ವಾಹನ ಸವಾರರೇ ಎಚ್ಚರ, ಜ.31ರೊಳಗೆ KYC ಮಾಡಿದಿದ್ದರೆ ನಿಮ್ಮ ಫಾಸ್ಟಾಗ್ ನಿಷ್ಕ್ರೀಯ!
ದೇಶದಲ್ಲಿ ಇದೀಗ ಟೋಲ್ ಬೂತ್‌ಗಳಲ್ಲಿ ನಗದು ಪಾವತಿ ಮಾಡುವ ವ್ಯವಸ್ಥೆ ಇಲ್ಲ. ಎಲ್ಲವೂ ಫಾಸ್ಟಾಗ್ ಮೂಕವೇ ಪಾವತಿ ಮಾಡಲಾಗುತ್ತದೆ. ಇಷ್ಟು ದಿನ ವಾಹನ ಸವಾರರಿಗೆ ಫಾಸ್ಟಾಗ್ ಅಳವಡಿಕೆ ತಲೆನೋವಾದರೆ ಇದೀಗ ಕೆವೈಸಿ ತಲೆನೋವು. ಜನವರಿ 31ರೊಳಗೆ ನಿಮ್ಮ ಫಾಸ್ಟಾಗ್ ಕೆವೈಸಿ ಆಗಿಲ್ಲದಿದ್ದರೆ ಅಥವಾ ಮಾಡಿಸದಿದ್ದರೆ ನಿಮ್ಮ ಫಾಸ್ಟಾಗ್ ನಿಷ್ಕ್ರೀಯಗೊಳ್ಳಲಿದೆ.
ನವದೆಹಲಿ(ಜ.16) ದೇಶದಲ್ಲಿ ಎಲೆಕ್ಟ್ರಾನಿಕ್ ಟೋಲ್ ವ್ಯವಸ್ಥೆ ಜಾರಿಯಲ್ಲಿದೆ. ವಾಹನ ಸವಾರರು ತಮ್ಮ ವಾಹನದಲ್ಲಿ ಅಳವಡಿಸಿರುವ ಫಾಸ್ಟಾಗ್ ರೀಚಾರ್ಜ್ ಮಾಡಿದರೆ ಸಾಕು, ಟೋಲ್ ಗೇಟ್‌ಗಳಲ್ಲಿ ಆಟೋಮ್ಯಾಟಿಕ್ ಪಾವತಿ ಮೂಲಕ ವಾಹನದ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುತ್ತದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ(NHAI) ಫಾಸ್ಟಾಗ್ ಕಡ್ಡಾಯ ಮಾಡಿದೆ. ಇದೀಗ ಫಾಸ್ಟಾಗ್ ಅಳವಡಿಸಿರುವ ವಾಹನ ಸವಾರರು ತಮ್ಮ ಫಾಸ್ಟಾಗ್ ಕೆವೈಸಿ ಪರಿಶೀಲನೆ ಮಾಡುವುದು ಉತ್ತಮ. ಕಾರಣ ಜನವರಿ 31ರೊಳಗೆ ಕೆವೈಸಿ ಆಗದ ಫಾಸ್ಟಾಗ್ ನಿಷ್ಕ್ರೀಯವಾಗಲಿದೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮಾರ್ಗಸೂಚಿ ಪ್ರಕಾರ, ಪ್ರತಿ ಫಾಸ್ಟಾಗ್ ನೋ ಯುವರ್ ಕಸ್ಟಮರ್(KYC) ಮಾಡಿಸಿಕೊಳ್ಳುವುದು ಕಡ್ಡಾಯವಾಗಿದೆ. ಫಾಸ್ಟಾಗ್ ಖರೀದಿ ವೇಳೆ ಅಗತ್ಯ ದಾಖಲೆ ನೀಡಿ ಕವೈಸಿ ಮಾಡಿಸಿದ್ದರೆ ಮತ್ತೊಮ್ಮೆ ಮಾಡುವು ಅಗತ್ಯವಿಲ್ಲ. ಆದರೆ ಕೆವೈಸಿ ಮಾಡಿಸದಿದ್ದರೆ, ಜನವರಿ 31ರ ಬಳಿಕ ನಿಮ್ಮ ಫಾಸ್ಟಾಗ್ ಬ್ಲಾಕ್ ಲಿಸ್ಟ್ ಸೇರಿಕೊಳ್ಳಲಿದೆ. ಇದರಿಂದ ಟೋಲ್ ಗೇಟ್‌ಗಳಲ್ಲಿ ವಾಹನದ ಫಾಸ್ಟಾಗ್ ಕಾರ್ಯನಿರ್ವಹಿಸುವುದಿಲ್ಲ.
