ನಗಳಲ್ಲದೆ, ಪ್ರಬಲವಾದ ಮೂಲಸೌಕರ್ಯಗಳ ನಿರ್ಮಾಣ ಕೂಡ ಮಾಡಬೇಕಾಗುತ್ತದೆ. ಮುಂಬರುವ ದಿನಗಳಲ್ಲಿ ಈ ತಂತ್ರಜ್ಞಾನಕ್ಕೆ ಬೇಡಿಕೆ ಹೆಚ್ಚಾಗಲಿದೆ. ಎಲ್ಲಾ ಹೊಸ ತಂತ್ರಜ್ಞಾನಗಳಂತೆ, ಪ್ರಮಾಣದೊಂದಿಗೆ ನಮ್ಮ ಆರ್ಥಿಕತೆಯೂ ಬೆಳೆಯುತ್ತದೆ ಮತ್ತು ತನ್ಮೂಲಕ ಸ್ಥಿರವಾದ ಪರಿಸರವ್ಯವಸ್ತೆ ಕೇಂದ್ರಿತ ದೃಷ್ಟಿಕೋನವೂ ಉತ್ತೇಜನಗೊಳ್ಳುತ್ತದೆ.
ಹೈಡ್ರೋಜನ್ ಪ್ಯುಯಲ್ ಸೆಲ್ ತಂತ್ರಜ್ಞಾನವು ಜಾಗತಿಕ ಪ್ರಮಾಣದಲ್ಲಿ ಸಮೃದ್ಧವಾದ, ಆಳವಾಗಿ ಬೇರೂರಿರುವ ದೀರ್ಘಕಾಲ ಇರಬಲ್ಲ ಪ್ರಭಾವ ಏರ್ಪಡಿಸುವ ಸಾಮರ್ಥ್ಯ ಹೊಂದಿದ್ದು, ಎಂದಿನಂತೆ, ಟಾಟಾ ಮೋಟರ್ಸ್ ಮೊಬಿಲಿಟಿಯ ಭವಿಷ್ಯತ್ತನ್ನು ಇನ್ನಷ್ಟು ಪರಿಶುದ್ಧ, ಹಸಿರು ಹಾಗೂ ಪರಿಸರ-ಸ್ನೇಹಿಯಾಗಿಸುವುದಕ್ಕಾಗಿ ಈ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವಲ್ಲಿ ಭಾರತಕ್ಕೆ ಮಾರ್ಗದರ್ಶಕವಾಗಬಲ್ಲದು.