ಪ್ರತಿ ದಿನ ಎಷ್ಟಾಗುತ್ತೆ FASTag ಟೋಲ್ ಸಂಗ್ರಹ? ಹೆದ್ದಾರಿ ಸಂಚಾರದಲ್ಲಿ ಕೋಟಿ ಕೋಟಿ ಆದಾಯ!
ಒಂದು ವಾಹನ ಒಂದು ಫಾಸ್ಟಾಗ್ ನಿಯಮ ಜಾರಿಗೊಳಿಸಿದ NHAI ಟೋಲ್ ಗೇಟ್‌ಗಳಲ್ಲಿ ಸುಗಮ ಸಂಚಾರಕ್ಕೆ ಅನುವು ಮಾಡಿತ್ತು. ಆದರೆ ಕೆಲ ಫಾಸ್ಟಾಗ್‌ಗಳು ಹಲವು ವಾಹನಗಳಲ್ಲಿ ಬಳಕೆಯಾಗಿದೆ. ಇಷ್ಟೇ ಅಲ್ಲ ಕೆಲ ವಾಹನದಲ್ಲಿ ಹಲವು ಫಾಸ್ಟಾಗ್ ಬಳಕೆ ಮಾಡಲಾಗಿದೆ. ಈ ರೀತಿಯ ಹಲವು ಸಮಸ್ಯೆಗಳನ್ನು ಹಾಗೂ ವಾಹನ ಟ್ರಾಕ್ ಸೂಕ್ತವಾಗಿ ಮಾಡಲು ಒಂದು ವಾಹನ ಒಂದು ಫಾಸ್ಟಾಗ್ ಕಡ್ಡಾಯ ಮಾಡಲಾಗಿದೆ. ಇದಕ್ಕಾಗಿ ಕೆವೈಸಿ ಇದೀಗ ಕಡ್ಡಾಯವಾಗಿದೆ.
ದೇಶದ ಶೇಕಡಾ 98ರಷ್ಟು ವಾಹನಗಳು ಫಾಸ್ಟಾಗ್ ಅಳವಡಿಸಿಕೊಂಡಿದೆ. ಆದರೆ ಬಹುತೇಕ ವಾಹನದ ಫಾಸ್ಟಾಗ್ ಕೆವೈಸಿ ಮಾಡಿಲ್ಲ. ಒಂದು ವಾಹನದ ಫಾಸ್ಟಾಗ್‌ನ್ನು ಹಲವು ವಾಹನ ಸವಾರರು ಬಳಕೆ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಸುರಕ್ಷತೆ ಹಾಗೂ ಇತರ ಕಾರಣಗಳಿಂದ ಇದೀಗ ಫಾಸ್ಟಾಗ್ ನಿಯಮಗಳನ್ನು ಕಟ್ಟುನಿಟ್ಟಾಗಿದೆ.
Fastag: ಐದೇ ವರ್ಷದಲ್ಲಿ ಫಾಸ್ಟ್‌ಟ್ಯಾಗ್ ಟೋಲ್ ಕಲೆಕ್ಷನ್ ಡಬಲ್!
ಕೆವೈಸಿ ಮಾಡದ ಫಾಸ್ಟಾಗ್ ಜನವರಿ 21, 2024ರ ಬಳಿಕ ಕಾರ್ಯನಿರ್ವಹಿಸುವುದಿಲ್ಲ. ನಿಮ್ಮ ಫಾಸ್ಟಾಗ್ ಖಾತೆಯಲ್ಲಿ ಸಾಕಷ್ಟು ಮೊತ್ತ ಬಾಕಿ ಇದ್ದರೂ ಫಾಸ್ಟಾಗ್ ಕಾರ್ಯನಿರ್ವಹಿಸುದಿಲ್ಲ. ಹೀಗಾಗಿ ವಾಹನ ಸವಾರರು ಎಚ್ಚರ ವಹಿಸಬೇಕು. ತಕ್ಷಣವೇ ಫಾಸ್ಟಾಗ್ ಕೆವೈಸಿ ಮಾಡಿಸಿಕೊಂಡು ಅಂತಿಮ ಹಂತದಲ್ಲಿ ಸಂಕಷ್ಟೆ ಸಿಲುಕುವುದನ್ನು ತಪ್ಪಿಸಿಕೊಳ್ಳಿ.